Breaking News

ಕೆಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ರೈತ ತಮಾಷೆ- ಮಾರುಕಟ್ಟೆ ಅಲ್ಲೋಲ ಕಲ್ಲೋಲ……

ಚಾಮರಾಜನಗರ: ರೈತರೊಬ್ಬರು ರೇಷ್ಮೆ ಮಾರುಕಟ್ಟೆಯಲ್ಲಿ ಕೆಮ್ಮಿದ್ದು, ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ತಮಾಷೆ ಮಾಡಿದ್ದಾರೆ. ಇಷ್ಟಕ್ಕೆ ಮಾರುಕಟ್ಟೆಯಲ್ಲಿ ರಾದ್ಧಾಂತ ನಡೆದಿದೆ. ಜಿಲ್ಲೆಯ ಕೊಳ್ಳೇಗಾಲದ ಮುಡಿಗುಂಡ ಬಳಿ ಘಟನೆ ನಡೆದಿದ್ದು, ಪದೇ ಪದೇ ಕೆಮ್ಮಿದ್ದರಿಂದ ಆತಂಕಗೊಂಡು ಅಕ್ಕಪಕ್ಕದವರು ವಿಚಾರಿಸಿದ್ದಾರೆ. ಈ ವೇಳೆ ತನಗೆ ಕೊರೊನಾ ಇದೆ ಎಂದು ರೈತ ತಮಾಷೆಗೆ ಹೇಳಿದ್ದಾರೆ. ಇದರಿಂದ ಬೆಚ್ಚಿಬಿದ್ದ ರೇಷ್ಮೆಗೂಡಿನ ಮಾರುಕಟ್ಟೆ ವ್ಯಾಪಾರಿಗಳು, ತೀವ್ರ ಆತಂಕಗೊಂಡಿದ್ದು, ತಕ್ಷಣವೇ ರೇಷ್ಮೆ ರೀಲರ್ಸ್ ಗಳು ತಹಸೀಲ್ದಾರ್‍ಗೆ ದೂರು ನೀಡಿದ್ದಾರೆ. …

Read More »

ಮದುವೆ ಮನೆ ಅಡುಗೆ ಭಟ್ಟನಿಗೆ ಕೊರೊನಾ ದೃಢಪಟ್ಟ ,ಹಿನ್ನೆಲೆಯಲ್ಲಿ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್

ತುಮಕೂರು: ದಿನೇ ದಿನೇ ಕೊರೊನಾ ತನ್ನ ಅಟ್ಟಹಾಸ ಮಿತಿಮೀರುತ್ತಿದೆ. ಮದುವೆ ಮನೆ ಅಡುಗೆ ಭಟ್ಟನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ. ಬೆಳಗ್ಗೆ ತಾನೇ ಮದುವೆ ಮುಗಿಸಿದ ನವಜೋಡಿ ಕೊರೊನಾದಿಂದ ಸಂಜೆ ವೇಳೆಗೆ ಕ್ವಾರಂಟೈನ್‍ನಲ್ಲಿ ಲಾಕ್ ಆಗಿದ್ದಾರೆ. ಈ ಕೊರೊನಾ ಜಿಲ್ಲೆಯ ಗುಬ್ಬಿಯ ಹೇರೂರಿನ ನವ ಜೋಡಿಯೊಂದು ಕ್ವಾರಂಟೈನ್ ಸೇರುವಂತೆ ಮಾಡಿದೆ. ವಧುವರರಿಗೆ ಕೊರೊನಾ ಬಂದಿಲ್ಲ. ಬದಲಾಗಿ ಮದುವೆ ಮನೆಯಲ್ಲಿ ಅಡುಗೆ ಮಾಡಿದ್ದ ಅಡುಗೆ ಭಟ್ಟನಿಗೆ ಕೊರೊನಾ …

Read More »

ಸಿಲಿಕಾನ್ ಸಿಟಿಯಲ್ಲಿಗಲ್ಲಿ ಗಲ್ಲಿಗೂ ಸದ್ದಿಲ್ಲದೇ ಎಂಟ್ರಿಯಾಗ್ತಿದೆ,ಕಿಲ್ಲರ್ ಕೊರೊನಾ……..

