Breaking News

ಅನಗತ್ಯವಾಗಿ ಮಹಾರಾಷ್ಟ್ರ ವಿಷಬೀಜ ಬಿತ್ತುವ ಮೂಲಕ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಯತ್ನ

  ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ತಾಂತ್ರಿಕ ಕಾರಣಕ್ಕಾಗಿ ಸ್ಥಳ ಬದಲಾಯಿಸಲು ತೆಗೆದಿರಿಸಲಾಗಿರುವ   ಛತ್ರಪತಿ ಶಿವಾಜಿ ಪುತ್ಥಳಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಲಾಗಿದೆ ಎಂದು ಮಹಾರಾಷ್ಟ್ರ ಆರೋಪಿಸಿದ್ದು, ಪುತ್ಥಳಿ ಮರುಸ್ಥಾಪನೆಗೆ ಆಗ್ರಹಿಸಿದೆ. ತನ್ಮೂಲಕ ಕರ್ನಾಟಕದ ಪಕ್ಕಾ ಆಂತರಿಕ ವಿದ್ಯಮಾನದಲ್ಲಿ ಅನಗತ್ಯವಾಗಿ ಮಹಾರಾಷ್ಟ್ರ ಮೂಗು ತೂರಿಸುವ ಯತ್ನ ನಡೆಸುತ್ತಿದೆ. ಅಲ್ಲದೆ ಅನಗತ್ಯಾವಾಗಿ ವಿಷಬೀಜ ಬಿತ್ತುವ ಮೂಲಕ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಯತ್ನಿಸುತ್ತಿದೆ. ಸ್ಥಳೀಯ ಕೆಲವು ಸಮಸ್ಯೆಗಳ ಕಾರಣಕ್ಕಾಗಿ ಶಿವಾಜಿ …

Read More »

ನಂದಿಬೆಟ್ಟದಲ್ಲಿ ಮುಂದುವರಿದ ಲಾಕ್‍ಡೌನ್- ನಿರಾಸೆಯಿಂದ ವಾಪಸ್ಸಾಗ್ತಿರೋ ಪ್ರವಾಸಿಗರು

ಚಿಕ್ಕಬಳ್ಳಾಪುರ: ಕೊರೊನಾ ಹಿನ್ನೆಲೆಯಲ್ಲಿ ಜಗದ್ವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧ ಇನ್ನೂ ಮುಂದುವರಿದಿದೆ. ಹೀಗಾಗಿ ಲಾಕ್‍ಡೌನ್ ಸಡಿಲಿಕೆ ಆಗಿದೆ ಅಂತ ಭಾವಿಸಿ ನಂದಿಗಿರಿಧಾಮಕ್ಕೆ ಬಂದ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸಾಗುತ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ನಂದಿಗಿರಿಧಾಮಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ನಿರಾಸೆಯಿಂದ ವಾಪಸ್ಸುಗುವಂತಾಗಿದೆ. ಅಂದಹಾಗೆ ಲಾಕ್‍ಡೌನ್ ಬಹುತೇಕ ಸಡಿಲಿಕೆ ಆಗಿದ್ದರೂ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ಇನ್ನೂ ಮುಂದುವರಿದಿದೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ …

Read More »

ಕೋವಿಡ್‌: ಸೋಂಕಿತರಿಗಿಂತ ಗುಣಮುಖರಾದವರ ಹೆಚ್ಚಳ

ಬೆಳಗಾವಿ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 312 ಜನರಿಗೆ ಕೋವಿಡ್‌-19 ದೃಢಪಟ್ಟಿದೆ. ಇದೇ ವೇಳೆ, 378 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದುವರೆಗೆ ಸೋಂಕು ತಗುಲಿದವರ ಸಂಖ್ಯೆ 5,174ಕ್ಕೆ ತಲುಪಿದೆ. ಇವರಲ್ಲಿ 3,431 ಸಕ್ರಿಯ ಪ್ರಕರಣಗಳಿವೆ. ಬೆಳಗಾವಿ, ಗೋಕಾಕ, ಖಾನಾಪುರ, ಸವದತ್ತಿ, ಚಿಕ್ಕೋಡಿ, ರಾಮದುರ್ಗ, ಹುಕ್ಕೇರಿ, ರಾಯಬಾಗ ಸೇರಿದಂತೆ ಬಹುತೇಕ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಸೋಂಕು ಕಂಡುಬಂದಿದೆ. ಬೆಳಗಾವಿಯ 60 ವರ್ಷದ ವೃದ್ಧೆಯೊಬ್ಬರು …

