Breaking News

ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ………..

ಮಂಗಳೂರು: ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು ಎಂಬಲ್ಲಿ ನಡೆದಿದೆ. ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ನಿಶಾಂತ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಬಂಟ್ವಾಳ ಪಾಣೆ ಮಂಗಳೂರಿನ ನೇತ್ರಾವತಿ ನದಿಗೆ ಹಾರಿ ನಿಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ನದಿಗೆ ಹಾರಿದಾಕ್ಷಣ ರಕ್ಷಣೆಗೆ ರಂಜಾನ್ ಹಬ್ಬದ ಸಡಗರದಲ್ಲಿದ್ದ ಮುಸ್ಲಿಂ ಯುವಕರು, ನದಿಗೆ ಜಿಗಿದು ಆತನನ್ನು ಮೇಲೆ ತಂದು ಪ್ರಥಮ ಚಿಕಿತ್ಸೆ ನೀಡಿ …

Read More »

ಮೊಬೈಲ್‍ನಿಂದ ವಿಟ್ಲ ಪೇದೆಗೆ ಕೊರೊನಾ ಸೋಂಕು………….

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಪೇದೆಗೆ ಕೊರೊನಾ ಸೋಂಕು ಬಂದಿದೆ. ಮೇ 14ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಸೋಂಕಿತ ಠಾಣೆಗೆ ಹೋಗಿದ್ದ. ಆತನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು 42 ವರ್ಷದ ಹೆಡ್ ಕಾನ್‍ಸ್ಟೇಬಲ್ ಅವರಿಗೆ ಪಾಸಿಟಿವ್ ಬಂದಿದೆ. ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್ ನಲ್ಲಿದ್ದು ಮೇ 18 …

Read More »

ಹಸಿದವರಿಗೆ ನೀಡುವ ಆಹಾರವು ದೇವರಿಗೆ ಅರ್ಪಿಸಿದ ನೈವೇದ್ಯ: ನಿಡಸೋಸಿ ಮಠದ ಜಗದ್ಗುರು

ಬೆಳಗಾವಿ: ಹಸಿದ ಹೊಟ್ಟೆಗಳನ್ನುತುಂಬಿಸುವ ಸೇವೆಯಲ್ಲಿ ತೊಡಗುವದುಅತ್ಯಂತ ಶ್ರೇಷ್ಟವಾದ ಕಾಯಕವಾಗಿದೆ. ಹಸಿವನ್ನು ನೀಗಿಸುವದು ಶಿವನಿಗೆ ಅರ್ಪಿಸಿದ ನೈವೇದ್ಯವಾಗಿದೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಜಗದ್ಗುರುಗಳಾದ ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ. ನಿನ್ನೆ ನಿಡಸೋಸಿ ಮಠದ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಆಯೋಜಿಸಿದ್ದ ಹತ್ತು ಹಳ್ಳಿಗಳ 25 ಜಾನಪದ ಕಲಾವಿದರಿಗೆ ಧಾನ್ಯದ ಕಿಟ್ ಗಳನ್ನು ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ …

Read More »

ಹೊರಗಿನಿಂದ ರಾಜ್ಯಕ್ಕೆ ಬಂದವರಿಂದಲೇ ಗಂಡಾಂತರ ಎದುರಾಗಿದೆ : ಬೊಮ್ಮಾಯಿ

ಬೆಂಗಳೂರು, ಮೇ 24- ಹೊರಗಿನಿಂದ ರಾಜ್ಯಕ್ಕೆ ಬಂದವರಿಂದಲೇ ಗಂಡಾಂತರ ಎದುರಾಗಿದೆ. ಇದರಿಂದಾಗಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳದಿಂದ ಹಲವರು ರಾಜ್ಯಕ್ಕೆ ಆಗಮಿಸಿದಾಗ ಅವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇದು ನಮಗೂ ಕೂಡ ಆತಂಕ ತರಿಸಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಕಠಿಣ ನಿಲುವು ತಳೆಯುವುದು ಅನಿವಾರ್ಯವಾಗಿದ್ದು, ಅಕಾರಿಗಳಿಗೂ ಕೂಡ ಕೆಲವು …

Read More »

ಕರ್ನಾಟಕದಲ್ಲಿ ‘ಸಂಡೆ ಲಾಕ್‌ಡೌನ್‌’ ಹೇಗಿತ್ತು..? ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಅಪ್ಡೇಟ್ಸ್