ನಿಮ್ಹಾನ್ಸ್ ಬಾಗಿಲು ತಟ್ಟಿದ ಕೊರೊನಾ- ಆಸ್ಪತ್ರೆಯ ಐಸಿಯು ಕಂಪ್ಲೀಟ್ ಕ್ಲೋಸ್   ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಿಲ್ಲರ್ ಕೊರೊನಾ ಅಟ್ಟಾಡಿಸ್ತಿದೆ. ಪರಿಸ್ಥಿತಿ ಬಿಗಡಾಯಿಸ್ತಿದ್ದು, ಗಲ್ಲಿ ಗಲ್ಲಿಗೂ ಈ ಹೆಮ್ಮಾರಿ ಸದ್ದಿಲ್ಲದೇ ಎಂಟ್ರಿಯಾಗ್ತಿದೆ. ನಿಮ್ಹಾನ್ಸ್ ಆಸ್ಪತ್ರೆಗೂ ಈ ಹೆಮ್ಮಾರಿ ಲಗ್ಗೆ ಇಟ್ಟಿದ್ದು, ಈ ವೈರಸ್ ನ ಆರ್ಭಟಕ್ಕೆ ಆಸ್ಪತ್ರೆಯ ಐಸಿಯು ವಾರ್ಡ್ ಕಂಪ್ಲೀಟ್ ಕ್ಲೋಸ್ ಆಗಿದೆ. ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಕೈ ಮೀರಿ ಹೋಗ್ತಿದೆ. ತಜ್ಞರು …

Read More »

ನಾಲ್ವರಿಂದ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ………….

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಾಲ್ಕು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರೋದು ಧೃಡವಾಗಿದೆ. ಪರಿಣಾಮ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಈಗಾಗಲೇ ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರು ತಿಂಗಳಿಂದ ಜೈಲಿನಲ್ಲಿದ್ದ ಕೈದಿಗೂ ಕೊರೊನಾ ತಗುಲಿದ್ದು, ಆತನಿಗೆ ಸೋಂಕು ಹೇಗೆ ಬಂತು ಎಂದು ಹುಡುಕಾಡುವಷ್ಟರಲ್ಲಿಯೇ ಜಿಲ್ಲೆಯ ನಾಲ್ವರು ಪೊಲೀಸರಿಗೆ ಕೋವಿಡ್-19 ತಗುಲಿದೆ. ಇದೀಗ ಜಿಲ್ಲಾಡಳಿತತ ಜೊತೆಗೆ ಇತರೆ ಪೊಲೀಸರಿಗೆ ಕೊರೊನಾ ಢವ ಢವ ಶುರುವಾಗಿದೆ. …

Read More »

ಬಸ್ ಗೆ ಬೆಂಕಿ ಲಕ್ಷಾಂತರ ರೂಗಳ ಹಾನಿ.ತಪ್ಪಿದಬಾರಿ ಅಗ್ನಿ ದುರಂತ

  ನಿಪ್ಪಾಣಿ :ನಿಪ್ಪಾಣಿ ಬಸ್ ಡಿಪೋದಲ್ಲಿ ಬಸ ಬೆಂಕಿಗೆ ಆಹುತಿ ಯಾಗಿದ್ದು ಸುಮಾರು ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಗಳಷ್ಟು. ಹಾನಿಯಾಗಿದೆ.ಪಕ್ಕದಲ್ಲಿಯೆ ಇದ್ದುದರಿಂದ ಬಾರಿ ಅನಾಹುತ ತಪ್ಪಿದೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯ ಚಿಕ್ಕೋಡಿ ವಿಭಾಗದಲ್ಲಿ ರುವ ನಿಪ್ಪಾಣಿ ಡಿಪೋಗೆ ಸೇರಿದ ಬಸ್ ಇದಾಗಿದ್ದು ಕಳೆದ ಕಳೆದ ತಿಂಗಳ ೨೩ ರಿಂದ ಈ ಬಸ್ ಸಂಚಾರ ಮಾಡಿರಲಿಲ್ಲ ಇದರಿಂದಾಗಿ ಬಸ್ ಡಿಪೋ ದೊಳಗೆ ಇತ್ತು. ನಿನ್ನೆ …

