ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದುವರೆಗೂ ಸಾಧಾರಣವಾಗಿ ಬರುತ್ತಿದ್ದ ಮಳೆ ಇಂದು ಮಧ್ಯಾಹ್ನದ ಬಳಿಕ ಧಾರಾಕಾರವಾಗಿ ಸುರಿಯಲಾರಂಭಿಸಿದೆ. ತಲಕಾವೇರಿ, ಭಾಗಮಂಡಲ, ಬ್ರಹ್ಮಗಿರಿ ತಪ್ಪಲು, ನಾಪೋಕ್ಲು, ಮಡಿಕೇರಿ ಮತ್ತು ಮಾದಾಪುರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮತ್ತೊಂದೆಡೆ ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.ಸೋಮವಾರ 64 ಮಿಲಿ ಮೀಟರ್‌ನಿಂದ 115 ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಮಂಗಳವಾರ ಅದರ …
Read More »ಗುಡ್ ನ್ಯೂಸ್ : ಆ.10ರೊಳಗೆ ಸಾರ್ವಜನಿಕರಿಗೆ ಸಿಗಲಿದೆ ರಷ್ಯಾದ ಕೊರೋನಾ ಲಸಿಕೆ..!
ಮಾಸ್ಕೋ, – ಕೋವಿಡ್ ಲಸಿಕೆಯನ್ನು ಆಗಸ್ಟ್ 10ರೊಳಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ರಷ್ಯಾ ಮುಂದಾಗಿದೆ.ವಿಶ್ವಾದ್ಯಂತ ಕಾಡುತ್ತಿರುವ ಕೋವಿಡ್‍ಅನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಪರಿಶ್ರಮ ಪಟ್ಟು ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ರಷ್ಯಾ ವಿಜ್ಞಾನಿಗಳು ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ. ಈಗಾಗಲೇ ಸೇನಾ ಯೋಧರು ಹಾಗೂ ಸಾರ್ವಜನಿಕರ ಮೇಲೆ ಈ ಲಸಿಕೆ ಪ್ರಯೋಗ ನಡೆಸಿ ಅದು ಫಲ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳೊಳಗೆ ಲಸಿಕೆಯನ್ನು ಬಿಡುಗಡೆ ಮಾಡಲು ರಷ್ಯಾ ಅಧ್ಯಕ್ಷ ಬ್ಲಾಡಿಮಿರ್ …
Read More »ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಕೊರೋನಾ ಸೋಂಕು ಪತ್ತೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಕೊರೋನಾ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದು, ನನಗೆ ಕೊರೋನಾ ಪಾಸಿಟಿವ್ ಬಂದಿದೆ. ರೋಗ ಲಕ್ಷಣ ಇಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲವೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದೂ ಅವರು ಕೋರಿದ್ದಾರೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಸೆಲ್ಫ್ ಕ್ವಾರಂಟೈನ್ ಗೆ ಒಳಗಾಗಿದ್ದರು. ಆಗ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು. …