ಬೆಂಗಳೂರು : ದಿನದಿಂದ ದಿನಕ್ಕೆ ಮಹಾ ಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಧಿಸಿದ್ದ ಲಾಕ್ ಡೌನ್ ಗೆ ರಾಜ್ಯದೆಲ್ಲೆಡೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ಯವಾಗಿದೆ. ಇಂದು ಬೆಳಗಿನಿಂದಲೇ ಸಾರ್ವಜನಿಕ ಸ್ಥಳಗಳಲ್ಲಿ ಜನಸಂಚಾರವಿಲ್ಲದಂತಾಗಿದ್ದು, ಎಲ್ಲೆಡೆ ಅಘೋಷಿತ ಬಂದ್ ವಾತವರಣ ನಿರ್ಮಾಣವಾಗಿದೆ. ಬೆಳಗ್ಗೆನಿಂದಲೇ ಜನರು ಸ್ಬಯಂಪ್ರೇರಿತರಾಗಿ ತಮಗೆ ತಾವೇ ನಿರ್ಬಂಧ ಹಾಕಿಕೊಂಡು ಯಾರೊಬ್ಬರೂ ಮನೆಯಿಂದ ಆಚೆ ಬಾರದೆ ಕೊರೋನಾ ಸೋಂಕು ತಡೆಗಟ್ಟಲು ಸರ್ಕಾರದ ಜೊತೆ ನಾವು ಇದ್ದೇವೆ …

Read More »

ಕೊರೋನಾ ಪೀಡಿತ ರಾಷ್ಟ್ರಗಳ ಪೈಕಿ ವಿಶ್ವದಲ್ಲಿ 10ನೇ ಸ್ಥಾನಕ್ಕೇರಿದ ಭಾರತ..!

ನವದೆಹಲಿ/ಮುಂಬೈ, ಮೇ 24-ಭಾರತದಲ್ಲಿ ವಿನಾಶಕಾರಿ ಕೊರೊನಾ ವೈರಸ್ ಮತ್ತಷ್ಟು ತೀವ್ರ ಸ್ವರೂಪದಲ್ಲಿ ಸೋಟಗೊಂಡಿದೆ. ಸಾಂಕ್ರಾಮಿಕ ರೋಗದ ಪಾಸಿಟಿವ್ ಪ್ರಕರಣ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಅಲ್ಲದೇ ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಮತ್ತು ಸಾವುಗಳು ಸಂಭವಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 10ನೇ ಸ್ಥಾನಕ್ಕೇರಿರುವುದು ಚಿಂತಾಜನಕ ಸಂಗತಿ. ನಿನ್ನೆ ಒಂದೇ ದಿನ ಅಂದರೆ 24 ತಾಸುಗಳ ಅವಯಲ್ಲಿ 6,767 (ನಿನ್ನೆ 6,654, ಮೊನ್ನೆ 6,088 ಕೇಸ್) ಜನರಿಗೆ ಸೋಂಕು ದೃಢಪಟ್ಟಿದ್ದು. ಇದು ಸಾಂಕ್ರಾಮಿಕ …

Read More »

ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ವಿಮಾನ ಹಾರಾಟ ನಾಳೆಯಿಂದ ಆರಂಭ

ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ವಿಮಾನ ಹಾರಾಟ ನಾಳೆಯಿಂದ ಆರಂಭವಾಗಲಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಸೋಮವಾರ ವಿಮಾನ ಹಾರಾಟ ಶುರುವಾಗಲಿದೆ. ಬೆಂಗಳೂರು ಮತ್ತು ಅಹ್ಮದಾಬಾದ್ ಗೆ ಸ್ಟಾರ್ ಏರ್ ವೇಸ್, ಹೈದರಾಬಾದ್ ಮತ್ತು ಮುಂಬೈಗೆ ಸ್ಪೈಸ್ ಜೆಟ್, ಪುಣೆಗೆ ಏರ್ ಇಂಡಿಯಾ, ಮೈಸೂರು ಮತ್ತು ಹೈದರಾಬಾದ್ ಗೆ ಟ್ರ್ಯೂ ಜೆಟ್ ಹಾರಾಟ ನಡೆಸಲಿವೆ. 26ರಿಂದ ಇಂಡಿಗೋ ಕೂಡ ಹೈದರಾಬಾದ್ ಹಾರಾಟ ಆರಂಭಿಸಲಿದೆ. ಒಟ್ಟಾರೆ 13 ವಿಮಾನಗಳ ಆಗಮನ ಮತ್ತು …

Read More »

ಕೊರೋನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರಿಗೆ ಪುಡ್ ಕಿಟ್, ಸ್ಯಾನಿಟೇಜರ್, ಕೊಡೆ (ಛತ್ರಿ) ವಿತರಣೆ ಮಾಡಿದರು.

