Breaking News

ಹೈಕಮಾಂಡ್​ ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದ ಯತ್ನಾಳ್ ಟೀಂ

ಬೆಳಗಾವಿ, (ಡಿಸೆಂಬರ್ 17): ಕರ್ನಾಟಕ ಬಿಜೆಪಿಯಲ್ಲಿನ ಬಣ ರಾಜಕೀಯ ಮುಂದುವರಿದಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಸೈಲೆಂಟ್​, ವೈಲೆಂಟ್​ ಆಟ ಆಡುತ್ತಲೇ ಇದೆ. ಹೈಕಮಾಂಡ್​ ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದ ಯತ್ನಾಳ್ ಟೀಂ, ತಮ್ಮ ಬಣ ರಾಜಕೀಯ ಮುಂದುವರಿಸಿದೆ. .ಬಿಜೆಪಿ ರೆಬೆಲ್ ಟೀಮ್ ಮತ್ತೆ ಬೆಳಗಾವಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ವಕ್ಫ್ ವಿರುದ್ಧ 2ನೇ ಹಂತದ ಹೋರಾಟದ ಬಗ್ಗೆ ಮಹತ್ವ ಚರ್ಚೆ ನಡೆಸಿದೆ. ಈ ಬಗ್ಗೆ …

Read More »

ವಿಜಯೇಂದ್ರ ಔತಣಕೂಟಕ್ಕೆ ನಾನು ಹೊಗಿಲ್ಲ, ರಮೇಶ್ ಜಾರಕಿಹೊಳಿ ಕೂಡ ಹೋಗಲ್ಲ:ಯತ್ನಾಳ್

ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ಹೈಕಮಾಂಡ್ ಶಿಸ್ತು ಸಮಿತಿ ನೋಟಿಸ್​ಗೆ ಉತ್ತರಿಸಿ ಬಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ.:  ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಯೋಜಿಸಿದ್ದ ಔತಣ ಕೂಟದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಮಾಜಿ ಸಿಎಂ ಬಿಎಸ್ …

Read More »

ಡಿಸೆಂಬರ್ 31 ರವರೆಗೆ ಹೆಚ್ಎಸ್​ಆರ್​ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಗಡುವು

ಬೆಂಗಳೂರು, ಡಿಸೆಂಬರ್ 18: ರಾಜ್ಯದಲ್ಲಿ ಎಷ್ಟು ಜನಸಂಖ್ಯೆ ಇದೆಯೋ ಸುಮಾರು ಅಷ್ಟೇ ವಾಹನಗಳನ್ನು ಕೂಡ ಜನ ಖರೀದಿ ಮಾಡಿದ್ದಾರೆ. ಒಂದೊಂದು ಮನೆಯಲ್ಲೂ ಕೂಡ ಮೂರ್ನಾಲ್ಕಕ್ಕಿಂತ ಹೆಚ್ಚು ವಾಹನಗಳಿವೆ. ಇತ್ತೀಚೆಗಂತೂ ಎಲ್ಲವೂ ಡಿಜಿಟಲ್ ಯುಗ ಆಗಿ ಹೋಗಿದೆ. ಇದಕ್ಕೆ ಪೂರಕವಾಗುವಂತೆ ಈಗಾಗಲೇ ಸಾರಿಗೆ ಇಲಾಖೆ 2019 ರ ಮಾರ್ಚ್ – 31 ರ ಹಿಂದಿನ ಹಳೆಯ ಎರಡು ಕೋಟಿಗೂ ಹೆಚ್ಚಿನ ವಾಹನಗಳಿಗೆ ಹೈಟೆಕ್ ಟಚ್ ಕೊಡಲು ಸಿದ್ಧವಾಗಿತ್ತು. ಆದರೆ ಯಾಕೋ ಹೆಚ್​ಎಸ್​ಆರ್​ಪಿ ನಂಬರ್ …

Read More »

