ಬೆಂಗಳೂರು: ಕೋವಿಡ್ 19 ನಿಯಂತ್ರಣದ ಜೊತೆಗೆ ಕೊರೊನಾ ವಾರಿಯರ್ಸ್ ರಕ್ಷಣೆಗೆ ಸರ್ಕಾರ ಮೆಗಾ ಪ್ಲಾನ್ ಮಾಡಿಕೊಂಡಿದ್ದು, ರಾಜಧಾನಿಗೆ ಯಂತ್ರ ಮಾನವರು ಎಂಟ್ರಿ ಕೊಡಲಿದ್ದಾರೆ. ಹೌದು. ಕೋವಿಡ್ ಕೇರ್ ಸೆಂಟರ್‌ಗೆ ಯಂತ್ರ ಮಾನವರನ್ನು ಕರೆ ತರಲು ಸರ್ಕಾರ ನಿರ್ಧಾರ ಮಾಡಿದೆ. ಬೆಂಗಳೂರಿನ ಬೃಹತ್ ಕೊರೊನಾ ಕೇರ್ ಸೆಂಟರ್ ಆಗಲಿರುವ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ಕೇಂದ್ರದಲ್ಲಿ ರೊಬೊಟ್ ಬಳಕೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಮೊದಲ ಹಂತವಾಗಿ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕೊರೊನಾ …
Read More »ಬೆಂಗಳೂರಿನಲ್ಲಿ ಕೊರೊನಾ ತಡೆಗೆ ಅಷ್ಟದಿಗ್ಬಂಧನ?
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ರಣಕೇಕೆಗೆ ಬ್ರೇಕ್ ಹಾಕಲು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿದ್ದು, ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬೆಂಗಳೂರಿನ 8 ವಲಯಗಳಿಗೆ 8 ಸಚಿವರಿಗೆ ಉಸ್ತುವಾರಿ ವಹಿಸಲು ಚಿಂತನೆ ನಡೆಸಲಾಗಿದೆ. ಸದ್ಯ ಚಿಂತನೆ ಕಾರ್ಯ ರೂಪಕ್ಕೆ ತರಲು ಸಿಎಂ ಬಿಎಸ್‍ವೈ ಅವರು, ವಲಯವಾರು ಸಚಿವರಿಂದ ಅಧ್ಯಯನ ಮಾಡಿ ಸೋಮವಾರದ ವೇಳೆಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ …
Read More »ಕೊರೊನಾ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದ್ದ ಮಾಜಿ ಶಾಸಕರೊಬ್ಬರು ನಿಯಮಗಳನ್ನು ಮರೆತ………….
ತುಮಕೂರು: ಕೊರೊನಾ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದ್ದ ಮಾಜಿ ಶಾಸಕರೊಬ್ಬರು ನಿಯಮಗಳನ್ನು ಮರೆತು ಸಂಭ್ರಮಾಚರಣೆ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸಾಮಾಜಿ ಅಂತರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ತುಮಕೂರಿನ ತಾಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆ ಇಂದು ನಿಗದಿಯಾಗಿತ್ತು. ಚುನಾವಣೆಯಲ್ಲಿ ಬಿಜೆಪಿಯ ಕವಿತಾ ರಮೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಅವರು ಸಂಭ್ರಮಾಚರಣೆ …
