Breaking News

ಒಟ್ಟು ಆರು ಮಾದರಿಗಳ ಪೈಕಿ ಎಲ್ಲ ಆರೂ ವರದಿಗಳು ನೆಗೆಟಿವ್ ಬಂದಿರುತ್ತವೆ : ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ

ಬೆಳಗಾವಿ, ಏ.೨(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಒಟ್ಟು ಆರು ಮಾದರಿಗಳ ಪೈಕಿ ಎಲ್ಲ ಆರೂ ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಿಂದ ಇದುವರೆಗೆ ಒಟ್ಟು ೨೭ ಮಾದರಿಗಳನ್ನು ಕಳಿಸಲಾಗಿತ್ತು. ಇಂದು ಬಂದಿರುವ ವರದಿಯ ಪ್ರಕಾರ ಎಲ್ಲ ೨೭ ಮಾದರಿಗಳು ನೆಗೆಟಿವ ಬಂದಿರುತ್ತವೆ ಎಂದು‌ ತಿಳಿಸಿದ್ದಾರೆ. ಇದುವರೆಗೆ ೨೧ ಮಾದರಿಗಳ ವರದಿ …

Read More »

ದುಬಾರಿ ಮದ್ಯ ಬಿಟ್ಟು ಕಡಿಮೆ ಬೆಲೆ ಬಿಯರ್, ಬ್ರ್ಯಾಂಡಿ ಕದ್ದೊಯ್ದ ಕಳ್ಳರು

ಗದಗ: ಕೊರೊನಾ ವೈರಸ್ ಅಟ್ಟಹಾಸಕ್ಕೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಈ ಸಂದರ್ಭವನ್ನೇ ದುರುಪಯೋಗ ಮಾಡಿಕೊಂಡು ಕೆಲವರು ಮದ್ಯ ಕಳ್ಳತನಕ್ಕೆ ಮುಂದಾಗಿದ್ದಾರೆ. ಗದಗ ತಾಲೂಕಿನ ಕಳಸಾಪೂರ ಗ್ರಾಮದ ಹೊರವಲಯದ ನಾಗಾವಿ ರಸ್ತೆಯಲ್ಲಿರುವ ಎಂಎಸ್‍ಐಎಲ್ ಮದ್ಯದಂಗಡಿಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ವಿಚಿತ್ರ ಎಂದರೆ ಖದೀಮರು ತಮಗೆ ಇಷ್ಟವಾಗಿರುವ ಬಿಯರ್, ಬ್ರ್ಯಾಂಡಿ ಸೇರಿದಂತೆ ಇತರೆ ಕಡಿಮೆ ಬೆಲೆಯ ಮದ್ಯವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. …

Read More »

ಆಟೋ, ಕ್ಯಾಬ್ ಚಾಲಕರಿಗೆ 5 ಸಾವಿರ ರೂಪಾಯಿ ನೆರವು – ಕೇಜ್ರಿವಾಲ್ ಘೋಷಣೆ

ನವದೆಹಲಿ: ಲಾಕ್‍ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ಆಟೋ, ರಿಕ್ಷಾ, ಇ ರಿಕ್ಷಾ, ಕ್ಯಾಬ್ ಚಾಲಕರ ನೆರವಿಗೆ ನಿಂತಿರುವ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ರಿಕ್ಷಾ, ಆಟೋ, ಇ ರಿಕ್ಷಾ ಚಾಲಕರು, ಕ್ಯಾಬ್ ಚಾಲಕರಿಗೆ 5,000 ರೂಪಾಯಿಗಳ ನೆರವು ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಅವರು ಘೋಷಣೆ ಮಾಡಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಲಾಕ್‍ಡೌನ್ ಹಿನ್ನೆಲೆ ಆಟೋ ರಿಕ್ಷಾ ಚಾಲಕರಿಗೆ ಸಂಕಷ್ಟ …

Read More »

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಕಡ್ಡಾಯವಾಗಿ ಪಾಸಣೆಗೆ ಒಳಗಾಗಬೇಕು:ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಏ.2-ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಕಡ್ಡಾಯವಾಗಿ ಸ್ವಯಂಪ್ರೇರಿತರಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ. ತಪಾಸಣೆ ಮಾಡಲು ಬಂದ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ತಿರುಗಿ ಬೀಳುವುದು ಖಂಡನೀಯ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.   ದೇಶದ ಸ್ವಾಸ್ಥ್ಯ ಮತ್ತು ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ. ಬೆಂಗಳೂರಿನ ಹೆಗಡೆ‌ನಗರದ ಬಳಿ ಬರುವ ಸಾಧಿಕ್‌ನಗರದಲ್ಲಿ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡುವ …

