Breaking News

ವಿಶ್ವದಾದ್ಯಂತ ಕೊರೋನಾಗೆ 2.82 ಲಕ್ಷ ಮಂದಿ ಸಾವು, 41.52 ಲಕ್ಷ ಸೋಂಕಿತರು ..!

ವಾಷ್ಟಿಂಗ್ಟನ್/ರೋಮ್/ಪ್ಯಾರಿಸ್, ಮೇ 11-ಕಿಲ್ಲರ್ ಕೊರೊನಾ ಇಡೀ ವಿಶ್ವವನ್ನು ವ್ಯಾಪಿಸಿದ್ದು, ವಿಷವರ್ತುಲ ಆವರಿಸಿ ಭಯ-ಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಈವರೆಗೆ 2,82,894 ಸಾವು ಮತ್ತು 41.52 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿವೆ. ವಿಶ್ವವ್ಯಾಪಿ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಆತಂಕವಿರುವಾಗಲೇ ಸುಮಾರು 14 ಲಕ್ಷ ಸಾಂಕ್ರಾಮಿಕ ರೋಗಗಳು ಚೇತರಿಸಿಕೊಂಡು ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ …

Read More »

ಮೊಬೈಲ್ ಫೀವರ್ ಕ್ಲಿನಿಕ್‍ಗೆ ಚಾಲನೆ ನೀಡಿದ ಸಿಎಂ …………

ಬೆಂಗಳೂರು,ಮೇ 11- ಗೃಹ ಕಚೇರಿ ಕೃಷ್ಣಾದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್‍ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನ ನಾಲ್ಕು ವಿಭಾಗಗಳಿಯೂ ಮೊಬೈಲ್ ಫೀವರ್ ಕ್ಲಿನಿಕ್ ಸಂಚಾರ ಮಾಡಲಿದ್ದು, ಈಗಾಗಲೇ ಮೈಸೂರು, ಮಂಗಳೂರಲ್ಲಿ ಈ ಮೊಬೈಲ್ ಫೀವರ್ ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು. ನಾಲ್ಕು ಬಸ್‍ಗಳಲ್ಲಿ ಸಂಚಾರ ಮಾಡಲಿರುವ ಮೊಬೈಲ್ ಫೀವರ್ ಕ್ಲಿನಿಕ್‍ಗಳಲ್ಲಿ ಯಾರಿಗಾದರೂ ಅನಾರೋಗ್ಯ ಕಂಡುಬಂದರೆ ಇಲ್ಲಿ ಸಂಪರ್ಕಿಸಿದರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ …

Read More »

ಆಸೀಸ್‍ಗೆ ನಂ.1 ರ‍್ಯಾಂಕ್ ಹೇಗೆ ಕೊಟ್ರಿ?- ಐಸಿಸಿ ವಿರುದ್ಧ ಗೌತಮ್ ಗಂಭೀರ್ ಕಿಡಿ….

ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಹಿಂದಿಕ್ಕಿ ಟಾಪ್ ಸ್ಥಾನವನ್ನು ಪಡೆದುಕೊಂಡಿತ್ತು. ಐಸಿಸಿಯ ಸದಸ್ಯ ರಾಷ್ಟ್ರಗಳ ತಂಡಗಳ ಪ್ರದರ್ಶನದ ಆಧಾರದ ಮೇಲೆ ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್ ಮೊದಲ ಸ್ಥಾನ ಪಡೆದಿತ್ತು. ಪರಿಣಾಮ 2016 ಅಕ್ಟೋಬರ್ ನಿಂದ ಸತತ 42 ತಿಂಗಳು ನಂ.1 ಟೆಸ್ಟ್ ಶ್ರೇಯಾಂಕ ಸ್ಥಾನದಲ್ಲಿದ್ದ ಟೀಂ ಇಂಡಿಯಾ ತನ್ನ ರ‍್ಯಾಂಕಿಂಗ್ ಕಳೆದುಕೊಂಡಿತ್ತು. ಅಲ್ಲದೇ ಮೂರನೇ ಸ್ಥಾನಕ್ಕೆ ಇಳಿದಿತ್ತು. ಈ ಕುರಿತಂತೆ ಟೀಂ …

Read More »

ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ ವೈದ್ಯ………

ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ರೋಗಿಗಳ ಜೀವ ಉಳಿಸಲು ವೈದ್ಯರು ಹಗಲಿರುಳು ಎನ್ನದೇ ಕರ್ತವ್ಯ ನಿಷ್ಠ ಮೆರೆಯುತ್ತಿದ್ದಾರೆ. ಇದೀಗ ಏಮ್ಸ್ ವೈದ್ಯರೊಬ್ಬರು ತಮ್ಮ ರಕ್ಷಣೆಗೆ ಹಾಕಿಕೊಂಡಿದ್ದ ಫೇಸ್ ಶೀಲ್ಡ್ ತೆಗೆದು ಕೋವಿಡ್-19 ರೋಗಿಯ ಜೀವ ಉಳಿಸುವ ಮೂಲಕ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ನಡೆದಿದೆ. ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯ ಝಹೀದ್ ಅಬ್ದುಲ್ ಮಜೀದ್ ತಮ್ಮ ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ …

Read More »

ಕಾಲ್ನಡಿಗೆಯಲ್ಲಿ ಮಧ್ಯಪ್ರದೇಶ, ಬಿಹಾರಕ್ಕೆ ಹೊರಟಿದ್ದ ಕಾರ್ಮಿಕರಿಗೆ ಆಶ್ರಯ

ಧಾರವಾಡ/ಹುಬ್ಬಳ್ಳಿ: ಕಾಲ್ನಡಿಗೆ ಮೂಲಕ ಮಧ್ಯಪ್ರದೇಶ ಹಾಗೂ ಬಿಹಾರಕ್ಕೆ ಹೊರಟಿದ್ದ 70 ಜನ ವಲಸೆ ಕಾರ್ಮಿಕರಿಗೆ ಇಂದು ಹುಬ್ಬಳ್ಳಿ ತಾಲೂಕಿನ ತಿರುಮಲಕೊಪ್ಪದ ಬಳಿಯ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಕಾರ್ಮಿಕರು ಕಾಲ್ನಡಿಗೆ ಮೂಲಕ ತಮ್ಮ ರಾಜ್ಯಗಳಿಗೆ ಹೊರಟಿರುವ ವಿಷಯ ತಿಳಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಎಲ್ಲರಿಗೂ ಆಶ್ರಯ ಕಲ್ಪಿಸುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಡಿವೈಎಸ್ ಪಿ ರವಿ ನಾಯಕ್ ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್. ಆರ್. …

Read More »

ಸಂಜೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬಿಡುಗಡೆಯಾದ ಬುಲೆಟಿನ್………

ಬೆಂಗಳೂರು: ಇಂದು 14 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ. ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಮಂಡ್ಯ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1, ಹಾವೇರಿ 1, ಆಂಧ್ರದ ಮೂಲದ ವ್ಯಕ್ತಿಯಿಂದ ಆತನ ಪತ್ನಿಗೆ, ಬೆಂಗಳೂರಿನಲ್ಲಿ 1 ಹೊಸ ಕೊರೊನಾ ಪ್ರಕರಣಗಳು …

Read More »

ಹೋಟೆಲ್‍ನ ಕ್ವಾರಂಟೈನ್ ಘಟಕ ಮಾಡುತ್ತಾರೆಂದು ವಿಷಯ ತಿಳಿದು ಹೋಟೆಲ್ ಸಿಬ್ಬಂದಿಗಳು ಮೊಬೈಲ್ ಸ್ವಿಚ್

ಚಿಕ್ಕಮಗಳೂರು: ಹೋಟೆಲ್‍ನ ಕ್ವಾರಂಟೈನ್ ಘಟಕ ಮಾಡುತ್ತಾರೆಂದು ವಿಷಯ ತಿಳಿದು ಹೋಟೆಲ್ ಸಿಬ್ಬಂದಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕೋಟೆ ಬಡಾವಣೆಯಲ್ಲಿರೋ ವೈಟ್ ಫೆದರ್ ಹೋಟೆಲ್‍ನಲ್ಲಿ ವಿದೇಶ ಹಾಗೂ ಹೊರರಾಜ್ಯ ಬಂದ ಪ್ರಯಾಣಿಕರಿಗೆ ಕ್ವಾರಂಟೈನ್ ಘಟಕಕ್ಕೆ ಜಿಲ್ಲಾಡಳಿತ ಚಿಂತಿಸಿತ್ತು. ಈ ವಿಷಯ ತಿಳಿದ ಕೂಡಲೇ ಹೋಟೆಲ್ ಸಿಬ್ಬಂದಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇತ್ತ ಈ ಹೋಟೆಲ್‍ನಲ್ಲಿ ಕ್ವಾರಂಟೈನ್ ಘಟಕ ಮಾಡಲು ಸ್ಥಳೀಯರು ಕೂಡ …

