ಕಲಬುರಗಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಕಲಬುರಗಿ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯೊಂದರ ಇಂಗ್ಲಿಷ್ ಸಹ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ. ಆರೋಪಿ ಶಿಕ್ಷಕ ವಿದ್ಯಾರ್ಥಿನಿಯರನ್ನು ಕಂಪ್ಯೂಟರ್ ಕೋಣೆಗೆ ಕರೆದು ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿಯರು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಶಿಕ್ಷಕ ಬುದ್ಧಿ ಕಲಿತಿಲ್ಲ ಎಂದು ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಶಾಲಾ ಶಿಕ್ಷಣ ಇಲಾಖೆ …
Read More »ಅರುಣ ಯಳ್ಳೂರಕರ ಗೆ ಕರ್ನಾಟಕ ಛಾಯಾರತ್ನ’ ಪ್ರಶಸ್ತಿ
ಅರುಣ ಯಳ್ಳೂರಕರ ಗೆ ಕರ್ನಾಟಕ ಛಾಯಾರತ್ನ’ ಪ್ರಶಸ್ತಿ ಬೆಳಗಾವಿ: ಇಲ್ಲಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಅರುಣ ಯಳ್ಳೂರಕರ ಅವರು, ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಪತ್ರಿಕಾ ಛಾಯಾಗ್ರಹಕರಾಗಿ ಪತ್ರಿಕೆ ಮಾದ್ಯಮ ಕ್ಷೇತ್ರದಲ್ಲಿ ಹಲವು ದಶಕಗಳ ಲ್ಲಿ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಪರಿಗಣಿಸಿ, ಕರ್ನಾಟಕ ವಿಡಿಯೊ ಮತ್ತು ಫೊಟೊ ಅಸೋಸಿಯೇಷನ್ ಬ(ರಿ) ಮತ್ತು ಬೈಸೇಲ್ ಇಂಟ್ರಾಕ್ಷನ್ ಪ್ರವೇಟ್ ಲಿಮಿಟೆಡ್ ಸಹಯೊಗದೊಂದಿಗೆ ದಿನಾಂಕ 27-06-2025 ರಂದು ಬೆಂಗಳೂರಿನ ಅರಮನೆ ಮೈದಾನದ …
Read More »ಅರಣ್ಯದಿಂದ ಕೂಡಿದಂತಹ ಬೆಂಗಳೂರನ್ನು ಮಹಾನಗರವನ್ನಾಗಿಸಿ ಅಂತರಾಷ್ಟಿಯ ಮಟ್ಟದಲ್ಲಿಯೂ ಸಹ ಬೆಂಗಳೂರು ಗುರುತಿಸುವಂತೆ ಮಾಡಿದ್ದು ಮಹಾನ ಧೀಮಂತ ನಾಯಕ ನಾಡಪ್ರಭು ಶ್ರೀ. ಕೆಂಪೇಗೌಡ
ಅರಣ್ಯದಿಂದ ಕೂಡಿದಂತಹ ಬೆಂಗಳೂರನ್ನು ಮಹಾನಗರವನ್ನಾಗಿಸಿ ಅಂತರಾಷ್ಟಿçÃಯ ಮಟ್ಟದಲ್ಲಿಯೂ ಸಹ ಬೆಂಗಳೂರು ಗುರುತಿಸುವಂತೆ ಮಾಡಿದ್ದು ಮಹಾನ ಧೀಮಂತ ನಾಯಕ ನಾಡಪ್ರಭು ಶ್ರೀ. ಕೆಂಪೇಗೌಡ ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ ಅವರು ತಿಳಿಸಿದರು. ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಹಯೋಗದಲ್ಲಿ ಶುಕ್ರವಾರ (ಜೂ.೨೭) ಜರುಗಿದ ನಾಡಪ್ರಭು ಶ್ರೀ. ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು …
Read More »ವಿಷಪ್ರಾಶನದಿಂದ ಹುಲಿ ಸಾವು ದೃಢವಾದರೆ, ಏಳು ವರ್ಷ ಶಿಕ್ಷೆ : ನಿವೃತ್ತ ಡಿಸಿಎಫ್ ಪೂವಯ್ಯ
