ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕ್ವಾರಂಟೈನ್‌ಗಳು ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ. ಇಲ್ಲಿಯವರೆಗೆ ಬರೋಬ್ಬರಿ 1.51 ಲಕ್ಷ ಮಂದಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೌದು. ಕೋವಿಡ್ 19 ಸೋಂಕಿತರ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕಿತರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ 2.25 ಲಕ್ಷ ಮಂದಿ ಈ ನಿಯಮವನ್ನು ಉಲ್ಲಂಘಿಸಿ ಸುತ್ತಾಟ ಮಾಡಿದ್ದಾರೆ. ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು …
Read More »ಪ್ಲಾಸ್ಮಾ ದಾನ ಮಾಡಿದವರಿಗೆ 5 ಸಾವಿರ ರೂ. ಭತ್ಯೆ: ಸಚಿವ ಸುಧಾಕರ್
ಬೆಂಗಳೂರು: ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿದರೇ ಅವರಿಗೆ 5 ಸಾವಿರ ರೂ. ಭತ್ಯೆ ನೀಡುವುದಾಗಿ ಸರ್ಕಾರ ಘೋಷಿಸಿದೆ. ಗುಣಮುಖರಾದವರು 14-28 ದಿನಗಳ ಒಳಗೆ ಒಬ್ಬ ವ್ಯಕ್ತಿ ಒಂದು ಬಾರಿಯಷ್ಟೇ ದಾನ ಮಾಡಲು ಅವಕಾಶವಿದೆ. ಈಗಾಗಲೇ ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಆರಂಭಿಸಲಾಗಿದ್ದು, ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನವಾಗಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿ ಇನ್ನಷ್ಟು ವ್ಯಾಪಿಸೋ ಬಗ್ಗೆ ಎಚ್ಚರಿಕೆ ಬೆನ್ನಲ್ಲೇ ಸರ್ಕಾರ ಹೊಸ ಹೊಸ ಕ್ರಮಕ್ಕೆ ಮುಂದಾಗಿದೆ. ವಾರದ ಲಾಕ್‍ಡೌನ್ …
Read More »ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ
ಹೊಸದಿಲ್ಲಿ: ಮೇಕೆದಾಟು ಸಮಾನಾಂತರ ಅಣೆಕಟ್ಟು ಕಟ್ಟುವ ಕರ್ನಾಟಕ ಸರ್ಕಾರದ ಮನವಿಯನ್ನು ಕೂಡಲೇ ಪುರಸ್ಕರಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದರು. ಕೇಂದ್ರದ ಸಚಿವರಾದ ಪ್ರಲ್ಹಾದ್ ಜೋಶಿ ಸುರೇಶ್ ಅಂಗಡಿ ಅವರೊಂದಿಗೆ ದೆಹಲಿಯ ಜಲಶಕ್ತಿ ಸಚಿವಾಲಯದ ಕಚೇರಿಯಲ್ಲಿ ನಡೆದ ಈ ಭೇಟಿಯ ಸಮಯದಲ್ಲಿ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುವಂತೆ 4.75 TMC ನೀರನ್ನು ಸದ್ಬಳಕೆ ಮಾಡಿಕೊಳ್ಳುವ …
Read More »ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗೋಕಾಕ ನಗರದ ಕೀರ್ತಿ ತಂದಿದ್ದಾನೆ.
