ಗದಗ, ಡಿಸೆಂಬರ್ 28: ಖಾಸಗಿ ಫೈನಾನ್ಸ್ ಕಂಪನಿ (Finance Company) ಕಾಟಕ್ಕೆ ಆ ಬಡ ತಾಯಿ ಅಕ್ಷರಶಃ ಕಂಗಾಲಾಗಿದ್ದಾರೆ. ಮಗ ಮಾಡಿದ ಸಾಲಕ್ಕೆ ಫೈನಾನ್ಸ್ ಸಿಬ್ಬಂದಿಗಳು ಬಡ ತಾಯಿಗೆ ಶಿಕ್ಷೆ ನೀಡಿದ್ದಾರೆ. ಬೆಳಗ್ಗೆ ನಿದ್ದೆಯಿಂದ ಎಬ್ಬಿಸಿ ಫೈನಾನ್ಸ್ ಕಚೇರಿಗೆ ತಂದು ಇಡೀ ದಿನ ಕೂಡಿ ಹಾಕಿ ಕಾಟ ನೀಡಿದ್ದಾರೆ. ನನ್ನ ಬಿಟ್ಟರೆ ಸಾಲ ಮಾಡಿಯಾದರೂ ಹಣ ಕಟ್ಟುತ್ತೇನೆ ಅಂದ್ರೂ ಫೈನಾನ್ಸ್ ಸಿಬ್ಬಂದಿ ತಾಯಿಯನ್ನು ಬಿಡದೇ ಇಡೀ ದಿನ ಕೂಡಿ ಹಾಕಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ …
Read More »ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಡಿಸೆಂಬರ್ 28: ದೈವದ ನೇಮ ಆಗುವ ಗದ್ದೆಯಲ್ಲಿ ತ್ಯಾಜ್ಯ ರಾಶಿ ಕಂಡು ದೈವ ಕೆಂಡಾಮಂಡಲವಾದಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ (Ullal) ತಾಲೂಕಿನ ಕುಂಪಲ ಬಳಿಯ ಕನೀರುತೋಟ ಎಂಬಲ್ಲಿ ನಡೆದಿದೆ. ದೈವದ ಕೋಪಕ್ಕೆ ದೈವಸ್ಥಾನದ ಆಡಳಿತ ಮಂಡಳಿ ಕಕ್ಕಾಬಿಕ್ಕಿಯಾಗಿದ್ದಾರೆ. ಇಲ್ಲಿನ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು. ದೈವ ಆವೇಶವಾಗಿ ಇನ್ನೇನು ವಲಸರಿ ಹೊರಡಬೇಕು ಎಂಬಷ್ಟರಲ್ಲಿ ಘಟನೆ ನಡೆದಿದೆ. ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ? ನಾನು ಎಂಜಲು ತುಳಿದು ವಲಸರಿ ಹೋಗಬೇಕೆ …
Read More »ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒಪ್ಪದ ವ್ಯಕ್ತಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ : ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒಪ್ಪದಿದ್ದಾಗ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸೋನಿಯಾಗಾಂಧಿ ನಗರದ ನಿವಾಸಿಯಾದ ಕುಮಾರ್ ಬೆಟಗೇರಿ (57) ಎಂಬಾತ ಮೃತ ವ್ಯಕ್ತಿಯಾದ್ರೆ, ದೇವಾಂಗಪೇಟೆ ನಿವಾಸಿಯಾದ ಗೌಸ್ ಮೊಹಮ್ಮದ್ ನದಾಫ್ (40) ಎಂಬಾತ ಬಂಧಿತ ಆರೋಪಿ. ಗೌಸ್ ಮೊಹಮ್ಮದ್ ಡಿ. 22 ರಂದು ಸುಳ್ಳ ರೋಡ್ ಇಂದ್ರಪ್ರಸ್ಥ ಲೇಔಟ್ನಲ್ಲಿ ಕುಮಾರ್ ಬೆಟಗೇರಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದು, ಈ ಕುರಿತು …
Read More »ಹುಬ್ಬಳ್ಳಿಯಲ್ಲಿ ಡ್ರಗ್ ಪೆಡ್ಲರ್ಗಳ ಪರೇಡ್
