Breaking News

ನೈಋತ್ಯ ರೈಲ್ವೆ ಟಿಕೆಟ್ ಪರಿಶೀಲನೆ ಪ್ರಕರಣ, ದಂಡ ಸಂಗ್ರಹದಲ್ಲಿ ಹೆಚ್ಚಳ

ಹುಬ್ಬಳ್ಳಿ: ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಟಿಕೆಟ್ ರಹಿತ ಮತ್ತು ಅಕ್ರಮ ಪ್ರಯಾಣ ಪ್ರಕರಣಗಳು ಗಣನೀಯವಾಗಿ ಪತ್ತೆಯಾಗಿದ್ದು, ಇಲಾಖೆಗೆ ದಂಡದ ರೂಪದಲ್ಲಿ ಬಂದ ಆದಾಯ ಹೆಚ್ಚಳವಾಗಿದೆ. 67 ಸಾವಿರ ಪ್ರಕರಣಗಳಿಂದ 5.36 ಕೋಟಿ ರೂಪಾಯಿ ದಂಡ ಸಂಗ್ರಹ: 2025-26ರ ಪ್ರಸಕ್ತ ಆರ್ಥಿಕ ವರ್ಷದ ನವೆಂಬರ್ ತಿಂಗಳಿನಲ್ಲಿ (2025) ಒಟ್ಟು 67,000 ಟಿಕೆಟ್ ತಪಾಸಣಾ ಪ್ರಕರಣಗಳನ್ನು ನೈಋತ್ಯ …

Read More »

ಸಿಗಂದೂರು ಸೇತುವೆ ಬಳಿ ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯ ಜೀವ ಉಳಿಸಿದ ಎಂಜಿನಿಯರ್​!

ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯನ್ನು ಎಂಜಿನಿಯರ್​ವೊಬ್ಬರು ಸಮಯಪ್ರಜ್ಞೆಯಿಂದ ಮನವೊಲಿಸಿ ಕಾಪಾಡಿರುವ ಘಟನೆ ಭಾನುವಾರ ನಡೆದಿದೆ. ಮೈಸೂರಿನ ಶ್ರೀರಾಮಪುರದ ಬೇಬನ್ ಲೇಔಟ್​​ನ ನಿವಾಸಿ ಆಂಜನೇಯ(47) ಎಂಬವರು ಸೇತುವೆ ಮೇಲಿಂದ ಶರಾವತಿ ಹಿನ್ನೀರಿಗೆ ಜಿಗಿಯಲು ಹೋಗಿದ್ದರು. ಈ ವೇಳೆ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಇಂಜಿನಿಯರ್ ರಂಜೇಶ್ ಪಾಂಡೆ ಅವರು ನೀರಿಗೆ ಹಾರುವುದನ್ನು ತಪ್ಪಿಸಲು ಯತ್ನಿಸಿದ್ದಾರೆ. ಆಗ, ತಾನು ನಿದ್ರೆ ಮಾತ್ರೆ ತೆಗೆದುಕೊಂಡಿದ್ದಾಗಿ ಆಂಜನೇಯ …

Read More »

ಮಾಗಿ ಸಂಭ್ರಮದಲ್ಲಿ ಅವರೆಕಾಯಿ ಘಮಲು: ಗಮನ ಸೆಳೆಯುತ್ತಿರುವ ವೈವಿಧ್ಯಮಯ ಸೋರೆಕಾಯಿ ತಳಿ

ಮೈಸೂರು: ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಮಾಗಿ ಸಂಭ್ರಮಕ್ಕೆ ಚಾಲನೆ ದೊರೆಯಿತು. ಮೇಳದಲ್ಲಿ ಅವರೆಕಾಯಿ, ತೊಗರಿ, ಹಸಿ ಕಡಲೆಕಾಯಿ, ಪರ್ಪಲ್ ಯಾಮ್, ಕೆಂಪು ಮುಸುಕಿನ ಜೋಳ, ಬಳ್ಳಿ ಆಲೂಗೆಡ್ಡೆ ಮೊದಲಾದ ಹೊಸದಾಗಿ ಕೊಯ್ಲಾದ ಬೆಳೆಗಳು ಮಾರಾಟ ಮತ್ತು ಪ್ರದರ್ಶನಕ್ಕೆ ಬಂದಿವೆ. ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ತುಮಕೂರು, ಧಾರವಾಡ, ಬೆಂಗಳೂರು ಜಿಲ್ಲೆಗಳಿಂದ ಚಿನುಗಲು, ದಬ್ಬೆ, ಕೆಂಪು, ಮಣಿ, ಹಿತ್ತಲ ಅವರೆ ಮಾರಾಟಕ್ಕೆ ಬಂದಿವೆ. ಅವರೆ ಕಾಯಿಯ ಜತೆಗೆ, ಅವರೆಕಾಳು …

