Breaking News

ಎರಡು ನೂರಾ ಒಂದನೇ ಜಯಂತೋತ್ಸವ ವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಅರ್ಥಪೂರ್ಣವಾಗಿ ಆಚರಿಸಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿಪರ ಹೋರಾಟ ಸಮಿತಿಯು ಆಗ್ರಹ

ಬೆಳಗಾವಿ: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ ವೀರರಾಣಿ ಕಿತ್ತೂರ ಚನ್ನಮ್ಮಾಜಿಯವರ ೨೦೦ನೇ ಜಯಂತಿಯನ್ನು ಕಳೆದ ವರ್ಷ ಅದ್ದೂರಿಯಾಗಿ ಆಚರಿಸಲಾಗಿದೆ ಈ ಬಾರಿಯೂ ಈ ಬಾರಿಯೂ ಎರಡು ನೂರಾ ಒಂದನೇ ಜಯಂತೋತ್ಸವ ವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಅರ್ಥಪೂರ್ಣವಾಗಿ ಆಚರಿಸಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿಪರ ಹೋರಾಟ ಸಮಿತಿಯು ಆಗ್ರಹಿಸಿದೆ ಈ ಸಂಬಂಧವಾಗಿ ಆರ್ ಸಿ ಯು ಕುಲಪತಿಗಳಾದ ಪ್ರೊ.ಸಿ.ಎಂ. ತ್ಯಾಗರಾಜ ಅವರನ್ನು ಭೇಟಿ ಮಾಡಿದ ನಿಯೋಗವು ಮನವಿಯನ್ನು …

Read More »

ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ರಾಜ್ಯದ ಮೊದಲ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ ಲೋಗೋ ಬಿಡುಗಡೆ ಮಾಡೋ ಮೂಲಕ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ನಂತರ ಎಲೆಕ್ಟ್ರಾನಿಕ್ ಮೀಡಿಯಾದವರಂತೆ ಸಚಿವ ಸಂತೋಷ ಲಾಡ್ ಕ್ಯಾಮರಾ ಮ್ಯಾನ್ ಆದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಚಿಟ್‌ಚಾಟ್ ಮಾಡಿರುವ ಒಂದು ಅದ್ಭುತ ಸಂದರ್ಭ ಹುಬ್ಬಳ್ಳಿಯಲ್ಲಿ ನಡೆದಿದೆ. ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ …

Read More »

ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ, ಈ ಬಗ್ಗೆ ಕೃಷಿ ವಿವಿಗಳು ಹೆಚ್ಚಿನ ಅಧ್ಯಯನ ನಡೆಸಿ ಪರಿಹಾರ ಹುಡುಕಬೇಕು- ಸಿ.ಎಂ.

ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ, ಈ ಬಗ್ಗೆ ಕೃಷಿ ವಿವಿಗಳು ಹೆಚ್ಚಿನ ಅಧ್ಯಯನ ನಡೆಸಿ ಪರಿಹಾರ ಹುಡುಕಬೇಕು- ಸಿ.ಎಂ. – ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ. ಈ ಬಗ್ಗೆ ಕೃಷಿ ವಿವಿಗಳು ಹೆಚ್ಚಿನ ಅಧ್ಯಯನ ನಡೆಸಿ ಪರಿಹಾರ ಹುಡುಕಿ ರೈತಸ್ನೇಹಿ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಸೋಮವಾರ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ, ಶ್ರೇಷ್ಠ ಕೃಷಿಕ …

Read More »

ಜಾತಿಗಣತಿ ಹೊತ್ತಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮದ ಜಗಳ

ದಾವಣಗೆರೆ, ಸೆಪ್ಟೆಂಬರ್ 16: ಜಾತಿಗಣತಿಯಲ್ಲಿ (Caste Census) ಕ್ರಿಶ್ಚನ್‌ ಸಮುದಾಯದಲ್ಲಿನ ಉಪಜಾತಿಗಳ ಕಾಲಂ ಈಗಾಗಲೇ ಭಾರಿ ವಿವಾದ ಸೃಷ್ಟಿಸಿದೆ. ಇದೀಗ, ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದವೂ ಈಗ ಮತ್ತೆ ಮುನ್ನೆಲೆಗೆ ಬರುತ್ತಿದೆ. ಜಾತಿಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಕಡ್ಡಾಯವಾಗಿ ಲಿಂಗಾಯತ ಧರ್ಮ (Lingayat) ಎಂದು ಬರೆಸಲು ಸ್ವಾಮೀಜಿಗಳು ಸೂಚನೆ ನೀಡಿದ್ದಾರೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಅಭಿಪ್ರಾಯಕ್ಕೆ ಬರಲಾಗಿದ್ದು, ಧರ್ಮದ ಕಾಲಂನಲ್ಲಿ ಇತರೆ ಎಂಬ ಆಯ್ಕೆಯಲ್ಲಿ ಲಿಂಗಾಯತ ಧರ್ಮ ಎಂದು ಬರೆಯುವಂತೆ ದಾವಣಗೆರೆಯ ಬಾಪೂಜಿ ಸಮುದಾಯ ಭವನದಲ್ಲಿ ನಡೆದ ಬಸವ …

