ಬೆಂಗಳೂರು: ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ರಾಜ್ಯಸಭಾ ಸದಸ್ಯ, ಕೆಎಲ್‍ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಕೋರೆ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಭಾಕರ್ ಕೋರೆ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಿದ 2 ಕೋಟಿ ರೂ. ಚೆಕ್ ಸ್ವೀಕರಿಸಿದರು. ಈ ವೇಳೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ, ಶಾಸಕ ಮಹಾಂತೇಶ ಕವಟಗಿಮಠ ಇದ್ದರು. …
Read More »ಕೊಡಗಿನಲ್ಲಿ ಸಂಚಾರಕ್ಕೆ ಅವಕಾಶ ನೀಡಿದರೂ ರಸ್ತೆಗಿಳಿಯದ ಖಾಸಗಿ ಬಸ್‍ಗಳು
ಮಡಿಕೇರಿ: ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಸಾರಿಗೆ ಸಂಚಾರವನ್ನೂ ಬಂದ್ ಮಾಡಲಾಗಿತ್ತು. ಆದರೆ ಕೊಡಗು ಜಿಲ್ಲೆ ಗ್ರೀನ್ ಝೋನ್ ಆಗಿರುವುದರಿಂದ ಸರ್ಕಾರದ ನಿರ್ದೇಶನದಂತೆ 43 ದಿನಗಳ ಬಳಿಕ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದರೆ ಬೆರಳೆಣಿಕೆಯಷ್ಟು ಕೆಎಸ್‍ಆರ್ ಟಿಸಿ ಬಸ್ ಗಳು ಮಾತ್ರ ರಸ್ತೆಗಿಳಿದಿದ್ದು, ಖಾಸಗಿ ಬಸ್ ಸಂಚಾರ ಇರಲಿಲ್ಲ. ಸಾರ್ವಜನಿಕರ ಸಾರಿಗೆ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ಅವಕಾಶ ನೀಡಿದ್ದರೂ, ಕೊಡಗಿನ ಪ್ರತಿ ಹಳ್ಳಿಗೆ ಸಂಪರ್ಕ ಸೇತುವೆಯಾಗಿರುವ ಖಾಸಗಿ …
Read More »ಕೊರೊನಾ ವಾರಿಯರ್ಸ್‍ಗಾಗಿ ಪಿಪಿಇ ಕಿಟ್, ಮಾಸ್ಕ್ ತಯಾರಿಸ್ತಿದ್ದಾರೆ ಮಹಿಳೆಯರು
ಬೆಂಗಳೂರು: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಹಾಗೆ ಮಹಿಳೆಯರೆಲ್ಲಾ ಸೇರಿ ಕೌಶಲ್ಯ ಪಡೆದು ಇಡೀ ಕುಟುಂಬದ ಆರ್ಥಿಕ ಮಟ್ಟ ಸುಧಾರಿಸಿ, ಮಾರಾಣಾಂತಿಕ ಕೋವಿಡ್-19 ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗೆ ಅಗತ್ಯವಾದ ಪಿಪಿಇ ಕಿಟ್ ತಯಾರಿಸಿ ನೆರವಾಗುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪ ಬ್ಲಾಕ್ ಸ್ತ್ರೀ ಶಕ್ತಿ ಸೊಸೈಟಿ ಅಡಿಯಲ್ಲಿ ಮಹಿಳೆಯರು ಕೋವಿಡ್ 19 ವಾರಿಯರ್ಸ್‍ಗೆ ತಮ್ಮ ಅಳಿಲು ಸೇವೆ ಮಾಡಿ, ಕೊರೊನಾ ಸಂದರ್ಭದಲ್ಲಿ ನೆರವಾಗಿ ಸಾರ್ಥಕತೆ ಮೆರೆಯುತ್ತಿದ್ದಾರೆ. ಈ …
Read More »ಇಂದು 20 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆ…….
