ಬೆಳಗಾವಿ, ಮಾರ್ಚ್ 18: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಳಿಯನ ಮೇಲೆ ಮಾವನಿಂದ ಫೈರಿಂಗ್(firing)ಮಾಡಿರುವಂತಹ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದ ಬಳಿ ಕೃತ್ಯ ನಡೆದಿದೆ. 30 ಗುಂಟೆ ಜಮೀನಿಗಾಗಿ ಶಾಂತಿನಾಥ ಆಲಗೂರು (32) ಮೇಲೆ ಮಾವ ಧನಪಾಲ್ ಆಸಂಗಿ (54) ಫೈರಿಂಗ್ ಮಾಡಿದ್ದಾರೆ. ಆತ್ಮರಕ್ಷಣೆಗಾಗಿ ಪಡೆದಿದ್ದ ರಿವಾಲ್ವರ್ದಿಂದಲೇ ಒಂದು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ ಧನಪಾಲ್. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರೋಪಿ ಧನಪಾಲ್ ಬಂಧಿಸಿ ವಿಚಾರಣೆ …
Read More »ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ: ಶ್ಯಾಮ್‌ಸುಂದರ್ ಗಾಯಕವಾಡ್
ಬೆಂಗಳೂರು: ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ’ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಶಾಮಸುಂದರ್ ಗಾಯಕವಾಡ್ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 50 ಲಕ್ಷ ಜನಸಂಖ್ಯೆಯಿರುವ ಮರಾಠ ಸಮುದಾಯಕ್ಕೆ ಬಿಜೆಪಿ ಸರಿಯಾದ ಪ್ರಾತಿನಿಧ್ಯ ನೀಡುತ್ತಿಲ್ಲ. ರಾಜ್ಯದಲ್ಲಿ ಶೇ 52ರಷ್ಟು ಜನಸಂಖ್ಯೆ ಹೊಂದಿರುವ ಹಿಂದುಳಿದ ವರ್ಗದ ಕುರುಬರು, ನೇಕಾರರು, ಗೊಲ್ಲರು, ಮೀನುಗಾರರು, ತಿಗಳರು, ಗಾಣಿಗರು, ಕುಂಬಾರರು, ಮಡಿವಾಳ, ದೇವಾಡಿಗ ಸಮುದಾಯದವರಿಗೆ ಟಿಕೆಟ್ …
Read More »ರಾಜ್ಯದಲ್ಲಿ ಇನ್ಮೇಲೆ ಕೆಎಂಎಫ್ ಎಮ್ಮೆ ಹಾಲು ಸಿಗಲ್ಲ! ಮೂರೇ ತಿಂಗಳಿಗೆ ಮಾರಾಟಕ್ಕೆ ಬ್ರೇಕ್ ಹಾಕಲು ಚಿಂತನೆ
ಬೆಂಗಳೂರು: ಕಳೆದ ಮೂರು ತಿಂಗಳ ಹಿಂದಷ್ಟೇ ಕರ್ನಾಟಕ ಹಾಲು ಒಕ್ಕೂಟ (Karnataka Milk Federation) ರಾಜ್ಯಾಧ್ಯಂತ ಎಮ್ಮೆ ಹಾಲು ಮಾರಾಟಕ್ಕೆ (Selling buffalo milk) ಚಾಲನೆ ನೀಡಿತ್ತು. ಆದರೆ ಇದಾದ ಮೂರೇ ತಿಂಗಳಿಗೆ ಎಮ್ಮೆ ಹಾಲು ಮಾರಾಟಕ್ಕೆ ಬ್ರೇಕ್ ಹಾಕಲು ಕೆಎಂಎಫ್ (KMF) ಚಿಂತನೆ ನಡೆಸಿದೆಯಂತೆ. ಹೌದು, ಕಳೆದ ವರ್ಷ ಡಿಸೆಂಬರ್ ತಿಂಗಳಿಂದ ಎಮ್ಮೆ ಹಾಲು ಮಾರುಕಟ್ಟೆಗೆ (Market) ಕೆಎಂಎಫ್ ಬಿಡುಗಡೆ ಮಾಡಿತ್ತು, ಆದರೆ ಸದ್ಯ ಎಮ್ಮೆ ಹಾಲು ಮಾರಾಟ …
Read More »ಗೃಹಜ್ಯೋತಿ’ ಫಲಾನುಭವಿಗಳಿಗೆ ಬಿಗ್ ಶಾಕ್ : 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಸಿದ್ರೆ ಕಟ್ಟಬೇಕು ದುಬಾರಿ ಶುಲ್ಕ!
