Breaking News

ನೆಲಮಂಗಲದಲ್ಲಿ ಬಿಹಾರಿಗಳ ಗಲಾಟೆ ತಡೆಯಲು ರಾಷ್ಟ್ರಗೀತೆ ಹಾಡಿದ ಪಿಎಸ್‍ಐ

ಬೆಂಗಳೂರು: ಬಿಹಾರಿ ಕಾರ್ಮಿಕರ ಗಲಾಟೆಯನ್ನು ತಡೆಯವುದು ಹರಸಾಹಸವನ್ನೇ ಪಟ್ಟಿದ್ದರು. ನಂತರ ಗಲಾಟೆ ಹತೋಟಿಗೆ ಬಂದಿತ್ತು. ಗಲಾಟೆ ನಿಯಂತ್ರಣದ ವಿಡಿಯೋ ಇದೀಗ ವೈರಲ್ ಆಗಿದ್ದು, ಗಲಾಟೆ ಸಮಯದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗಲಾಟೆ ಕಡಿಮೆ ಮಾಡಲು ಇನ್ಸ್ ಪೆಕ್ಟರ್ ಪ್ಲಾನ್ ಮಾಡಿ, ಮಾದನಾಯಕನಹಳ್ಳಿ ಠಾಣೆ ಸಿಪಿಐ ಸತ್ಯನಾರಾಯಣ ಅವರು ಗಲಾಟೆ ಸಮಯದಲ್ಲಿ ಜನಗಣ ಮನ ಹಾಡಿದ್ದಾರೆ. ಈ ವೇಳೆ ಇನ್ಸ್ ಪೆಕ್ಟರ್ ರೊಂದಿಗೆ ಬಿಹಾರಿ ವಲಸೆ ಕಾರ್ಮಿಕರು ಸಹ …

Read More »

78 ವರ್ಷದ ವೃದ್ಧ ಕೊರೊನಾದಿಂದ ಗುಣಮುಖ…….

ಬೆಂಗಳೂರು: 78 ವರ್ಷದ ವೃದ್ಧ ಕೊರೊನಾದಿಂದ ಗುಣಮುಖರಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಜರಾತ್ ಮೂಲದ ವೃದ್ಧ ಕರ್ನಾಟಕದಲ್ಲೇ ವಾಸವಾಗಿದ್ದರು. ಮೊದಲು ವೃದ್ಧನಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾದಾಗ ಕೋವಿಡ್-19 ಸೋಂಕು ತಗುಲಿರೋದು ದೃಢಪಟ್ಟಿತ್ತು. ತಮ್ಮ ಆತ್ಮಮನೋಬಲದಿಂದ ಡೆಡ್ಲಿ ಕೊರೊನಾಗೆ ಸೆಡ್ಡು ಹೊಡೆದು ಬಂದಿದ್ದಾರೆ. ಮಾರ್ಚ್ 1ಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಮಾರ್ಚ್ 17ರಂದು ಗುಣಮುಖರಾಗಿ ಹೊರ ಬಂದಿದ್ದರು. ತಮಗೆ ಹೇಗೆ ಚಿಕಿತ್ಸೆ ನೀಡಲಾಯ್ತು ಎಂಬಿತ್ಯಾದಿ …

Read More »

5 ಸಾವಿರ ಕೊರೊನಾ ಸೇನಾನಿಗಳಿಗೆ ಗೌರವ- ಸಿದ್ದರಾಮಯ್ಯರಿಂದ ದಿನಸಿ ಕಿಟ್ ವಿತರಣೆ

ಕೋಲಾರ: ಕೊರೊನಾ ವಿರುದ್ಧ ಹೋರಾಡುತ್ತಿರುವ ಸುಮಾರು 5 ಸಾವಿರ ಜನ ವಾರಿಯರ್ಸ್‍ಗೆ ದಿನಸಿ ಕಿಟ್ ಜೊತೆಗೆ ಮಡಿಲು ತುಂಬಿ ಗೌರವಿಸುವ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿ ಮಾಲೂರು ಶಾಸಕ ನಂಜೇಗೌಡ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಗಲಿರುಳು ದುಡಿಯುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಿಸಿದರು. ಅಲ್ಲದೆ ಶಾಸಕರ ಕುಟುಂಬಸ್ಥರು ಅರಿಶಿನ ಕುಂಕುಮ ನೀಡಿ ಮಡಿಲು ತುಂಬಿದರು. ಮಾಲೂರು …