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ 20 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಬಾಗಲಕೋಟೆಯಲ್ಲಿ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ, ಬಾಗಲಕೋಟೆಯಲ್ಲಿ 13, ಬೆಂಗಳೂರು 2, ದಕ್ಷಿಣ ಕನ್ನಡ 3, ಕಲಬುರಗಿ ಹಾಗೂ ವಿಜಯಪುರದಲ್ಲಿ ಒಬ್ಬರಿಗೆ ಕೊರೊನಾ ಪ್ರಕರಣ …
Read More »ಮದ್ಯದಂಗಡಿಗಳ ಮೇಲೆ ಕಲ್ಲೆಸೆದು ಅಂಗಡಿ ಬಂದ್ ಮಾಡಿಸಿದ ಮಹಿಳೆಯರು
ಹಾವೇರಿ: ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ಮದ್ಯದ ಅಂಗಡಿಗಳ ಆರಂಭದ ದಿನವೇ ಮಹಿಳೆಯರು ಕಲ್ಲೆಸೆದು ಮದ್ಯದ ಅಂಗಡಿಗಳನ್ನ ಬಂದ್ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೇ 4ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಒಂದು ಎಂಎಸ್‍ಐಎಲ್ ಮತ್ತು ಎರಡು ಎಂಆರ್‌ಪಿ ಮದ್ಯದ ಅಂಗಡಿಗಳಿಗೆ ಕಲ್ಲೆಸೆದು ಕೆಲಕಾಲ ಅಂಗಡಿಗಳನ್ನ ಬಂದ್ ಮಾಡಿಸಿದ್ದರು. ಲಾಕ್‍ಡೌನ್ ವೇಳೆಯಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿದ್ದರಿಂದ ಪುರುಷರು ಮನೆಯಲ್ಲಿ ಸುಮ್ಮನಿದ್ದರು. ಆದರೆ ಈಗ ಮದ್ಯದ …
Read More »72 ಸಾವಿರ ಜನ ಸತ್ತರೂ ಮಾಸ್ಕ್ ಧರಿಸಲೊಪ್ಪದ ಜಗಮೊಂಡ ಟ್ರಂಪ್..!
ಫಿನಿಕ್ಸ್ (ಆರಿಜೋನಾ), ಮೇ 6- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಮಾರಿ ಸ್ವಭಾವದವರು. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಅಮೆರಿಕವನ್ನು ಕೊರೊನಾ ವೈರಸ್ ಅಲ್ಲೋಲ-ಕಲ್ಲೋಲ ಮಾಡಿ 72,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರೂ, ಅಧ್ಯಕ್ಷರಿಗೆ ಸೋಂಕಿನ ಲವಲೇಶ ಭಯವೂ ಇಲ್ಲ. ಇದೇ ಕಾರಣಕ್ಕಾಗಿ ಅವರು ಕಳೆದ ಐದು ತಿಂಗಳಿನಿಂದ ಒಮ್ಮೆಯೂ ಮಾಸ್ಕ್ ಧರಿಸಿಲ್ಲ. ಅಮೆರಿಕ ಅಧ್ಯಕ್ಷರು ಖುದ್ದು ಎರಡು ಬಾರಿ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದಾರೆ. ಫಲಿತಾಂಶ ನೆಗಿಟಿವ್. ಆದರೂ ಇವರು …
Read More »ಜೈಜಗದೀಶ್ ವಿರುದ್ಧ ಕಾನೂನು ಹೋರಾಟ ಮಾಡ್ತೀನಿ : ಸಾ.ರಾ.ಗೋವಿಂದ್
ಬೆಂಗಳೂರು, ಮೇ6- ನಟ, ನಿರ್ಮಾಪಕ ಜೈಜಗದೀಶ್ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ನಿರ್ಮಾಪಕ, ವಿತರಕ ಹಾಗೂ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ತಿಳಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕರಿಗೆ ಉಚಿತ ಆಹಾರ ಕಿಟ್‍ಗಳನ್ನು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ನೀಡಲು ಮುಂದಾಗಿದ್ದರು. ಇದಕ್ಕೆ ಸಹಕಾರಿಯಾಗಿ ನಾನು ನಿಂತಿದ್ದೆ. ಈ ಕುರಿತು ನಟ ಜೈಜಗದೀಶ್ ನಮ್ಮ ಸೇವೆಯನ್ನು ಸಹಿಸದೆ ಅವಾಚ್ಯ ಶಬ್ದಗಳಿಂದ ನಿಂದಿಸಿ …
Read More »BREAKING : ಪಾನ ಪ್ರಿಯರಿಗೆ ಕಿಕ್ ಇಳಿಸೋ ಸುದ್ದಿ, ಶೇ.17ರಷ್ಟು ಮದ್ಯ ದರ ಏರಿಕೆ..!
