Breaking News

ಕೊರೊನಾ ಅಲ್ಲ, ಇದು ಪ್ರೀತಿಯ ಸೋಂಕು- ವಿಭಿನ್ನ ಲಗ್ನ ಪತ್ರಿಕೆ .. ವೈರಲ್

ಶಿವಮೊಗ್ಗ: ಕೊರೊನಾ ಸೋಂಕಲ್ಲ, ಇದು ಪ್ರೀತಿಯ ಸೋಂಕು ಎಂದು ವರನೋರ್ವ ವಿಶೇಷವಾಗಿ ಲಗ್ನ ಪತ್ರಿಕೆಯೊಂದನ್ನು ಮುದ್ರಿಸಿದ್ದು, ಈ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯುವಕ ವಿನೋದ್ ಇದೇ ತಿಂಗಳ ಜೂ. 15ರಂದು ಚಂದನಾ ಅವರೊಂದಿಗೆ ವಿವಾಹವಾಗುತ್ತಿದ್ದಾರೆ. ಇವರ ವಿವಾಹಕ್ಕೆ ವರ ವಿನೋದ್ ವಿಭಿನ್ನವಾದ ಲಗ್ನ ಪತ್ರಿಕೆ ಮಾಡಿಸಿದ್ದು, ಇದರಲ್ಲಿ ನಿಶ್ಚಿತಾರ್ಥವನ್ನು ಲಾಕ್‍ಡೌನ್‍ಗೆ ಮತ್ತು ಮದುವೆಯನ್ನು ಸೀಲ್‍ಡೌನ್‍ಗೆ ಹೋಲಿಸಲಾಗಿದೆ. ಈ ಪತ್ರಿಕೆಯ …

Read More »

ಕೊರೊನಾ ಅಟ್ಟಹಾಸ- ವಿಶ್ವ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನಕ್ಕೆ……….

ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಭಾರತದಲ್ಲಿ ಇನ್ನು ಕೊರೊನಾ ಸ್ಫೋಟಗೊಂಡಿಲ್ಲ. ಲಾಕ್‍ಡೌನ್ ವಿನಾಯತಿ ಹಿನ್ನೆಲೆ ಮುಂದೆ ಈ ಸಾಧ್ಯತೆಗಳು ಹೆಚ್ಚು ಎನ್ನುತ್ತಿದೆ. ಈ ವಾದಗಳ ನಡುವೆ ಇಂದು ಭಾರತ ಮತ್ತೊಂದು ಕೆಟ್ಟ ದಾಖಲೆ ಬರೆಯುವತ್ತ ಹೆಜ್ಜೆ ಹಾಕಿದೆ.   ದೇಶದಲ್ಲಿ ಕೊರೊನಾ ಸೋಂಕಿನ ಬಳ್ಳಿ ವೇಗವಾಗಿ ಹಬ್ಬಲು ಶುರುವಾಗಿದೆ. ಲಾಕ್‍ಡೌನ್ ನಿಂದ ರಾಜ್ಯಗಳಿಗೆ ಸೀಮಿತವಾಗಿದ್ದ ಸೋಂಕು, ವಿನಾಯತಿ …

Read More »

ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ಮಂಡ್ಯ ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಆರ್.ವಾಸು ನೇಮಕ.

  ಮಂಡ್ಯ :ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಜನಪರ ಹೋರಾಟಗಾರ, ಸಂಘಟನಾ ಚತುರ. ಮಂಡ್ಯ ಅಕ್ಕಿಹೆಬ್ಬಾಳು ಆರ್.ವಾಸು ಅವರನ್ನು ನೇಮಕ ಮಾಡಿ ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ರಾಜರಾಜೇಂದ್ರ ಸಿಂಗ್ ಆದೇಶ ಹೊರಡಿಸಿದ್ದಾರೆ. ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ರಾಜರಾಜೇಂದ್ರಸಿಂಗ್ ಅವರು ನೀಡಿರುವ ನೇಮಕಾತಿ ಆದೇಶ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ನೀಡಿ ಮಾತನಾಡಿದ ವಾಸು ರಾಜ್ಯ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ …

Read More »

ಬಿಜೆಪಿ ಸರ್ಕಾರದ ಸಾಧನೆಗಳ ಕಿರುಹೊತ್ತಿಗೆ ಹಾಗೂ ಕರಪತ್ರಗಳನ್ನು ತಾಲ್ಲೂಕು ಬಿಜಿಪಿ ಅಧ್ಯಕ್ಷ ಪರಮೇಶ್ ಅರವಿಂದ್ ಕೆ.ಆರ್.ಪೇಟೆ ಪಟ್ಟಣದ ಮನೆಮನೆಗೆ ಹಾಗೂ ಸಾರ್ವಜನಿಕರಿಗೆ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಿದರು.

