Breaking News

ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

ಹಾಸನ: ಎಸ್‌ಐಟಿ ರಾಜ್ಯ ಸರಕಾರದ ಹಿಡಿತದಲ್ಲಿದೆ. ವಾಲ್ಮೀಕಿ ನಿಗಮ ಹಗರಣದ ತನಿಖೆ ನಡೆಸಿದ ಎಸ್‌ಐಟಿ ಮಾಜಿ ಸಚಿವ ನಾಗೇಂದ್ರ ಹೆಸರನ್ನೇ ಕೈ ಬಿಟ್ಟು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ ಇದೇ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ. ನಾಗೇಂದ್ರ ಮೊದಲ ಆರೋಪಿ ಎಂದು ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಸರಕಾರದ ಹಿಡಿತದಲ್ಲಿ ಎಸ್‌ಐಟಿ ಸಿಲುಕಿದೆ ಎಂಬುದು ಗೊತ್ತಾಗುವುದಿಲ್ಲವೇ ? ಈಗ …

Read More »

ರೀತಿ ಭಂಡತನ ತೋರದೆ ಸಿದ್ದು ರಾಜೀನಾಮೆ ನೀಡಲಿ’: ಕೆ.ಎಸ್‌. ಈಶ್ವರ

ಹುಬ್ಬಳ್ಳಿ: ಮುಡಾ, ವಾಲ್ಮೀಕಿ ಹಗರಣದಲ್ಲಿ ಕೋರ್ಟ್‌ನಿಂದ ವಿರುದ್ಧವಾಗಿ ತೀರ್ಪು ಬಂದರೆ ಸಿಎಂ ಸಿದ್ದರಾಮಯ್ಯ ಅವರು ಅರವಿಂದ ಕೇಜ್ರಿವಾಲ್‌ ರೀತಿ ಭಂಡತನ ತೋರದೆ ಮರ್ಯಾದೆಯಿಂದ ರಾಜೀನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಒಂದು ಕಡೆ ಸಿಎಂ ಸಿದ್ದರಾಮಯ್ಯಗೆ ಬಹಿರಂಗವಾಗಿ ಬೆಂಬಲ ಎಂದು ಹೇಳಿ ಇನ್ನೊಂದೆಡೆ ತಾವು ಸಿಎಂ ಆಕಾಂಕ್ಷಿ ಎನ್ನುತ್ತಿದ್ದಾರೆ.   ಹೈಕಮಾಂಡ್‌ ಸೂಚನೆ ನೀಡಿದರೂ, ಕಾಂಗ್ರೆಸ್‌ನಲ್ಲಿ ಸಿಎಂ ಹೇಳಿಕೆಗಳು ನಿಂತಿಲ್ಲ. …

Read More »

ಅಡ್ಡಿ: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ

ಬೆಂಗಳೂರು: ಅಭ್ಯರ್ಥಿಗಳಿಗೆ ಆಗುತ್ತಿದ್ದ ಅನನು ಕೂಲ ಮತ್ತು ಆ ಸಂಬಂಧ ನ್ಯಾಯಾ ಲಯದ ಸೂಚನೆ ಮೇರೆಗೆ ಸರಕಾರ ಕೊನೆಗೂ ಮತ್ತೂಮ್ಮೆ ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನು ಮುಂದೂಡಿದೆ. ಇದರೊಂದಿಗೆ ಯುಪಿಎಸ್ಸಿ ಮುಖ್ಯ ಪರೀಕ್ಷೆ ಬರೆಯಲಿರುವ 102 ಅಭ್ಯರ್ಥಿಗಳು ನಿಟ್ಟುಸಿರು ಬಿಡು ವಂತಾಗಿದೆ. ಸೂಕ್ತ ದಿನಾಂಕ ವನ್ನು ಒಂದೆರಡು ದಿನಗಳಲ್ಲಿ ಪ್ರಕ ಟಿಸ ಲಾಗುವುದು ಎಂದು ಗೃಹ ಸಚಿವ ಡಾ| ಪರಮೇಶ್ವರ್‌ ಹೇಳಿದ್ದಾರೆ. 402 ಪಿಎಸ್‌ಐಗಳ ನೇಮಕಾತಿಗಾಗಿ ಸೆ. 22ರಂದು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿ ವೇಳಾಪಟ್ಟಿ ಯನ್ನೂ ಪ್ರಕಟಿಸಿತ್ತು. ಆದರೆ …

Read More »