ಬೆಂಗಳೂರು : ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಿದೆ. 200 ಯೂನಿಟ್‌ಗಿಂತ ಜಾಸ್ತಿ ವಿದ್ಯುತ್ ಬಳಸಿದರೆ, ಬಳಸಿದ ಅಷ್ಟು ಯೂನಿಟ್‌ಗಳಿಗೆ ದುಬಾರಿ ಶುಲ್ಕವನ್ನು ಭರಿಸಬೇಕಾಗಿದೆ. ಹೌದು, ಬರದ ಬೇಗೆಯಲ್ಲಿ ಬಸವಳಿದಿರುವ, ಬೇಸಿಗೆಯ ಝಳದಲ್ಲಿ ಮರುಗುತ್ತಿರುವ ಕರ್ನಾಟಕದ ಜನತೆಗೆ ಕಾಂಗ್ರೆಸ್ ಸರ್ಕಾರ ಶಾಕ್ ಮೇಲೆ ಶಾಕ್ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಚುನಾವಣೆಗೂ ಮುನ್ನ ಪ್ರತಿ ಮನೆಗೆ 200 ಯೂನಿಟ್ ಕರೆಂಟ್ ಫ್ರೀ ಎಂದು ಹೇಳಿದ್ದ …
Read More »12 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಸನ್ಮಾನ
ಬೇಲೂರು: ಸಸ್ಯಶಾಸ್ತ್ರ ವಿಭಾಗದ ಪದವಿ ಪರೀಕ್ಷೆಯಲ್ಲಿ 12 ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ತಾಲ್ಲೂಕಿನ ಜಿ.ಆರ್.ಸಂಯಮ ಅವರನ್ನು ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ತಾಲ್ಲೂಕು ಮಹಿಳಾ ಘಟಕದಿಂದ ಅಭಿನಂದಿಸಲಾಯಿತು. ವಿದ್ಯಾರ್ಥಿನಿ ಜಿ.ಆರ್.ಸಂಯಮ ಅವರನ್ನು ಅಭಿನಂದಿಸಿ ಮಾತನಾಡಿದ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಚಂದ್ರಶೇಖರ್, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರ ಸಾಧನೆ …
Read More »ಸೂಲಗತ್ತಿ ಲಕ್ಷ್ಮೀಬಾಯಿಗೆ ಶಾಂತ ಸಿರಿ ಪ್ರಶಸ್ತಿ
ಸಿಂದಗಿ: 600 ಮಹಿಳೆಯರಿಗೆ ಉಚಿತವಾಗಿ ಸಹಜ ಹೆರಿಗೆ ಮಾಡಿಸಿದ ತಾಲ್ಲೂಕಿನ ಯರಗಲ್ ಬಿ.ಕೆ. ಗ್ರಾಮದ ಲಕ್ಷ್ಮೀಬಾಯಿ ಪಂಚಯ್ಯ ಗುಬ್ಬೇವಾಡ ಇವರಿಗೆ ಶಾಂತ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲ್ಲಿಯ ಊರನಹಿರಿಯಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ರಾತ್ರಿ ಶಾಂತವೀರ ಪಟ್ಟಾಧ್ಯಕ್ಷರ 44ನೆಯ ಸ್ಮರಣೋತ್ಸವದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪ್ರಶಸ್ತಿ ₹5 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಅಫಜಲಪುರ ಸಂಸ್ಥಾನಹಿರೇಮಠದ ಪೀಠಾಧ್ಯಕ್ಷ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿ …
Read More »ಈಶ್ವರಪ್ಪ ಅವರು ಬದ್ಧತೆ ಇರುವ ವ್ಯಕ್ತಿ: ಪ್ರಹ್ಲಾದ ಜೋಶಿ
ಧಾರವಾಡ: ಕೆ.ಎಸ್. ಈಶ್ವರಪ್ಪ ಅವರು ಹಿರಿಯ ನಾಯಕ, ಅವರೊಬ್ಬ ಬದ್ಧತೆ ಇರುವ ವ್ಯಕ್ತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಈ ಬಾರಿ ನಮ್ಮ ಪಕ್ಷದಿಂದ ಯಾರೇ ಅಭ್ಯರ್ಥಿಯಾಗಿ ನಿಂತರೂ ಗೆಲ್ಲುತ್ತಾರೆ. ಹೀಗಾಗಿ ಪಕ್ಷದಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಟಿಕೆಟ್ ಸಿಗದೇ ಇರುವವರು ಅಸಮಾಧಾನಗೊಂಡಿದ್ದಾರೆ. ಅಸಮಾಧಾನಿತರೊಂದಿಗೆ ಮಾತುಕತೆ ನಡೆದಿದೆ. …