ಮಂಡ್ಯ.ಜೆ ಡಿ ಎಸ್ ಪಕ್ಷದ ಯುವ ನಾಯಕರಾದ ಬಿ.ಎಂ ಕಿರಣ್ ರವರು ಚೌಡೇನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ‌ ಕೊರೋನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರಿಗೆ ಪುಡ್ ಕಿಟ್, ಸ್ಯಾನಿಟೇಜರ್, ಕೊಡೆ (ಛತ್ರಿ) ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್ ಪುಟ್ಟಸ್ವಾಮಿ ಗೌಡ್ರು ಮಾತನಾಡಿ ಸಮಾಜ ಸೇವಕ ಬಿ.ಎಂ ಕಿರಣ್ ರವರು ತಮ್ಮ ಸ್ವಂತ ಹಣದಲ್ಲಿ ಸಾವಿರಾರು ಜನರಿಗೆ ಆಸರೆಯಾಗಿದ್ದಾರೆ ಕಳೆದ ಎರಡು ತಿಂಗಳಿದ ಆರೋಗ್ಯ ಮೇಳ ಸೇರಿದಂತೆ …

Read More »

ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ ಸ್ಟೆಬಲ್ ಕುಡಿದ ಅಮಲಿನಲ್ಲಿ ತಹಸಿಲ್ದಾರ್ ಖಾಸಗಿ ಕಾರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾನೆ.

    ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಘಟನೆ ನಡೆದಿದೆ. ಕಾಗವಾಡ ತಹಶಿಲ್ದಾರರ ಪ್ರಮೀಳಾ ದೇಶಪಾಂಡೆ ಹಾಗೂ ಕಾರು ಚಾಲನೆ ಮಾಡುತ್ತಿದ್ದ ಅವರ ಪತಿ  ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕೋಡಿಯಿಂದ ತಮ್ಮ ಖಾಸಗಿ ವಾಹನದಲ್ಲಿ ಕರ್ತವ್ಯಕ್ಕೆ ಕಾಗವಾಡಕ್ಕೆ ಹೋಗುವಾಗ ಚಿಕ್ಕೋಡಿ ತಾಲುಕಿನ ಮಾಂಜರಿ ಗ್ರಾಮದ ಬಳಿ ಪೊಲೀಸ್ ಕಾನ್ ಸ್ಟೆಬಲ್ ಬೈಕ್  ತಹಶಿಲ್ದಾರರ ವಾಹನಕ್ಕೆ ಡಿಕ್ಕಿ ಹೊಡೆದಿದೆ . ತಹಶಿಲ್ದಾರ ಪ್ರಮೀಳಾ ದೇಶಪಾಂಡೆ ಅವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಪೊಲೀಸ್ …

Read More »

ಇಂದು ಪತ್ತೆಯಾದ 97 ಮಂದಿ ಸೋಂಕಿತರ ವಿವರ ಇಲ್ಲಿದೆ.

ಬೆಂಗಳೂರು: ಇಂದು ರಾಜ್ಯದಲ್ಲಿ 97 ಮಂದಿಗೆ ಕೊರೊನಾ ದೃಢವಾಗಿದ್ದು, ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ. ಹಾಸನ ಮತ್ತು ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಇಂದು ಪತ್ತೆಯಾದ 97 ಮಂದಿ ಸೋಂಕಿತರ ವಿವರ ಇಲ್ಲಿದೆ. ಸೋಂಕಿತರ ವಿವರ: 1. ರೋಗಿ-1960: ಚಿಕ್ಕಬಳ್ಳಾಪುರದ 32 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ 2. ರೋಗಿ-1961: ಉಡುಪಿಯ 35 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ 3. ರೋಗಿ-1962: ದಾವಣಗೆರೆಯ 60 …

Read More »