ಚಂಡೀಗಢ: ಮಹಾಮಾರಿ ಕೊರೊನಾ ವಿರುದ್ಧ 26 ಗಂಟೆಗಳ ಹೋರಾಡಿ 6 ತಿಂಗಳ ಕಂದಮ್ಮವೊಂದು ಮೃತಪಟ್ಟ ಮನಕಲಕುವ ಘಟನೆ ಇಂದು ಚಂಡೀಗಢದಲ್ಲಿ ನಡೆದಿದೆ. ಹೃದಯ ರಂಧ್ರದ ಚಿಕಿತ್ಸೆಗಾಗಿ 6 ತಿಂಗಳ ಹೆಣ್ಣು ಮಗುವನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಗುವಿಗೆ ಸೋಂಕ ತಗುಲಿರುವುದು ದೃಢಪಡುತ್ತಿದ್ದಂತೆ ಅಂದ್ರೆ ಬುಧವಾರ ಬೆಳಗ್ಗೆ 11 ಗಂಟೆಗೆ ಕೋವಿಡ್-19 ವಾರ್ಡಿಗೆ ದಾಖಲಿಸಲಾಗಿತ್ತು. ರಾತ್ರಿಯಿಂದಲೇ ಮಗುವನ್ನು ವೆಂಟಿಲೇಟರ್ ಮತ್ತು ಗ್ಲೂಕೋಸ್‍ನಲ್ಲಿ ಇಡಲಾಗಿತ್ತು. ಆದರೆ ಸೋಂಕು ತೀವ್ರವಾಗಿ ಏರಿಕೆ …
Read More »ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್, ಗುರುವಾರ ಮಾತ್ರ ಬೆಳಗಾವಿ ಜಿಲ್ಲೆಯಲ್ಲಿಒಂದು ಸೋಂಕಿತರಿರುವುದು ಧೃಡಪಟ್ಟಿಲ್ಲ
ಬೆಳಗಾವಿ: ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ನ ಮಾಹಿತಿ ಪ್ರಕಾರ ಇಂದು ಒಂದೇ ದಿನಕ್ಕೆ 18 ಕೊರೊನಾ ಸೋಂಕು ತಗುಲಿದವರು ಪತ್ತೆಯಾಗಿದ್ದಾರೆ. ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಮಾತ್ರ ಒಂದು ಸೋಂಕಿತರಿರುವುದು ಧೃಡಪಟ್ಟಿಲ್ಲ. ಇದರಿಂದ ಜಿಲ್ಲೆಯ ಜನರು ನಿಟ್ಟಿಸಿರು ಬಿಡುವಂತಾಗಿದೆ. ಹೆಚ್ಚು ಸೋಂಕಿತರು ಪತ್ತೆಯಾದ ಪಟ್ಟಿಯಲ್ಲಿ ಬೆಳಗಾವಿ ಮೂರನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟು 43 ಪ್ರಕರಣಗಳು ಪತ್ತೆಯಾಗಿದೆ. ಸೋಂಕಿತರಲ್ಲಿ ಮೂವರು ಡಿಶ್ಚಾರ್ಜ್ ಆಗಿದ್ದಾರೆ. ಒಬ್ಬರ ಮೃತ ಪಟ್ಟಿದ್ದಾರೆ. ಉಳಿದ …
Read More »ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಹ್ವಾನಿಸಿದೆ.
