Breaking News

ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

ಬೆಳಗಾವಿ: ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಆರೋಪದಡಿ ತಾಯಿ-ಮಗಳನ್ನು ರಸ್ತೆಗೆ ಎಳೆದು ತಂದು ಬಟ್ಟೆ ಹರಿದು ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ನಗರದ ವಡ್ಡರವಾಡಿ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿದೆ. ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಹರಿದಾಡಿದ ಅನಂತರ ಘಟನೆ ಬೆಳಕಿಗೆ ಬಂದಿದ್ದು, ಇಂದ್ರಾ ಅಷ್ಟೇಕರ, ಹೂವಪ್ಪ ಅಷ್ಟೇಕರ ಹಾಗೂ ಮಣಿಕಂಠ ಅಷ್ಟೇಕರ ಅವರ ವಿರುದ್ಧ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ವಡ್ಡರವಾಡಿಯ ಮಹಿಳೆಯೊಬ್ಬಳನ್ನು ಮಹಾರಾಷ್ಟ್ರದ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು. …

Read More »

ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

ಬೆಳಗಾವಿ: ರಾಜ್ಯ ಮದ್ಯ ಮಾರಾಟಗಾರರು ನ.20 ರಂದು ಕರೆ ನೀಡಿರುವ ರಾಜ್ಯ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಉಮೇಶ್ ಬಾಳಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಪ್ರವಾಸೋದ್ಯಮ ಹೋಟೆಲ್ ಬೇರೆ ಅವರ ಸಂಘಟನೆಯೇ ಬೇರೆ. ಹೀಗಾಗಿ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದರು. ಪ್ರವಾಸೋದ್ಯಮ ಹೋಟೆಲ್ ನವರು ಬ್ಯಾಂಕ್ ನಿಂದ ಸಾಲ ಪಡೆದು ಹೆಚ್ಚಿನ …

Read More »

ಬೆಳಗಾವಿ-ಧಾರವಾಡ ವಯಾ ಕಿತ್ತೂರು ನೇರ ರೈಲು ಮಾರ್ಗ ಯಾಕಿಷ್ಟು ವಿಳಂಬ?

ಬೆಳಗಾವಿ, ನವೆಂಬರ್ 17: ಬೆಳಗಾವಿ-ಧಾರವಾಡ ವಯಾ ಕಿತ್ತೂರು ನೇರ ರೈಲು ಮಾರ್ಗ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರ ಕನಸಿನ ಯೋಜನೆ ಇದು. ಯೋಜನೆಯ ಕಾಮಗಾರಿಗೆ ಭೂ ಸ್ವಾಧೀನ ಕಾರ್ಯವೇ ಅಡ್ಡಿಯಾಗಿದೆ. ಈಗಾಗಲೇ ಈ ಯೋಜನೆ ನಕ್ಷೆಯನ್ನು ಯಾವುದೇ ಕಾರಣಕ್ಕೂ ಬದಲಿಸಲಾಗದು. ವಿಶೇಷ ಭೂಸ್ವಾಧೀನ ಅಧಿಕಾರಿಗಳು ತಮ್ಮ ಕೆಲಸ ಆರಂಭಿಸಬೇಕು ಎಂದು ಸೂಚನೆ ನೀಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದ …

Read More »

ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

ದಾವಣಗೆರೆ: ಯತ್ನಾಳ್ ನನ್ನನ್ನು ಥರ್ಡ್ ರೇಟ್ ರಾಜಕಾರಣಿ ಎಂದು ಹೇಳಿದ್ದಾರೆ. ಅವರು ರಾಜಕಾರಣದಲ್ಲಿ ದೊಡ್ಡವರು. ನಾನು ಥರ್ಡ್‌ ಆದರೆ ಅವರು ಫೋರ್ತ್ ಗ್ರೇಡ್ ರಾಜಕಾರಣಿ. ಎಲ್ಲವೂ ಅವರೇ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ಟಿಆರ್ ಪಿಗಾಗಿ ಮಾತನಾಡುತ್ತಿದ್ದಾರೆ. ನಾನು ಅಟಲ್ ವಾಜಪೇಯಿ ಸಂಪುಟದ ಸಚಿವ ಎಂದು ಹೇಳಿಕೊಳ್ಳುವ ಮೂಲಕ ಅಟಲ್ ವಾಜಪೇಯಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ವಾಜಪೇಯಿ …

