Breaking News

ಅಮೆರಿಕ ವಿಶೇಷ ತಂಡದಿಂದ ಚೀನಾ ವೈರಸ್ ಕಳ್ಳಾಟದ ತನಿಖೆ ………

ವಾಷಿಂಗ್ಟನ್/ಚೀನಾ, ಏ.20-ಕಿಲ್ಲರ್ ಕೊರೊನಾ ವ್ಯಾಪನೆ ಮೂಲಕ ಜಗತ್ತಿನಾದ್ಯಂತ ಭಾರೀ ಸಾವು-ನೋವು ಮತ್ತು ಸೋಂಕು ಹೆಚ್ಚಳಕ್ಕೆ ಕಾರಣವೆನ್ನಲಾದ ಚೀನಾಗೆ ವಿಶೇಷ ತಜ್ಞರ ತಂಡವೊಂದನ್ನು ರವಾನಿಸಿ ತನಿಖೆ ನಡೆಸಲು ಅಮೆರಿಕ ಗಂಭೀರ ಚಿಂತನೆ ನಡೆಸಿದೆ. ಅಮೆರಿಕದಲ್ಲಿ 41,000 ಮಂದಿ ಸೇರಿದಂತೆ ವಿಶ್ವಾದ್ಯಂತ 1.65 ಲಕ್ಷ ಜನರ ಸಾವಿಗೆ ಚೀನಾ ಹೊಣೆ ಎಂಬುದು ಸಾಬೀತಾದಲ್ಲಿ ಆ ದೇಶ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ನಿನ್ನೆಯಷ್ಟೇ ಖಡಕ್ ಎಚ್ಚರಿಕೆ ನೀಡಿದ್ದರು. ರಾಜಧಾನಿ ವಾಷಿಂಗ್ಟನ್‍ನ …

Read More »

ಉಚಿತವಾಗಿ ಮನೆಬಾಗಿಲಿಗೆ ಬರಲಿದೆ ಜನನ ಮತ್ತು ಮರಣ ಪ್ರಮಾಣ ಪತ್ರ ……..

ಬೆಂಗಳೂರು, – ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಅಂಚೆ ಮೂಲಕ ಮನೆಗಳಿಗೆ ತಲುಪಿಸುವ ವಿನೂತನ ಕಾರ್ಯಕ್ರಮಕ್ಕೆ ಬಿಬಿಎಂಪಿ ಚಾಲನೆ ನೀಡಿದೆ. ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಎಲ್.ಶ್ರೀನಿವಾಸ್ ಅವರು ಸಾರ್ವಜನಿಕ ಆರೋಗ್ಯ ಕಾಪಾಡಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪಾಲಿಕೆ ನಿರ್ವಹಿಸುತ್ತಿರುವ ಆಸ್ಪತ್ರೆಗಳಲ್ಲಿ ಒಬ್ಬ ನೆಫ್ರೋಲಾಜಿಸ್ಟ್ ಗಳನ್ನು ನೇಮಕ ಮಾಡಿ ಆಯಾ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೇವೆ ಒದಗಿಸಲು ಈ ಬಾರಿ 16 ಕೋಟಿ …

Read More »

ಕರ್ನಾಟಕದ ಲಾಕ್‍ಡೌನ್ ಬಗ್ಗೆ ಜಾಗತಿಕ ಮಟ್ಟದ ಅಧ್ಯಯನದಲ್ಲಿ ಮೆಚ್ಚುಗೆ

ನವದೆಹಲಿ, -ಡೆಡ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಜಾರಿಯಲ್ಲಿರುವ ಬಿಗಿಯಾದ ಲಾಕ್‍ಡೌನ್ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿಯೊಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಇನ್ಸ್‍ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಎಂಬ ಸಂಸ್ಥೆಯು ನಡೆಸಿದ ಜಾಗತಿಕ ಮಟ್ಟದ ಅಧ್ಯಯನದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಂತಹ ಕೆಲ ರಾಜ್ಯಗಳು ಕೈಗೊಂಡಿರುವ ಬಿಗಿ ಲಾಕ್‍ಡೌನ್‍ನಿಂದ ಸೋಂಕು ತಡೆಗಟ್ಟಲು ಸಹಕಾರಿಯಾಗಿದೆ. ಆದರೆ, ಕೆಲವು ರಾಜ್ಯಗಳು ಇಂತಹ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಶ್ರಮ ವಹಿಸದ ಕಾರಣ ಸಾಂಕ್ರಾಮಿಕ …