Read More »

ಕೊಯಮತ್ತೂರಿನ ಒಂದು ಕಂಪನಿಯು ತಮ್ಮ “ಒಟ್ಟಿಗೆ ನಾವು ಬೆಳೆಯುತ್ತೇವೆ”

ಕೊಯಮತ್ತೂರಿನ ಒಂದು ಕಂಪನಿಯು ತಮ್ಮ “ಒಟ್ಟಿಗೆ ನಾವು ಬೆಳೆಯುತ್ತೇವೆ” ಉಪಕ್ರಮದಡಿಯಲ್ಲಿ 140 ಉದ್ಯೋಗಿಗಳಿಗೆ ಒಟ್ಟು 14.5 ಕೋಟಿ ರೂ. ಬೋನಸ್‌ಗಳನ್ನು ನೀಡುವ ಮೂಲಕ ಉದ್ಯೋಗಿ ಮೆಚ್ಚುಗೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಈ ಕಾರ್ಯವು ಕೇವಲ ಕಾರ್ಯಕ್ಷಮತೆಯ ಮಾಪನಗಳಿಗಿಂತ ನಿಷ್ಠೆ ಮತ್ತು ದೀರ್ಘಕಾಲೀನ ಬದ್ಧತೆಯನ್ನು ಪ್ರತಿಫಲಿಸುತ್ತದೆ, ಅಲ್ಪಾವಧಿಯ ಫಲಿತಾಂಶಗಳಿಗಿಂತ ಸಮರ್ಪಣೆಯ ಮೌಲ್ಯವನ್ನು ಎತ್ತಿ ತೋರಿಸುತ್ತದೆ. 2022 ರ ಮೊದಲು ಅಥವಾ ಸಮಯದಲ್ಲಿ ಸೇರಿದ ಮತ್ತು ಕನಿಷ್ಠ ಮೂರು ವರ್ಷಗಳ ಕಾಲ ಉಳಿದುಕೊಂಡಿರುವ …

Read More »

ಬೆಂಗಳೂರಿನಲ್ಲಿ ಕ್ಯಾಬ್ ಬುಕ್ ಮಾಡಿದಾಗ, ಆ ಪ್ರಯಾಣವು ಅಂತಹ ಶಾಶ್ವತವಾದ ಅನಿಸಿಕೆಯನ್ನು ನೀಡುತ್ತದೆ

ಶಿವಸುಬ್ರಮಣ್ಯಂ ಜಯರಾಮನ್ ಬೆಂಗಳೂರಿನಲ್ಲಿ ಕ್ಯಾಬ್ ಬುಕ್ ಮಾಡಿದಾಗ, ಆ ಪ್ರಯಾಣವು ಅಂತಹ ಶಾಶ್ವತವಾದ ಅನಿಸಿಕೆಯನ್ನು ನೀಡುತ್ತದೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಅವರ ಚಾಲಕ ರಜನೀಶ್ ಅವರನ್ನು ಬೆಚ್ಚಗಿನ ನಗುವಿನೊಂದಿಗೆ ಸ್ವಾಗತಿಸಿದರು ಆದರೆ ಮೌಖಿಕವಾಗಿ ಪ್ರತಿಕ್ರಿಯಿಸಲಿಲ್ಲ. ಕ್ಯಾಬ್‌ನಲ್ಲಿದ್ದ ಪೋಸ್ಟರ್‌ನಲ್ಲಿ ರಜನೀಶ್ ಮಾತನಾಡುವ ಸಾಮರ್ಥ್ಯವಿಲ್ಲದವರು ಮತ್ತು ತನಗಾಗಿ ಒಂದು ವಿಶಿಷ್ಟ ವ್ಯವಹಾರ ಮಾದರಿಯನ್ನು ನಿರ್ಮಿಸಿಕೊಂಡಿದ್ದಾರೆ ಎಂದು ವಿವರಿಸಲಾಗಿದೆ. ಅವರು ವಿಮಾನ ನಿಲ್ದಾಣದ ದರದಲ್ಲಿ ಕಡಿಮೆ ಬೆಲೆಗೆ ಬಾಟಲ್ ನೀರು, ನ್ಯಾಪ್‌ಕಿನ್‌ಗಳು ಮತ್ತು ಪ್ರಯಾಣಿಕರಿಗೆ …

Read More »

