ಚಿಕ್ಕಬಳ್ಳಾಪುರ: ಮದುವೆಯಾಗಲು ನಿರಾಕರಿಸಿದ ಯುವತಿಯ ಮನೆ ಮುಂದೆ ಹೈಡ್ರಾಮ ಮಾಡಿರುವ ಯುವಕನೋರ್ವ ಯುವತಿ ಮೇಲೆ ಆ್ಯಸಿಡ್ ಎರಚಿದ್ದಾನೆ. ಬಳಿಕ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಆತನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ಆನಂದ್ ಕುಮಾರ್ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದಾನೆ. ಆ್ಯಸಿಡ್ ದಾಳಿಗೆ ತುತ್ತಾದ ಯುವತಿ ಪ್ರಾಣಾಪಾಯದಿಂದ …
Read More »ಗಣಿತದಲ್ಲಿ ಗಿನ್ನಿಸ್ ರೆಕಾರ್ಡ್ಗೆ ಹಾವೇರಿಯ ಮೂವರು ವಿದ್ಯಾರ್ಥಿಗಳಿಂದ ತಯಾರಿ
ಹಾವೇರಿ: ಗಣಿತ ಅಂದರೆ ಸಾಕು ಕೆಲ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ. ಕೆಲವರಿಗೆ ನೀರು ಕುಡಿದಷ್ಟೇ ಸುಲಭ. ಅದೇ ರೀತಿ ಹಾವೇರಿ ನಗರದ ಮೂರು ವಿದ್ಯಾರ್ಥಿಗಳು ಗಣಿತದಲ್ಲಿ ವಿಶ್ವದಾಖಲೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹಾವೇರಿಯ ಗಣಿತ ತಜ್ಞೆ ಉಷಾರಾಣಿ ಈ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಅನರ್ಘಾ ರಾಜು ಗೌಳಿ, ಆರವ್ ಜವಳೇಕರ್ ಮತ್ತು ಹರೀಶ್ ಸುರಳೇಶ್ವರ ಈ ಮೂವರು ಸಾಧನೆ ಮಾಡಲು ಹೊರಟಿರುವ ವಿದ್ಯಾರ್ಥಿಗಳು. ಇವರೇ ಗಣಿತದ ಲೆಕ್ಕಗಳನ್ನು, ಮಗ್ಗಿಗಳನ್ನು ನೀರು ಕುಡಿದಷ್ಟೇ …
Read More »ವಿಧಾನ ಪರಿಷತ್ ಉಪಕಾರ್ಯದರ್ಶಿ ಜಲಜಾಕ್ಷಿ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆ
ಬೆಂಗಳೂರು: ‘ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಹಾಕಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಉಪ ಕಾರ್ಯದರ್ಶಿ ಕೆ.ಜೆ. ಜಲಜಾಕ್ಷಿ ಅವರನ್ನು ಅಮಾನತುಗೊಳಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ವಿಧಾನಪರಿಷತ್ ಕಾರ್ಯದರ್ಶಿ ಆದೇಶ: ‘ಸಂವಿಧಾನದ ದಿನದ’ ಅಂಗವಾಗಿ ವಿಧಾನಪರಿಷತ್ತಿನ ಸಚಿವಾಲಯದಲ್ಲಿ 2024ರ ನವೆಂಬರ್ 26ರಂದು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಹಾಕಿಲ್ಲವೆಂಬ ಆರೋಪದ ಮೇಲೆ …
Read More »ಒಂದೇ ರಾತ್ರಿ ಮೂರು ಮನೆಗಳ ಕಳ್ಳತನಕ್ಕೆ ಯತ್ನ
ಬಾಗಲಕೋಟೆ : ಒಂದೇ ರಾತ್ರಿ ಮೂರು ಮನೆಗಳ ಕಳ್ಳತನಕ್ಕೆ ಯತ್ನ ಜಮಖಂಡಿ ತಾಲೂಕು ನಾಗನೂರು ಗ್ರಾಮದಲ್ಲಿ ಒಂದೇ ರಾತ್ರಿಯಲ್ಲಿ ಮೂರು ಮನೆಗಳ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ದರೋಡೆಗೆ ಬಂದ ಕಳ್ಳರು ಎಲ್ಲಾ ಮನೆಗಳ ಹತ್ತಿರ ಸುಳಿದಾಡಿದ್ದಾರೆ. ನಂತರ ಒಂದು ಮನೆಯಲ್ಲಿ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದಾರೆ. ಮತ್ತೆರಡು ಮನೆಗಳಲ್ಲೂ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ .ಉಮೇಶ ಕನಮುಚನಾಳ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ 30 ಗ್ರಾಂ ಚಿನ್ನದ ತಾಳಿ, …