ಮೈಸೂರು : ಐದು ಹುಲಿಗಳ ಸಾವು ವಿಷಪ್ರಾಶನ ಆಗಿದೆ ಎಂದು ದೃಢಪಟ್ಟರೆ, ತಪ್ಪಿತಸ್ಥರಿಗೆ ಏಳು ವರ್ಷ ಶಿಕ್ಷೆಯಾಗಲಿದೆ ಎಂದು ನಿವೃತ್ತ ಡಿಸಿಎಫ್ ಪೂವಯ್ಯ ಹೇಳಿದ್ದಾರೆ. ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಗುಂಡ್ಲುಪೇಟೆಯಲ್ಲಿ ಎಸಿಎಫ್ ಆಗಿದ್ದಾಗ ಒಂದು ಕಪ್ಪು ಚಿರತೆ, ಮತ್ತೊಂದು ನಾರ್ಮಲ್ ಚಿರತೆ ಸೇರಿ ಎರಡು ಚಿರತೆ ಮರಿಗೆ ವಿಷ ಹಾಕಿದ್ದರು. ಆ ವೇಳೆ ಕಾನೂನು ಪ್ರಕಾರವೇ ಶಿಕ್ಷೆಯಾಗಿತ್ತು. ಈ ಪ್ರಕರಣದಲ್ಲೂ ಅದೇ ಮಾದರಿ ಶಿಕ್ಷೆ ಆಗಲಿದೆ …
Read More »ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ
ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಇಂದು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ ನಗರದ ನಾಲ್ಕು ದಿಕ್ಕುಗಳಾದ ಲಾಲ್ಬಾಗ್, ಮೇಕ್ರಿ ವೃತ್ತ, ಕೆಂಪಾಂಬುಧಿ ಕೆರೆ ಹಾಗೂ ಹಲಸೂರು ಗಡಿ ಗೋಪುರಗಳಿಂದ ಹಾಗೂ 3 ಐತಿಹಾಸಿಕ ಸ್ಥಳಗಳಾದ ಮಾಗಡಿ ತಾಲೂಕಿನ ಕೆಂಪಾಪುರ, ದೇವನಹಳ್ಳಿ ತಾಲೂಕಿನ ಆವತಿ ಹಾಗೂ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಸೇರಿದಂತೆ ಒಟ್ಟು 7 ಸ್ಥಳಗಳಿಂದ ಸಚಿವರುಗಳ ನೇತೃತ್ವದಲ್ಲಿ ಪುರ ಜ್ಯೋತಿಗಳ ಮೆರವಣಿಗೆ ಹೊರಟು, ಸುಮನಹಳ್ಳಿ ವೃತ್ತದ ಬಳಿಯ …
Read More »ಅನ್ಯ ರಾಜ್ಯಗಳ ಪೊಲೀಸ್ ಸಿಬ್ಬಂದಿಯ ಕ್ಯಾಪ್ ಪರಿಶೀಲಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ಗಳು ಬಳಸುತ್ತಿರುವ ಬ್ರಿಟಿಷರ ಕಾಲದ ಕ್ಯಾಪ್ಗಳ ಬದಲಾವಣೆಯ ಚರ್ಚೆಗಳು ಚಾಲ್ತಿಯಲ್ಲಿರುವಾಗ, ಅನ್ಯ ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳು ಧರಿಸುತ್ತಿರುವ ಟೋಪಿಗಳ ಮಾದರಿಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವೀಕ್ಷಿಸಿದ್ದಾರೆ. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇಂದು ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆ ನಡೆಸಿದ ಅವರು, ಮಹಾರಾಷ್ಟ್ರ, ದೆಹಲಿ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳು ಬಳಸುತ್ತಿರುವ ಕ್ಯಾಪ್ಗಳನ್ನು ಪರಿಶೀಲಿಸಿದರು. …
Read More »ಧಾರವಾಡದಲ್ಲಿ ಸರ್ಕಾರಿ ಕಚೇರಿ ಆವರಣದಲ್ಲಿಯೇ ಕಳ್ಳರ ಕೈಚಳಕತೋರಿದ ಖದೀಮರು….. ಶ್ರೀಗಂಧ ಮರ ಕದ್ದುಕೊಂಡು ಹೋದ ಚಾಲಾಕಿ ಕಳ್ಳರು
ಧಾರವಾಡದಲ್ಲಿ ಸರ್ಕಾರಿ ಕಚೇರಿ ಆವರಣದಲ್ಲಿಯೇ ಕಳ್ಳರ ಕೈಚಳಕತೋರಿದ ಖದೀಮರು….. ಶ್ರೀಗಂಧ ಮರ ಕದ್ದುಕೊಂಡು ಹೋದ ಚಾಲಾಕಿ ಕಳ್ಳರು ಇತ್ತಚ್ಚೆಗೆ ಧಾರವಾಡ ಸರ್ಕಾರಿ ಕ್ವಾಟರ್ಸ ಸೇರಿ ಕಚೇರಿ ಆವರಣದಲ್ಲಿರೋ ಶ್ರೀ ಗಂಧ ಮರಗಳಿಗೆ ರಕ್ಷಣೆ ಇಲ್ಲದಂತಾಗಿರುವುದರ ಜತೆಗೆ ಕಳ್ಳರಿಗೂ ಕಾನೂನಿ ಭಯಯು ಇಲ್ಲದಂತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಜಿಲ್ಲಾ ಡಿಡಿಎಲ್ಆರ್ ಕಚೇರಿ ಆವರಣದಲ್ಲಿನ ಶ್ರೀಗಂಧ ಕದ್ದುಕೊಂಡು ಚಾಲಾಕಿ ಕಳ್ಳರು ಪರಾರಿಯಾಗಿದ್ದಾರೆ. ಹೌದು ಧಾರವಾಡದ ಭೂಮಾಪನಾ ಇಲಾಖೆ (ಡಿಡಿಎಲ್ಆರ್) ಆವರಣದಲ್ಲಿದ್ದ ಮೂರು ಶ್ರೀಗಂಧದ …
