ಬೆಂಗಳೂರು: ಗರ್ಭಿಣಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಕೆಎಂಎಫ್ ಗ್ರಾಮದಿಂದ ಹಾಲು ಖರೀದಿಯನ್ನು ನಿಲ್ಲಿಸಿದೆ. ಹೊಸಕೋಟೆ ತಾಲೂಕಿನ ಚಿಕ್ಕಕೊರಟಿ ಗ್ರಾಮದ ರೈತರ ಹಾಲು ಚರಂಡಿ ಸೇರಿದೆ. ಚಿಕ್ಕಕೊರಟಿ ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಗ್ರಾಮದ ರೈತರಿಂದ ಹಾಲು ಖರೀದಿಯನ್ನು ಕೆಎಂಎಫ್ ನಿಲ್ಲಿಸಿದೆ. ಶುಕ್ರವಾರದಿಂದ ಹಾಲು ಖರೀದಿ ನಿಲ್ಲಿಸಲಾಗಿದ್ದು, ಸುಮಾರು ನಾಲ್ಕು ಸಾವಿರ ಲೀಟರ್ ನಷ್ಟು ಹಾಲನ್ನು ರೈತರನ್ನು ಚರಂಡಿಗೆ ಚೆಲ್ಲಿದ್ದಾರೆ. ಗ್ರಾಮದ ಬಹುತೇಕ ಜನರು ಹೈನುಗಾರಿಕೆಯಿಂದಲೇ ಜೀವನ …
Read More »ಹೊರ ರಾಜ್ಯದ ಪುಂಡರಿಂದ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹಲ್ಲೆ……..
ವಿಜಯಪುರ: ಕೊರೊನಾ ವಾರೊಯರ್ಸ್‍ಗಳಂತೆಯೇ ಕೆಲಸ ಮಾಡುತ್ತಿರುವ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹೊರ ರಾಜ್ಯದ ಪುಂಡರು ಹಲ್ಲೆ ಮಾಡಿದ್ದಾರೆ. ಜಿಲ್ಲೆಯ ಸಿಂದಗಿಪಟ್ಟಣದ ಸರ್ಕಾರಿ ಶಾಲೆ, ವಸತಿ ನಿಲಯದಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಅಡುಗೆ ಕೆಲಸ ಮಾಡುತ್ತಿದ್ದ ಮೈಬೂಬಸಾಬ ಬನ್ನೆಟ್ಟಿ(60) ಅವರ ಮೇಲೆ ಯುವಕರಾದ ದೇವರನಾವದಗಿಯ ಅರುಣ ರಾಠೋಡ್ ಹಾಗೂ ರಾಹುಲ್ ರಾಠೋಡ್ ಹಲ್ಲೆ ನಡೆಸಿದ್ದಾರೆ. ಯುವಕರಿಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕೊರೊನಾ ವೈರಸ್ ಹಿನ್ನೆಲೆ ಹೊರ ರಾಜ್ಯದಿಂದ …
Read More »ಐದನೇ ಮಹಡಿಯಿಂದ ಬಿದ್ದು ಮಹಿಳೆ ಸಾವು……
ಬೆಂಗಳೂರು: ಮಹಿಳೆಯೊಬ್ಬರು ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಜಗಜೀವನ್ ರಾಮ್ ನಗರದಲ್ಲಿ ನಡೆದಿದೆ. ಆರ್.ಆರ್ ನಗರದ ನಿವಾಸಿ ಯಶೋಧಾ (45) ಮೃತ ಮಹಿಳೆ. ಜೆಜೆ ನಗರದ ಸಂಬಂಧಿಕರ ಮನೆಗೆ ಹೋಗಿದ್ದಾಗ ಘಟನೆ ನಡೆದಿದೆ. ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಗಳಿಂದ ಬಳಲುತ್ತಿದ್ದ ಯಶೋಧಾ ಅವರು ಸಂಬಂಧಿಕರ ಮನೆ ಹೋಗಿದ್ದರು. ಇಂದು ಊಟ ಮಾಡಿ ಮನೆಯ 5ನೇ ಮಹಡಿಗೆ ಹೋಗಿದ್ದರು. ಈ ವೇಳೆ ತಲೆ ತಿರುಗಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ …
Read More »ಕದಂಬ ನೌಕಾನೆಲೆಯಿಂದ 15 ಲಕ್ಷ ರೂ. ಸಾಗಿಸುತ್ತಿದ್ದ ಅಧಿಕಾರಿ ವಶಕ್ಕೆ……….