Read More »

ರಾಮನವಮಿಗೆ ತಟ್ಟದ ಲಾಕ್‍ಡೌನ್ ಬಿಸಿ- ಮುಗಿಬಿದ್ದು ದರ್ಶನ ಪಡೆದ ರಾಮ ಭಕ್ತರು

ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಎಲ್ಲಾ ದೇವಾಲಯಗಳು ಬಂದ್ ಆಗಿವೆ. ಆದರೆ ರಾಯಚೂರಿನಲ್ಲಿ ರಾಮನವಮಿಗೆ ಮಾತ್ರ ಲಾಕ್‍ಡೌನ್ ಬಿಸಿ ತಟ್ಟಲಿಲ್ಲ. ಬೆಳಗ್ಗೆಯಿಂದ ರಾಮ ಭಕ್ತರು ನಿರಂತರವಾಗಿ ದರ್ಶನ ಪಡೆದಿದ್ದಾರೆ. ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಮಂದಿರಲ್ಲಿ ಭಕ್ತರು ಯಾವ ಸಾಮಾಜಿಕ ಅಂತರವೂ ಕಾಯ್ದುಕೊಳ್ಳದೆ ಮುಗಿಬಿದ್ದು ದರ್ಶನ ಪಡೆದಿದ್ದಾರೆ. ಮಂದಿರದ ಮುಖ್ಯದ್ವಾರಕ್ಕೆ ಬೀಗ ಹಾಕಿದ್ದರೂ ಪಕ್ಕದ ಚಿಕ್ಕ ದ್ವಾರದಿಂದ ಭಕ್ತರ ಪ್ರವೇಶಕ್ಕೆ ಅರ್ಚಕರು ಅನುವು ಮಾಡಿಕೊಟ್ಟಿದ್ದಾರೆ …

Read More »

ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

ತಬ್ಲಿಘಿ ಸಭೆಗೆ ಹಾಜರಾಗಿದ್ದ ತಮಿಳುನಾಡಿನ 264 ಮಂದಿಗೆ ಕೊರೊನಾ ನವದೆಹಲಿ: ದೇಶದ ಒಟ್ಟು ಕೊರೊನಾ ಸೋಂಕಿತರಲ್ಲಿ ಶೇ.20 ರಷ್ಟು ಜನರು ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದರವೇ ಆಗಿರುವುದು ಆಂತಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ 19 ಮಂದಿ ವಿವಿಧ ರಾಜ್ಯಗಳಲ್ಲಿ ಸಾವನ್ನಪ್ಪಿದ್ದಾರೆ. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಮಾರ್ಚ್ ಮೊದಲ ವಾರದಿಂದ ನಡೆದ ಸಭೆಯಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ಬಳಿಕ ಊರುಗಳಿಗೆ ತೆರಳಿದ್ದರು. …

Read More »

ಕೊರೋನಾ ವೈರಸ ಹಿನ್ನೆಲೆ : ಜವಾಬ್ದಾರಿಯುತ ಕಾರ್ಯ ನಿರ್ವಹಿಸಿ : ಡಿ.ಎಸ್.ಪಿ ಡಿ.ಟಿ ಪ್ರಭು

ಗೋಕಾಕ:ಕೊರೋನಾ ವೈರಸ ಹಿನ್ನೆಲೆ : ಜವಾಬ್ದಾರಿಯುತ ಕಾರ್ಯ ನಿರ್ವಹಿಸಿ : ಡಿ.ಎಸ್.ಪಿ ಡಿ.ಟಿ ಪ್ರಭು ಜನಪ್ರತಿನಿಧಿಗಳು , ಮುಖಂಡರುಗಳು ಕೊರೋನಾ ವೈರಸ್ ಹರಡದಂತೆ ಜವಾಬ್ದಾರಿಯುತ ಕಾರ್ಯ ನಿರ್ವಹಿಸಬೇ ವಹಿಸಬೇಕಾಗಿದೆ ಎಂದು ಡಿ.ಎಸ್.ಪಿ ಡಿ‌.ಟಿ ಪ್ರಭು ಹೇಳಿದರು ಗುರುವಾರದಂದು ನಗರದ ಶಹರ ಠಾಣೆಯಲ್ಲಿ ನಡೆದ ವಿವಿಧ ಮುಖಂಡರುಗಳ ಸಭೆಯಲ್ಲಿ ಮಾತನಾಡಿದ ಅವರು ಕಳೆದ ಒಂದು ವಾರದಿಂದ ರಾಜಾದ್ಯಂತ ಲಾಕಡೌನ ಜಾರಿಯಲ್ಲಿದ್ದು , ಗೋಕಾಕ ನಗರದಲ್ಲಿಯೂ ಸಹ ಲಾಕಡೌನ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ …

Read More »

ನಾಳೆ ದೇಶವಾಸಿಗಳಿಗಾಗಿ ಮೋದಿ ವಿಡಿಯೋ ಸಂದೇಶ

ಬೆಂಗಳೂರು: ಪ್ರಧಾನಿ ಮೋದಿ ಅವರು ನಾಳೆ ದೇಶದ ಜನತೆಗಾಗಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಮೋದಿ ಅವರು, ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಇಂದು ಕೂಡ ದೇಶದ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್ ಮಾಡಿದ್ದರು. ಇದಾದ ನಂತರ ಅವರು ಟ್ವೀಟ್ ಮಾಡಿದ್ದು, ವಿಡಿಯೋ ಸಂದೇಶ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಮೋದಿ …

Read More »

ಕೊರೊನಾ ವೈರಾಣು ಭೀತಿಯಿಂದ ಅಂತ್ಯಸಂಸ್ಕಾರ ನಡೆಸಲು ಹಿಂದೇಟು ಹಾಕಿದರು…! ಕೊನೆಗೆ ನಾಗರಿಕ ಸಮಿತಿಯಿಂದ ಅಂತ್ಯಸಂಸ್ಕಾರ ನಡೆಯಿತು.

ಕೊರೊನಾ ವೈರಾಣು ಭೀತಿಯಿಂದ ಅಂತ್ಯಸಂಸ್ಕಾರ ನಡೆಸಲು ಹಿಂದೇಟು ಹಾಕಿದರು…! ಕೊನೆಗೆ ನಾಗರಿಕ ಸಮಿತಿಯಿಂದ ಅಂತ್ಯಸಂಸ್ಕಾರ ನಡೆಯಿತು. ಉಡುಪಿ,ಏ.2; ಕೊರೊನಾ ವ್ಯಾಧಿಯ ಭಯದಿಂದ ವೃದ್ಧನ ಅಂತ್ಯಸಂಸ್ಕಾರ ನಡೆಸಲು ಮನೆ ಮಂದಿ ಭಯಭೀತರಾಗಿ ಹಿಂದೇಟು ಹಾಕಿದರು. ಕೊನೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ, ವೃದ್ಧನ ಅಂತ್ಯಸಂಸ್ಕಾರವನ್ನು ನೆರವೆರಿಸಿತು. ಇಂತಹ ಮಾನವಿತೆಯ ಸತ್ಕಾರ್ಯವು ಉಡುಪಿಯಲ್ಲಿ ಮಾ.30 ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿದ್ಧಾಪುರ- ಕಮಲಶಿಲೆಯ ನಿವಾಸಿ ಮಂಜುವೀರ( 80ವ) ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಳೆದ …

Read More »

ಕೊರೋನಾ ಸೋಂಕು ತಡೆಗಟ್ಟೋಕೆ ಸರ್ಕಾರ ಕಠಿಣಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇಲ್ಲೊಬ್ಬ ವ್ಯಕ್ತಿ ಕೊರೋನಾ ಹರಡೋಕೆ ನೋಟುಗಳಿಗೆ ತನ್ನ ಎಂಜಲು ತಾಗಿಸುವ ವೀಡಿಯೋ ವೈರಲ್ ಮಾಡಿದ್ದಾನೆ.

ಕೊರೋನಾ ಸೋಂಕು ತಡೆಗಟ್ಟೋಕೆ ಸರ್ಕಾರ ಕಠಿಣಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಕೊರೋನಾ ಹರಡೋಕೆ ನೋಟುಗಳಿಗೆ ತನ್ನ ಎಂಜಲು ತಾಗಿಸುವ ವೀಡಿಯೋ ವೈರಲ್ ಮಾಡಿದ್ದಾನೆ. ಕೊರೋನಾ ಸೋಂಕಿಗೆ ಮದ್ದು ಇಲ್ಲ, ಇದು ಅಲ್ಲಾನ ಕೊಡುಗೆ ಎಂದು ವೀಡಿಯೋದಲ್ಲಿ ಹೇಳಿರುವ ಆತ, ನೋಟುಗಳಿಗೆ ತನ್ನ ಎಂಜಲು ಅಂಟಿಸಿದ್ದಾನೆ. ಸದ್ಯ ಈ ವೀಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ಜನ ಮುಸ್ಲಿಮರ ಜೊತೆ ವ್ಯಾಪಾರ ವ್ಯವಹಾರ ಮಾಡಬೇಡಿ ಎಂದು ಕರೆಕೊಟ್ಟಿದ್ದಾರೆ. ವೀಡಿಯೋ ನೋಡಿ

Read More »