ಹುಬ್ಬಳ್ಳಿ: “ಹೊಸವರ್ಷ ಆಚರಣೆ ವೇಳೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿರುತ್ತವೆ. ಬೇರೆ ಬೇರೆ ಊರುಗಳಿಂದ ಹುಬ್ಬಳ್ಳಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿರುತ್ತೆ. ಈ ಸಂದರ್ಭದಲ್ಲಿ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆ ಮಾದಕ ವಸ್ತುಗಳ ಪೆಡ್ಲರ್ ಪರೇಡ್ ನಡೆಸಲಾಗಿದೆ” ಎಂದು ಹುಬ್ಬಳ್ಳಿ -ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು. ನಗರದ ಹಳೇ ಸಿಎಆರ್ ಮೈದಾನದಲ್ಲಿ ಡ್ರಗ್ ಪೆಡ್ಲರ್ ಪರೇಡ್ ನಡೆಸಿ ಪೆಡ್ಲರ್ಸ್ಗೆ ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸ್ ಕಮಿಷನರ್ …
Read More »ಪ್ರೀತಿಸಿದ ಹುಡುಗಿ ನೋಡಲು ಬಂದಾಗ ಹುಡುಗಿಯ ಮನೆಯ ರೂಮ್ ನಲ್ಲಿ ಮಾಜಿ ಲವರ್ ಜೊತೆಗೆ ಸಿಕ್ಕಿ ಬಿದ್ದ
ಬೆಂಗಳೂರಿನ ಉದ್ಯೋಗ ಮಾಡುತ್ತಿದ್ದ ಯುವಕನೋರ್ವ ಪ್ರೀತಿಸಿದ ಹುಡುಗಿ ನೋಡಲು ಬಂದಾಗ ಹುಡುಗಿಯ ಮನೆಯ ರೂಮ್ ನಲ್ಲಿ ಮಾಜಿ ಲವರ್ ಜೊತೆಗೆ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಮಾಜಿ ಲವರ್ ನಿಂದ ಮನಸೋ ಇಚ್ಚೆ ಚಾಕುವಿನಿಂದ ಇರಿದು ಹಲ್ಲೆ ಯತ್ನಿಸಿದ ಘಟನೆ ನಡೆದಿದ್ದು, ಬೆಳಗಾವಿಯ ಆಸ್ಪತ್ರೆಯ ಒಂದರಲ್ಲಿ ಹಲ್ಲೆಗೊಳಗಾದ ಪ್ರೇಮಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಆನಂದ ಕಳೆದ ಹದಿನೈದು ದಿನದಿಂದ ಶೋಭಾ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ಶೋಭಾಗೂ …
Read More »ಸ್ನೇಹಿತನನ್ನೇ ಸಿನಿಮೀಯ ರೀತಿಯಲ್ಲಿ ಹತ್ಯೆ ಮಾಡಿ ದೃಶ್ಯಂ ಸಿನಿಮಾ ರೀತಿ ಕಥೆ ಕಟ್ಟಿದ ರಾಜ್ ಕುಮಾರ್ ಮತ್ತು ಅನಿಲ್
ಡಿಸೆಂಬರ್ 28: ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ. ಅಲ್ಲಿನ ಬಡಾವಣೆಯ ಮಣ್ಣಿನಲ್ಲಿ ಪೊಲೀಸರು ಇಂಚಿಂಚೂ ಶೋಧ ನಡೆಸುತ್ತಿದ್ದರೆ, ಇತ್ತ ಕೆರೆ ನೀರು ಏರಿ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಲ್ಲಿ ಎಲ್ಲಾ ಕಡೆ ಹುಡುಕಾಡಿದ ಪೊಲೀಸರಿಗೆ ಚೀಲದ ಮೂಟೆಯೊಂದು ಸಿಕ್ಕಿದೆ. ಮೂಟೆಯಲ್ಲಿ ಏನಿದೆ ಅಂತ ಕುತೂಹಲದಿಂದ ನೋಡಿದವರಿಗೆ ಕಾಣಿಸಿದ್ದು ಎರಡು ತಿಂಗಳ ಹಿಂದದೆ ಕೊಳೆತು ಅರೆ ಬರೆ ಬೆಂದಿರುವ ಮೃತದೇಹದ ಅಂಗಾಂಗಗಳು! ಈ …
Read More »ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಬಿಜೆಪಿ ನಾಯಕರು, ಪೊಲೀಸ್ ಮಧ್ಯೆ ಹೈಡ್ರಾಮಾ
ಕಲಬುರಗಿ, ಡಿಸೆಂಬರ್ 28: ಬೀದರ್ ಮೂಲದ ಕಾಂಟ್ರಾಕ್ಟರ್ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ, ಡೆತ್ನೋಟ್ನಲ್ಲಿ ಸುಪಾರಿ ಬಗ್ಗೆ ಉಲ್ಲೇಖವಾಗಿರುವುದು ಕಾಂಗ್ರೆಸ್-ಬಿಜೆಪಿ ರಾಜಕೀಯ ಜಿದ್ದಾಜಿದ್ದಿಗೆ ನಾಂದಿ ಹಾಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಮಾಜಿ ಕಾರ್ಪೋರೆಟರ್ ರಾಜು ಕಪನೂರ್ ಹಾಗೂ ಗ್ಯಾಂಗ್ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್, ಆಂದೋಲಾ ಸ್ವಾಮೀಜಿ ಶ್ರೀ ಸಿದ್ದಲಿಂಗ ಸ್ವಾಮೀಜಿ, ಚಂದು ಪಾಟೀಲ್, ಮಣಿಕಂಠ ಸೇರಿ ನಾಲ್ಕು ಜನರ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂಬ ಉಲ್ಲೇಖದ ಡೆತ್ನೋಟ್ ಕಲಬುರಗಿಯ …