ಬೆಂಗಳೂರು,ಮೇ 6- ಸರಿಸುಮಾರು 42 ದಿನಗಳ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಎಣ್ಣೆ ಪ್ರಿಯರಿಗೆ ಖುಷಿ ಕೊಟ್ಟಿದ್ದ ರಾಜ್ಯ ಸರ್ಕಾರ ಇದೀಗ ಕಿಕ್ ಹೊಡೆಸಲು ಮುಂದಾಗಿದೆ. ಖಾಲಿಯಾಗಿರುವ ಸರ್ಕಾರದ ಬೊಕ್ಕಸವನ್ನು ಭರ್ತಿ ಮಾಡಲು ಆದಾಯ ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಮದ್ಯದ ಮೇಲಿನ ಮಾರಾಟ ದರವನ್ನು ಶೇ. 17ರಷ್ಟು ಹೆಚ್ಚಳ ಮಾಡಿ ಮದ್ಯ ಪ್ರಿಯರ ಕೈ ಸುಡುವಂತೆ ಮಾಡಿದೆ. ನೂತನ ದರವು ಒಂದೆರಡು ದಿನಗಳಲ್ಲಿ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯುರಪ್ಪ …
Read More »BIG BREAKING : ಬಾದಾಮಿಯಲ್ಲಿ ಕೊರೋನಾ ಕುಣಿತ..! ರಾಜ್ಯದಲ್ಲಿ ಇಂದು 19 ಮಂದಿಗೆ ಪಾಸಿಟಿವ್..!
ಬೆಂಗಳೂರು, ಮೇ 6- ಐತಿಹಾಸಿಕ ಸ್ಥಳ ಬಾದಾಮಿಯಲ್ಲೂ ಕೊರೊನಾ ಸೋಂಕು ಅಟ್ಟಹಾಸ ಮೆರೆದಿದೆ. ಅಲ್ಲಿನ 13 ಮಂದಿ ಸೇರಿದಂತೆ ರಾಜ್ಯದಲ್ಲಿ 19 ಹೊಸ ಪ್ರಕರಣಗಳು ದಾಖಲಾಗಿದ್ದು , ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ. ಕೊರೊನಾ ಹಾಟ್‍ಸ್ಪಾಟ್ ಆಗಿದ್ದ ಬೆಂಗಳೂರಿನಲ್ಲಿ ಇಂದು ಎರಡು ಹೊಸ ಪ್ರಕರಣಗಳು ಪತ್ತೆಯಾಗಿದ್ದು , ಮಂಗಮ್ಮನಪಾಳ್ಯದಲ್ಲಿ ನಿನ್ನೆ ಖಾಸಗಿ ಸಂಸ್ಥೆಯ ಡಿಲೆವೆರಿ ಬಾಯ್‍ಗೆ ಸೊಂಕು ತಗುಲಿದ್ದು , ಆತನಿಂದಲೇ ಇಂದು ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತ …
Read More »ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಟ್ಟೂ 1610 ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದಾರೆ.
ಬೆಂಗಳೂರು – ಕೊರೋನಾದಿಂದ ಸಂಕಷ್ಟಕ್ಕೊಳಗಾಗಿರುವ ಹಲವಾರು ರೀತಿಯ ವೃತ್ತಿನಿರತರಿಗೆ ಕರ್ನಾಟಕ ಸರಕಾರ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಟ್ಟೂ 1610 ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸಂಬಂಧ ಬುಧವಾರ ಮಾಹಿತಿ ನೀಡಿದ್ದಾರೆ. ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ, ಕ್ಷೌರಿಕರು, ಮಡಿವಾಳರು ಸೇರಿದಂತೆ ಹಲವಾರು ವರ್ಗಗಳಿಗೆ ತಲಾ 5 ಸಾವಿರ ರೂ. ಪರಿಹಾರ ನೀಡುವ ಘೋಷಣೆ ಮಾಡಿದ್ದಾರೆ. 7.75 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಪರಿಹಾರ …
Read More »