ಗೋಕಾಕ: ಮದುವೆ, ಸಭೆ ಸಮಾರಂಭಗಳಲ್ಲಿ ಅಡುಗೆ ಮಾಡುತ್ತ ಜೀವನೋಪಾಯ ಸಾಗಿಸುತ್ತಿದ್ದ ಅಡುಗೆ ಭಟ್ಟನ ಮಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 98. 16 ಅಂಕಪಡೆದು ಉತ್ತಮ ಸಾಧನೆ ಮಾಡಿ ಗೋಕಾಕ ನಗರದ ಕೀರ್ತಿ ತಂದಿದ್ದಾನೆ. ಮೂಡಬಿದರಿಯ ಆಳ್ವಾಸ ಕಾಲೇಜಿನಲ್ಲಿ ಓದುತ್ತಿದ್ದ ಗೋಕಾಕದ ಅನಿಲ ರಾಜು ಬನ್ನಿಶೆಟ್ಟಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗಣಿತ, ಬಯೋಲಾಜಿ, ಹಿಂದಿ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಮೂಲಕ 600 ಅಂಕಗಳ ಪೈಕಿ …
Read More »ಸತತ 3 ಗಂಟೆ ಸುರಿದ ಭಾರೀ ಮಳೆ- ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದ ಮಹಿಳೆಯ ರಕ್ಷಣೆ
ಯಾದಗಿರಿ: ಕೊರೊನಾ ದಾಳಿಯಿಂದ ಯಾದಗಿರಿ ಜಿಲ್ಲೆಯ ಜನರು ನಲುಗಿ ಹೋಗಿದ್ರೆ, ಕೊರೊನಾಕ್ಕಿಂತ ನಾನೇನು ಕಮ್ಮಿಯಿಲ್ಲ ಎನ್ನುವಂತೆ ವರುಣರಾಯ ಸತತ ಮೂರು ಗಂಟೆಗಳ ಕಾಲ ಅಬ್ಬರಿಸಿದ್ದಾನೆ. ಮಳೆರಾಯನ ಅಬ್ಬರಕ್ಕೆ ರಸ್ತೆ, ಜಮೀನು ಕೊಚ್ಚಿ ಹೋಗಿವೆ. ಹಳ್ಳಗಳು ತುಂಬಿ ನದಿಯಂತೆ ಹರಿಯುತ್ತಿವೆ. ಜಮೀನಿನಲ್ಲಿ ಮಳೆ ನೀರು ಸಾಗರದಂತೆ ನಿಂತಿವೆ. ರೈತರು ಕೆಲಸ ಮುಗಿಸಿ ಊರಿಗೆ ತೆರಳದಂತಹ ಪರಿಸ್ಥಿತಿ ಯಾದಗಿರಿಯ ವಿವಿಧ ಹಳ್ಳಿಗಳಲ್ಲಿ ನಿರ್ಮಾಣವಾಗಿದೆ. ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ಸ್ಥಳೀಯರು ಸಕಾಲಕ್ಕೆ ರಕ್ಷಣೆ …
Read More »ಧಾರವಾಡ, ಬಳ್ಳಾರಿಯಲ್ಲಿ ಕೊರೊನಾ ಸೆಂಚೂರಿ- ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
ಬೆಂಗಳೂರು: ಇಂದು ಸಹ ರಾಜ್ಯಕ್ಕೆ ಕೊರೊನಾ ಸುನಾಮಿ ಅಪ್ಪಳಿಸಿದ್ದು, ಒಂದೇ ದಿನ 3,176 ಹೊಸ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು 2 ಸಾವಿರದ ಗಡಿಗೆ ಬಂದ್ರೆ, ಧಾರವಾಡ ಮತ್ತು ಬಳ್ಳಾರಿಯಲ್ಲಿ ಕೊರೊನಾ ಮಹಾಮಾರಿ ಸೆಂಚೂರಿ ಬಾರಿಸಿದೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1,975, ಧಾರವಾಡ 139, ಬಳ್ಳಾರಿ 136, ಮೈಸೂರು 99, ವಿಜಯಪುರ 80, ದಕ್ಷಿಣ ಕನ್ನಡ 76, ಕಲಬುರಗಿ 67, ಉಡುಪಿ 52, ಯಾದಗಿರಇ 49, ಉತ್ತರ …
Read More »ಬೆಂಗಳೂರಲ್ಲಿ ಎರಡೂವರೆ ಲಕ್ಷ ಸೋಂಕಿತರು…………….?
