ಚಿಕ್ಕೋಡಿ(ಬೆಳಗಾವಿ): ಲಾಕ್‍ಡೌನ್ ಉಲ್ಲಂಘಿಸಿದವರಿಗೆ ಪೊಲೀಸರು ಹೊಡೆಯುವ ಬದಲು ಅವರಿಗೆ ಲೂಸ್‍ಮೋಶನ್ ಮಾತ್ರೆ ನೀಡಬೇಕು ಎಂದು ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ. ಅಥಣಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಹಾಸ್ಯ ಚಟಾಕೆ ಹಾರಿಸಿದ ಕುಮಟಳ್ಳಿ, ನನಗೆ ಒಂದು ವಾಟ್ಸಾಪ್ ಮೆಸೇಜ್ ಬಂದಿತ್ತು. ಅದರಲ್ಲಿ ಮಹಿಳೆಯೋರ್ವಳು ಹೇಳುತ್ತಿದ್ದಳು, ಪೊಲೀಸರು ಲಾಕ್‍ಡೌನ್ ಉಲ್ಲಂಘಿಸಿದವರನ್ನ ಹಿಡಿದು ಲೂಸ್‍ಮೋಶನ್ ಮಾತ್ರೆ ಕೊಟ್ಟರೆ ಅವರು ಮನೆಯಲ್ಲೂ ಇರುತ್ತಾರೆ. ಮತ್ತೆ ದಿನನಿತ್ಯ ಕೈಗಳನ್ನ ತೊಳೆದುಕೊಳ್ಳುತ್ತಾರೆ ಎಂಬುದಾಗಿತ್ತು ಎಂದು ಶಾಸಕರು …
Read More »ಜನಪ್ರತಿನಿಧಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಸ್ಥಳಗಲ್ಲಿ ಪ್ರತಿದಿನ ಮನೆಗಳಿಗೆ ಭೇಟಿ ಬರಿ ಭಾಷಣ ಮಾಡಿ ಹೋಗುವುದಲ್ಲ: ರಮೇಶ ಜಾರಕಿಹೊಳಿ
ಮೂಡಲಗಿ: ಕೊರೋನಾ ಇಡೀ ಪ್ರಪಂಚಾದಾದ್ಯಂತ ಮರಣ ಮೃದಂಗ ಭಾರಿಸುತ್ತಿರವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಬರಿ ಭಾಷಣ ಮಾಡಿ ಹೋಗುವುದಲ್ಲ, ಯಾವುದೇ ಜಾತಿ ಪಕ್ಷ ಅಲ್ಲದೇ ವಿರೋಧ ಪಕ್ಷದ ಮುಖಂಡರು ಸಹ ಸೇರಿ ನಿರ್ಮೂಲನೆ ಮಾಡುವಂತ ಕೆಲಸವಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು ಸೋಮವಾರ ಮೂಡಲಗಿ ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಕೊರೋನಾ ವೈರಸ್ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಪರಿಶೀಲನಾ …
Read More »ಕೊರೋನಾ ಸೋಂಕು ಹರಡುವುದನ್ನು ತಡೆಯುವ ವಿಚಾರದಲ್ಲಿ ಇನ್ನಷ್ಟು ಎಚ್ಚರಿಕೆ ಅಗತ್ಯ:H.D.D.
