ಗೋಕಾಕ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ ನಗರದ ವಾರ್ಡ್ ಗಳಲ್ಲಿ ಸದಸ್ಯರೊಂದಿಗೆ ಕೊರೊನಾ ವಾರಿಯರ್ಸ್ ಗಳು ಜಾಗೃತಿ ಮೂಡಿಸಿದರು. ನಗರಸಭೆ ಕಂದಾಯ ಅಧಿಕಾರಿ ಎಸ್. ಕೆ. ಹಳ್ಳೂರು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬ್ಬಂದಿಗಳು ನಗರದ ಪ್ರತಿಯೊಂದು ವಾರ್ಡ್ ಗೆ ಸದಸ್ಯರೊಂದಿಗೆ ಭೇಟಿ ನೀಡಿ ಜನರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿ ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಜತೆಗೆ ಕಡ್ಡಾಯವಾಗಿ …
Read More »ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೋಂ ಕ್ವಾರಂಟೈನ್
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೋಂ ಕ್ವಾರಂಟೈನ್ ಆಗಿದ್ದಾರೆ. ಕಾರು ಚಾಲಕನಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಭಾಸ್ಕರ್ ರಾವ್ ಕಾರು ಚಾಲಕ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಇಂದು ಪಾಸಿಟಿವ್ ಎಂದು ಗೊತ್ತಾದ ಬಳಿಕ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಾಸ್ಕರ್ ರಾವ್, ಚಾಲಕನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 4 ದಿನಗಳ ಕಾಲ …
Read More »ವೃದ್ಧೆ ತಾಯಿಗೆ ಮಗ ಹಾಗೂ ಮೊಮ್ಮಗ ಸೇರಿ ಹಿಗ್ಗಾಮುಗ್ಗಾ ಥಳಿಸಿ ಎತ್ತಿ ಬಿಸಾಡಿದ ಮಗ
ಮಂಗಳೂರು: ವೃದ್ಧೆ ತಾಯಿಗೆ ಮಗ ಹಾಗೂ ಮೊಮ್ಮಗ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸವಣಾಲು ಎಂಬಲ್ಲಿ ನಡೆದಿದೆ. ಸವಣಾಲು ಹಲಸಿನಕಟ್ಟೆ ಎಂಬಲ್ಲಿನ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿಗೆ ಅವರ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪೂರ್ತಿ ಕುಡಿದು ಮಲಗಿದಲ್ಲೇ ಮಲಗಿರುವ ಅಪ್ಪಿ ಶೆಟ್ಟಿಯವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಎತ್ತಿ ಬಿಸಾಡಿದ್ದಾರೆ.ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನೋರ್ವ ಮೊಮ್ಮಗ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. …
Read More »ನಿರ್ಲಕ್ಷಿಸಿದರೆ ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ : ರಾಹುಲ್ ಎಚ್ಚರಿಕೆ
ನವದೆಹಲಿ,ಜು.17- ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲಿ ಆಗಷ್ಟ್ 10 ರ ವೇಳೆಗೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಎಡವಿರುವುದರಿಂದ ಈಗಾಗಲೆ ದೇಶದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ಧೋರಣೆ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷಕ್ಕೂ ಹೆಚ್ಚು ಜನರಿಗೆ …
Read More »ಇಂದು ಸಂಜೆಯಿಂದ ಸೋಮವಾರದ ಬೆಳಗ್ಗೆವರೆಗೆ ಕೊಡಗು ಸಂಪೂರ್ಣ ಲಾಕ್‍ಡೌನ್
ಮಡಿಕೇರಿ: ಇಂದು ಸಂಜೆಯಿಂದ ಸೋಮವಾರದ ಬೆಳಗ್ಗೆವರೆಗೆ ಕೊಡಗಿನಲ್ಲಿ ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವುದಾಗಿ ಕೊಡಗಿನ ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ. ಜಿಲ್ಲೆಗೆ ವಾರಾಂತ್ಯದಲ್ಲಿ ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಜನರು ಬರುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಸಂಜೆಯಿಂದ ಸೋಮವಾರದವರೆಗೆ ಜಿಲ್ಲಾ ಮಟ್ಟದಲ್ಲಿ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ. ತರಕಾರಿ, ಮೆಡಿಕಲ್ ಶಾಪ್‍ಗಳು, ಪೆಟ್ರೋಲ್ ಬಂಕ್‍ಗಳು ಸೇರಿದಂತೆ ಕಾರ್ಮಿಕರ ಅನುಕೂಲ …
Read More »ನಮಾಜ್‍ಗೆ ಅವಕಾಶ ಕೇಳಿದ ಮುಸ್ಲಿಂ ಮುಖಂಡರ ವಿರುದ್ಧ ಉಮೇಶ್ ಕತ್ತಿ ಗರಂ………..