ಮಂಡ್ಯ :ವಿಶ್ವವೇ ಮೆಚ್ಚುವಂತೆ ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋಧಿ ಅವರ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳ ಕಿರುಹೊತ್ತಿಗೆ ಹಾಗೂ ಕರಪತ್ರಗಳನ್ನು ತಾಲ್ಲೂಕು ಬಿಜಿಪಿ ಅಧ್ಯಕ್ಷ ಪರಮೇಶ್ ಅರವಿಂದ್ ಕೆ.ಆರ್.ಪೇಟೆ ಪಟ್ಟಣದ ಮನೆಮನೆಗೆ ಹಾಗೂ ಸಾರ್ವಜನಿಕರಿಗೆ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಿದರು. ಮಂಡ್ಯ ಜಿಲ್ಲೆ ಅತ ಆಗಿರುವ 9, 10 ಹಾಗೂ 11ನೇ ವಾರ್ಡುಗಳಲ್ಲಿ ಕೇಂದ್ರ ಸರ್ಕಾರದ 1 ವರ್ಷದ ಸಂಪೂರ್ಣ ಪ್ರಗತಿಯ ಚಿತ್ರಣವನ್ನು ಒಳಗೊಂಡಿರುವ …

Read More »

ಮಹಾರಾಷ್ಟ್ರದಲ್ಲಿ ಮಳೆ ಆರಂಭ ; ಜೂನ್ ಮೊದಲ ವಾರದಲ್ಲಿಯೇ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ದಾಖಲು

ವಿಜಯಪುರ(ಜೂ. 06): ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರಕ್ಕೆ ನೀರಿನ ಒಳಹರಿವು ಆರಂಭವಾಗಿದೆ. ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಜೂನ್ ಮೊದಲ ವಾರದಲ್ಲಿ ನೀರಿನ ಒಳಹರಿವು ಆರಂಭವಾಗಿದ್ದು ಗಮನಾರ್ಹವಾಗಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ನಿನ್ನೆಯಿಂದಲೇ ನೀರಿನ ಒಳಹರಿವು ಆರಂಭವಾಗಿದೆ. ನಿನ್ನೆ 12,761 ಕ್ಯೂಸೆಕ್ಸ್ ನೀರಿನ ಒಳಹರಿವು …

Read More »

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ; ಏನೇ ಜವಾಬ್ದಾರಿ ಕೊಟ್ಟರೂ ಸ್ವೀಕರಿಸುತ್ತೇನೆ: ಮಾಜಿ ಬಿಜೆಪಿ ಸಂಸದ ವಿಜಯ್ ಸಂಕೇಶ್ವರ

ಹುಬ್ಬಳ್ಳಿ: ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಉದ್ಯಮಿ ಹಾಗೂ ‌ಮಾಜಿ ಸಂಸದ ವಿಜಯ ಸಂಕೇಶ್ವರ್ ಹೇಳಿದ್ದಾರೆ. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆಗೆ ಸ್ಪರ್ಧಿಸುವ ಕುರಿತು ನನ್ನ ಜೊತೆ ಯಾರೂ ಚರ್ಚಿಸಿಲ್ಲ ಎಂದಿದ್ದಾರೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಮುಖಂಡರನ್ನು ರಾಜ್ಯ ಸಭೆಗೆ ಕಳಿಸುವ ಚರ್ಚೆ ಹಾಗೂ ರಾಜ್ಯ ಸಭೆ ಪ್ರವೇಶಿಸಲು ನಡೆಯುತ್ತಿರುವ ಲಾಬಿಗಳ ಕುರಿತು ಪ್ರತಿಕ್ರಿಯಿಸಲು ವಿಜಯ ಸಂಕೇಶ್ವರ್ …

Read More »

ವೀಕೆಂಡ್ ಬೆನ್ನಲ್ಲೇ ನೆಲಮಂಗಲದಲ್ಲಿ ಫುಲ್ ಟ್ರಾಫಿಕ್…………..

