Breaking News

ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ’- ಕ್ವಾರಂಟೈನ್‍ನಲ್ಲಿ ಪುಸ್ತಕದ ಮೊರೆಹೋದ ಸಿಎಂ

ಬೆಂಗಳೂರು: ಕೊರೊನಾ ಭೀತಿಯಿಂದ ಸ್ವಯಂ ಕ್ವಾರಂಟೈನ್ ಅಗಿರುವ ಸಿಎಂ ಯಡಿಯೂರಪ್ಪನವರು ಪುಸ್ತಕಗಳನ್ನು ಓದುವ ಮೂಲಕ ಕಾಲಕಳೆಯುತ್ತಿದ್ದಾರೆ. ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಅಧಿಕೃತ ನಿವಾಸ ಕಾವೇರಿ ಮತ್ತು ಅವರ ಧವಳಗಿರಿಯ ನಿವಾಸದಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಕಾರಣದಿಂದ ಯಡಿಯೂರಪ್ಪನವರು ಶುಕ್ರವಾದಿಂದ ಐದು ದಿನಗಳ ಕಾಲ ತಮ್ಮ ಕಾವೇರಿ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದಾರೆ. ಈ ವೇಳೆ ಪುಸ್ತಕಗಳನ್ನು ಓದುತ್ತಾ ಸಮಯ ದೂಡುತ್ತಿರುವ ಬಿಎಸ್‍ವೈ, ಬಿಡುವಿನ …

Read More »

ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌

ಕ್ಯಾಲಿಫೋರ್ನಿಯಾ: ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಸರ್ಕಾರ ಚೀನಾದ 59 ಅಪ್ಲಿಕೇಶನ್‌‌ಗಳನ್ನು ನಿಷೇಧಿಸಿ ‘ಡಿಜಿಟಲ್‌ ಸ್ಟ್ರೈಕ್‌’ ಮಾಡುವ ಮೂಲಕ ಶಾಕ್‌ ನೀಡಿತ್ತು. ಈಗ ಕೊರೊನಾ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಸರಿಯಾಗಿ ಹಂಚಿಕೊಳ್ಳದ್ದಕ್ಕೆ ವಿಶ್ವದ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ಅಮೆರಿಕದ ಕಂಪನಿಗಳು ಚೀನಾ ಮೇಲೆ ‘ಹಾರ್ಡ್‌ವೇರ್‍ ಸ್ಟ್ರೈಕ್‌’ ಮಾಡಲು ಆರಂಭಿಸಿವೆ. ಅಮೆರಿಕದ ಟ್ರಂಪ್‌ ಸರ್ಕಾರ ಮೊದಲಿನಿಂದಲೂ ವ್ಯಾಪಾರ ವಿಚಾರದಲ್ಲಿ ಚೀನಾ ವಿರುದ್ಧ ಕಿಡಿ ಕಾರುತ್ತಲೇ ಬಂದಿದೆ. ಈಗ ಕೊರೊನಾ ವೈರಸ್‌‌ ಸೃಷ್ಟಿಯಾದ ಬಳಿಕ …

Read More »

ಜಿಲ್ಲಾಧಿಕಾರಿಗಳು ಜೊತೆ ಸಭೆ ಮಾಡಿದ ನಂತರ ಉಳಿದ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡುವ ಬಗ್ಗೆ ತೀರ್ಮಾನ

ಬೆಂಗಳೂರು: ಕೊರೊನಾ ಸ್ಪೀಡ್ ಕಟ್ ಮಾಡುವ ಹಿನ್ನೆಲೆಯಲ್ಲಿ ಏಳು ದಿನ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್‍ಡೌನ್ ಮಾಡಲಾಗಿದೆ. ಸೋಮವಾರ ಜಿಲ್ಲಾಧಿಕಾರಿಗಳು ಜೊತೆ ಸಭೆ ಮಾಡಿದ ನಂತರ ಉಳಿದ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಅಶೋಕ್, ಬೆಂಗಳೂರು ಲಾಕ್‍ಡೌನ್ ಅವಧಿಯಲ್ಲಿ ವೈದ್ಯಕೀಯ ಸಂಬಂಧಿತ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶ ನೀಡಲು ಸಿಎಂ ಒಪ್ಪಿದ್ದಾರೆ. …

Read More »

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲಿಸ್ಟ್ ಕೊಡಲಿ ಅದರ ಪ್ರಕಾರ ಬಂಧಿಸುತ್ತೇವೆ

ಗೋಕಾಕ :ಗೋಕಾಕ ನ ಖಾಸಗಿ ವೈದ್ಯ ಡಾ. ಹೊಸಮನಿ ಅವರು ಎರಡು ಲಕ್ಷ ಬಿಲ್ ಮಾಡಿದ್ದಕ್ಕೆ ಗಲಾಟೆಯಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲಿಸ್ಟ್ ಕೊಡಲಿ ಅದರ ಪ್ರಕಾರ ಬಂಧಿಸುತ್ತೇವೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಭಾನುವಾರ ಗೋಕಾಕನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಗೋಕಾಕನಲ್ಲಿ ಖಾಸಗಿ ವೈದ್ಯ ಡಾ. ಹೊಸಮನಿ ಮೃತಪಟ್ಟ ವ್ಯಕ್ತಿಗೆ ಎರಡು ಲಕ್ಷ ರು. ಬಿಲ್ ಮಾಡಿರುವ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು …

Read More »

ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಹೆಚ್ಡಿಕೆ ಒತ್ತಾಯ…………..