Read More »

ಬೆಂಗ್ಳೂರು ಹೋಟಿಲಿನಲ್ಲಿ ಕ್ವಾರಂಟೈನ್ – 1 ದಿನಕ್ಕೆ ಊಟ, ತಿಂಡಿ, ಬಾಡಿಗೆ ಎಷ್ಟು?

ಬೆಂಗಳೂರು: ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ 6,100 ಮಂದಿ ಕನ್ನಡಿಗರನ್ನು ಕ್ವಾರಂಟೈನ್ ಮಾಡಲು ಸರ್ಕಾರ ಹೋಟೆಲ್ ಗಳನ್ನು ಬುಕ್ ಮಾಡಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರು ಈ ವ್ಯವಸ್ಥೆ ಮಾಡಿದ್ದಾರೆ. 18 ಫೈವ್ ಸ್ಟಾರ್, 23 ತ್ರಿಸ್ಟಾರ್, 18 ಬಜೆಟ್ ಹೋಟೆಲ್ ಸೇರಿದಂತೆ ಒಟ್ಟು 6,008 ರೂಂ ಗಳನ್ನು ಬುಕ್ ಮಾಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಅವರೇ ತುಂಬಬೇಕಾಗುತ್ತದೆ. ಮೊದಲು ಬಂದವರು ತಮ್ಮ ಆಯ್ಕೆ ಅನ್ವಯ ಹೋಟೆಲಿಗೆ ಕರೆದುಕೊಂಡು …

Read More »

ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಂಡ್ಯ ಜಿಲ್ಲೆಯ ಮಹಿಳೆಯ ಅಂತ್ಯಸಂಸ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗ ಬೆಳಗಾವಿಯಲ್ಲಿ

ಬೆಳಗಾವಿ: ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಂಡ್ಯ ಜಿಲ್ಲೆಯ ಮಹಿಳೆಯ ಅಂತ್ಯಸಂಸ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗ ಬೆಳಗಾವಿಯಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪುಣೆಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಡ್ಯ ಜಿಲ್ಲೆಯ ಮುದ್ದೂರು ತಾಲೂಕಿನ ತೈಲೂರು ಗ್ರಾಮದ ನಿವಾಸಿ ಸೌಮ್ಯ ಟಿ.ಎ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮೃತ ಮಹಿಳೆ ಪತಿ ಶರತ್ ತನ್ನ ಪತ್ನಿ ಮೃತ ದೇಹವನ್ನು ತನ್ನೂರಿಗೆ ತೆಗೆದುಕೊಂದು ಬರಲು ಮಂಡ್ಯ ಜಿಲ್ಲಾಡಳಿತಕ್ಕೆ ಅನುಮತಿ ಕೇಳಿದ್ದಾರೆ. ಆದರೆ ಮೃತ …

Read More »

ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯನನ್ನು ಹರಿಹರ ತಾಲ್ಲೂಕಿನ ಮಲೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯನನ್ನು ಹರಿಹರ ತಾಲ್ಲೂಕಿನ ಮಲೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ಮಲೆಬೆನ್ನೂರು ಪುರಸಭೆಯ ಕಾಂಗ್ರೆಸ್ ಸದಸ್ಯ ಅಬ್ದುಲ್ ಲತೀಫ್ ಮತ್ತು ಆತನ ಸ್ನೇಹಿತರು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಈ ಜಾಲದ ಖಚಿತ ಮಾಹಿತಿಯನ್ನು ಆಧರಿಸಿ ಮಲೆಬೆನ್ನೂರು ಪೊಲೀಸರು ದಾಳಿ ನಡೆಸಿ ಆರೋಪಿಗಳಾದ ಅಬ್ದುಲ್ ಲತೀಫ್, ಸರ್ ಅಲಿ, ರಜಾಕ್, ನಧೀರ್ ನನ್ನು ಬಂಧಿಸಿದ್ದಾರೆ. ರಾಜ್ಯ ಸರ್ಕಾರದಿಂದ ಬಡವರಿಗೆ …

Read More »