Read More »

ಬಿಬಿಎಂಪಿ ಬಜೆಟ್ ನಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಬಂಪರ್ …….

ಬೆಂಗಳೂರು, ಏ.20- ಹದಿನೈದನೇ ಹಣಕಾಸು ಯೋಜನೆಯಡಿ ಮೀಸಲಿಟ್ಟಿರುವ 558 ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಬಂಪರ್ ಹಣ ಮೀಸಲಿರಿಸಲಾಗಿದೆ. ಬಿಜೆಪಿ ಶಾಸಕರಿರುವ 15 ವಿಧಾನಸಭಾ ಕ್ಷೇತ್ರಗಳಿಗೆ 558 ಕೋಟಿ ರೂ.ಗಳಲ್ಲಿ 190 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಲಾಗಿದೆ. ಮೇಯರ್ ಗೌತಮ್ ಕುಮಾರ್ ಅವರ ವಾರ್ಡ್‍ಗೆ 40 ಕೋಟಿ, ಉಪ ಮೇಯರ್ ವಾರ್ಡ್‍ಗೆ 10 ಕೋಟಿ, ಆಡಳಿತ ಪಕ್ಷದ ನಾಯಕರಿಗೆ 20 ಕೋಟಿ, ಅನುದಾನ ನೀಡಿದ್ದರೆ …

Read More »

90ರ ದಶಕದ ಕ್ರಿಕೆಟಿಗನಿಗೆ ಕ್ಲೀನ್ ಬೌಲ್ಡ್ ಆಗಿದ್ದ ಮಾಧುರಿ…..

ಮುಂಬೈ: 90 ದಶಕದ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದ ಮಾಧುರಿ ದೀಕ್ಷಿತ್ ಅವರು ಹೆಸರು ಈ ಹಿಂದೆಯೇ ಭಾರತ ಕ್ರಿಕೆಟ್ ತಂಡದ ಆಟಗಾರನೊಂದಿಗೆ ಕೇಳಿಬಂದಿತ್ತು. ಹೌದು ಮಾಧುರಿ ದೀಕ್ಷಿತ್ ಅವರ ಹೆಸರು ಟೀಂ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾರೊಂದಿಗೆ ಕೇಳಿ ಬಂದಿತ್ತು. ಜೊತೆಗೆ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಗಾಳಿ ಸುದ್ದಿಯಾಗಿ ಬಂದ ಈ ಮಾತುಗಳು ಗಾಳಿಯಲ್ಲೆ ತೆಲಿಹೋಗಿದ್ದವು. ಅಜಯ್ ಜಡೇಜಾ ಮತ್ತು ಮಾಧುರಿ ಮೊದಲಿಗೆ ಜಾಹೀರಾತುವೊಂದರ ಫೋಟೋ …

Read More »

ಲಾಕ್‍ಡೌನ್ ಸರ್ಪಗಾವಲಿನೊಳಗೂ ದಿಯಾಗೆ ಗೆಲುವಿನ ‘ಖುಷಿ’!

