Breaking News

ಜಿಂದಾಲ್ ಕಾರ್ಖಾನೆಯಲ್ಲಿ ಕೊರೊನಾ ರಣಕೇಕೆ – ಸೋಂಕು ತಡೆಗೆ ಸಪ್ತ ಸೂತ್ರ………

ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆ ಈಗ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗ್ತಿದೆ. ಜಿಂದಾಲ್‍ನಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಗ್ರಾಮಗಳಲ್ಲೂ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಜಿಂದಾಲ್ ಕಾರ್ಖಾನೆ ಹೋದ್ರೆ 5,000 ರೂ. ದಂಡ ವಿಧಿಸೋದಾಗಿ ಡಂಗೂರ ಸಾರಿ ಎಚ್ಚರಿಸಲಾಗುತ್ತಿದೆ. ಆದರೆ ಜಿಂದಾಲ್ ಅಧಿಕಾರಿಗಳು ಮಾತ್ರ ಕೆಲಸಕ್ಕೆ ಬರೆದಿದ್ರೆ ಚೆನ್ನಾಗಿ ಇರಲ್ಲಾ ಎಂದು ಆವಾಜ್ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಬುಧವಾರ ಒಂದೇ ದಿನ ಜಿಂದಾಲ್ ವ್ಯಾಪ್ತಿಯಲ್ಲೇ 34 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. …

Read More »

Complete unlock – ರಾಜ್ಯದಲ್ಲಿ ಚಿತ್ರಮಂದಿರ, ಜಿಮ್, ಮೆಟ್ರೋ, ಈಜು ಇತ್ಯಾದಿ ಕ್ಷೇತ್ರಗಳಿಗೂ ಸಡಿಲಿಕೆ ಸಾಧ್ಯತೆ

ಬೆಂಗಳೂರು(ಜೂನ್ 17): ಸಿನಿಮಾ ಥಿಯೇಟರ್, ಪಬ್, ರೆಸ್ಟೋರೆಂಟ್, ಮೆಟ್ರೋ ಸಂಚಾರ, ವಿದೇಶಿ ರಫ್ತು, ಸ್ವಿಮ್ಮಿಂಗ್ ಫುಲ್ ಹಾಗೂ ಜಿಮ್…. ಹೀಗೆ  ಕೊರೋನಾ ಲಾಕ್ ಡೌನ್​ನಿಂದ ಅನ್ ಲಾಕ್​ಗೆ ಎದುರು ನೋಡ್ತಿರುವ ಈ ಕ್ಷೇತ್ರಗಳಿಗೆ ವಿನಾಯಿತಿ ಸಿಗಬಹುದು ಎಂಬ ನಿರೀಕ್ಷೆ ಈ ಬಾರಿ ಹುಸಿಯಾಗುವ ಸಾಧ್ಯತೆ ಇಲ್ಲ. ಈ ಕ್ಷೇತ್ರಗಳಿಗೆ ವಿನಾಯಿತಿ ಕೊಡಲು ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ ಎನ್ನಲಾಗಿದೆ.. ಇಂದು ವಿವಿಧ ರಾಜ್ಯಗಳ ಸಿಎಂ ಗಳ ಜೊತೆ ನಡೆದ …

Read More »

ಮಳೆಗೆ ಇನ್ನೂ ಸಿದ್ಧವಾಗದ ನಗರಸಭೆ, ಗ್ರಾಮ ಪಂಚಾಯ್ತಿಗಳು…………

ಯಾದಗಿರಿ: ಜಿಲ್ಲೆಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಮಳೆ ಬಂದಿದ್ದು, ಹಳ್ಳಿ ಮತ್ತು ನಗರಗಳಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಚರಂಡಿಗಳು ತುಂಬಿ ಹರಿದಿವೆ.   ಪರಿಣಾಮ ರಸ್ತೆ ತುಂಬೆಲ್ಲಾ ಕೊಳಚೆನೀರು ನಿಂತು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಯಾದಗಿರಿ ನಗರದ ಗಾಂಧಿ ವೃತ್ತ, ನಗರ ಪೋಲಿಸ್ ಠಾಣೆಯ ಮುಂದೆ ನೀರು ನಿಂತು ಕೆರೆಯಂತಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲ ಆರಂಭವಾಗಿದ್ದರೂ …

Read More »

: ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಕೋವಿಡ್ 19 ಪಾಸಿಟಿವ್……….