Read More »

ಸತತ 15 ನೇ ದಿನವೂ ಪೆಟ್ರೋಲ್ ಡಿಸೇಲ್ ದರ ಏರಿಕೆ………

ಹೊಸದಿಲ್ಲಿ:  ದೇಶದಲ್ಲಿ ಸತತ 15 ನೇ ದಿನವೂ ಪೆಟ್ರೋಲ್ ಡಿಸೇಲ್ ದರ ಏರಿಕೆಯಾಗಿದೆ.  ಭಾನುವಾರ  ಪೆಟ್ರೋಲ್ ಗೆ 35 ಪೈಸೆ, ಡಿಸೇಲ್ ಗೆ 60 ಪೈಸೆ ಏರಿಕೆ ದಾಖಲಿಸಿವೆ. ಕಳೆದ ಎರಡು ವಾರಗಳ ಅವಧಿಯಲ್ಲಿ  ಈವರೆಗೂ ಪೆಟ್ರೋಲ್ 7. 97 ರೂ. ಏರಿಕೆಯಾದ್ರೆ, ಡಿಸೇಲ್ 8.88 ರೂ ಹೆಚ್ಚಿಗೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 79.23 ರೂ. ಡೀಸೆಲ್ ದರ 77.67 ದಾಖಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 86.06 …

Read More »

ಕೋವಿಡ್ -19ರಿಂದ ರಕ್ಷಣೆ ಪಡೆಯಲು ಸ್ವಯಂ ಪ್ರೇರಣೆಯಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದೊಂದೇ ದಾರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಬೆಳಗಾವಿ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್ -19ರಿಂದ ರಕ್ಷಣೆ ಪಡೆಯಲು ಸ್ವಯಂ ಪ್ರೇರಣೆಯಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದೊಂದೇ ದಾರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಶೀನಪ್ಪ ಎಂ. ಹೇಳಿದರು. ಖಾಸಬಾಗದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕಾರ್ಯಕ್ರಮದಡಿ ಮುಚ್ಚಂಡಿಯ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಕೋವಿಡ್-19 ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋವಿಡ್ ಮಹಾಮಾರಿಯನ್ನು ಎಲ್ಲರೂ ಧೈರ್ಯದಿಂದ ಒಂದಾಗಿ ಎದುರಿಸಬೇಕಿದೆ. ನಮ್ಮ ನಿರ್ಲಕ್ಷ್ಯದಿಂದ ಸೋಂಕಿಗೆ ಒಳಗಾದರೆ …

Read More »

ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ  ಮೌಢ್ಯಕ್ಕೆ ಸೆಡ್ಡು ಹೊಡೆದ ಕೆಪಿಸಿಸಿ  ಕಾರ್ಯಾಧ್ಯಕ್ಷ,

ಗೋಕಾಕ:  ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ  ಮೌಢ್ಯಕ್ಕೆ ಸೆಡ್ಡು ಹೊಡೆದ ಕೆಪಿಸಿಸಿ  ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಕುಟುಂಬ ಸದಸ್ಯರು ಮತ್ತು ಕಾರ್ಯಕರ್ತರೊಂದಿಗೆ ಉಪಹಾರ ಸೇವಿಸಿದರು. ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಭಾನುವಾರ ತಮ್ಮ ಮಕ್ಕಳಾದ ಪ್ರಿಯಾಂಕಾ ಹಾಗೂ ರಾಹುಲ್ ಜತೆಗೆ ಉಪಹಾರ ಸೇವಿದರು. ಇದೇ ವೇಳೆ ‘ಉದಯನಾಡು’ದೊಂದಿಗೆ  ಮಾತನಾಡಿದ ಅವರು,  ಸೂರ್ಯ, ಚಂದ್ರ ಗ್ರಹಣ ಗೋಚರ ಇದೊಂದು  ಸಹಜ ಪ್ರಕ್ರಿಯೆ, ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಜನರಲ್ಲಿ …