Read More »ಯುವತಿಯನ್ನು ತುಂಡು ತುಂಡಾಗಿ ಕತ್ತರಿಸಿ ಕವರ್‌ಗೆ ತುಂಬಿ ಎಸೆದ್ರು
ಲಕ್ನೋ: ಯುವತಿಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು ಕತ್ತರಿಸಿ ಸೂಟ್‍ಕೇಸ್‍ನಲ್ಲಿ ತುಂಬಿ ಎಸೆದು ಹೋಗಿರುವ ಘಟನೆ ಉತ್ತರ ಪ್ರದೇಶದ ಬರಾಬಂಕಿ ನಗರದಲ್ಲಿ ನಡೆದಿದೆ. ಅಪರಿಚಿತ ಯುವತಿಯನ್ನು ಕೊಲೆ ಮಾಡಿರುವ ಪಾಪಿಗಳು ಆಕೆಯನ್ನು ಮೃತದೇಹವನ್ನು ಬಿಡಿ ಬಿಡಿಯಾಗಿ ಕತ್ತರಿಸಿದ್ದಾರೆ. ನಂತರ ಅದನ್ನು ಪಾಲಿಥಿನ್ ಕವರ್ ಒಳಗೆ ತುಂಬಿ ನಂತರ ಸೂಟ್‍ಕೇಸ್‍ಗೆ ಅದನ್ನು ಹಾಕಿ, ಸಫೆದಾಬಾದ್ ಪ್ರದೇಶದಲ್ಲಿರುವ ಮುಚ್ಚಿದ ಹಳೇ ಕಾರ್ಖಾನೆ ಮುಂಭಾಗದಲ್ಲಿ ಎಸೆದು ಹೋಗಿದ್ದಾರೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ …
Read More »ಚೊಚ್ಚಲ ಹೆರಿಗೆ 108 ವಾಹನದಲ್ಲೇ……
ಗದಗ: ಚೊಚ್ಚಲ ಹೆರಿಗೆ 108 ವಾಹನದಲ್ಲೇ ಆಗಿದ್ದು, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷಿಸಿದರೂ ಅಂಬುಲೆನ್ಸ್ ಚಾಲಕ ಸಮಯಪ್ರಜ್ಞೆಯಿಂದ ಹೆರಿಗೆ ಮಾಡಿಸಿ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಶಿರಹಟ್ಟಿಯ 108 ಅಂಬುಲೆನ್ಸ್ ವಾಹನ ಚಾಲಕ ಮಹೇಶ್ ಮಾರನಬಸರಿ ಈ ಸಾಹಸ ಮಾಡಿದ್ದಾರೆ. ಅಂಬುಲೆನ್ಸ್ ವಾಹನದಲ್ಲಿ ನರ್ಸಿಂಗ್ ಸ್ಟಾಫ್ ಇಲ್ಲದಿದ್ದರೂ ವಾಹನದಲ್ಲೇ ಹೆರಿಗೆ ಮಾಡಿಸಿ ಚಾಲಕ 2 ಜೀವ ಉಳಿಸಿದ್ದಾರೆ. 108 ವಾಹನದಲ್ಲಿ ಚಾಲಕ ಒಬ್ಬನೇ ಇದ್ದು, ಹೆರಿಗೆ ಮಾಡಿಸಿಕೊಂಡು ಕ್ಲೀನಿಂಗ್ …
Read More »ಕೊರಾನಾ ಪೊಸಿಟಿವ ನಿರ್ಲಕ್ಷ ತೊರುತ್ತಿರುವ ಅಧಿಕಾರಿಗಳು….?
ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಮೃತ ಮಹಿಳೆಗೆ ಕೊರಾನಾ ದೃಡ್ಡಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯ ಸುತ್ತಮುತ್ತ 100 ಮಿಟರ ಸಂಪೂರ್ಣ ಜಾಗೆಯನ್ನು ಕೊಣ್ಣೂರ ಪುರಸಭೆ ,ಆರೋಗ್ಯ ಇಲಾಖೆ ಹಾಗೂ ಪೋಲಿಸ ಇಲಾಖೆಯವರು ಸೇರಿ ಸಿಲಡೌನ್ ಮಾಡಿದ್ದಾರೆ, ಆದರೆ ಮೃತ ಮಹಿಳೆಯ ಮೃ ಹೊಂದುವ ಮೊದಲು ಅವರ ಜೊತೆ ಇದ್ದರೆನ್ನಲಾದ ಕೆಲವು ವ್ಯಕ್ತಿಗಳನ್ನು ಅಧಿಕಾರಿಗಳು ತಪಾಸಣೆ ಮಾಡದೆ ಹೊಮ್ ಕ್ವಾರಂಟೈನ್ ಮಾಡಲು ಹಿಂದೇಟು ಹಾಕುತಿದ್ದಾರೆ.ಇದರಿಂದ ಕೇರಿಯಲ್ಲಿರುವ ಜನರು ಭಯಬೀತರಾಗಿ ತಮ್ಮ …
Read More »ಅಲ್ಲಿನ ಜನ ಹೆಣದ ಜೊತೆ ಬದುಕ್ತಾರೆ!