ಮೊದಲ ಹೆಜ್ಜೆಯಲ್ಲೇ ಗೆಲುವಿನ ಗೆಜ್ಜೆ ಘಲ್ಲೆಂದಾಗ..! ಊರ ತುಂಬಾ ಕೊರೊನಾ ವೈರಸ್ ಸೃಷ್ಟಿಸಿದ ಬಲವಂತದ ನೀರವ… ಎಲ್ಲವೂ ಸಪಾಟು ಸ್ತಬ್ಧಗೊಂಡಿರುವ ಈ ಘಳಿಗೆಯಲ್ಲಿ ಚಿತ್ರರಂಗವೂ ಸ್ಥಗಿತಗೊಂಡಿದೆ. ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ನೀಡುತ್ತಿದ್ದ ಅದೆಷ್ಟೋ ಚಿತ್ರಗಳು, ಬಿಡುಗಡೆಯ ಹಾದಿಯಲ್ಲಿರುವವುಗಳೆಲ್ಲವೂ ಮಂಕಾಗಿರೋ ಹೊತ್ತಿನಲ್ಲಿಯೇ ಕೆಲ ಸಿನಿಮಾಗಳು ಏಕಾಏಕಿ ಗೆಲುವಿನ ಕಿಡಿ ಹೊತ್ತಿಸಿವೆ. ಆ ಯಾದಿಯಲ್ಲಿ ದಿಯಾ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ. ಮುದ್ದಾದ ಪ್ರೇಮ ಕಥಾನಕದ ಮೂಲಕ ಪ್ರತೀ ಪ್ರೇಕ್ಷಕರಿಗೂ ಇಷ್ಟವಾಗಿದ್ದ ಈ ಚಿತ್ರ ಕೊರೊನಾ …

Read More »

ಲಾಕ್‍ಡೌನ್ ಸಮಯವನ್ನು ಎಂಎಸ್ ಧೋನಿ ಅವರು, ಅವರ ಮಗಳು ಮತ್ತು ಪತ್ನಿ ಸಾಕ್ಷಿ ಜೊತೆ ಎಂಜಾಯ್

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಯವರ ಪತ್ನಿ ಸಾಕ್ಷಿ, ಧೋನಿ ಅವರ ಕಾಲು ಕಚ್ಚಿದ್ದಾರೆ. ಕೊರೊನಾ ಭಯದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಕ್ರಿಕೆಟ್, ಸಿನಿಮಾ ಕೈಗಾರಿಕೆ ಎಲ್ಲವೂ ಬಂದ್ ಆಗಿದ್ದು, ಕ್ರೀಡಾಪಟುಗಳು ಮತ್ತು ನಟ-ನಟಿಯರು ಮನೆಯಲ್ಲೇ ಬಂಧಿಯಾಗಿದ್ದಾರೆ. ಅಂತೆಯೇ ಕೊರೊನಾ ಲಾಕ್‍ಡೌನ್ ಸಮಯವನ್ನು ಎಂಎಸ್ ಧೋನಿ ಅವರು, ಅವರ ಮಗಳು ಮತ್ತು ಪತ್ನಿ ಸಾಕ್ಷಿ ಜೊತೆ ಎಂಜಾಯ್ ಮಾಡುತ್ತಿದ್ದಾರೆ ಹೀಗೆ ಮನೆಯಲ್ಲೇ …

Read More »

ಹುಬ್ಬಳ್ಳಿ:ಹೋಂ ಕ್ವಾರಂಟೈನ್‍ಗೆ ರಾಜ್ಯದ ಐವರು ಮಾಧ್ಯಮ ಪ್ರತಿನಿಧಿಗಳು

ಹುಬ್ಬಳ್ಳಿ: ಐವರು ಮಾಧ್ಯಮ ಪ್ರತಿನಿಧಿಗಳು ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹುಬ್ಬಳ್ಳಿಯಲ್ಲಿ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ನಗರದ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸೇರಿದ ಐವರು ಮಾಧ್ಯಮ ಪ್ರತಿನಿಧಿಗಳು ತಮ್ಮಲ್ಲಿ ಕೊರೊನಾದ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಇವರು ಏಪ್ರಿಲ್ 9ರಂದು ಶಬ್ ಎ ಬರಾತ್ ಆಚರಣೆಯ ಕುರಿತು ವರದಿಗಾರಿಕೆಗಾಗಿ ಹುಬ್ಬಳ್ಳಿಯ ತೊರವಿಹಕ್ಕಲದ ಖಬರಸ್ತಾನಕ್ಕೆ ತೆರಳಿದ್ದರು. ಈ ಸ್ಮಶಾನದ ಕಾವಲುಗಾರನಿಗೆ (ಪಿ- 363) ಕೊರೊನಾ …