ನವದೆಹಲಿ: ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಇಂದು ಕೋವಿಡ್ 19 ಪಾಸಿಟಿವ್ ಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ 55 ವರ್ಷದ ಸಚಿವರನ್ನು ಮಂಗಳವಾರ ಮುಂಜಾನೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(ಆರ್‍ಜಿಎಸ್‍ಎಸ್‍ಹೆಚ್)ಗೆ ಕರೆತರಲಾಗಿತ್ತು. ಅಲ್ಲದೆ ನಿನ್ನೆ ಬೆಳಗ್ಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅದರ ವರದಿಯಲ್ಲಿ ಕೊರೊನಾ ನೆಗೆಟಿವ್ ಅಂತ ಬಂದಿತ್ತು. ಆದರೆ ಸಚಿವರಿಗೆ ಜ್ವರ ಕಡಿಯಾಗದ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಆಗಿ 24 …

Read More »

ಕೇಂದ್ರ ಸರ್ಕಾರದಿಂದಲೇ ಚೀನಾ ವಸ್ತುಗಳ ಬಹಿಷ್ಕಾರ ಶುರು………..

ನವದೆಹಲಿ: 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್)ಗೆ ಸೂಚನೆ ನೀಡಿದೆ. ಈ ಹಿನ್ನೆಲೆ ಟೆಲಿಕಾಮ್ ಇಲಾಖೆ “ಚೀನಾ ವಸ್ತು ಬಹಿಷ್ಕಾರ”ದ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ. ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಸ್ತುತ ಚೀನಾ ಮೂಲದ ಹುವಾವೇ ಕಂಪನಿಯೊಂದಿಗೆ ಕೆಲಸ ಮಾಡುತ್ತಿವೆ. ಇತ್ತ ಬಿಎಸ್‍ಎನ್‍ಎಲ್‍ನೊಂದಿಗೆ ಝಡ್‍ಟಿಇ …

Read More »

ಖಾಲಿ ಕಪ್‍ನಿಂದ ಏನೂ ಆಗಲ್ಲ, ಮೊದ್ಲು ನೀವ್ ಚೆನ್ನಾಗಿರಿ- ನಿತ್ಯಾ ಮೆನನ್

ಬೆಂಗಳೂರು: ಬಹುಭಾಷಾ ನಟಿ ನಿತ್ಯಾ ಮೆನನ್ ಲಾಕ್‍ಡೌನ್ ದಿನಗಳನ್ನು ಫೋಟೋ ಶೂಟ್ ಮೂಲಕ ಕಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಫೋಟೋ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಪ್‍ಡೇಟ್ ನೀಡುತ್ತಿದ್ದಾರೆ. ಇದೀಗ ಅವರ ಇನ್‍ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗಿದೆ. ಬಹುಭಾಷಾ ನಟಿ ನಿತ್ಯಾ ಮೆನನ್ ಸ್ಯಾಂಡಲ್‍ವುಡ್‍ನಲ್ಲಿ ನಟಿಸಿದ್ದು ಕೆಲವೇ ಚಿತ್ರಗಳಾದರೂ ಕನ್ನಡವನ್ನು ಲೀಲಾಜಾಲವಾಗಿ ಮಾತನಾಡುತ್ತಾರೆ. ಕೇರಳ ಮೂಲದವರಾದರೂ ಕನ್ನಡದ ನಟಿಯರನ್ನೇ ನಾಚಿಸುವಂತೆ ಮಾತನಾಡುತ್ತಾರೆ, ಹಾಡು ಹೇಳುತ್ತಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ನಿತ್ಯಾ …

Read More »