Read More »

‘ಮರೆಯದ ಮಾಣಿಕ್ಯ’ ಪ್ರಶಸ್ತಿ ಪ್ರದಾನ

ಗೋಕಾಕ: ಬೆಂಗಳೂರು ಮೂಲದ ಆಶಾಕಿರಣ ಕಲಾ ಟ್ರಸ್ಟ್‌.ರಿ ಗೋಕಾಕ ಸಂಸ್ಥೆಯಿಂದ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಮರೆಯದ ಮಾಣಿಕ್ಯ’ ಪ್ರಶಸ್ತಿ ಪ್ರದಾನವನ್ನು ಶನಿವಾರ ಇಲ್ಲಿನ ಜೆಎಸ್‌ಎಸ್ ಪದವಿ ಪೂರ್ವ ಸಭಾಭವನದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು.   ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಗೋಕಾಕದ ವೈದ್ಯ ಅಶೋಕ ಜಿರಗ್ಯಾಳ ಮತ್ತು ಶಿವರಾಜ ಗೌಡ, ರಂಗಭೂಮಿ ಕಲಾವಿದ ರೇವಣಸಿದ್ದ ಕಣಕಿಕೋಡಿ, ಕೊಪ್ಪಳ ಜಿಲ್ಲಾ ಕಾರಾಗೃಹ ಅಧೀಕ್ಷಕ ಅಂಬರೀಶ ಪೂಜಾರಿ, ಜಾನಪದ ಕಲಾವಿದ …

Read More »

ಸಿಹಿ ಗೆಣಸಿಗೆ ಬಂಪರ್‌ ಬೆಲೆ

ಬೆಳಗಾವಿ: ಇಳುವರಿ ಕುಸಿತದಿಂದಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಸಿಹಿ ಗೆಣಸಿನ ಆವಕ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಧಾರಣೆ ಏರಿಕೆಯಾಗಿದೆ. ಶನಿವಾರ ಸಿಹಿ ಗೆಣಸು ಕ್ವಿಂಟಲ್‌ಗೆ ₹1,500ರಿಂದ ₹2 ಸಾವಿರಕ್ಕೆ ಮಾರಾಟವಾಗಿದೆ. ಗುಣಮಟ್ಟದ ಗೆಣಸಿಗೆ ಕ್ವಿಂಟಲ್‌ಗೆ ₹2,300 ದರ ಸಿಕ್ಕಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಕ್ವಿಂಟಲ್‌ಗೆ ₹500ರಿಂದ ₹1,200 ದರಕ್ಕೆ ಮಾರಾಟವಾಗಿತ್ತು. ಬೆಳಗಾವಿ ತಾಲ್ಲೂಕಿನ ಪಶ್ಚಿಮ ಭಾಗ ಮತ್ತು ಮಹಾರಾಷ್ಟ್ರದ ಚಂದಗಢ ತಾಲ್ಲೂಕಿನಲ್ಲಿ ಹೆಚ್ಚು ಗೆಣಸು ಬೆಳೆಯಲಾಗುತ್ತದೆ. ಈ ಗೆಣಸನ್ನು …

Read More »

ಬೈಲಹೊಂಗಲ: ಮರಡಿ ಬಸವೇಶ್ವರ ಜಾತ್ರೆಗೆ ಸಜ್ಜು; ಗ್ರಾಮೀಣ ಸೊಗಡು ಅನಾವರಣ

ಬೈಲಹೊಂಗಲ: ರೈತ ಸಮುದಾಯದ ಅಧ್ಯಾತ್ಮಿಕ ಕೇಂದ್ರವಾಗಿರುವ, ಇತಿಹಾಸ ಪ್ರಸಿದ್ಧ ಇಲ್ಲಿನ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 18 ರಂದು ಸಂಜೆ 4.30ಕ್ಕೆ ನವಿಲಿನ ಕಳಶ ಹೊತ್ತ ಮಹಾರಥ ಎಳೆಯಲು ಭಕ್ತರು ಕಾಯುತ್ತಿದ್ದಾರೆ.   80 ಅಡಿ ಎತ್ತರದ ರಥಃ ಪ್ರತಿವರ್ಷ ಮರಡಿ ಬಸವೇಶ್ವರ ಜಾತ್ರೆಗೆ ಒಂದು ತಿಂಗಳ ಮುನ್ನವೇ ಸಿದ್ಧತೆ ಆರಂಭಿಸಲಾಗುತ್ತದೆ. ವಿಜಯದಶಮಿ ದಿನದಂದು ದೇವಸ್ಥಾನದಲ್ಲಿರುವ ಬೃಹತ್ ಆಕಾರದ ಕಲ್ಲಿನ ಗಾಲಿಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ …

Read More »

ಮೂಡಲಗಿ: ಅಕ್ಷರ ಜಾತ್ರೆಗೆ ಭರದ ಸಿದ್ಧತೆ

ಮೂಡಲಗಿ: ಇಲ್ಲಿನ ಆರ್‌ಡಿಎಸ್‌ ಸಂಸ್ಥೆಯ ಮೈದಾನದಲ್ಲಿ ನ. 23 ಮತ್ತು 24ರಂದು ಜರುಗಲಿರುವ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆ ಭರದಿಂದ ಸಾಗಿದೆ. ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಭುವನೇಶ್ವರಿಯ ಮೆರವಣಿಗೆಯು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಕಲ್ಮೇಶ್ವರ ವೃತ್ತದ ಮೂಲಕ, ಆರ್‌ಡಿಎಸ್‌ ಕಾಲೇಜು ವರೆಗಿನ ರಸ್ತೆ ದುರಸ್ತಿ ಕಾಮಗಾರಿ ಭರದಿಂದ ಸಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಲುವಾಗಿ ಪುರಸಭೆಯ ವಿವಿಧ ಅನುದಾನದ …

Read More »

ಬಹುಮತ ಹೊಂದಿರುವ ಸರ್ಕಾರ ಬೀಳಿಸುವುದು ಹುಚ್ಚುತನದ ಪರಮಾವಧಿ: B.S.Y.

ಶಿವಮೊಗ್ಗ: ‘ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಪೂರ್ಣ ಬಹುಮತ ಹೊಂದಿರುವ ಸರ್ಕಾರವನ್ನು ಬೀಳಿಸುವುದು ಹುಚ್ಚುತನದ ಪರಮಾವಧಿ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು. ‘ಸರ್ಕಾರ ಬೀಳಿಸುವುದಕ್ಕಾಗಿ ಕಾಂಗ್ರೆಸ್ ಶಾಸಕರನ್ನು ಯಾರೂ ಬಿಜೆಪಿಗೆ ಕರೆಯುತ್ತಿಲ್ಲ’ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.   ‘ಕೋವಿಡ್ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸ ಮಾಡಿದ್ದೇವೆ. ಯಾವುದೇ ಭ್ರಷ್ಟಾಚಾರ ಅಥವಾ ಹಣಕಾಸಿನ ಏರುಪೇರು ಆಗಿಲ್ಲ.‌ ರಾಜ್ಯ ಸರ್ಕಾರ ದುರುದ್ದೇಶದಿಂದ …

Read More »

ಕುಷ್ಟಗಿ: ಹರಾಜು ಹಣ ಪಾವತಿಸದಿದ್ದರೂ ಕರ ವಸೂಲಿ

ಕುಷ್ಟಗಿ: ಪುರಸಭೆ ವ್ಯಾಪ್ತಿಯ ದಿನದ ಸಂತೆಯಲ್ಲಿ ವ್ಯಾಪಾರಿಗಳಿಂದ ವರ್ಷದ ಅವಧಿಗೆ ಶುಲ್ಕ ವಸೂಲಿ ಮಾಡುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮುಂಚಿತವಾಗಿ ಸಂಪೂರ್ಣ ಹಣ ಪಾವತಿಸದಿದ್ದರೂ ಸಂತೆಯಲ್ಲಿ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ.   ತರಕಾರಿ, ಮಾಂಸದ ಅಂಗಡಿಗಳು, ಹಣ್ಣು, ಮಾರಾಟದ ಬಂಡಿ, ಫಾಸ್ಟ್‌ಫುಡ್, ಹೋಟೆಲ್‌ ಸೇರಿ ವಾರದ, ದೈನಂದಿನ ಸಂತೆ ಹಾಗೂ ಜಾನುವಾರು ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಂದ ನಿಗದಿಪಡಿಸಿದ ಶುಲ್ಕ ವಸೂಲಿ ಮಾಡುವ ಹಕ್ಕನ್ನು …

Read More »