ಬೆಳಗಾವಿ: ಬಸವ ಜಯಂತಿಯ ನಿಮಿತ್ತ ಮಾನವ ಬಂಧುತ್ವ ವೇದಿಕೆ ಅಂಗ ಸಂಸ್ಥೆಯಾದ ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಹ್ವಾನಿಸಿದೆ. “ಬಸವ ತತ್ವಗಳಿಂದ ಅಖಂಡ ಕರ್ನಾಟಕದ ಕಲ್ಯಾಣ ಸಾಧ್ಯ” ಎಂಬ ವಿಷಯದ ಕುರಿತು 8 ನಿಮಿಷಗಳ ವಿಡಿಯೋ ಗಳನ್ನು ಆಹ್ವಾನಿಸಲಾಗಿದೆ. ಅತ್ಯುತ್ತಮ ವಿಷಯ ಮಂಡನೆ ಒಳಗೊಂಡ ವಿಡಿಯೋ ಗಳನ್ನೂ ಆಯ್ಕೆ ಮಾಡಿ ಪ್ರಥಮ, ದ್ವೀತಿಯ, ತೃತೀಯ ಮತ್ತು ಸಮಾಧಾನಕರ ಶ್ರೇಣಿಯ 5 ಬಹುಮಾನ ಗಳನ್ನು …
Read More »ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ: ರವಿ ಡಿ. ಚೆನ್ನಣ್ಣವರ್
ಆನೇಕಲ್: ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ತಿಳಿಸಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ಹೇಳಿದ್ದಾರೆ. ಆನೇಕಲ್ ಪಟ್ಟಣದಲ್ಲಿ ಕರುಣೆಯ ಕುಟೀರ ಹಾಗೂ ವಾಚನಾಲಯವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಆನೇಕಲ್ ನ ಪೋಲಿಸರು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಕರುಣೆಯ ಕುಟೀರ ಹಾಗೂ ವಾಚನಾಲಯ ತೆರೆಯಲಾಗಿದೆ. ಕೊರೊನಾ …
Read More »ಕ್ಯಾನ್ಸರ್ ವಿರುದ್ಧ ಡಿಂಕೊ ಸಿಂಗ್ ಹೋರಾಟ- ಬಾಕ್ಸರ್ ಬೆಂಬಲಕ್ಕೆ ನಿಂತ ಸ್ಪೈಸ್ ಜೆಟ್
ಇಂಫಾಲ್: ಪಿತ್ತಜನಕಾಂಗದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಭಾರತೀಯ ಬಾಕ್ಸರ್ ಡಿಂಕೊ ಸಿಂಗ್ ಅವರನ್ನು ಸ್ಪೈಸ್ ಜೆಟ್ ಏರ್ ಅಂಬುಲೆಂನ್ಸ್ ಮೂಲಕ ದೆಹಲಿಯ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ. ಡಿಂಕೊ ಸಿಂಗ್ ಭಾರತದ ಪರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಣಿಪುರದ ರಾಜಧಾನಿ ಇಂಫಾಲ್‍ನಲ್ಲಿ ವಾಸಿಸುತ್ತಿರುವ 41 ವರ್ಷದ ಡಿಂಕೊ ಅವರಿಗೆ ಲಾಕ್‍ಡೌನ್‍ನಿಂದಾಗಿ ವಿಕಿರಣ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆಗಾಗಿ ಅವರನ್ನು ಸ್ಪೈಸ್ ಜೆಟ್‍ನ ಏರ್ ಅಂಬುಲೆನ್ಸ್ ಮೂಲಕ ಇಂಫಾಲ್‍ನಿಂದ …
Read More »ಬೀದರ್:ಜಮಾತ್‍ಗೆ ಹೋಗಿ ಬಂದಿದ್ದ 3 ಮಂದಿ ಡಿಸ್ಚಾರ್ಜ್……
ಬೀದರ್: ಕಳೆದ 23 ದಿನಗಳಿಂದ ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿದ 3 ಜನ ಕೊರೊನಾ ಶಂಕಿತರ ವರದಿ ನೆಗೆಟಿವ್ ಬಂದ ಹಿನ್ನೆಲೆ ಇಂದು ಮಧ್ಯಾಹ್ನ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ದೆಹಲಿ ತಬ್ಲಿಘಿ ಜಮಾತ್‍ಗೆ ಹೋಗಿ ಬಂದಿದ್ದ ದುಬಲಗುಂಡಿ ಗ್ರಾಮದ ಇಬ್ಬರು ಹಾಗೂ ಹಳ್ಳಿಖೇಡ ಬಿ ಪಟ್ಟಣದ ಒಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, ಅಂಬುಲೆನ್ಸ್ ಮೂಲಕ ಅವರ ಊರುಗಳಿಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ …
Read More »ದ.ಕನ್ನಡದಲ್ಲಿ ಕೊರೊನಾಗೆ ಎರಡನೇ ಬಲಿ- ರಾಜ್ಯದಲ್ಲಿ ಮೃತರ ಸಂಖ್ಯೆ 18ಕ್ಕೆ ಏರಿಕೆ
ಮಂಗಳೂರು: ಹೆಮ್ಮಾರಿ ಕೊರೊನಾ ವೈರಸ್‍ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆ ಕಂಡಿದೆ. ಬಂಟ್ವಾಳದ ಕೊರೊನಾ ಸೋಂಕಿತ ಮಹಿಳೆ ಏಪ್ರಿಲ್ 19ರಂದು ಮೃತರಾಗಿದ್ದರು. ಈ ಬೆನ್ನಲ್ಲೇ ಕೊರೊನಾ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ ಮೃತ ಮಹಿಳೆಯ ಅತ್ತೆ ಕೂಡ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಎರಡನೇ ಸಾವು ಇದಾಗಿದೆ. 75 ವರ್ಷದ ವೃದ್ಧೆ …
Read More »ಅನಾವಶ್ಯಕವಾಗಿ ರಸ್ತೆಗೆ ಬಂದು ತಿರುಗಾಡುತ್ತಿದ್ದರು. ಅಂತವರಿಗೆ ಕೊಪ್ಪಳ ಪೊಲೀಸರು ವಿನೂತನ ಶಿಕ್ಷೆ ನೀಡಿದ್ದಾರೆ.