ಮಲೆನಾಡಲ್ಲಿ ಮುಗಿಯದ ಕಾಡಾನೆ ಕಾಟ………

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ಹಾಗೂ ಹಾವಳಿ ಹತೋಟಿಗೆ ಬರುವ ಲಕ್ಷಣಗಳೇ ಇಲ್ಲದಂತಾಗಿದೆ. ಆಗಾಗ್ಗೆ ಹೊಲಗದ್ದೆ-ತೋಟಗಳಿಗೆ ಲಗ್ಗೆ ಇಡುವ ಕಾಡಾನೆಗಳು ಈಗೀಗ ಮಲೆನಾಡಿಗರಿಗೆ ರಸ್ತೆ ಮಧ್ಯೆ ಸ್ನೇಹಿತರು, ನೆಂಟರಂತೆ ಸಿಗುತ್ತಿದ್ದು, ಮಲೆನಾಡಿಗರು ಭಯಭೀತರಾಗಿದ್ದಾರೆ. ಮೂಡಿಗೆರೆ ತಾಲೂಕಿನ ಪ್ರವಾಸಿತಾಣ ದೇವರ ಮನೆ ಬಳಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಕಾರಲ್ಲಿ ಸಂಚರಿಸುತ್ತಿದ್ದವರ ಆತಂಕಕ್ಕೆ ಕಾರಣವಾಗಿದೆ. ಒಂಟಿ ಸಲಗದ ಭಯದ ಮಧ್ಯೆಯೂ ಸವಾರರು ಕಾಡಾನೆ ಫೋಟೋವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಮೋದ್ …

Read More »

ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಬಲಿ………..

ಕೊಪ್ಪಳ: ಹೆಮ್ಮಾರಿ ಕೊರೊನಾ ವೈರಸ್ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಸೋಂಕಿತ 50 ವರ್ಷದ ಮಹಿಳೆ ಇಂದು ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ರೋಗಿ-7105 ಆಗಿದ್ದು, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ. ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮಗನಿಗೆ ಕೊರೊನಾ ದೃಢಪಟ್ಟಿತ್ತು. ಈ ಹಿನ್ನೆಲೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಆತನ ತಂದೆ-ತಾಯಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೂ ಸೋಂಕು …

Read More »

ಯುಟ್ಯೂಬ್‍ನಿಂದ ದಿಢೀರ್ ಡಿಲೀಟ್ ಆಯ್ತು ಚಂದನವನ ತಾರೆಯರೆಲ್ಲ ಅಭಿನಯಿಸಿದ್ದ ಹಾಡು

ಬೆಂಗಳೂರು: ಇತ್ತೀಚೆಗೆ ಬದಲಾಗು ನೀನು ಬದಲಾಯಿಸು ನೀನು ಹಾಡಿನ ಮೂಲಕ ಸ್ಯಾಂಡಲ್‍ವುಡ್ ಎಲ್ಲ ತಾರೆಯರು ಸೇರಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದ್ದರು. ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತುತ ಪಡಿಸಿದ್ದ ಹಾಡನ್ನು ಪವರ್ ಓಡೆಯರ್ ನಿರ್ದೇಶನ ಮಾಡಿದ್ದರು. ಎಲ್ಲ ಕಲಾವಿದರ ಮನೆಗೆ ಹೋಗಿ ಹಾಡನ್ನು ಚಿತ್ರೀಕರಣ ಮಾಡಿದ್ದರು. ಅಂತಯೇ ಜೂನ್ 5ರಂದು ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ದಿ ಬೀಟ್ ಆಡಿಯೋದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಆದರೆ ಈಗ ಏಕಾಏಕಿ ಬದಲಾಗು …

Read More »

ಯೋಚಿಸಿ ಮಾತನಾಡುವಂತೆ ಸಿದ್ದುಗೆ ಕೋಟ ಶ್ರೀನಿವಾಸ್ ವಾರ್ನ್

ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯೋಚಿಸಿ ಮಾತನಾಡುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ವಾರ್ನ್ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾರತ-ಚೀನಾ ಗಡಿಯಲ್ಲಿ ಬೆಳವಣಿಗೆ ಬಗ್ಗೆ ಪ್ರಧಾನಿ ಮೌನವನ್ನ ದೇಶದ್ರೋಹಕ್ಕೆ ಹೋಲಿಸಿ ಮಾತನಾಡಿದ್ದಕ್ಕೆ ಮಾಜಿ ಸಿಎಂಗೆ ಕೋಟ ತಿರುಗೇಟು ನೀಡಿದರು. ಈಗ ದೇಶದಲ್ಲಿ ತಾಕತ್ತಿನ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಸೈನಿಕರ ಬೆನ್ನಿಗೆ ನಿಂತು ಗುಂಡು ಹಾರಿಸಿ ಎಂದು ಹೇಳುವ ಪ್ರಧಾನಿ ಇದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ಯುದ್ಧ …

Read More »