Read More »

‘ಸಾಲ ತೀರಿಸಬೇಕು, ಬಾಡಿಗೆ ಕಟ್ಟಬೇಕು, ಕೆಲಸಗಾರರಿಗೆ ಸಂಬಳ ನೀಡಬೇಕು‘: ನಮಗೂ ಎಣ್ಣೆ ಮಾರಲು ಅವಕಾಶ ಕೊಡಿ ಎಂದು ಸಿಎಂಗೆ ಬಾರ್​ ಮಾಲೀಕರ ಮನವಿ

ಬೆಂಗಳೂರು: ಕೊರೋನಾ ಲಾಕ್​ಡೌನ್​​ ನಡುವೆಯೇ ಕೊನೆಗೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಎರಡು ದಿನಗಳಿಂದ ಮಹಿಳೆಯರು ಮತ್ತು ಪುರುಷರು ಎನ್ನದೇ ಎಲ್ಲಾ ವಯೋಮಾನದವರು ಬೆಳಿಗ್ಗೆ 7 ಗಂಟೆಯಿಂದಲೇ ವೈನ್ ಸ್ಟೋರ್​​ಗಳು, ಎಂಆರ್​​ಪಿ ಎಣ್ಣೆ ಅಂಗಡಿಗಳ ಮುಂದೆ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ. ಕೊರೋನಾ ವೈರಸ್​​ ಕಾರಣ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವುದು ನೋಡುತ್ತಿದ್ದೇವೆ. ಹೀಗಿರುವಾಗ ರಾಜ್ಯದಲ್ಲಿ ಎಂಆರ್​​ಪಿ ಹಾಗೂ ಎಂಎಸ್​ಐಎಲ್ ಮಳಿಗೆಗಳಲ್ಲಿ ಮಾತ್ರ ಮದ್ಯ …

Read More »

ಬಾರ್, ರೆಸ್ಟೋರೆಂಟ್ ಸದ್ಯಕ್ಕೆ ಓಪನ್ ಮಾಡಲ್ಲ: ಸಚಿವ ನಾಗೇಶ್

ಬೆಂಗಳೂರು, : ಮೂರನೇ ಅವಧಿಯ ಲಾಕ್ಡೌನ್ ನಡುವೆಯೂ ಷರತ್ತುಗಳ ನಡುವೆ ಮೇ.04ರಿಂದ ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರವು ಸಂಪೂರ್ಣ ಅನುಮತಿ ನೀಡಿದೆ. ಎಂಎಸ್ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ಭರ್ಜರಿ ಗಳಿಕೆಯೂ ಆಗುತ್ತಿದೆ. ಆದರೆ, ಇದರ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬುತ್ತಿದೆ. ಆದ್ರೆ, ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ …

Read More »

ಕೆಎಸ್ಆರ್‌ಟಿಸಿ ಉಚಿತ ಬಸ್ ಸಂಚಾರ ಶುಕ್ರವಾರದಿಂದ ಸ್ಥಗಿತ?

ಬೆಂಗಳೂರು, ಮೇ 07 : ಬೆಂಗಳೂರು ನಗರದಿಂದ ವಲಸೆ ಕಾರ್ಮಿಕರನ್ನು ತಮ್ಮ ಊರಿಗೆ ತಲುಪಿಸಲು ಕೆಎಸ್ಆರ್‌ಟಿಸಿ ಆರಂಭಿಸಿದ್ದ ಬಸ್ ಸೇವೆ ಮೇ 8ರಿಂದ ಸ್ಥಗಿತಗೊಳ್ಳಲಿದೆ. ಗುರುವಾರದ ತನಕ ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಕಳೆದ 5 ದಿನಗಳಿಂದ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ವಲಸೆ ಕಾರ್ಮಿಕರು ತೆರಳಿದ್ದಾರೆ. ಉಚಿತ ಪ್ರಯಾಣಕ್ಕೆ ಗುರುವಾರ ಕೊನೆ ದಿನವಾಗಿದ್ದು, ಶುಕ್ರವಾರದಿಂದ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ಇದುವರೆಗೂ ಸುಮಾರು 3,500 ಬಸ್‌ಗಳನ್ನು …