ಬೆಂಗಳೂರು, ಏ.6-ಕೊರೋನಾ ಸೋಂಕು ಹರಡುವುದನ್ನು ತಡೆಯುವ ವಿಚಾರದಲ್ಲಿ ಇನ್ನಷ್ಟು ಎಚ್ಚರಿಕೆ ಅಗತ್ಯ ಎಂದುಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಬೇಕಾದ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಮೆಡಿಕಲ್ ಕಿಟ್, ಔಷಧಿ ತರಿಸಿದ್ದಾರೆ. ಕೊರೊನಾ ಶಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಮೂರನೇ ಹಂತ, ನಾಲ್ಕನೇ ಹಂತ ಎನ್ನುತ್ತಿದ್ದಾರೆ. ಕಡಿಮೆಯಾದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ ಎಂದರು.ಕೋವಿಡ್ -19 ಸುಮಾರು ಇನ್ನೂರು ದೇಶಗಳಲ್ಲಿ ಇದೆ. ಅತ್ಯಂತ …
Read More »ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ವಿಡಿಯೋ, ಆಡಿಯೋ ಕ್ಲಿಪ್ ವೈರಲ್ ಮಾಡಿದ ಪ್ರಮುಖ ಆರೋಪಿಯನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ:ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ವಿಡಿಯೋ, ಆಡಿಯೋ ಕ್ಲಿಪ್ ವೈರಲ್ ಮಾಡಿದ ಪ್ರಮುಖ ಆರೋಪಿಯನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ ಅಮಿರ್ ಹಮ್ಜಾ ಬೀಡಿಕರ್ ಬಂಧಿತ ಆರೋಪಿ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏಳು ಕೊರೊನಾ ಸೋಂಕಿತರ ಮೇಲೆ ನಿಗಾ ಇಡಲಾಗಿದೆ. ಮೊದಲು ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಮೂವರ ಬಗ್ಗೆ ಆಡಿಯೋ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಸಮಾಜಕ್ಕೆ ತಪ್ಪು ಸಂದೇಶ ಸಾರುವ …
Read More »ಟೂರಿಸ್ಟ ವೀಸಾ ಪಡೆದು ಧರ್ಮ ಪ್ರಚಾರ ನಡೆಸಿದ ಆರೋಪದ ಮೇಲೆ ಹತ್ತೂ ಜನರ ಮೇಲೆ ಎಫ ಐ ಆರ್ ದಾಖಲು
ಬೆಳಗಾವಿ- ಟೂರಿಸ್ಟ್ ವೀಜಾ ಪಡೆದು ಬೆಳಗಾವಿಯಲ್ಲಿ ಧರ್ಮ ಪ್ರಚಾರ ನಡೆಸಿದ ಆರೋಪದ ಮೇಲೆ ಬೆಳಗಾವಿಗೆ ಬಂದಿದ್ದ ಇಂಡೋನೇಶಿಯಾ ಜಮಾತಿನ ಹತ್ತು ಸದಸ್ಯರ ಮೇಲೆ ಪ್ರತ್ಯೇಕವಾಗಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಇಂಡೋನೇಶಿಯಾ ಮೂಲದ ಹತ್ತು ಜನ ಟೂರಿಸ್ಟ್ ವೀಜಾ ಪಡೆದು,ದೆಹಲಿಯ ಧರ್ಮ ಸಭೆಯಲ್ಲಿ ಭಾಗವಹಿಸಿ,ಬೆಳಗಾವಿಗೆ ಬಂದಿದ್ದರು ಕಾನೂನಿನ ಪ್ರಕಾರ ಅವರು ಮಿಶ್ನರಿ ವೀಸಾ ಪಡೆಯಬೇಕಾಗಿತ್ತು ಟೂರಿಸ್ಟ ವೀಸಾ ಪಡೆದು ಧರ್ಮ ಪ್ರಚಾರ ನಡೆಸಿದ ಆರೋಪದ ಮೇಲೆ ಹತ್ತೂ ಜನರ …
Read More »ಮೈಸೂರಿನಲ್ಲಿ ಮತ್ತೆ 7 ಮಂದಿಗೆ ಕೊರೊನಾ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿದ್ದು, ಕಳೆದ 24 ಗಂಟೆಯಲ್ಲಿ 12 ಹೊಸ ಕೊರೊನಾ ಸೊಂಕಿತ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 12 ಕೊರೊನಾ ಸೋಂಕಿತ ಪ್ರಕರಣದಲ್ಲಿ 7 ಮಂದಿ ಮೈಸೂರು, ಇಬ್ಬರು ಬಾಗಲಕೋಟೆ, ಒಬ್ಬರು ಕೇರಳ, ಒಬ್ಬರು ಬೆಂಗಳೂರು, ಒಬ್ಬರು ಬೆಂಗಳೂರು ಗ್ರಾಮಂತರಕ್ಕೆ ಸೇರಿದವರಾಗಿದ್ದಾರೆ. ಈವರೆಗೆ ದಾಖಲಾದ 163 ಸೊಂಕಿತರಲ್ಲಿ 9 ಮಂದಿ …