ಕಾರವಾರ: ಸೂಟ್‍ಕೇಸ್‍ನಲ್ಲಿ 15 ಲಕ್ಷ ರೂ.ಗೂ ಅಧಿಕ ಹಣ ಸಾಗಿಸುತ್ತಿದ್ದ ಕದಂಬ ನೌಕಾನೆಲೆಯ ಅಧಿಕಾರಿಯನ್ನು ನೌಕಾನೆಲೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೌಕಾನೆಲೆಯಲ್ಲಿರುವ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್‍ನ ಅಧಿಕಾರಿಯೋರ್ವ ನೇವಲ್ ಬೇಸ್‍ನಲ್ಲೇ 15 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಸೂಟ್‍ಕೇಸ್‍ನಲ್ಲಿ ಬೇಸ್‍ನ ಹೊರಗಡೆ ಕೊಂಡೊಯ್ಯುತ್ತಿದ್ದ. ಈ ವೇಳೆ ಸೂಟ್‍ಕೇಸ್ ಜತೆ ಹೊರ ಬರುತ್ತಿದ್ದ ಎಂಇಎಸ್ ಅಧಿಕಾರಿಯನ್ನು ನೇವಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಇಎಸ್ ಅಧಿಕಾರಿಯನ್ನು ಹಿಡಿದು ನೇವಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದು, …
Read More »ಸೋಮವಾರದಿಂದ ಮಂಗಳೂರಿನಿಂದ ಬೆಂಗಳೂರು ಮುಂಬೈ, ಚೆನ್ನೈಗೆ ವಿಮಾನಗಳ ಹಾರಾಟ ಆರಂಭ
ಮಂಗಳೂರು: ಕೊರೊನಾದಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಮತ್ತೆ ಆರಂಭಿಸಲು ವಿಮಾನಯಾನ ಸಚಿವಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಮಂಗಳೂರಿನಿಂದ ಬೆಂಗಳೂರು ಮುಂಬೈ, ಚೆನ್ನೈಗೆ ವಿಮಾನಗಳ ಹಾರಾಟ ಆರಂಭವಾಗಲಿದೆ. ಮೇ 25ರಿಂದ ಮಂಗಳೂರಿನಿಂದ ಇಂಡಿಗೋದ 3 ವಿಮಾನಗಳು ಮುಂಬೈ, ಬೆಂಗಳೂರು, ಚೆನ್ನೈಗೆ ಸಂಚರಿಸಲಿದೆ. ಸ್ಪೈಸ್ ಜೆಟ್ 3 ವಿಮಾನಗಳು ಬೆಂಗಳೂರು, ಮುಂಬೈಗೆ ಸಂಚರಿಸಲಿದೆ. ಏರ್ ಇಂಡಿಯಾ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಬೆಂಗಳೂರಿನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 8.30ಕ್ಕೆ, ರಾತ್ರಿ 7 …
Read More »ಸೀಲ್‍ಡೌನ್ ಪ್ರದೇಶದಲ್ಲಿ ವಾಕಿಂಗ್- ಪೊಲೀಸರ ಎಚ್ಚರಿಕೆಗೂ ಕ್ಯಾರೆ ಎನ್ನದ ಜನ…..
ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‍ನ ಮಾರಪ್ಪನ ಪಾಳ್ಯದಲ್ಲಿ ಶನಿವಾರ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಮಾರಪ್ಪನ ಪಾಳ್ಯದ ಶಂಕರ್ ನಗರದ 4ನೇ ಹಂತದ 1ನೇ ಕ್ರಾಸ್‍ನ್ನು ಸೀಲ್‍ಡೌನ್ ಮಾಡಿದ್ದಾರೆ. ಈ ಕುರಿತು ಪೊಲೀಸರು ಎಚ್ಚರಿಕೆ ನೀಡಿದರೂ ಜನ ವಾಕಿಂಗ್ ಮಾಡುತ್ತಿದ್ದಾರೆ. ಸೀಲ್‍ಡೌನ್ ಪ್ರದೇಶದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ವಾಕ್ ಮಾಡುತ್ತಿದ್ದು, ಮನೆಯಿಂದ ಹೊರಗಡೆ ಬರಬೇಡಿ ಎಂದು ಪೊಲೀಸರು ಕೂಗಿ ಹೇಳಿದರೂ, ಕ್ಯಾರೇ ಅನ್ನದೆ ಓಡಾಟ ನಡೆಸಿದ್ದಾನೆ. ಸೀಲ್‍ಡೌನ್ ಆದ …
Read More »ಇಂದು ದೇಶದ ಯಾವ ಭಾಗದಲ್ಲೂ ಚಂದ್ರ ದರ್ಶನವಾಗಿಲ್ಲ ಹೀಗಾಗಿ ರಮಜಾನ್ ಈದ್ ಸೋಮವಾರ ಆಚರರಿಸಲು ನಿರ್ಣಯ……..
ಬೆಳಗಾವಿ- ಪವಿತ್ರ ರಮಜಾನ್ ಈದ್ ಹಬ್ಬವನ್ನು ಸೋಮವಾರ ಆಚರಿಸಲು ಬೆಳಗಾವಿಯ ಅಂಜುಮನ್ ಇಸ್ಲಾಂ ಮತ್ತು ಚಾಂದ್ ಕಮೀಟಿ ನಿರ್ಧರಿಸಿದೆ ಇಂದು ದೇಶದ ಯಾವ ಭಾಗದಲ್ಲೂ ಚಂದ್ರ ದರ್ಶನವಾಗಿಲ್ಲ ಹೀಗಾಗಿ ರಮಜಾನ್ ಈದ್ ಸೋಮವಾರ ಆಚರರಿಸಲು ನಿರ್ಣಯಿಸಲಾಗಿದೆ ಬೆಳಗಾವಿಯ ಅಂಜುಮನ್ ಸಂಸ್ಥೆಯ ಅಧ್ಯಕ್ಷ ರಾಜು ಸೇಠ ಅಧ್ಯಕ್ಷತೆಯಲ್ಲಿ ನಡೆದ ಚಾಂದ್ ಕಮೀಟಿ ಇಂದು ಸಂಜೆ ಅಂಜುಮನ್ ಹಾಲ್ ನಲ್ಲಿ ಸಭೆ ಸೇರಿ ಈದ ಆಚರಣೆಯ ಕುರಿತು ಸಮಾಲೋಚನೆ ನಡೆಸಿತು .ಚಂದ್ರ ದರ್ಶನದ …
Read More »ಬೆಳಗಾವಿ: ಎರಡು ದಿನ ರಜೆ ಹಿನ್ನೆಲೆ ಮದ್ಯ ಪ್ರಿಯರು ಬಾಕ್ಸ್‌ಗಟ್ಟಲೇ ಎಣ್ಣೆ ಖರೀದಿ……
ಬೆಳಗಾವಿ: ಎರಡು ದಿನ ರಜೆ ಹಿನ್ನೆಲೆ ಮದ್ಯ ಪ್ರಿಯರು ಬಾಕ್ಸ್‌ಗಟ್ಟಲೇ ಎಣ್ಣೆ ಖರೀದಿಸಿದ ಪ್ರಸಂಗ ನಗರದಲ್ಲಿ ಕಂಡುಬಂದಿತು. ಮಹಾಮಾರಿ ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಶನಿವಾರ ಸಂಜೆ 7ರಿಂದ ಭಾನುವಾರದವರೆಗೆ ಕರ್ಫ್ಯೂ ಮಾದರಿಯ ಲಾಕ್‍ಡೌನ್ ಘೋಷಿಸಲಾಗಿದೆ. ಜೊತೆಗೆ ರಂಜಾನ್ ಹಿನ್ನೆಲೆ ಸೋಮವಾರ ಕೂಡ ಸರ್ಕಾರಿ ರಜೆ ಇದೆ. ಇದರಿಂದಾಗಿ ಎರಡು ದಿನಗಳ ಕಾಲ ಬಾರ್ ಬಂದ್ ಆಗಲಿವೆ. ಎರಡು ದಿನ ರಜೆ ಇರುವುದನ್ನು ಅರಿತ ಮದ್ಯ ಪ್ರಿಯರು ಶನಿವಾರ …