ಕುಂದಾನಗರಿಯಲ್ಲಿ ಸಂತೋಷ್​ ಲಾಡ್ ರನ್ನಿಂಗ್

ಬೆಳಗಾವಿ: ನಿನ್ನೆ ಅಧಿವೇಶನದ ಕಲಾಪದಲ್ಲಿ ಬಹುತೇಕ ಸಚಿವರು ಇಡೀ ದಿನ‌ ಪಾಲ್ಗೊಂಡಿದ್ದರು. ಅಧಿವೇಶನ ಮುಗಿಯುತ್ತಿದ್ದಂತೆ ತಮ್ಮ ಕೊಠಡಿಗೆ ತೆರಳಿ ಕೆಲವರು ವಿಶ್ರಾಂತಿ ಪಡೆಯುತ್ತಿದ್ದರೆ, ಮತ್ತೊಂದಿಷ್ಟು ಮಂದಿ ಕಾರ್ಯಕರ್ತರ ಜೊತೆ ಹರಟೆ ಹೊಡೆಯುತ್ತಿದ್ದರು. ಆದರೆ, ಕಾರ್ಮಿಕ‌ ಸಚಿವ ಸಂತೋಷ್​ ಲಾಡ್ ಮಾತ್ರ ಕುಂದಾನಗರಿ ಗಲ್ಲಿಯಲ್ಲಿ ಯಾವುದೇ ಭದ್ರತೆ ಇಲ್ಲದೇ ರನ್ನಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಜಾಕೇಟ್-ಟ್ರ್ಯಾಕ್ ಪ್ಯಾಂಟ್-ಶೂ ಹಾಕಿಕೊಂಡು ತಮ್ಮ ಪಾಡಿಗೆ ತಾವೊಬ್ಬರೆ ರನ್ನಿಂಗ್ ಮಾಡುತ್ತಿದ್ದ ಸಚಿವ ಸಂತೋಷ್​ …

Read More »

ನಟ ದರ್ಶನ್ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಹೋಗಲು ತೀರ್ಮಾನಿಸಿರುವ ನಗರ ಪೊಲೀಸರು,

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಗರದ ಪೊಲೀಸರು ನಿರ್ಧರಿಸಿದ್ದಾರೆ‌. ರೇಣುಕಾಸ್ವಾಮಿ ಹತ್ಯೆಯಾಗಿ ಸುಮಾರು 6 ತಿಂಗಳ ಬಳಿಕ ನಟ ದರ್ಶನ್, ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಶುಕ್ರವಾರ (ಡಿ.15) ಜಾಮೀನು ಮಂಜೂರಾಗಿತ್ತು‌. ಇದರಂತೆ ಸೋಮವಾರ ನ್ಯಾಯಾಲಯಕ್ಕೆ ಜಾಮೀನು ಶ್ಯೂರಿಟಿ ಒದಗಿಸಿದ್ದ ಪವಿತ್ರಾ ಗೌಡ, ಪ್ರದೂಷ್, …

Read More »

ಗಾಂಧಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್​ ಅಧಿವೇಶನದ ಶತಮಾನೋತ್ಸವ ಪ್ರತಿ ಕಾಂಗ್ರೆಸ್ಸಿಗನಿಗೂ ಹೆಮ್ಮೆ

ಬೆಳಗಾವಿ: “1924ರ ಡಿಸೆಂಬರ್ 26ರಂದು ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಇಂದು ನಾವು ಆ ದಿನದ 100 ವರ್ಷಗಳನ್ನು ಪೂರೈಸಿದ್ದೇವೆ. ಇದು ಪ್ರತಿಯೊಬ್ಬ ಕಾಂಗ್ರೆಸ್ಸಿಗನಿಗೂ ಹೆಮ್ಮೆಯ ವಿಷಯ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದರು. ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆಗೂಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಬೆಳಗಾವಿ ಕಾಂಗ್ರೆಸ್ ಅಧಿವೇಶನ ಭಾರತೀಯ ರಾಜಕಾರಣದಲ್ಲಿಯೇ ಐತಿಹಾಸಿಕ. ಕರ್ನಾಟಕ ಸರ್ಕಾರ ಶತಮಾನೋತ್ಸವ …

Read More »

ಜಮೀರ್-ಯತ್ನಾಳ್ ಜುಗಲ್ ಬಂದಿ!