Read More »ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ”
ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ” ಸರ್ಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶಾತಿ ಹೆಚ್ಚಿಸುವಂತೆ ಕ್ರಮ ವಹಿಸಲು ಸಚಿವ ಮಧು ಬಂಗಾರಪ್ಪ ಸೂಚನೆ ಬೆಳಗಾವಿ,ಮುಖ್ಯಮಂತ್ರಿಗಳ ನಿರ್ದೇಶನದಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಹೆಚ್ಚಾಗಬೇಕು. ಖಾಸಗಿ ಶಾಲೆಗಳ ಮಾದರಿಯಲ್ಲೇ ಸರ್ಕಾರಿ ಶಾಲೆಗಳು ನಿರ್ವಹಿಸುವದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು …
Read More »ಮಗಳು ಬರ್ಬೇಡ ಅಂತಾಳೆ,ಮಗ-ಸೊಸೆ ಹಿಂಸೆ ನೀಡ್ತಾರೆ,ಕೃಷ್ಣಾ ನದಿಗೆ ಹಾರಲು ಯತ್ನಿಸಿದ್ದ ವೃಧ್ದನ ಕಣ್ಣೀರ ಕಥೆ
ಮಗಳು ಬರ್ಬೇಡ ಅಂತಾಳೆ,ಮಗ-ಸೊಸೆ ಹಿಂಸೆ ನೀಡ್ತಾರೆ,ಕೃಷ್ಣಾ ನದಿಗೆ ಹಾರಲು ಯತ್ನಿಸಿದ್ದ ವೃಧ್ದನ ಕಣ್ಣೀರ ಕಥೆ ಚಿಕ್ಕೋಡಿ:ಕೃಷ್ಣಾ ನದಿಗೆ ಹಾರಿ ಜೀವ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ವೃದ್ಧನನ್ನು ಸ್ಥಳೀಯರು ಕಾಪಾಡಿದಾರೆ. ನಂತರ ಕಷ್ಟ, ಸುಖ ವಿಚಾರಿಸಿದಾಗ ಮಗ ಮಗಳಿಂದಲೇ ದೂರಾವಾದ ಕರುಣಾಜನಕ ಕತೆಯನ್ನು ಹೇಳಿದ್ದಾನೆ. ಅಂದ್ದಾಗೆ ಈ ಘಟನೆಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ (77) ನದಿಗೆ ಹಾರಲು ಯತ್ನಿಸಿದ ವೃದ್ಧ. ಇವರು ಮೂಲತಃ …
Read More »ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ವಿಜಯ ಮೋರೆ ಅವರಿಗೆ ಸನ್ಮಾನ
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ವಿಜಯ ಮೋರೆ ಅವರಿಗೆ ಸನ್ಮಾನ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮದಲ್ಲಿ, ಬೆಳಗಾವಿಯ ಮಾಜಿ ಮೇಯರ್ ಮತ್ತು ಸಮಾಜ ಸೇವಕ ವಿಜಯ್ ಮೋರೆ ಅವರನ್ನು ಸಾರ್ವಜನಿಕ ಸೇವೆ ಮತ್ತು ಸಮಾಜಕ್ಕೆ ಸಹಾಯ ಮಾಡುವಲ್ಲಿ ಅವರ ಗಮನಾರ್ಹ ಕಾರ್ಯಕ್ಕಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಬೆಂಗಳೂರಿನ ಸಮುದಾಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಸರ್ಕಾರದೊಂದಿಗೆ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಕರ್ನಾಟಕದಾದ್ಯಂತ …