ಬೆಂಗಳೂರು: ವೀಕೆಂಡ್ ಬೆನ್ನಲ್ಲೇ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ನವಯುಗ ಟೋಲ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟೋಲ್ ಮೂಲಕ ಸಾವಿರಾರು ವಾಹನಗಳು ಹೊರ ಜಿಲ್ಲೆಗಳಿಗೆ ಪಯಣ ಬೆಳೆಸುತ್ತಿದೆ. ಜೂನ್ 8 ರಿಂದ 5ನೇ ಹಂತದ ಲಾಕ್ ಡೌನ್ ಸಡಿಲಿಕೆ ಆಗಲಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳು ಓಪನ್ ಆಗಲಿದ್ದು, ಹೀಗಾಗಿ ಜನರು ಇಂದೇ ಹೊರಟ್ರಾ ಅನ್ನೋ ಅನುಮಾನ ಮೂಡಿದೆ. ಯಾಕೆಂದರೆ ಗುಂಪು …

Read More »

ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು…

ಬೆಳಗಾವಿ: ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಮನೆ ಮನೆಗೆ ತೆರಳಿ ಸಮೀಕ್ಷೆ ಕೈಗೊಂಡು ಉಸಿರಾಟದ ತೊಂದರೆ, ಜ್ವರ ಮತ್ತಿತರ ಸೋಂಕಿನ ಲಕ್ಷಣಗಳು ಇರುವ ಹಿರಿಯ ನಾಗರಿಕರನ್ನು ಗುರುತಿಸಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.   ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ …

Read More »

ರಾಜ್ಯದಲ್ಲಿ ಇಂದು ಮತ್ತೆ 378 ಮಂದಿಗೆ ಕೊರೊನಾ,-ಬೆಳಗಾವಿ-5……

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 378 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ವೇಳೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೀದರ್ ಮತ್ತು ವಿಜಯಪುರದಲ್ಲಿ  ಇಬ್ಬರು ಮಹಿಳೆಯರು ಸೋಂಕಿಗೆ ಬಲಿಯಾಗಿದ್ದಾರೆ. ಬೀದರ್ 55 ವರ್ಷ ಮಹಿಳೆ ಮತ್ತು ವಿಜಯಪುರ 82 ವರ್ಷ ಮಹಿಳೆಯರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ  ಮಾರಕ ಕೊರೊನಾ ಸೋಂಕಿಗೆ …

Read More »

ಮೈಸೂರು ಮೃಗಾಲಯ, ಬಂಡೀಪುರ ಸಫಾರಿಗೆ ಅನುಮತಿ…………..

ಮೈಸೂರು/ಚಾಮರಾಜನಗರ: ದೇವಸ್ಥಾನಗಳು ತೆರೆಯುತ್ತಿರುವ ಬೆನ್ನಲ್ಲೇ ಪ್ರವಾಸಿಗರಿಗೆ ಮತ್ತೊಂದು ಸಿಹಿ ಸುದ್ದಿ ಲಭ್ಯವಾಗಿದೆ. ಜೂನ್ 8ರಿಂದ ಮೈಸೂರು ಮೃಗಾಲಯ ಹಾಗೂ ಬಂಡೀಪುರ ಸಫಾರಿಯನ್ನು ಆರಂಭಿಸಲು ಅನುಮತಿ ನೀಡಿದ್ದು, ಈ ಕುರಿತು ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ರಾಜ್ಯ ಸರ್ಕಾರ ಅನುಮತಿ ಸೂಚಿಸಿದ್ದು, ಇದಕ್ಕಾಗಿ ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಈ ಹಿನ್ನೆಲೆ ಮೈಸೂರು ಮೃಗಾಲಯ ಹಾಗೂ ಬಂಡೀಪುರ ಸಫಾರಿ ಪುನರಾರಂಭಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಎರಡೂ ಪ್ರವಾಸಿ ತಾಣಗಳಲ್ಲಿ ಸಿದ್ಧತೆ ಮಾಡಲಾಗುತ್ತಿದೆ. …

Read More »