ಇನ್ನೊಂದೆಡೆ ಇಂದು ಸುವರ್ಣಸೌಧದ ಸಚಿವರ ಚೇಂಬರ್​​ನಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಪರಸ್ಪರ ಭೇಟಿಯಾದ ವೇಳೆ ಅನ್ಯೋನ್ಯತೆಯಿಂದ ಮಾತುಕತೆ ನಡೆಸಿದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುವರ್ಣಸೌಧ ಕಚೇರಿಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಯೋಜನೆ ಕುರಿತು ಚರ್ಚಿಸಿದರು. ಈ ವೇಳೆ ಯತ್ನಾಳ್ ಅವರನ್ನು ಪ್ರೀತಿಯಿಂದಲೇ ಬರಮಾಡಿಕೊಂಡ ಜಮೀರ್, ಕಾಫಿ ಕೊಟ್ಟು ಉಪಚರಿಸಿದರು.   …

Read More »

ಸದನದಲ್ಲಿ ಪರಸ್ಪರ ನಮಸ್ಕರಿಸಿದ ವಿಜಯೇಂದ್ರ-ಯತ್ನಾಳ್

ಬೆಳಗಾವಿ: ಬಹಿರಂಗವಾಗಿ ಪರಸ್ಪರ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖಾಮುಖಿಯಾಗಿ ಕುಶಲೋಪರಿ ವಿಚಾರಿಸಿದ ಪ್ರಸಂಗ ಇಂದು ಸದನದಲ್ಲಿ ನಡೆಯಿತು. ಭಿನ್ನಮತದ ಹಿನ್ನೆಲೆ ಪರಸ್ಪರ ವೈಮನಸ್ಸು ಹೊಂದಿದ್ದವರು ಸೋಮವಾರ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಜಯೇಂದ್ರ ಪರಸ್ಪರ ನಮಸ್ಕರಿಸಿ, ಮಾತನಾಡಿಸುವ ಮೂಲಕ ಗಮನ ಸೆಳೆದರು. ನಿನ್ನೆ ಬೆಳಗ್ಗೆ ಸದನದಲ್ಲಿ ಈ ಅಪರೂಪದ ಕ್ಷಣ ಕಂಡುಬಂದಿತ್ತು. ಸೋಮವಾರ ಸದನದಲ್ಲಿ ತಾವೇ ಖುದ್ದಾಗಿ ಯತ್ನಾಳ್ …

Read More »

ನಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ” ಎಂದು ಶಾಸಕ ಬಿಜೆಪಿ ರಮೇಶ್ ಜಾರಕಿಹೊಳಿ

ಬೆಳಗಾವಿ: “ನಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ” ಎಂದು ಶಾಸಕ ಬಿಜೆಪಿ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಸುವರ್ಣ ಸೌಧದಲ್ಲಿಂದು ಮಾತನಾಡಿದ ಅವರು, ದೆಹಲಿ ಹೈಕಮಾಂಡ್ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, “ಮೊದಲ ಹಂತದ ಹೋರಾಟದ ವರದಿ ನೀಡಿದ್ದೇವೆ. ಜೆಪಿಸಿ ಸಮಿತಿಗೂ ವರದಿ ನೀಡಿದ್ದೇವೆ. ಯತ್ನಾಳ್​ ಶೋಕಾಸ್ ನೋಟಿಸ್​ಗೆ ಉತ್ತರ ಕೊಟ್ಟಿದ್ದಾರೆ. ಇದನ್ನು ಬಿಟ್ಟು ಬೇರೆ ಏನಿಲ್ಲ” ಎಂದರು. ವಿಜಯೇಂದ್ರ ಪರ ಮಾಜಿ ಶಾಸಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, “ಆ …

Read More »

ವೇಶ್ಯೆವಾಟಿಕೆ ನಡೆಸುತ್ತಿದ್ದ ಇಬ್ಬರನ್ನೂ ಬಂಧಿಸಿದ ಪೊಲೀಸ್

ಮೈಸೂರು : ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆಯ (Hebbalu Police Station) ಬಳಿ ಬಸವನಗುಡಿ ವೃತ್ತದ ಮನೆಯೊಂದರಲ್ಲಿ ವೇಶ್ಯೆವಾಟಿಕೆ ನಡೆಸುತ್ತಿದ್ದ ಇಬ್ಬರನ್ನೂ ಬಂಧಿಸಿದ ಪೊಲೀಸ್ ಐವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಮನೆಯಲ್ಲಿ ಮೈಸೂರು, ಹಾಸನ, ಕೆ.ಆರ್ ನಗರ (Mysore, Hassan, K. R. Nagar) ಮೂಲದ ಐವರು ಮಹಿಳೆಯರಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಕುರಿತು ಒಡನಾಡಿ ಸಂಸ್ಥೆ ಮುಖ್ಯಸ್ಥ (Head of the organization) ಸ್ಟ್ಯಾನ್ಲಿ ಪರುಶು …

Read More »