Read More »

ಎಸ್ ಆರ್ ಪಾಟೀಲ್ ಅವರಿಂದ ಬಾಗಲಕೋಟೆ ಪೊಲೀಸರಿಗೆ ಇನ್ನೊವಾ ಕ್ರಿಸ್ಟಾ ದೇಣಿಗೆ

ಎಸ್ ಆರ್ ಪಾಟೀಲ್ ಅವರಿಂದ ಬಾಗಲಕೋಟೆ ಪೊಲೀಸರಿಗೆ ಇನ್ನೊವಾ ಕ್ರಿಸ್ಟಾ ದೇಣಿಗೆ ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರು ಪೊಲೀಸ್ ಇಲಾಖೆಯ ಬಲವರ್ಧನೆಗಾಗಿ ಎಸ್.ಆರ್. ಪಾಟೀಲ್ ಸಮೂಹ ಸಂಸ್ಥೆಗಳ ವತಿಯಿಂದ ಜಿಲ್ಲಾ ಪೊಲೀಸ್ ಘಟಕಕ್ಕೆ ಇನ್ನೊವಾ ಕ್ರಿಸ್ಟಾ ವಾಹನವನ್ನು ದೇಣಿಗೆಯಾಗಿ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾಜಿ ಸಚಿವ ಮತ್ತು ಎಸ್.ಆರ್. ಪಾಟೀಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಸ್.ಆರ್. ಪಾಟೀಲ್ ಅವರು ಇಂದು ನವನಗರದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬಳಿ …

Read More »

ಬೆಳಗಾವಿಯಲ್ಲಿ ಸಂಭ್ರಮದ ಫಲಪುಷ್ಪ ಪ್ರದರ್ಶನ…. ಕೈಬೀಸಿ ಕರೆಯುತ್ತಿವೆ ನಾಡಿದ ದಿಟ್ಟ ಮಹಿಳೆಯರ ಕಲಾಕೃತಿಗಳು

ಬೆಳಗಾವಿಯಲ್ಲಿ ಸಂಭ್ರಮದ ಫಲಪುಷ್ಪ ಪ್ರದರ್ಶನ…. ಕೈಬೀಸಿ ಕರೆಯುತ್ತಿವೆ ನಾಡಿದ ದಿಟ್ಟ ಮಹಿಳೆಯರ ಕಲಾಕೃತಿಗಳು ಬೆಳಗಾವಿಯಲ್ಲಿ ಆಯೋಜಿಸಿರುವ ಫಲ ಮತ್ತು ಪುಷ್ಪ ಪ್ರದರ್ಶನಕ್ಕೆ ಜನರಿಂದ ಅತ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಬಾರಿ ನಾಡಿನ ದಿಟ್ಟ ಮಹಿಳೆಯರ ಇತಿಹಾಸ ದರ್ಶನವು ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಹ್ಯೂಮ್ ಪಾರ್ಕ್’ನಲ್ಲಿ ಬೆಳಗಾವಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಬೆಳಗಾವಿ ಜಿಲ್ಲಾ ತೋಟಗಾರಿಕೆ ಸಂಘ ಹಾಗೂ …

Read More »

ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಬಳಿ ವ್ಯಾಗನಾರ್ ಕಾರು ಮರಕ್ಕೆ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು,

ರಾಮನಗರ -ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಬಳಿ ವ್ಯಾಗನಾರ್ ಕಾರು ಮರಕ್ಕೆ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರವಾಗಿ ಗಾಯಗೊಂಡು ಘಟನೆ ನಡೆದಿದೆ ರಾಮನಗರ -ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಸಮೀಪ ವ್ಯಾಗನಾರ್ ಕಾರು ರಸ್ತೆ ಬದಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಈ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಗೋವಾ ಪಣಜಿ ನಗರದಿಂದ ಅಳ್ನಾವರ ಕಡೆಗೆ ತೆರಳುತ್ತಿದ್ದ …

Read More »