Read More »

ಆಸ್ತಿ ವಿವಾದಕ್ಕೆ ಬೆಳಗಾವಿ ಅಂಬೇವಾಡಿ ಗ್ರಾಮದಲ್ಲಿ ಫೈರಿಂಗ್

ಬೆಳಗಾವಿ:ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ  ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ. ಅಮಿತ್ ಪಾವಲೆ (35) ಎಂಬಾತನ  ಬಲಗೈ ಭುಜಕ್ಕೆ ಗುಂಡು ತಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅಂಬೇವಾಡಿ ಗ್ರಾಮದಲ್ಲಿ ನೆಲೆಸಿರುವ ಕಾತ್ಸು ತರಳೆ (47) ಎಂಬಾತನಿಂದ ಕೃತ್ಯ ನಡೆದಿದೆ. ಗಾಯಗೊಂಡಿರುವ ಅಮಿತ್ ಎಂಬಾತ ಕಾತ್ಸು ಸಹೋದರಿ ಪುತ್ರನಾಗಿದ್ದಾನೆ. ಎರಡು ಕುಟುಂಬ ನಡುವಿನ ಜಮೀನು ವಿವಾದ ಕೋರ್ಟ್ ಅಲ್ಲಿಇತ್ತೀಚಿಗೆ ಇತ್ಯರ್ಥಗೊಂಡಿತ್ತು. …

Read More »

ಗೋಕಾಕ್ ತಾಲೂಕಿನ ಯುವಕ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ

ಬೆಳಗಾವಿ- ನಿನ್ನೆ ಸಂಜೆ ಹೊತ್ತಿಗೆ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋದ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗ್ಗೆ 8 ಗಂಟೆಯಿಂದ ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭವಾಗಿದೆ. ಡುಮ್ಮ‌ಉರುಬಿನಟ್ಟಿ ಗ್ರಾಮದ ಬಳಿ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಜಲಾವೃತವಾದ ಗದ್ದೆಯಲ್ಲಿ ಮುಳುಗಡೆಯಾದ ಪಂಪ್‌ಸೆಟ್ ನೋಡಲು‌ ಹೋಗಿದ್ದ ಯುವಕ ಕಾಲು ಜಾರಿ ಬಳ್ಳಾರಿ ನಾಲೆಗೆ ಬಿದ್ದು ನೀರಿನ ಸೆಳುವಿಗೆ ಕೊಚ್ಚಿ ಹೋಗಿದ್ದಾನೆ.   18 ವರ್ಷದ ನಾಗರಾಜ್ ಹೆಬ್ಬಳ್ಳಿ‌ ಬಳ್ಳಾರಿ …

Read More »

ಹಳ್ಳಿಗಳಲ್ಲಿ M.S.I.L. ಮಳಿಗೆ ಆರಂಭಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ:ಗೋವಿಂದ ಕಾರಜೋಳ

ಬಾಗಲಕೋಟೆ:  ಹಳ್ಳಿಗಳಲ್ಲಿ ಎಂಎಸ್‌ಐಎಲ್ ಮಳಿಗೆ ಆರಂಭಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ನಾವು ಮದ್ಯದ ಅಂಗಡಿ ತೆರೆಯುವವರಲ್ಲ. ಅವುಗಳನ್ನು ಮುಚ್ಚುವವರು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಮುಧೋಳದಲ್ಲಿ ಶನಿವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿ ಹಳ್ಳಿಗಳಲ್ಲೂ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮದ್ಯದ ಅಂಗಡಿ ಆರಂಭಿಸಲಾಗುತ್ತದೆ ಎನ್ನುವುದು ಸುಳ್ಳು. ಆ ರೀತಿ ನಾವು ಮಾಡುವುದಿಲ್ಲ. ನಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯುಳ್ಳವರು. ಮದ್ಯದ ಅಂಗಡಿ ಮುಚ್ಚುವುದು ಬಿಜೆಪಿಯ ನೀತಿಯಲ್ಲೊಂದು …