Read More »ಉದ್ಯಮಭಾಗ ಮುಖ್ಯರಸ್ತೆಯ ಅಪಾಯಕಾರಿ ಗುಂಡಿಗಳನ್ನು ಮುಚ್ಚಿದ ಯಂಗ್ ಬೆಳಗಾವಿ ಫೌಂಡೇಶನ್
ಉದ್ಯಮಭಾಗ ಮುಖ್ಯರಸ್ತೆಯ ಅಪಾಯಕಾರಿ ಗುಂಡಿಗಳನ್ನು ಮುಚ್ಚಿದ ಯಂಗ್ ಬೆಳಗಾವಿ ಫೌಂಡೇಶನ್ ಬೆಳಗಾವಿ ಉದ್ಯಮಭಾಗ ಪುರೋಹಿತ್ ಸ್ವೀಟ್ ಮಾರ್ಟ್ ಎದುರಿನ ಮುಖ್ಯರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳನ್ನು ಮುಚ್ಚುವ ಮೂಲಕ ಯಂಗ್ ಬೆಳಗಾವಿ ಫೌಂಡೇಶನ್ ಸಾರ್ವಜನಿಕ ಸುರಕ್ಷತೆಯತ್ತ ಒಂದು ದೊಡ್ಡ ಹೆಜ್ಜೆ ಇಟ್ಟು ಸಾಮಾಜಿಕ ಕಳಕಳಿ ಮೆರೆದಿದೆ ಕಳೆದ ಕೆಲವು ದಿನಗಳಿಂದ, ಈ ರಸ್ತೆ ತುಂಬಾ ಅಪಾಯಕಾರಿಯಾಗಿತ್ತು, ದೊಡ್ಡ ಗುಂಡಿಗಳಿಂದಾಗಿ ಅನೇಕ ಜನರು ಬಿದ್ದು ಗಾಯಗೊಂಡಿದ್ದರು. ಹಲವಾರು ದೂರುಗಳ ನಂತರವೂ ಯಾರೂ ಅದನ್ನು ದುರಸ್ತಿ …
Read More »ಕಣಬುರ್ಗಿಯಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಆಸೀಫ್ ಸೇಠ್ ಅವರು ನೂತನ ಕೊಠಡಿಗಳನ್ನು ಉದ್ಘಾಟನೆ ಮಾಡಿದರು
ಕಣಬರ್ಗಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಆಸೀಫ ಸೇಠ್ ಕಣಬುರ್ಗಿಯಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಆಸೀಫ್ ಸೇಠ್ ಅವರು ನೂತನ ಕೊಠಡಿಗಳನ್ನು ಉದ್ಘಾಟನೆ ಮಾಡಿದರು ಸಾರ್ವಜನಿಕ ಶಿಕ್ಷಣವನ್ನು ಸುಧಾರಿಸುವ ನಿರಂತರ ಪ್ರಯತ್ನಗಳ ಭಾಗವಾಗಿ, ಬೆಳಗಾವಿ ಉತ್ತರ ಶಾಸಕ ಆಸಿಫ್ ಸೇಠ್ ಕಣಬರ್ಗಿ ಸರ್ಕಾರಿ ಶಾಲೆಗೆಭೇಟಿ ನೀಡಿ ಅಲ್ಲಿ ಅವರು ಹೊಸದಾಗಿ ನಿರ್ಮಿಸಲಾದ ತರಗತಿ ಕೊಠಡಿಯನ್ನು ಉದ್ಘಾಟಿಸಿದರು ಮತ್ತು ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣವನ್ನು ಹೆಚ್ಚಿಸಲು ಹೊಸ ಡೆಸ್ಕ್‌ಗಳನ್ನು …
Read More »ಗೋಕಾಕ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೇಲೆ ಪಲ್ಟಿಯಾದ ಲಾರಿ: ಓರ್ವ ಗಂಭೀರ
ಗೋಕಾಕ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೇಲೆ ಪಲ್ಟಿಯಾದ ಲಾರಿ: ಓರ್ವ ಗಂಭೀರ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೇಲೆ ಪಲ್ಟಿಯಾದ ಲಾರಿ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಹೊರವಲಯದ ಪಾಲ್ಸ್ ರಸ್ತೆಯಲ್ಲಿರುವ ಗಾಂಧೀ ಪುತ್ಥಳಿಯ ಬಳಿ ಘಟನೆ ನಡೆದಿದ್ದು ಒಂದೇ ಬೈಕ್ ನಲ್ಲಿ ಮೂವರು ಸವಾರರು ಪ್ರಯಾಣಿಸುತ್ತಿದ್ದರು ಎನ್ನುವ ಮಾಹಿತಿ ದೊರೆತಿದ್ದು ಆ ಪೈಕಿ ಓರ್ವನ ಕಾಲು ಕಟ್ಟಾಗಿದೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು …
Read More »