Read More »

ಮೌಢ್ಯಕ್ಕೆ ಸೆಡ್ಡು ಹೊಡೆದು ಮಾನವ ಬಂಧುತ್ವ ವೇದಿಕೆಯ ಸಂಚಾಲಕರು ಇಲ್ಲಿನ ಕೇಂದ್ರ ಕಚೇರಿಯಲ್ಲಿ ಭಾನುವಾರ ಬಾಡೂಟ  ಸೇವಿಸಿದರು.

ಬೆಳಗಾವಿ: ಸೂರ್ಯಗ್ರಹಣ ಹಿನ್ನಲೆಯಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದು ಮಾನವ ಬಂಧುತ್ವ ವೇದಿಕೆಯ ಸಂಚಾಲಕರು ಇಲ್ಲಿನ ಕೇಂದ್ರ ಕಚೇರಿಯಲ್ಲಿ ಭಾನುವಾರ ಬಾಡೂಟ  ಸೇವಿಸಿದರು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ನೇತೃತ್ವದಲ್ಲಿ ವೇದಿಕೆಯ ಸಂಚಾಲಕರು, ಪ್ರಗತಿಪರರು, ಮುಂತಾದವರು ಭಾಗಿಯಾಗಿ ಊಟ ಸೇವಿಸಿದರು. ಯುವಕರು ಮೌಢ್ಯದಿಂದ ಹೊರಬರಬೇಕು. ವೈಚಾರಿಕ ಚಿಂತನೆಯತ್ತ ಹೆಜ್ಜೆ ಹಾಕಬೇಕು. ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯ, ಚಂದ್ರಗ್ರಹಣ ಗೋಚರಿಸುವ ಅದ್ಭುತ ಕ್ಷಣಗಳನ್ನು ಕಣ್ಣತುಂಬಿಕೊಳ್ಳಬೇಕು. ಸೂರ್ಯ, ಚಂದ್ರ ಗ್ರಹಣ ಪ್ರಕೃತಿಯಲ್ಲಿ …

Read More »

ಕೊರೊನಾ ಸಮಯದಲ್ಲಿ ಕೆಎಸ್‍ಆರ್ ಟಿಸಿ ಹೊಸ ಆದೇಶ……!

ಬೆಂಗಳೂರು: ಕೊರೊನಾ ಸಮಯದಲ್ಲಿ ಕೆಎಸ್‍ಆರ್ ಟಿಸಿ ಹೊಸ ಆದೇಶವನ್ನು ಹೊರಡಿಸಿ ಸಿಬ್ಬಂದಿಯ ಆಕ್ರೋಶಕ್ಕೆ ಗುರಿಯಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ಡಿಪೋ ನಿಗದಿತ ಆದಾಯ ತರುವಂತೆ ಆದೇಶ ಹೊರಡಿಸಿದೆ. ಕೊರೊನಾ ಆತಂಕದ ನಡುವೆಯೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಈಗಾಗಲೇ ಬಿಎಂಟಿಸಿ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಸಿಬ್ಬಂದಿ ತಮ್ಮ ಒಂದು ಶಿಫ್ಟ್ ನಲ್ಲಿ ನಿಗದಿತ ಆದಾಯ ತರಬೇಕು. ಇಲ್ಲವಾದಲ್ಲಿ ಸಿಬ್ಬಂದಿಗೆ ಹಾಜರಾತಿ ನೀಡಲ್ಲ. ಡೀಸೆಲ್ ದರ ಏರಿಕೆಯ ನಷ್ಟ ತಪ್ಪಿಸಲು …

Read More »