ಗಣೇಶ ವಿಸರ್ಜನೆ ವೇಳೆ 6 ಅಂಗಡಿ ಭಸ್ಮ,7 ಬೈಕ್‌ ಹಾನಿ,1 ಕಾರು ಜಖಂ

ನಾಗಮಂಗಲ (ಮಂಡ್ಯ): ಬುಧವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭ ಕೋಮುಸಂಘರ್ಷ ಏರ್ಪಟ್ಟ ಪರಿಣಾಮ ನಾಗಮಂಗಲ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದರೂ ಸೆ. 14ರ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಗಲಭೆಯಲ್ಲಿ 6 ಅಂಗಡಿಗಳು ಸುಟ್ಟು ಕರಕಲಾಗಿವೆ. 7 ಬೈಕ್‌ ಹಾನಿಗೀಡಾಗಿವೆ. 1 ಕಾರಿನ ಗಾಜು ಪುಡಿಗೈಯಲಾಗಿದೆ. ಪ್ರಕರಣ ಸಂಬಂಧ ಗುರುವಾರ 150 ಮಂದಿ ವಿರುದ್ಧ ನಾಗಮಂಗಲ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 53ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ …

Read More »

ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

ಕುಷ್ಟಗಿ (ಕೊಪ್ಪಳ): ಗಣೇಶ ಮೂರ್ತಿ ವಿಸರ್ಜನೆ ವೇಳೆ ನಟರಾದ ದರ್ಶನ್‌, ಸುದೀಪ್‌ ಹಾಡು ಹಾಕುವ ವಿಚಾರಕ್ಕೆ ಉಂಟಾದ ಅಭಿಮಾನಿಗಳ ವಾಗ್ವಾದದಿಂದ ವಿಸರ್ಜನ ಮೆರವಣಿಗೆ ಮೊಟಕುಗೊಂಡು ಗಣೇಶ ಮೂರ್ತಿ ಬೆಳಗಿನವರೆಗೂ ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಉಳಿದ ಘಟನೆ ಕಂದಕೂರು ಗ್ರಾಮದಲ್ಲಿ ನಡೆದಿದೆ.   ಈಶ್ವರ ದೇವಸ್ಥಾನದಲ್ಲಿ ಐದನೇ ದಿನ ಬುಧವಾರ ರಾತ್ರಿ ಗಣೇಶ ವಿಸರ್ಜನ ಮೆರವಣಿಗೆ ವೇಳೆ ಡಿಜೆ ಧ್ವನಿಗೆ ಯುವಕರು ಕುಣಿಯುತ್ತಿದ್ದ ವೇಳೆ ದರ್ಶನ್‌, ಸುದೀಪ್‌ ಹಾಡು ಮೊದಲು ಹಾಕಬೇಕೆಂದು ಎರಡು ಬಣಗಳು …

Read More »

ಬಿಜೆಪಿಯಲ್ಲಿ ಎಲ್ಲಾ ಸರಿಯಾದರೆ ಶೀಘ್ರ ಪಕ್ಷಕ್ಕೆ ಮರಳುವೆ: ಕೆ.ಎಸ್.ಈಶ್ವರಪ್ಪ

ಹುಬ್ಬಳ್ಳಿ: ತವರು ಮನೆಗೆ ಹೋಗಲು‌ ಯಾವ ಮಹಿಳೆಯಾದರು ಒಲ್ಲೆ ಎನ್ನುತ್ತಾಳೆಯೆ? ಬಿಜೆಪಿಗೆ ಮರಳಲು‌ ನಾನೇಕೆ ಒಲ್ಲೆ ಎನ್ನಲಿ. ತವರು ಮನೆಯಲ್ಲಿ‌ ಕೆಲ‌ ಸಹೋದರರು ಇಲ್ಲಸಲ್ಲದ ಸ್ಥಿತಿ ನಿರ್ಮಿಸಿದ್ದು, ಶೀಘ್ರ ಅದು ಸರಿಯಾಗಿ‌ ಮತ್ತೆ ತವರಿಗೆ ಮರಳುವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಕುಟುಂಬದ ಕೈಯಲ್ಲಿ‌ಪಕ್ಷ ಸಿಲುಕಿದೆ.‌ ಎಲ್ಲವೂ ಸರಿಯಾಗಲಿದೆ ಎಂಬ ನನಗೆ ವಿಶ್ವಾಸವಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ‌ ಆರು ತಿಂಗಳಿಂದ …

Read More »