Read More »ಜಗದೀಶ್ ಶೆಟ್ಟರ್ ಬೆನ್ನಿಗೆ ನಿಂತ ‘ವೀರಶೈವ ಲಿಂಗಾಯತ ಮಹಾಸಭಾ’: ಬಿಜೆಪಿಗೆ ಬುದ್ಧಿ ಕಲಿಸುವ ಖಡಕ್ ಎಚ್ಚರಿಕೆ
ಹುಬ್ಬಳ್ಳಿ, ಮಾರ್ಚ್ 18: ಎರಡು ಕ್ಷೇತ್ರಗಳ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಇದೀಗ ಬೆಳಗಾವಿ ಟಿಕೆಟ್ ಪಡೆಯಲು ಪರದಾಡುತ್ತಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಬೆನ್ನಿಗೆ ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ’ ನಿಂತಿದೆ. ಜೊತೆಗೆ ಟಿಕೆಟ್ ವಿಚಾರವಾಗಿ ಬಿಜೆಪಿಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿಧಾನಸಭೆಯಲ್ಲಿ ಅವರಿಗೆ ಟಿಕೆಟ್ ತಪ್ಪಿಸಲು ಮುಂದಾಗಿದ್ದ ಕಾಣದ ಕೈಗಳು ಈ …
Read More »ಬೆಳಗಾವಿ ಲೋಕಸಭಾ ಚುನಾವಣೆಗೆ ಒಪ್ತಾರಾ ಯತ್ನಾಳ್? ಏನು ಬಿಎಲ್ ಸಂತೋಷ್ ತಂತ್ರಗಾರಿಕೆ?
ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಬೆಳಗಾವಿಯ ಬಿಜೆಪಿ ಅಭ್ಯರ್ಥಿ (Belagavi BJP Candidate) ಎಂದು ಬಿಂಬಿತವಾಗಿದ್ದಾರೆ. ಧಾರವಾಡ (Dharwad) ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿದ್ದರಿಂದ ಬೆಳಗಾವಿಗೆ (Belagavi) ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ಟಿಕೆಟ್ ಘೋಷಣೆಗೂ ಮುನ್ನವೇ ಬೆಳಗಾವಿ ಬಿಜೆಪಿ ಘಟಕದಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಅಸಮಾಧಾನ ಉಂಟಾಗಿದೆ. ಎಂಎಲ್ಸಿ ಮಹಾಂತೇಶ್ ಕವಟಗಿಮಠ ಸೇರಿದಂತೆ ಹಲವು ನಾಯಕರು (Belagavi …
Read More »ಐಪಿಎಲ್ ನಲ್ಲಿ ಆಡಲು ಕೆಎಲ್ ರಾಹುಲ್ ಗೆ ಗ್ರೀನ್ ಸಿಗ್ನಲ್
ಐಪಿಎಲ್ ನಲ್ಲಿ ಆಡಲು ಕೆಎಲ್ ರಾಹುಲ್ ಗೆ ಗ್ರೀನ್ ಸಿಗ್ನಲ್ ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಐಪಿಎಲ್ ಟಿ-20 ಟೂರ್ನಿಯಲ್ಲಿ ಆಡಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಗ್ರೀನ್ ಸಿಗ್ನಲ್ ನೀಡಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಕೆಎಲ್ ರಾಹುಲ್ ಆಡಲು ಎನ್ ಸಿಎ ಗ್ರೀನ್ ಸಿಗ್ನಲ್ ನೀಡಿದೆ.ಈ ಮೂಲಕ ಐಪಿಎಲ್ ನ ಮೊದಲ ಪಂದ್ಯದಲ್ಲಿ ಆಡಲು ತಂಡಕ್ಕೆ ಲಭ್ಯರಾಗಿದ್ದಾರೆ. ಗಾಯದಿಂದ …
Read More »