Read More »ಬೇಕಾಬಿಟ್ಟಿಯಾಗಿ ಪಿಪಿಇ ಕಿಟ್ ಎಸೆದಿದ್ದ ಕೊರೊನಾ ಸೋಂಕಿತನ ವಿರುದ್ಧ ಪ್ರಕರಣ
ನವದೆಹಲಿ: ಬೇಕಾಬಿಟ್ಟಿಯಾಗಿ ಪಿಪಿಇ ಕಿಟ್ ಎಸೆದಿದ್ದ ಕೊರೊನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪಾಠ ಕಲಿಸಲಾಗಿದೆ. ದಕ್ಷಿಣ ದೆಹಲಿಯ ಸಿ.ಆರ್.ಪಾರ್ಕ್ ಬಳಿ ಘಟನೆ ನಡೆದಿದ್ದು, ಸೋಂಕಿತನ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ಸೋಂಕಿತ ಗುಣಮುಖವಾದ ತಕ್ಷಣ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್ ಸಂಗೀತ ಸಂಯೋಜಕ ಶಾಂತನು ಮೊಯಿತ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೋ ಆಧರಿಸಿ ಪೊಲೀಸರು ಎಚ್ಚೆತ್ತುಕೊಂಡು …
Read More »ಅಂಕಲಗಿ ಗ್ರಾಮದ ೧೪ ವರ್ಷದ ಯುವಕನಿಗೆ ಹಾಗೂ ಘಟಪ್ರಭಾದ ೨೫ ವರ್ಷದ ಯುವತಿಗೆ ಸೋಂಕು ಪತ್ತೆ
ಗೋಕಾಕ: ಕಳೆದ ಕೆಲವು ದಿನಗಳಿಂದ ತನ್ನ ಆರ್ಭಟ ನಡೆಸಿದ್ದ ಕರೋನಾ ಮಹಾಮಾರಿಯು ಇಂದು ಸ್ವಲ್ಪ ತಗ್ಗಿದೆ. ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಕುಸಿತ ಖಂಡಿದ್ದು, ತಾಲೂಕಿನಲ್ಲಿ ೨ ಸೋಂಕು ಮಾತ್ರ ದೃಢಪಟ್ಟಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಹೇಳಿದರು. {LAXMINEWS}ಯೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲಿ ಅಂಕಲಗಿ ಗ್ರಾಮದ ೧೪ ವರ್ಷದ ಯುವಕನಿಗೆ ಹಾಗೂ ಘಟಪ್ರಭಾದ ೨೫ ವರ್ಷದ ಯುವತಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರಿಗೆ ಕೋವಿಡ್ …
Read More »ಪ್ಲಾಸ್ಮಾ ದಾನ ಮಾಡುತ್ತಿರುವ ಪೊಲೀಸರಿಗೆ ಪ್ರವೀಣ್ ಸೂದ್ ಕೃತಜ್ಞತೆ
ಬೆಂಗಳೂರು, ಆ.2- ಕೊರೊನಾ ಸೋಂಕಿನಿಂದ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ ಮತ್ತು ಅವರು ಪ್ಲಾಸ್ಮಾ ಥೆರಪಿಗೆ ಸಹಕರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಸಮಾಜದ ಜವಾಬ್ದಾರಿ ಅರಿತು ಇತರರಿಗೆ ಮಾದರಿಯಾಗಿ ಪ್ಲಾಸ್ಮಾ ಚಿಕಿತ್ಸೆಯಿಂದ ಇತರರು ಗುಣಮುಖರಾಗಲಿ ಎಂಬ ಸದುದ್ದೇಶದಿಂದ ರಕ್ತದಾನ ಮಾಡಿ ಮಾನವೀಯ ಗುಣಗಳನ್ನು ತೋರುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಟ್ವಿಟ್ಟರ್‍ನಲ್ಲಿ ಸಂತಸ ಹಂಚಿಕೊಂಡಿರುವ ಅವರು, ಕೋವಿಡ್-19 ಸೋಂಕು …
Read More »ಗಡಿ ಕಾಯೋ ಯೋಧರಿಗಾಗಿ ಕುಂದಾನಗರಿಯಲ್ಲಿ ಸಜ್ಜಾಯ್ತು Eco-friendly ರಾಖಿ!