ಉಳ್ಳಾಲದ ಸೀಗ್ರೌಂಡ್‌ ದಡಕ್ಕೆ ಬಂದು ಅಪ್ಪಳಿಸಿದ ಮೀನುಗಾರಿಕಾ ಬೋಟ್​

ಉಳ್ಳಾಲ(ದಕ್ಷಿಣ ಕನ್ನಡ): ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಟ್ರೋಲರ್‌ ಎಂಜಿನ್‌ ವೈಫಲ್ಯದಿಂದ ಕೆಟ್ಟು ನಿಂತಿದ್ದು, ಪವಾಡಸದೃಶ ರೀತಿಯಲ್ಲಿ ಸಮುದ್ರದ ಅಲೆಗಳಿಂದಾಗಿ ತೇಲುತ್ತಾ ಉಳ್ಳಾಲದ ಸೀಗ್ರೌಂಡ್‌ ದಡಕ್ಕೆ ಬಂದು ಅಪ್ಪಳಿಸಿದೆ. ಬೋಟ್‌ನಲ್ಲಿದ್ದ 13 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್‌ ಅಶ್ಫಾಕ್‌ ಎಂಬವರಿಗೆ ಸೇರಿದ ಬುರಾಕ್‌ ಟ್ರೋಲರ್‌ ಬೋಟ್‌ ಇದಾಗಿದ್ದು, ಮಂಗಳೂರಿನ ಧಕ್ಕೆಯಿಂದ ಕೇರಳ ಭಾಗಕ್ಕೆ ನಿನ್ನೆ ರಾತ್ರಿ ತೆರಳುತ್ತಿತ್ತು. ಈ ನಡುವೆ ಆಳಸಮುದ್ರದಲ್ಲಿ ಬೋಟ್‌ ಎಂಜಿನ್‌ ವೈಫಲ್ಯ …

Read More »

71 ವರ್ಷದ ಆರೋಪಿಗೆ 90 ದಿನಗಳ ಕಾಲ ಜಾಮೀನು ಮಂಜೂರು

ಬೆಂಗಳೂರು: ಹರ್ನಿಯಾ ಸಮಸ್ಯೆಯಿಂದ ಬಳುತ್ತಿರುವ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಮೇಲೆ ದಾಳಿ ಪ್ರಕರಣದ ಆರೋಪಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು 90 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ. ಸರ್ಜರಿಗೆ ಒಳಗಾಗಲು ಮಧ್ಯಂತರ ಜಾಮೀನು ಕೋರಿ ನೀಡುವಂತೆ ಕೋರಿ ಕೆ.ಜಿ.ಹಳ್ಳಿಯ ಶ್ಯಾಂಪುರ ರಸ್ತೆ ನಿವಾಸಿ ಮೊಹಮ್ಮದ್ ಖಲೀಲ್ ಅಹ್ಮದ್ (19ನೇ ಆರೋಪಿ) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಎಸ್. ಮುದ್ಗಲ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. …

Read More »

ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು

ಮೈಸೂರು: ವಿಶ್ವವಿಖ್ಯಾತ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ 700 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ಸೋಮವಾರ ಸಂಜೆ ತಾಲೀಮು ಮಾಡಿಸಲಾಯಿತು. 700 ಕೆ.ಜಿ ತೂಕ ಹೊತ್ತ ಅಭಿಮನ್ಯು ಸರಾಗವಾಗಿ ಬನ್ನಿಮಂಟಪದವರೆಗೆ ಸಾಗಿ ಚಿನ್ನದ ಅಂಬಾರಿ ಹೊರಲು ತಾನು ಫಿಟ್ ಆಗಿದ್ದೇನೆ ಎಂಬುದನ್ನು ಸಾಬೀತುಪಡಿಸಿದ. ಇದಕ್ಕೂ ಮೊದಲು ಅಂಬಾರಿ ಕಟ್ಟುವ ಸ್ಥಳದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನಂತರ 200 ಕೆ.ಜಿ ತೂಕದ ಮರದ ಅಂಬಾರಿ, …

Read More »

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ವಿಳಂಬ ಆಗಲು ರಾಜ್ಯ ಸರ್ಕಾರ, ಸಚಿವ ಸಂತೋಷ ಲಾಡ್ ಕಾರಣ

ಬೆಳಗಾವಿ: ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ವಿಳಂಬ ಆಗಲು ರಾಜ್ಯ ಸರ್ಕಾರ, ಸಚಿವ ಸಂತೋಷ ಲಾಡ್ ಕಾರಣ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಹಕಾರ ಇಲ್ಲದ ಹಿನ್ನೆಲೆಯಲ್ಲಿ ನೇರ ರೈಲು ಯೋಜನೆ ವಿಳಂಬ ಆಗುತ್ತಿದೆ. ಬೆಳಗಾವಿಯಲ್ಲಿ ಈಗಾಗಲೇ ನೂರಕ್ಕೆ ನೂರರಷ್ಟು ಭೂಸ್ವಾಧೀನ ಆಗಿದೆ. ಧಾರವಾಡ ಜಿಲ್ಲೆಯಲ್ಲಿ ಇನ್ನೂ 45 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕು. ಈಗಾಗಲೇ …

Read More »