ಬೆಂಗಳೂರು, ಜು.11-ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್ ಡೌನ್ ಗೆ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಕೊರೋನ ವೈರಸ್ ಸಮುದಾಯಕ್ಕೆ ಹಬ್ಬುತ್ತಿರುವ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಮನಗಂಡು ಇತರೆ ಗಂಭೀರ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಮತ್ತೆ ಜಾರಿಗೊಳಿಸಿದರೆ ಸಾರ್ವಜನಿಕ ಸ್ವಾಸ್ಥ್ಯದ ಹಿತದೃಷ್ಟಿಯಿಂದ ನಾನು …

Read More »

ಸೂರ್ಯ ಚಂದ್ರ ಇರುವವರಿಗೆ ಪಿಎಸ್‌ಎಸ್‌ಕೆ ಇರಬೇಕು : ಮುರುಗೇಶ್ ನಿರಾಣಿ

ಪಾಂಡವಪುರ,ಜು‌.12ವಿದ್ಯುತ್ ಉತ್ಪಾದನೆ ,ಡಿಸ್ಟಿಲರಿ ಆರಂಭ ಸೇರಿದಂತೆ ಎಲ್ಲಾ ಉಪ ಉತ್ಪನ್ನಗಳ ತಯಾರಿಸಿ ಕಬ್ಬು ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಹೆಚ್ಚಿನ ಹಣಪಾವತಿಸುವುದು ತಮ್ಮ ಸಂಕಲ್ಪ ಮಾಜಿ ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದರು. ಪಿಎಸ್ ಎಸ್ ಕೆ ಯಲ್ಲಿ ಕಾರ್ಮಿಕರು ಹಾಗೂ ರೈತ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಕಾರ್ಖಾನೆಯಲ್ಲಿ ಕಸ ಗುಡಿಸುವವರಿಂದ ಹಿಡಿದು ಮುಖ್ಯ ತಂತ್ರಜ್ಞರು ಸೇರಿದಂತೆ ಎಲ್ಲರೂ ಒಂದೇ ಕುಟುಂಬದವರಂತೆ ,ನಾಟಕದಲ್ಲಿ ಬರುವಂತೆ ಎಲ್ಲರದೂ ಒಂದೊಂದು ಪಾತ್ರ …

Read More »

7 ಖಾಸಗಿ ಆಂಬುಲೆನ್ಸ್‌ಗಳನ್ನು ಬಾಡಿಗೆಗೆ ಪಡೆಯಲು ಜಿಲ್ಲಾಡಳಿತ ನಿರ್ಧರಿಸಿದೆ.

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ದಿನೇ ದಿನೇ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಸೋಂಕಿತರನ್ನು ಕರೆ ತರಲು ಹೆಚ್ಚುವರಿಯಾಗಿ 7 ಖಾಸಗಿ ಆಂಬುಲೆನ್ಸ್‌ಗಳನ್ನು ಬಾಡಿಗೆಗೆ ಪಡೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಗ್ರಾಮಗಳ ಮಟ್ಟದಲ್ಲೂ ಕೊರೊನಾ ಹರಡುತ್ತಿದೆ. ಪ್ರಕರಣಗಳು ಏರುಗತಿಯಲ್ಲೇ ಸಾಗಿದರೆ, ಹುಬ್ಬಳ್ಳಿಯಲ್ಲಿರುವ ಕಿಮ್ಸ್‌ ಕೋವಿಡ್-19 ಆಸ್ಪತ್ರೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಸೋಂಕಿತರನ್ನು ಕರೆ ತರುವುದು ಸವಾಲಾಗಲಿದೆ. ಹಾಗಾಗಿ, ಆಂಬುಲೆನ್ಸ್‌ಗಳ ಕೊರತೆ ಎದುರಾಗದಿರಲೆಂದು, ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್‌ಗಳನ್ನು ಬಾಡಿಗೆಗೆ ಪಡೆಯಲು ತೀರ್ಮಾನಿಸಲಾಗಿದೆ. ಏಳು ಮೀಸಲು: ‘ಸದ್ಯ ಏಳು ಆಂಬುಲೆನ್ಸ್‌ಗಳನ್ನು …

Read More »