Read More »ಯುದ್ಧೋಪಾದಿಯಲ್ಲಿ ಕೋಟೆ ಕೆರೆ ನಾಲೆಯ ಸ್ವಚ್ಛತೆ ಶಾಸಕ ಆಸೀಫ್ ಸೇಠ್ ಮತ್ತು ನಗರಸೇವಕರಿಂದ ಪರಿಶೀಲನೆ
ಯುದ್ಧೋಪಾದಿಯಲ್ಲಿ ಕೋಟೆ ಕೆರೆ ನಾಲೆಯ ಸ್ವಚ್ಛತೆ ಶಾಸಕ ಆಸೀಫ್ ಸೇಠ್ ಮತ್ತು ನಗರಸೇವಕರಿಂದ ಪರಿಶೀಲನೆ ಮಾನ್ಸೂನ್ ಸಮಯದಲ್ಲಿ ನಿರ್ಮಾಣವಾದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿ ಕೋಟೆ ಕೆರೆಗೆ ಭೇಟಿ ನೀಡಿ ಬ್ಲಾಕೇಜ್ ಸ್ವಚ್ಛತೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಿದರು. ಇಂದು ಬೆಳಗಾವಿಯ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿಯ ಕೋಟೆ ಕೆರೆಗೆ ಭೇಟಿ ನೀಡಿ ಬೃಹತ್ ನಾಲೆ ಶುದ್ಧಿಕರಣಕ್ಕಾಗಿ …
Read More »ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿಯವರ ನಡೆಯ ಕುರಿತು ಭಕ್ತರಲ್ಲಿ ಉಂಟಾಗಿದ್ದ ಗೊಂದಲವು ಸುಖಾಂತ್ಯ ಕಂಡಿದೆ.
ಗೋಕಾಕ: ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿಯವರ ನಡೆಯ ಕುರಿತು ಭಕ್ತರಲ್ಲಿ ಉಂಟಾಗಿದ್ದ ಗೊಂದಲವು ಸುಖಾಂತ್ಯ ಕಂಡಿದೆ. ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಾನಾ ಶ್ರೀಗಳೊಂದಿಗೆ ಕ್ಷೇತ್ರದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಾಪೂರ (ಹ) ದ ಅಡವಿ ಸಿದ್ದೇಶ್ವರ ಶ್ರೀಗಳ ತಪ್ಪು ಕಾಣದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿಯೇ ಮುಂದುವರಿಯಲು ಅಡವಿಸಿದ್ದರಾಮ ಸ್ವಾಮೀಜಿಗೆ ಅವಕಾಶ …
Read More »ಮನೆ ಬಿದ್ದು ಹಾನಿ; ಪಟ್ಟಣ ಪಂಚಾಯಿತಿ ಸದಸ್ಯೆಯಿಂದ ಪರಿಶೀಲನೆ
ಮನೆ ಬಿದ್ದು ಹಾನಿ; ಪಟ್ಟಣ ಪಂಚಾಯಿತಿ ಸದಸ್ಯೆಯಿಂದ ಪರಿಶೀಲನೆ ಮಳೆಯ ಅಬ್ಬರಕ್ಕೆ ಖಾನಾಪೂರ ಪಟ್ಟಣದ ಮನೆಯೊಂದು ಬಿದ್ದು ಹಾನಿಯುಂಟಾಗಿದ್ದು, ಪಟ್ಟಣ ಪಂಚಾಯಿತಿ ಸದಸ್ಯೆ ಮೇಘಾ ಕುಂದರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖಾನಾಪೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂಬರ್ 15 ರಲ್ಲಿ ಮಳೆಯ ಅಬ್ಬರಕ್ಕೆ ಮನೆಯೊಂದು ಬಿದ್ದು ಹಾನಿಯಾಗಿದ್ದು ಯಾವುದೇ ರೀತಿಯ ಪ್ರಾಣಹಾನಿ ಆಗಿಲ್ಲ ಈ ಕುರಿತು ಪಟ್ಟಣ ಪಂಚಾಯಿತಿ ಸದಸ್ಯೆ ಮೇಘಾ ಕುಂದರಗಿ ಅವರು ಮಾಹಿತಿ …
Read More »