Read More »“ರಾಜ್ಯದಲ್ಲಿ ಮದ್ಯ ಸಂಪೂರ್ಣನಿಷೇಧ ಮಾಡಲು ಮೊದಲು ನಾನೇ ಬೆಂಬಲ ಸೂಚಿಸುತ್ತೇನೆ:ಸಚಿವ ರಮೇಶ್ ಜಾರಕಿಹೊಳಿ
ಚಿಕ್ಕೋಡಿ(ಬೆಳಗಾವಿ): ರಾಜ್ಯದಲ್ಲಿ ಮದ್ಯ ಸಂಪೂರ್ಣ ನಿಷೇಧ ಮಾಡಬೇಕು. ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಲು ಮೊದಲು ನಾನೇ ಬೆಂಬಲ ಸೂಚಿಸುತ್ತೇನೆ ಎಂದು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ ಪಾಸಿಟಿವ್ ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾ ರೋಗ ಬಂದು ಜನರಿಗೆ ಒಳ್ಳೆಯ ದಾರಿ ತೋರಿಸಿದೆ. ಕೆಟ್ಟ ಚಟಗಳನ್ನ ಕಡಿಮೆ ಮಾಡಲು ಅವಕಾಶ ಸಿಕ್ಕಿದೆ. …
Read More »18 ಜನರ ಗಂಟಲು ದ್ರವ ಸಂಗ್ರಹಿಸಿ ಸೋಮವಾರ ಪ್ರಯೋಗಾಲಯಕ್ಕೆ ಒಟ್ಟು 850 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ
ಬೆಳಗಾವಿ: ಜಿಲ್ಲೆಯಲ್ಲಿ 7 ಜನರಿಗೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಒಟ್ಟು 18 ಜನರ ಗಂಟಲು ದ್ರವ ಸಂಗ್ರಹಿಸಿ ಸೋಮವಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೊರೊನಾ ಮೊದಲು ಮೂರು ಬಳಿಕ ನಾಲ್ಕು ಒಟ್ಟು ಏಳು ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಇದರಿಂದ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಜನರನ್ನು ಗುರುತಿಸಿ ಗಂಟಲು ದ್ರವ ಸಂಗ್ರಹಿಸಲಾಗಿದೆ. ಜತೆಗೆ ಇಂದು ಸಹ ಕೆಲವರ ಗಂಟಲು ದ್ರವ ಸಂಗ್ರಹ …
Read More »ಬೆಳಗಾವಿ: ಜಿಲ್ಲೆಯಲ್ಲಿ ಹಣ್ಣು ಹಂಪಲು ಮಾರಾಟ ಮಾಡಲು ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ :ಬಿ.ಸಿ.ಪಾಟೀಲ್
ಬೆಳಗಾವಿ: ಜಿಲ್ಲೆಯಲ್ಲಿ ಹಣ್ಣು ಹಂಪಲು ಮಾರಾಟ ಮಾಡಲು ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದ್ದು, ರೈತರ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ರು. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ರಾಜ್ಯದ ಕೊಂಡಿಯಾಗಿರುವ ಗಡಿ ಜಿಲ್ಲೆಯಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ರೈತರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಸಮಸ್ಯೆ ಬಂದರು …
Read More »ಬೆಂಕಿಬಿದ್ದ ಮನೆಯಲ್ಲಿ ಸಿಗರೇಟ್ ಹಚ್ಚಿಕೊಳ್ಳುವ ಕೆಲಸ ಕೆಲವರು ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಜಮಾತಿಗೆ ಹೋದವರಿಂದಲೇ ಕೊರೊನಾ ಹಬ್ಬತ್ತಿದೆ ಅನ್ನೋ ಚರ್ಚೆ, ಒಂದು ಸಮುದಾಯ ಗುರಿಯಾಗಿಸಿರುವ ವಿಚಾರವಾಗಿದೆ. ಬೆಂಕಿಬಿದ್ದ ಮನೆಯಲ್ಲಿ ಸಿಗರೇಟ್ ಹಚ್ಚಿಕೊಳ್ಳುವ ಕೆಲಸ ಕೆಲವರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಕೆಲವರು ಇದೇ ರೀತಿ ವರ್ತನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಈಗಾಗಲೇ ಕಮೀಷನರ್ ಹೇಳಿದ್ದಾರೆ ಎಂದರು. ಅಂತೆಯೇ, ಇಂದಿರಾ ಕ್ಯಾಂಟಿನ್ ನಿಲ್ಲಿಸಬಾರದು, ಉದ್ಯೋಗ ಸಿಗುವವರೆಗೂ …
Read More »
Laxmi News 24×7