ಡೋಲು-ತಾಸೆಯವರ ಸಂಖ್ಯೆಗೆ NGT ನಿರ್ಬಂಧಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: ಪುಣೆಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ಆಚರಣೆಗಳು ಸೇರಿದಂತೆ ಉತ್ಸವದಲ್ಲಿ ಭಾಗಿಯಾಗಿರುವ ‘ಡೋಲು-ತಾಸೆ’ (dhol-tasha)ತಂಡಗಳಲ್ಲಿ 30 ಜನರ ಸಂಖ್ಯೆಯನ್ನು ನಿರ್ಬಂಧಿಸುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ( NGT) ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಗುರುವಾರ(ಸೆ12) ತಡೆಯಾಜ್ಞೆ ನೀಡಿದೆ.   ಎನ್‌ಜಿಟಿ ಆದೇಶದ ವಿರುದ್ಧ ಪುಣೆ ಮೂಲದ ‘ಧೋಲ್-ತಾಶಾ’ ಗುಂಪಿನ ಅರ್ಜಿಯನ್ನು ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ …

Read More »

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯ ಕಾರ್ಯದರ್ಶಿ ಪಂಕಜ್ ಜೈನ್ ಈ ಬಗ್ಗೆ ಸುಳಿವು ನೀಡಿದ್ದಾರೆ. ವಿಶ್ವದಾದ್ಯಂತ ಕಚ್ಚಾತೈಲದ ದರ ಸ್ವಲ್ಪ ಸಮಯದವರೆಗೆ ನಿರಂತರವಾಗಿ ಕಡಿಮೆಯಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಕಚ್ಚಾತೈಲ ದರ ದೀರ್ಘಕಾಲದವರೆಗೆ ಕಡಿಮೆಯಾದರೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಲು ಪರಿಗಣಿಸಬಹುದು ಎಂದು ಹೇಳಿದ್ದಾರೆ. ಸರ್ಕಾರ ಪೆಟ್ರೋಲ್, …

Read More »

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ ಅನುಮತಿ: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಬೆಂಗಳೂರು: ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ಮುಕ್ತಾಯಗೊಂಡಿದ್ದು, ಅರ್ಜಿ ಕುರಿತು ಹೈಕೋರ್ಟ್​ ಸದ್ಯ ತೀರ್ಪು ಕಾಯ್ದಿರಿಸಿದೆ. ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿ ವಿಚಾರಣೆಯನ್ನು ನಡೆಸಿದ ಕೋರ್ಟ್​, ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತ್ತು. ರಾಜ್ಯಪಾಲರ ಹಾಗೂ ಮುಖ್ಯಮಂತ್ರಿಗಳ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಸುದೀರ್ಘ ವಿಚಾರಣೆಯ ಬಳಿಕ ಇದೀಗ ತೀರ್ಪನ್ನು ಕಾಯ್ದಿರಿಸಿದೆ. ಸಿಎಂ …

Read More »

ಹಾರ್ದಿಕ್ ಮಾಜಿ ಪತ್ನಿ ಮುಂಬೈನಲ್ಲಿ ಬಾಯ್​ ಫ್ರೆಂಡ್​ ಜೊತೆ ತಿರುಗಾಟ!

ಮುಂಬೈ: ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ, ಮಾಡೆಲ್ ನತಾಶಾ ಸ್ಟಾಂಕೋವಿಕ್ ಮುಂಬೈನಲ್ಲಿದ್ದು, ಆಕೆ ಗೆಳೆಯ ಅಲೆಕ್ಸಾಂಡರ್ ಇಲಾಕ್ ಜೊತೆ ಸುತ್ತಾಟ ನಡೆಸುತ್ತಿದ್ದು ಗಮನಸೆಳೆಯುತ್ತಿದ್ದಾಳೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್​ ಆಗಿದೆ.   ನತಾಶಾ ಎರಡು ತಿಂಗಳ ಕಾಲ ಸರ್ಬಿಯಾದಲ್ಲಿ ತಂಗಿದ್ದು ಆಕೆ ಈಗ ಮುಂಬೈಗೆ ಬಂದಿದ್ದಾಳೆ. ಆದರೆ, ಆಕೆಯ ಜೊತೆ ಆಕೆಯ ಗೆಳೆಯ ಅಲೆಕ್ಸಾಂಡರ್ ಇಲಾಕ್ ಕೂಡ ಇರುವುದು ಗಮನಾರ್ಹ ಸಂಗತಿಯಾಗಿದೆ. ಇಬ್ಬರೂ ಮುಂಬೈನ ಬೀದಿಗಳಲ್ಲಿ …

Read More »