ಕೊಪ್ಪಳ: ಲಾಕ್‍ಡೌನ್ ಶುರುವಾದಗಿನಿಂದ ಪೊಲೀಸರು ಹಗಲಿರುಳು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಕೆಲವರು ಅನಾವಶ್ಯಕವಾಗಿ ರಸ್ತೆಗೆ ಬಂದು ತಿರುಗಾಡುತ್ತಿದ್ದರು. ಅಂತವರಿಗೆ ಕೊಪ್ಪಳ ಪೊಲೀಸರು ವಿನೂತನ ಶಿಕ್ಷೆ ನೀಡಿದ್ದಾರೆ. ಪೊಲೀಸರು ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಗೋಣಿ ಚೀಲದ ಪಿಪಿಇ ಕಿಟ್ ಹಾಕಿಸಿದ್ದಾರೆ. ಈ ಮೂಲಕ ಕೊಪ್ಪಳ ನಗರ ಠಾಣಾ ಪೊಲೀಸರು ವಿಭಿನ್ನ ರೀತಿಯಲ್ಲಿ ಕೊರೊನಾ ವೈರಸ್ ಜಾಗೃತಿ ಮೂಡಿಸಿದ್ದಾರೆ. ಭಾರತ ಲಾಕ್‍ಡೌನ್ ನಡುವೆಯೂ ವಾಹನ …
Read More »ಬುದ್ಧಿ ಹೇಳಿದ್ದಕ್ಕೆ ಪೊಲೀಸರ ಮೇಲೆ ಯೋಧನಿಂದ ಹಲ್ಲೆ
ಚಿಕ್ಕೋಡಿ: ಮಾಸ್ಕ್ ಹಾಕಿಕೊಳ್ಳಿ ಹಾಗೇ ಮನೆ ಬಿಟ್ಟು ಹೊರಗಡೆ ತಿರುಗಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರ ಮೇಲೆ ಸಿ.ಆರ್.ಪಿ.ಎಫ್ ಯೋಧ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದಲ್ಲಿ ನಡೆದಿದೆ. ಎಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಹೊರಗಡೆ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ತಿರಾಗುಡುತ್ತಿದ್ದ ಸಿ.ಆರ್.ಪಿ.ಎಫ್ ಯೋಧ ಸಚಿನ್ ಸಾವಂತ್ ನಿಗೆ ಪೊಲೀಸರು ಮನೆಯಿಂದ ಹೊರಗೆ ತಿರುಗಾಡಬೇಡಿ. ಮಾಸ್ಕ್ ಧರಿಸಬೇಕು ಎಂದು …
Read More »ಮೇ 3ರ ಬಳಿಕವೂ ಲಾಕ್‍ಡೌನ್ ಮುಂದುವರಿಸಿದರೆ ಒಳ್ಳೆಯದು: ಸಚಿವ ರಮೇಶ್ ಜಾರಕಿಹೊಳಿ
ಚಿತ್ರದುರ್ಗ: ಕೊರೊನಾ ಸೋಂಕು ಹರಡದಂತೆ ಭಾರತ ಲಾಕ್‍ಡೌನ್ ಆಗಿ ಒಂದು ತಿಂಗಳು ಕಳೆದಿದೆ. ಇನ್ನೇನು ಲಾಕ್‍ಡೌನ್ ತೆರವು ದಿನಾಂಕ ಸಮೀಪಿಸಿದ್ದು, ಕೆಲ ವಲಯಗಳಲ್ಲಿ ರಾಜ್ಯ ಸರ್ಕಾರ ನಿಯಮಗಳನ್ನು ಸಡಿಲ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ನಮ್ಮ ಆರೋಗ್ಯಕ್ಕಾಗಿ ಜನರು ಮನೆಯಲ್ಲಿ ಇರುವುದು ಸೂಕ್ತ. ಅಲ್ಲದೇ ಭಾರತದಲ್ಲಿ ಲಾಕ್‍ಡೌನ್ ಮೇ 3ಕ್ಕೆ ಅಂತ್ಯಗೊಳಿಸದೆ ಮುಂದುವರಿಸಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಗರದ ಹಳೆ ಮಾಧ್ಯಮಿಕ …
Read More »