ದೇಶದ ಹಿರಿಯ ರಾಜಕಾರಣಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಬೆಂಗಳೂರು: ದೇಶದ ಹಿರಿಯ ರಾಜಕಾರಣಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ (94) ಅವರು ಇಂದು ಸಂಜೆ ನಿಧನರಾದರು. ವಯೋಸಹಜ ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂನ್ 16, 1931ರಲ್ಲಿ ದಾವಣಗೆರೆಯ ಶಾಮನೂರು ಗ್ರಾಮದಲ್ಲಿ ಜನಿಸಿದ್ದ ಶಾಮನೂರು ಶಿವಶಂಕರಪ್ಪ ಅವರು 6 ಬಾರಿ ಶಾಸಕರಾಗಿದ್ದರು. ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಶಾಮನೂರು ಅವರು ಅಖಿಲ ಭಾರತೀಯ ವೀರಶೈವ …

Read More »

ಚುನಾವಣೆಗೆ 6 ತಿಂಗಳು ಬಾಕಿ ಇರುವಾಗ BJP ನಾಯಕರು ನನ್ನನ್ನು ಹುಡುಕ್ತಾರೆ: ಯತ್ನಾಳ್

ಚಿಕ್ಕೋಡಿ(ಬೆಳಗಾವಿ): ಚುನಾವಣೆಗೆ ಆರು ತಿಂಗಳು ಬಾಕಿಯಿರುವಾಗ ಯತ್ನಾಳ್ ಎಲ್ಲಿ ಎಂದು ಬಿಜೆಪಿ ನಾಯಕರು ಹುಡುಕುತ್ತಾರೆ. ನಾನು ಈ ಬಾರಿ ಉಚಿತವಾಗಿ ಭಾಷಣ ಮಾಡುವುದಿಲ್ಲ, ಜೆಸಿಬಿ ಪಕ್ಷ ಪ್ರಾರಂಭ ಮಾಡುತ್ತೇನೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಅಥಣಿ ಪಟ್ಟಣದಲ್ಲಿಂದು ಮರಾಠ ಸಮುದಾಯದ ವತಿಯಿಂದ ನಿರ್ಮಾಣವಾಗಿರುವ 45 ಅಡಿ ಎತ್ತರದ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಕಟುಕನೋರ್ವ ಗೋ ಹತ್ಯೆ ಮಾಡುವುದನ್ನು ನೋಡಿದ ಶಿವಾಜಿ ಮಹಾರಾಜರು, …

Read More »

ಸ್ವಯಂಕೃತವಾಗಿ ಮತಕಳ್ಳತನ ಮಾಡುವವರ ಮೇಲೆ ಪ್ರಧಾನಿ ಮೋದಿ ಅಂಕುಶ: ಕೇಂದ್ರ ಸಚಿವ ಸಿಂಧಿಯಾ

ಚಿಕ್ಕೋಡಿ: ದೇಶದಲ್ಲಿ ಸ್ವಯಂಕೃತವಾಗಿ ಮತಕಳ್ಳತನ ಮಾಡುವವರ ಮೇಲೆ ಪ್ರಧಾನಿ ಮೋದಿ ಅಂಕುಶ ಹಾಕುವ ಕೆಲಸ ಮಾಡಿದ್ದಾರೆ.‌ ಹೀಗಾಗಿ ಕಾಂಗ್ರೆಸ್ ವೋಟ್ ಚೋರಿ ಅನ್ನುತ್ತಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಿಡಿಕಾರಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇಂದು ಅಶ್ವರೋಡ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್​ಐಆರ್ ಪ್ರಕ್ರಿಯೆಯಿಂದ ಮತಗಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರಿಂದ ಕೆಲಸ ಆಗುತ್ತಿದೆ. …

Read More »

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತ್ನಿ ಯತ್ನಿಸಿದ ಪತಿ

ಬೇಡವೆಂದರೂ ಪತ್ನಿಯನ್ನು ತವರಿಗೆ ಕರೆದೊಯ್ದ ತವರಿನವರು ಪತ್ನಿ ಸೇರಿದಂತೆ ತವರು ಮನೆಯವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪತಿ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಘಟನೆ ಪತಿಯ ಮನೆಯಲ್ಲಿ ಜಗಳಕ್ಕೆ ಬೇಸತ್ತು ತವರು ಮನೆಗೆ ಹೋದ ಪತ್ನಿ ಹಾಗೂ ಆಕೆಯ ಕುಟುಂಬಸ್ಥರನ್ನು ಪತಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಡಿ.10 ರಂದು …

Read More »