ಈ ಜಗತ್ತೊಂದು ವಿಸ್ಮಯಗಳ ಸಂತೆ. ಇವತ್ತಿನ ಜನ ವಿಜ್ಞಾನ ಮತ್ತು ಆವಿಷ್ಕಾರಗಳತ್ತ ಕಣ್ಣರಳಿಸಿ ನೋಡ್ತಾರೆ. ಅವಕ್ಕಾಗಿಸುವಂತಹ ಅಪಾದಮಸ್ತಕ ಅಚ್ಚರಿಯಿಂದ ನೋಡುವ ಅನೇಕರಿಗೆ ಈ ಜಗತ್ತಿನಲ್ಲಿರೋ ಚಿತ್ರವಿಚಿತ್ರ ನಂಬಿಕೆಗಳು, ಆಚರಣೆಗಳೇನಾದರೂ ತಿಳಿದರೆ ಕಂಗಾಲೆದ್ದು ಹೋಗ್ತಾರೆ. ವಿಶ್ವದ ನಾನಾ ದೇಶಗಳ, ನಾನಾ ಭಾಗಗಳಲ್ಲಿ ಆಚರಿಸಲ್ತಡುತ್ತಿರೋ ಆಚರಣೆಗಳಿವೆಯಲ್ಲಾ? ಅದುವೇ ಒಂದು ಅಧ್ಯಯನಯೋಗ್ಯ ವಿಚಾರ. ಅಂಥವುಗಳಲ್ಲಿ ಕೆಲ ವಿಚಾರಗಳು ಸಿಲ್ಲಿ ಅನ್ನಿಸಿದರೆ ಮತ್ತೆ ಕೆಲ ವಿಚಾರಗಳನ್ನ ಅರಗಿಸಿಕೊಳ್ಳಲು ಸಾಧ್ಯವಾಗೋದೇ ಇಲ್ಲ. ಜಗತ್ತಿನಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಆಚಾರ …
Read More »ಜುಲೈ 13 ರಂದು ಮೌಢ್ಯ ವಿರುದ್ದ ವಿಭಿನ್ನ ರೀತಿಯ ಹೋರಾಟ:ಸತೀಶ ಜಾರಕಿಹೊಳಿ
ಬೆಳಗಾವಿ: ಜುಲೈ 13 ರಂದು ಮೌಢ್ಯ ವಿರುದ್ದ ವಿಭಿನ್ನ ರೀತಿಯ ಹೋರಾಟದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ಹೇಳಿದ್ರು. ಮೌಢ್ಯ ವಿರೋಧ ಕಾರ್ಯಕ್ರಮದ ವಿಚಾರವಾಗಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜು. 13 ರಂದು ಬೆಳಗ್ಗೆ 11 ಗಂಟೆಗೆ ಸದಾಶಿವನಗರ ಬುದ್ದ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ ವಿನೂತನ ಕಾರ್ಯಕ್ರಮ ನಡೆಯಲಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ …
Read More »ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರುತ್ತಿದೆ: ಸಿಎಂ ಬಿಎಸ್‍ವೈ
ಬೆಂಗಳೂರು-ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರಿಹೋಗಿರುವ ಆಘಾತಕಾರಿ ವಿಷಯವನ್ನು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಬಹಿರಂಗಪಡಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಮ್ಮ ಕೈ ಮೀರುವ ಹಂತಕ್ಕೆ ಬಂದಿದೆ. ಆದರೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಎಲ್ಲರೂ ಇದನ್ನು ತಡೆಯಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹಾಗೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಈ ಹೇಳಿಕೆ ಜನತೆಯಲ್ಲಿ ಇನ್ನಷ್ಟು ಆತಂಕ …
Read More »ಕುಕ್ಕರ್ ಬಂದ್ ಮಾಡೋದು.. ಚಾಲು ಮಾಡೋದು.. ಎಲ್ಲಾ ನಿಮ್ಮ ಕಡೆನೇ ಇದೆ,ಇಬ್ಬರನ್ನೂ ಕರೆದುಕೊಂಡು ಹೋಗಿ ಹೋಗಿ ಆಣೆ ಮಾಡಿಸಿ,: ಸತೀಶ್ ಜಾರಕಿಹೊಳಿ
ಬೆಳಗಾವಿ- ಶಾಸಕಿ ಹೆಬ್ಬಾಳ್ಕರ್ – ಸಚಿವ ರಮೇಶ ಜಾರಕಿಹೊಳಿ ನಡುವೆ ನಡೆಯುತ್ತಿರುವ ಕುಕ್ಕರ್ ವಾರ್ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ,ಶಾಸಕ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕುಕ್ಕರ್ ಬಂದ್ ಮಾಡೋದು.. ಚಾಲು ಮಾಡೋದು.. ಎಲ್ಲಾ ನಿಮ್ಮ ಕಡೆನೇ ಇದೆ,ಇಬ್ಬರನ್ನೂ ಕರೆದುಕೊಂಡು ಹೋಗಿ ಹೋಗಿ ಆಣೆ ಮಾಡಿಸಿ, ಸಂವಾದ ಮಾಡ್ಸಿ.. ಯಾರು ಸುಳ್ಳು ಹೇಳ್ತಾರೋ ನೋಡಬೇಕಲ್ಲ, ಎಲ್ಲಿ ಆಣೆ ಪ್ರಮಾಣ ಮಾಡಲು …
Read More »