Read More »ಗೋಕರ್ಣ, ಮುರುಡೇಶ್ವರದ ಪ್ರವಾಸಿ ತಾಣಗಳು ಈಗಾಗಲೇ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿವೆ.
ಕಾರವಾರ, ಡಿಸೆಂಬರ್ 28: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಕ್ರಿಸ್ಮಸ್ ರಜೆ, ವಾರಾಂತ್ಯ, ಐಟಿ ಬಿಟಿ ಕಂಪನಿಗಳ ವರ್ಷಾಂತ್ಯದ ರಜೆಗಳು ಹೊಸ ವರ್ಷಾಚರಣೆಯ ಕಾರಣ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಗೋಕರ್ಣ, ಮುರುಡೇಶ್ವರದ ಪ್ರವಾಸಿ ತಾಣಗಳು ಈಗಾಗಲೇ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿವೆ. ಏತನ್ಮಧ್ಯೆ, ಹೊನ್ನಾವರ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಬೆಳಗ್ಗೆ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನಗಳು ಸುಮಾರು 1 ಕಿಲೋಮೀಟರ್ವರೆಗೆ ಸಾಲುಗಟ್ಟಿ …
Read More »ಬಾಣಂತಿಯರಿಗೆ ನೀಡಲಾಗಿದ್ದ ಐವಿ ದ್ರಾವಣ ಬಳಕೆಗೆ ಯೋಗ್ಯವಲ್ಲ, ವರದಿ
ರಾಯಚೂರು, ಡಿಸೆಂಬರ್ 28: ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ (Sindhanur Hospital) ನಾಲ್ವರು ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾಗಿರುವ IV ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪರೀಕ್ಷೆಗೆ ಒಳಪಡಿಸಿದ್ದು, ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. IV ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿನ ಎಂಡೋ ಟಾಕ್ಸಿನ್ ಎಂಬ ಅಂಶ ಬಳಕೆಗೆ ಯೋಗ್ಯವಲ್ಲ (ನೆಗೆಟಿವ್) ಅಂತ ಬೆಂಗಳೂರು ಮತ್ತು ಹೈದರಾಬಾದ್ನ ಲ್ಯಾಬ್ಗಳ ವರದಿಯಲ್ಲಿ ಬಹಿರಂಗಗೊಂಡಿದೆ. ರಾಯಚೂರು ಜಿಲ್ಲಾಡಳಿತ ಒಟ್ಟು ಮೂರು ಲ್ಯಾಬ್ಗಳಿಗೆ ತಲಾ 6 IV ರಿಂಗರ್ ಲ್ಯಾಕ್ಟೇಟ್ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.
ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ. ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಗೊಣಗನೂರ ಗ್ರಾಮದ ಶ್ರೀ ಹನುಮಾನ ಮಂದಿರದಲ್ಲಿ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ …
Read More »