Read More »

ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ- ಶೆಟ್ಟರ್ ಸೂಚನೆ

ನೆಲಮಂಗಲ: ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ತಿಳಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ಶನಿವಾರ ಭೇಟಿ ನೀಡಿ ಸಚಿವರು ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದರು. ಡಾಬಸ್‍ಪೇಟೆ ಇಂಡಸ್ಟ್ರೀಸ್ ಅಸೋಸಿಯೇಷನ್ ಸದಸ್ಯರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ …

Read More »

ಭಾರತದಲ್ಲಿ ಕೊರೊನಾಗೆ 196 ವೈದ್ಯರ ಸಾವು – ಪ್ರಧಾನಿ ಮೋದಿಗೆ ಐಎಂಎ ಪತ್ರ

ನವದೆಹಲಿ: ಕೊರೊನಾ ಸೋಂಕಿನಿಂದ ಈವರೆಗೂ ಭಾರತದಲ್ಲಿ 196 ವೈದ್ಯರು ಪ್ರಾಣ ಕಳೆದುಕೊಂಡಿದ್ದು, ಈ ವಿಚಾರದ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಐಎಂಎ ಬರೆದ ಪತ್ರದಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯರ ಸಾವುಗಳು ಹೆಚ್ಚುತ್ತಿರುವ ಬಗ್ಗೆ ಕಳವಳಗಳ ವ್ಯಕ್ತಪಡಿಸಲಾಗಿದೆ. ಕೊರೊನಾದಿಂದಾಗಿ ವೈದ್ಯರು ಸೋಂಕಿಗೆ ಒಳಗಾಗುವ ಮತ್ತು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಅವರಲ್ಲಿ ಅನೇಕ ಸಾಮಾನ್ಯ ವೈದ್ಯರಿದ್ದಾರೆ ಎಂದು …

Read More »

ಪ್ರಾಣದ ಹಂಗು ತೊರೆದು ಕೊಚ್ಚಿ ಹೋಗುತ್ತಿದ್ದ ಕಾಲು ಸೇತುವೆ ಕಟ್ಟಿ, ಗಟ್ಟಿಗೊಳಿಸಿದ ಗ್ರಾಮಸ್ಥ

ಮಂಗಳೂರು: ಪಶ್ಚಿಮ ಘಟ್ಟ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಜಿಲ್ಲೆಯ ಎಲ್ಲ ಜೀವನದಿಗಳು ಉಕ್ಕಿ ಹರಿಯುತ್ತಿವೆ. ಮಳೆ, ಪ್ರವಾಹದಿಂದ ಜನ ತಮ್ಮ ಬದುಕು ಕಟ್ಟಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಅದೇ ರೀತಿ ಕೊಚ್ಚಿ ಹೋಗುತ್ತಿದ್ದ ಸೇತುವೆಯನ್ನು ಪ್ರಾಣದ ಹಂಗು ತೊರೆದು ಗ್ರಾಮಸ್ಥರೊಬ್ಬರು ಕಟ್ಟಿ ನಿಲ್ಲಿಸಿದ್ದಾರೆದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯಲ್ಲಿ ಜನರೇ ನಿರ್ಮಿಸಿದ್ದ ಕಾಲು ಸೇತುವೆಯನ್ನು ಉಳಿಸಿಕೊಳ್ಳಲು ಗ್ರಾಮಸ್ಥರೊಬ್ಬರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ದಾರೆ. ರಭಸವಾಗಿ …

Read More »

ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿಯ ಗ್ರಾಮಕ್ಕೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ

ಧಾರವಾಡ: ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿಯ ಗ್ರಾಮಕ್ಕೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೆರಳಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್‍ರ ಸಚಿವರು, ಬಾಲಕಿಗೆ ನ್ಯಾಯ ಕೊಡಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಆರೋಪಿಯನ್ನು ಪೊಲೀಸ್ ಇಲಾಖೆ ಬಂಧಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಸಂತ್ರತ್ತೆಯ ಕುಟುಂಬಕ್ಕೆ ಪರಿಹಾರ ಧನ ನೀಡಲು ನಿಯಮಾವಳಿಗಳನ್ನು ಪರಿಶೀಲಿಸಲಾಗುವುದು, …

Read More »