ಚಿಕ್ಕೋಡಿ(ಬೆಳಗಾವಿ): ನಮಾಜ್ ಮಾಡಲು ಅವಕಾಶ ಕೇಳಿದ ಮುಸ್ಲಿಂ ಮುಖಂಡರ ಮೇಲೆ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಗರಂ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹುಕ್ಕೇರಿ ಪಟ್ಟಣದಲ್ಲಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತುರ್ತು ಸಭೆ ನಡೆಸಿದ್ದಾರೆ. ಈ ವೇಳೆ ಅಭಿಪ್ರಾಯ ಸಂಗ್ರಹಿಸಿ ಒಂದು ವಾರ ಹುಕ್ಕೇರಿ ತಾಲೂಕು ಲಾಕ್‍ಡೌನ್ ಮಾಡಲು ತೀರ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ …
Read More »ಪಾಸಿಟಿವ್ ಬಂದ ಕುಟುಂಬದವ್ರ ಜೊತೆ ಕ್ವಾರಂಟೈನ್‍ಗೆ ಪಂಚಾಯತ್ ಸದಸ್ಯ ವಿರೋಧ
ಬಾಗಲಕೋಟೆ: ಪಾಸಿಟಿವ್ ಬಂದ ಮನೆಯವರು ಹಾಗೂ ಪಕ್ಕದ ಮನೆಯವರನ್ನು ಒಂದೇ ಕಡೆ ಕ್ವಾರಂಟೈನ್ ಮಾಡಿರೋದಕ್ಕೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಇತರೆ ಎರಡು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಈ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿರುವ ಕ್ವಾರಂಟೈನ್ ಸೆಂಟರ್ ಆವರಣದಲ್ಲಿ ನಡೆದಿದೆ. ಕ್ವಾರಂಟೈನ್ ಸೆಂಟರ್ ಆವರಣದಲ್ಲಿ ಗುಡಿಸಲು ಹಾಕಿಕೊಂಡು ಕುಳಿತ ಕುಳಗೇರಿ ಕ್ರಾಸ್ ಗ್ರಾಪಂ ಸದಸ್ಯ ಹನುಮಂತ ನರಗುಂದ ಪ್ರಸನ್ನ ಹಾಗೂ ಮಂಜುನಾಥ …
Read More »ಗೋಕಾಕ ತಾಲೂಕಿನ ಜನತೆಗೆ ಬಿಗ್ ಶಾಕ್……
ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಗೆ ವೃದ್ಧ ಬಲಿ……….
ಬೆಳಗಾವಿ: ಮಹಾಮಾರಿ ಕೊರೊನಾನಿಂದಾಗಿ ಬೆಡ್, ಅಂಬುಲೆನ್ಸ್, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಅನೇಕರು ಸಾವನ್ನಪ್ಪುತ್ತಿರುವ ಅಮಾನವೀಯ ಘಟನೆ ಪ್ರತಿದಿನ ಬೆಳಕಿಗೆ ಬರುತ್ತಿವೆ. ಇದೀಗ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಗೆ ವೃದ್ಧ ಬಲಿಯಾಗಿದ್ದಾರೆ. ಕೋವಿಡ್ ಕೇರ್ ಸೆಂಟರಿನಲ್ಲಿ ಕೊರೊನಾ ಸೋಂಕಿತ ವೃದ್ಧ ಬೆತ್ತಲೆಯಾಗಿ ನೆಲದ ಮೇಲೆ ಒದ್ದಾಡಿ ಸಾವನ್ನಪ್ಪಿದ್ದಾರೆ. ಜಿಲ್ಲೆ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದ 65 ವರ್ಷದ ಸೋಂಕಿತ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ವೃದ್ಧ …
Read More »3.5 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸಿ ಗಮನಸೆಳೆದ ಉದ್ಯಮಿ!
ಭುವನೇಶ್ವರ: ಕೊರೊನಾ ಮಹಾಮಾರಿ ದೇಶವನ್ನು ಒಕ್ಕರಿಸಿದ ಬಳಿಕ ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಗೆ ತುಂಬಾನೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಮಾಸ್ಕ್ ಇಲ್ಲದೆ ಹೊರಗಡೆ ಓಡಾಡುವಂತಿಲ್ಲ. ಕೆಲವೆಡೆ ಪೊಲೀಸರು ಆಸ್ಕ್ ಧರಿಸಿದ್ದಕ್ಕೆ ದಂಡ ವಿಧಿಸಿರುವ ಪ್ರಸಂಗಗಳೂ ಇವೆ. ಈ ಮಧ್ಯೆ ಮಾಸ್ಕ್ ನಲ್ಲೂ ಫ್ಯಾಶನ್ ಕಂಡುಕೊಂಡಿದ್ದು, ಉದ್ಯಮಿಗಳು ಚಿನ್ನದ ಮಾಸ್ಕ್ ಮೊರೆ ಹೋಗಿದ್ದಾರೆ. ಹೌದು. ಪುಣೆ ವ್ಯಕ್ತಿಯ ಬಳಿಕ ಇದೀಗ ಒಡಿಶಾದ ಕತಕ್ ಮೂಲದ ಉದ್ಯಮಿ ಅಲೋಕ್ ಮೊಹಂತಿ 3.5 …
Read More »