Read More »

ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್‍ಗೊಂಡ ವ್ಯಕ್ತಿಯ ಕಣ್ಣೀರ ಸಂದೇಶ

ಮಂಗಳೂರು: ಕೊರೊನಾದಿಂದ ಗುಣಮುಖರಾದ ಮಂಗಳೂರಿನ ವ್ಯಕ್ತಿಯೊಬ್ಬರು ಕಣ್ಣೀರಿನ ಮೂಲಕ ತಮ್ಮ ಜೀವ ಉಳಿಸಿದ ವಾರಿಯರ್ಸ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಬಂದ ವ್ಯಕ್ತಿಯನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಚಪ್ಪಾಳೆ ಮೂಲಕ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ವ್ಯಕ್ತಿ, ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ನಮ್ಮನ್ನು ಅತ್ಯಂತ ಚೆನ್ನಾಗಿ ನೋಡಿಕೊಂಡರು. ಕುಡಿಯಲು ತಣ್ಣೀರು ಬೇಕಾ ಅಥವಾ ಬಿಸಿ ನೀರು ಬೇಕಾ ಎಂದು ಕೇಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಎಷ್ಟು ಕಷ್ಟಪಡುತ್ತಾರೆ ಎಂಬುವುದು …

Read More »

ಗೂಡ್ಸ್ ವಾಹನದಲ್ಲಿ ಬಂದ ಕಾರ್ಮಿಕರು ಕ್ಯಾರಂಟೈನ್‍ಗೆ ಶಿಫ್ಟ್……..

ಚಿಕ್ಕಮಗಳೂರು: ಕಳೆದ ಎರಡು ತಿಂಗಳ ಹಿಂದೆ ಗಾರೆ ಕೆಲಸಕ್ಕೆಂದು ಗದಗ ಜಿಲ್ಲೆಯಿಂದ ಮಡಿಕೇರಿಯ ಕುಶಾಲನಗರಕ್ಕೆ ಬಂದಿದ್ದ ಕಾರ್ಮಿಕರು ಕೆಲಸ ಇಲ್ಲವೆಂದು ಗೂಡ್ಸ್ ವಾಹನದಲ್ಲಿ ಗದಗಕ್ಕೆ ತೆರಳುತ್ತಿದ್ದರು. ಈ ವೇಳೆ ಚಿಕ್ಕಮಗಳೂರು ನಗರ ಪೊಲೀಸರು ರಕ್ಷಿಸಿ ನಗರದ ನರಿಗುಡ್ಡನಹಳ್ಳಿ ಸರ್ಕಲ್‍ನಲ್ಲಿರುವ ಬಿಸಿಎಂ ಹಾಸ್ಟೆಲ್ಲಿನ ಕ್ವಾರಂಟೈನ್‍ಗೆ ದಾಖಲಿಸಿದ್ದಾರೆ. ಹಾಸನ ಮಾರ್ಗದಿಂದ ಬಂದ ವಾಹನವನ್ನು ಹಿರೇಮಗಳೂರು ಚೆಕ್‍ಪೋಸ್ಟ್ ಬಳಿ ಕರ್ತವ್ಯ ನಿರತ ಪೊಲೀಸರು ಚೆಕ್ ಮಾಡಿದ್ದು, ಗಾಡಿಯಲ್ಲಿ ಆರು ಜನ ಇದ್ದರು. ಎಲ್ಲರೂ ಗದಗ …

Read More »