Read More »

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ಸಿಎಂ ಪ್ಯಾಕೇಜ್‌ ಬಗ್ಗೆ ಸಿದ್ಧರಾಮಯ್ಯ ಟೀಕೆ

ಬೆಂಗಳೂರು,: ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು, ಚಾಲಕರು, ರೈತರು ಸೇರಿ ಇತರೆ ವರ್ಗದ ಜನರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 1610 ಕೋಟಿ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಈ ವಿಶೇಷ ಪ್ಯಾಕೇಜ್ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಇದ್ದಂತೆ ಇದು ಎಂದಿದ್ದಾರೆ. ಸಿಎಂ ಘೋಷಣೆ ಮಾಡಿರುವ ಆರ್ಥಿಕ ನೆರವಿನ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ”ನಾವು …

Read More »

ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಲಾಕ್‍ಡೌನ್ ಹಿನ್ನೆಲೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಫೇಸ್ ಬುಕ್ ಲೈವ್‍ನಲ್ಲಿ ಪ್ರತಿ ದಿನ ಸಂಜೆ 7.30 ರಿಂದ 8.30ರವೆಗೆ ಪಾಠ ಮಾಡುತ್ತಿದ್ದಾರೆ. ಒಂದು ವಾರ ಗಣಿತ, ಮತ್ತೊಂದು ವಾರ ಭೌತಶಾಸ್ತ್ರ ಪಾಠ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸಲು ಸರ್ಕಾರ …

Read More »

ವರದಿಗಾರ ಹನುಮಂತು ಕುಟುಂಬಕ್ಕೆ ವೆಬಿನಾರ್ ಹಣ – ಸುರಾನಾ ಕಾಲೇಜು ತೀರ್ಮಾನ

ಬೆಂಗಳೂರು: ಸುರಾನಾ ಪೀಣ್ಯಾ ಕ್ಯಾಂಪಸ್ ಅಲ್ಲಿ ವೆಬಿನಾರ್ ಅನ್ನು ಆಯೋಜನೆ ಮಾಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್‍ಲೈನ್ ಕ್ಲಾಸ್ ಮಾಡಲು ತೀರ್ಮಾನಿಸಿ ಇದನ್ನು ಶುರು ಮಾಡಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲೆ ರಮ್ಯಾ ಅವರು ಹೇಳಿದ್ದಾರೆ. ಕೇವಲ ಉಪನ್ಯಾಸಕರಿಂದ ಕ್ಲಾಸ್ ಮಾಡುವುದಕ್ಕಿಂತ ಅತಿಥಿ ಉಪನ್ಯಾಸಕರಿಂದ ಆನ್‍ಲೈನ್ ಕ್ಲಾಸ್ ಮಾಡಿಸಲು ಶುರು ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ಕ್ಲಾಸಿನ ಬಗ್ಗೆ ಗಂಭೀರತೆ ಇರಲಿ ಎಂದು 100, 200 ರೂಪಾಯಿ ಎಂದು ಫೀಸ್ ಕೂಡ ಮಾಡಿದ್ದೇವೆ. ಈ ಹಣವನ್ನು …

Read More »

ವಿಶ್ರಾಂತಿಗಾಗಿ ತಂಗಿದ್ದ ವೇಳೆ ನನ್ನ ವಸ್ತ್ರಗಳನ್ನು ಕಳಚಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.: ಗುರುಸ್ವಾಮಿ ಸ್ಪಷ್ಟನೆ

ಹುಬ್ಬಳ್ಳಿ: ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನ ಬೆತ್ತಲೆ ಪುರಾಣದ ವಿಡಿಯೋ ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಮೋಹನ್ ಗುರು ಸ್ವಾಮೀಜಿ ಅವತಾರ ಕಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿ, ಆತನನ್ನು ಮಠದಿಂದ ಹೊರ ಕಳುಹಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಸದ್ಯ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶ ಮೋಹನ ಗುರುಸ್ವಾಮಿ, ಕುಸುಗಲ್ ರಸ್ತೆಯಲ್ಲಿರುವ ಸಿದ್ದಾರೂಡ ಮಠದಲ್ಲಿ ವಿಶ್ರಾಂತಿಗಾಗಿ ತಂಗಿದ್ದ ವೇಳೆ ನನ್ನ …

Read More »