ಬೆಳಗಾವಿ: ದೇಶದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ನಮ್ಮ ವೀರ ಯೋಧರಿಗೆ ಸೋದರತ್ವ ಸಾರುವ ರಕ್ಷಾಬಂಧನದ ಪ್ರಯುಕ್ತವಾಗಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ರಾಖಿ ರವಾನಿಸಿದ್ದಾರೆ. ಅದೂ ಕೂಡ ಪರಿಸರ ಸ್ನೇಹಿ ರಾಖಿ. ಹೌದು, ಆಗಸ್ಟ್ 3 ರಂದು ರಕ್ಷಾಬಂಧನ ಹಬ್ಬವಿದ್ದು, ಇದೀಗ ದೇಶದ ಗಡಿಗೆ ಸ್ಪೀಡ್ ಫೋಸ್ಟ್ ಮೂಲಕ ರಾಖಿ ಹಾಗೂ ಗ್ರೀಟಿಂಗ್ ರವಾನಿಸಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಲೀಡರ್ಸ್ ಸೆಲ್ನಲ್ಲಿರುವ ನಗರದ ಹಲವು ಕಾಲೇಜು ವಿದ್ಯಾರ್ಥಿನಿಯರು ರಾಖಿ ಹಬ್ಬ …
Read More »ಸೋಂಕಿತರಿಗೆ ಹೆಚ್ಚುವರಿ 1939 ಹಾಸಿಗೆ
ಹಾಸನ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೆಚ್ಚುವರಿಯಾಗಿ ಜಿಲ್ಲಾದಾದ್ಯಂತ ವಸತಿ ನಿಲಯಗಳ 1939 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯನ್ನೇ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿರುವುದರಿಂದ 400 ಹಾಸಿಗೆಗಳ ಸೌಲಭ್ಯವಿದೆ. ಅದರಲ್ಲಿ 50 ಹಾಸಿಗೆಗಳನ್ನು ಐಸಿಯುಗೆ ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಏಳು ಖಾಸಗಿ ಆಸ್ಪತ್ರೆಗಳಿಂದ 280 ಹಾಸಿಗೆ ಲಭ್ಯ ಇದೆ. ಈಗಾಗಲೇ ಹಲವು ಆಸ್ಪತ್ರೆಗಳು ಸೋಂಕಿತರಿಗೆ ಚಿಕಿತ್ಸೆ ನೀಡಲು ಆರಂಭಿಸಿವೆ. ಕಳೆದ ಇಪ್ಪತ್ತು ದಿನಗಳಿಂದ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಕಾರಣ ಪರಿಸ್ಥಿತಿ ನಿಭಾಯಿಸಲು …
Read More »IPL ಆಡಳಿತ ಮಂಡಳಿ ಸಭೆ: ವೇಳಾಪಟ್ಟಿ, ಸರಕಾರದ ಒಪ್ಪಿಗೆ ಸಾಧ್ಯತೆ
ಮುಂಬಯಿ: ಐಪಿಎಲ್ ಆಡಳಿತ ಮಂಡಳಿಯ ಸಭೆ ರವಿವಾರ ನಡೆಯಲಿದೆ. ಸೆ. 19ರಿಂದ ನ. 8ರವರೆಗೆ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿರುವ 13ನೇ ಆವೃತ್ತಿ ಐಪಿಎಲ್ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವದ ಪೂರ್ವಭಾವಿ ಸಭೆ. ಇಲ್ಲಿ 8 ಫ್ರಾಂಚೈಸಿಗಳು ಕಾತರದಿಂದ ಕಾಯುತ್ತಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ. ಮುಖ್ಯವಾಗಿ ಚೀನದ ಸ್ಪಾನ್ಸರ್‌ಶಿಪ್ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ. ಹಾಗೆಯೇ ಸರಕಾರದ ಒಪ್ಪಿಗೆ ಪಡೆಯಲು ಮುಂದಡಿ ಇಡಬೇಕಿದೆ. ವೇಳಾಪಟ್ಟಿ ಕೂಟದ ದಿನಾಂಕ ಈಗಾಗಲೇ …
Read More »ಸಚಿವೆ ಕಮಲ ರಾಣಿ ವರುಣ್ ನಿಧನ: ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆ ಭೇಟಿ ರದ್ದು
ಲಖನೌ: ಸಚಿವೆ ಕಮಲ ರಾಣಿ ವರುಣ್ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಭಾನುವಾರ ಅಯೋಧ್ಯೆಗೆ ಭೇಟಿ ನೀಡಬೇಕಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲನೆ ನಡೆಸುವ ಸಲುವಾಗಿ ಇಂದು ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಗೆ ನೀಡಿಲಿದ್ದರು. ಆದರೆ, ಕೊರೋನಾದಿಂದಾಗಿ ಕಮಲ ರಾಣಿ ವರಣ್ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಭೇಟಿ ರದ್ದುಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. ಈ ನಡುವೆ ಕಮಲ ರಾಣಿಯವರು ನಿಧನ …
Read More »