ಬಾಲಿವುಡ್ ಹಿರಿಯ ನಟಿ ರೇಖಾ ಅವರ ಸೆಕ್ಯುರಿಟಿ ಗಾರ್ಡ್ ಗೂ ಕೋವಿಡ್ ಸೋಂಕು

ಮುಂಬೈ, ಜುಲೈ.12- ಬಾಲಿವುಡ್ ಹಿರಿಯ ನಟಿ ರೇಖಾ ಅವರ ಸೆಕ್ಯುರಿಟಿ ಗಾರ್ಡ್ ಗೂ ಕೋವಿಡ್ ಸೋಂಕು ತಗುಲಿದೆ. ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ರೇಖಾ ನಿವಾಸದ ಹೊರಗೆ ಹಾಕಿರುವ ನೊಟೀಸ್ ಹಾಕಿ ಸ್ಥಳೀಯರ ಗಮನಕ್ಕೆ ತರಲಾಗಿದೆ. ರೇಖಾ ಅವರ ನಿವಾಸ ಸೇರಿದಂತೆ ಇಡೀ ಪ್ರದೇಶವನ್ನು ಸ್ಯಾನಿತೈಸ್ ಮಾಡಲಾಗಿದೆ. ಸೆಕ್ಯುರಿಟಿ ಗಾರ್ಡ್ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕಿ. ಅವರನ್ನು ಪರೀಕ್ಷೆ ಒಳಪಡಿಸಲು ಸೂಚಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ. ರೇಖಾ ಅವರ …

Read More »

ಲಾಕ್‍ಡೌನ್ ಸಮಯದಲ್ಲಿ ಎಣ್ಣೆ ಕಳ್ಳತನ ಮಾಡಿದ್ದ ಇಬ್ಬರು ಖತರ್ನಾಕ್ ಮದ್ಯ ಕಳ್ಳರ….

ಹಾಸನ: ಲಾಕ್‍ಡೌನ್ ಸಮಯದಲ್ಲಿ ಎಣ್ಣೆ ಕಳ್ಳತನ ಮಾಡಿ ಮತ್ತೆ ಲಾಕ್‍ಡೌನ್ ಆದರೆ ಹೆಚ್ಚು ಬೆಲೆಗೆ ಮಾರಬಹುದು ಎಂದು ಪ್ಲಾನ್ ಮಾಡಿದ್ದ ಇಬ್ಬರು ಖತರ್ನಾಕ್ ಮದ್ಯ ಕಳ್ಳರನ್ನು ಜಿಲ್ಲೆಯ ಸಕಲೇಶಪುರ ತಾಲೂಕಿನ ಪೊಲೀಸರು ಬಂಧಿಸಿದ್ದಾರೆ. ಮೋಹನ್ (31) ಮತ್ತು ಚಂದ್ರು (42) ಬಂಧಿತ ಆರೋಪಿಗಳು. ಇತ್ತೀಚಿನ ದಿನಗಳಲ್ಲಿ ಸಕಲೇಶಪುರ ತಾಲೂಕು ಸೇರಿದಂತೆ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವ್ಯಾಪಕವಾಗಿ ಮದ್ಯದ ಕಳ್ಳತನ ನಡೆಯುತ್ತಿತ್ತು. ಹೀಗಾಗಿ ಸಕಲೇಶಪುರ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ತನಿಖಾ …

Read More »

ಮಂಡ್ಯದ ‘ಡ್ರೋನ್ ಸ್ಪೆಷಲಿಸ್ಟ್’ನ ಅಸಲಿಯತ್ತು ಈಗ ಬೆಳಕಿಗೆ ಬಂದಿದೆ

ಮಂಡ್ಯ: ಇ-ತ್ಯಾಜ್ಯಗಳಿಂದ ತಾನು 600 ಡ್ರೋನ್​ಗಳನ್ನ ತಯಾರಿಸಿದ್ದೇನೆ. ಬಡತನದಿಂದ ಬೆಳೆದು ಮೇಲೆ ಬಂದಿದ್ದೇನೆ. ಅನೇಕ ಅಂತಾರಾಷ್ಟ್ರೀಯ ಡ್ರೋನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. 87 ದೇಶಗಳಲ್ಲಿ ಕೆಲಸ ಆಫರ್ ಇದ್ದರೂ ತಾಯಿಗೋಸ್ಕರ ದೇಶದಲ್ಲೇ ಉಳಿದುಕೊಂಡಿದ್ದೇನೆ ಎಂದು ಸಖತ್ತಾಗಿ ಬಿಂಬಿಸಿಕೊಂಡಿದ್ದ ಮಂಡ್ಯದ ‘ಡ್ರೋನ್ ಸ್ಪೆಷಲಿಸ್ಟ್’ನ ಅಸಲಿಯತ್ತು ಈಗ ಬೆಳಕಿಗೆ ಬಂದಿದೆ. ಸುದ್ದಿ ಜಾಲತಾಣವೊಂದು ಈತನದ್ದು ಬರೇ ಸುಳ್ಳಿನ ಕಂತೆಗಳು ಎಂದು ತನಿಖಾ ವರದಿಯಲ್ಲಿ ಬಟಾಬಯಲು ಮಾಡಿದೆ. ಈತನ ಹೆಸರು ಪ್ರತಾಪ್. ಮಂಡ್ಯ ಜಿಲ್ಲೆ …

Read More »