Read More »ಗ್ರೀನ್ ಎನರ್ಜಿ ಸೋಲಾರ್ ಸಿಸ್ಟಂ ಪವರ್ ಕಂಪನಿಯು ಕೊರೋನಾ ಸಂಕಷ್ಠದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತಕ್ಕೆ 50ಸಾವಿರ ರೂಪಾಯಿ ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ವಿತರಿಸಿದರು
ಮಂಡ್ಯ:ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆಕೊಪ್ಪಲಿನಲ್ಲಿರುವ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಸಿಸ್ಟಂ ಪವರ್ ಕಂಪನಿಯು ಕೊರೋನಾ ಸಂಕಷ್ಠದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತಕ್ಕೆ 50ಸಾವಿರ ರೂಪಾಯಿ ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಹಸ್ತಾಂತರಿಸಿದರು. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಇಂದು ಸಂಕಷ್ಠದಲ್ಲಿದೆ. ಜನಸಾಮಾನ್ಯರ ಸಂಕಷ್ಠಗಳು ಹಾಗೂ ನೋವು ನಲಿವುಗಳಿಗೆ ಪ್ರಾಮಾಣಿಕವಾದ ಸ್ಪಂದನೆಯಲ್ಲಿ ತೊಡಗಿಸಿಕೊಂಡಿರುವ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಸಿಸ್ಟಂ ಕಂಪನಿಯು 50ಸಾವಿರ ರೂಪಾಯಿ …
Read More »ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿರುವ ತಾಲ್ಲೂಕು ಆಡಳಿತಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ ಮುಂಬೈ ಕನ್ನಡಿಗರು.
ಮಂಡ್ಯ :ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನ 16 ಹೋಂ ಕ್ವಾರಂಟೈನ್ ಸೆಂಟರ್ ಗಳಲ್ಲಿರುವ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಹಾಲು ವಿತರಣೆ ಮಾಡಿದ ತಹಶೀಲ್ದಾರ್ ಎಂ.ಶಿವಮೂರ್ತಿ. ಮಕ್ಕಳಿಗೆ ನಂದಿನಿ ಬ್ರಾಂಡ್ ನ ಸುವಾಸಿತ ಬಾದಾಮಿ ಹಾಲಿನ ಪ್ಯಾಕೇಟ್ ಗಳು ಮತ್ತು ಗರ್ಭಿಣಿ ಮಹಿಳೆಯರಿಗೆ ಟೆಟ್ರಾ ಪ್ಯಾಕ್ ನಂದಿನಿ ವಿಶೇಷ ಹಾಲಿನ ಪ್ಯಾಕೇಟುಗಳನ್ನು ವಿತರಿಸಿ ಕ್ವಾರಂಟೈನ್ ಸೆಂಟರ್ ಗಳಲ್ಲಿರುವ ಮುಂಬೈ ಕನ್ನಡಿಗ ಬಂಧುಗಳ ಯೋಗಕ್ಷೇಮವನ್ನು ತಹಶೀಲ್ದಾರ್ ಶಿವಮೂರ್ತಿ ವಿಚಾರಿಸಿ …
Read More »