ಬೆಂಗಳೂರು: ರಾಜಧಾನಿ ಬೆಂಗಳೂರು ದಿನೇ ದಿನೇ ಭಯಾನಕವಾಗಿ ಮಾರ್ಪಡುತ್ತಿದೆ. ರಾಜ್ಯ ಸರ್ಕಾರದ ಪ್ರಕಾರ ಬೆಂಗಳೂರಲ್ಲಿ ಇರೋದು 23 ಸಾವಿರ ಸೋಂಕಿತರು. ಆದರೆ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ಬರೋಬ್ಬರಿ 2.23 ಲಕ್ಷ ಮಂದಿ ಇರಬಹುದು ಎಂದು ರಾಜ್ಯ ಕೊರೊನಾ ಕಾರ್ಯಪಡೆಯ ಸದಸ್ಯ ಡಾ.ಗಿರಿಧರ್ ಬಾಬು ಹೇಳುತ್ತಾರೆ. ರಾಜ್ಯ ಸರ್ಕಾರ ಸೋಂಕು ಹರಡುವಿಕೆ ನಿಯಂತ್ರಿಸಲು ವಿಫಲವಾಗಿರುವ ಕಾರಣ ಹೆಮ್ಮಾರಿ ಮಹಾ ಸ್ಫೋಟ ಆಗಿದ್ದು, ಎಷ್ಟೋ ಮಂದಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿರಬಹುದು. ಹಾಗೆಯೇ ಸೋಂಕು …
Read More »ಕೋರ್ಟ್ ಕಲಾಪವಿಲ್ಲ- ಬದುಕು ನಿರ್ವಹಣೆಗೆ ಪಾನಿಪುರಿ ಮಾರಲು ನಿಂತ ಹೈ ಕೋರ್ಟ್ ವಕೀಲ
ಮಂಡ್ಯ: ಕೊರೊನಾ ಮಹಮಾರಿಗೆ ಇಡೀ ದೇಶವೇ ನಲುಗಿದೆ. ಬಡವ, ಶ್ರೀಮಂತ ಎನ್ನದೆ ಅದೆಷ್ಟೋ ಜನ ಲಾಕ್‍ಡೌನ್‍ನಿಂದಾಗಿ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಕೋರ್ಟ್ ಕಲಾಪ ನಡೆಯದ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಮಂಡ್ಯದ ವಕೀಲರೊಬ್ಬರು ಪಾನಿಪುರಿ ವ್ಯಾಪಾರ ಶುರುಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದವರಾಗಿರುವ 30ವರ್ಷದ ಪ್ರತಾಪ್, ವೃತ್ತಿಯಲ್ಲಿ ಹೈಕೋರ್ಟ್ ವಕೀಲರು. ಕಳೆದ 6 ವರ್ಷಗಳಿಂದ ಹೈಕೋರ್ಟ್‍ನ ಹಿರಿಯ ವಕೀಲ ಉಮಾಕಾಂತ್ ಅವರ ಬಳಿ …
Read More »ಸಂಸದ ಭಗವಂತ್ ಖೂಬಾ ಸೇರಿ ಬೀದರ್‌ನಲ್ಲಿ 35 ಜನರಿಗೆ ಕೊರೊನಾ
ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಸಂಸದರು ಸೇರಿದಂತೆ 35 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಸಂಸದ ಭಗವಂತ್ ಖೂಬಾಗೆ ಇಂದು ಪಾಸಿಟಿವ್ ಧೃಡವಾಗಿದ್ದು, ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀದರ್ ನಲ್ಲಿ 11, ಬಾಲ್ಕಿಯಲ್ಲಿ 11, ಹುಮ್ನಬಾದ್ ನಲ್ಲಿ 10 ಬಸವಕಲ್ಯಾಣದಲ್ಲಿ 3 ಜಿಲ್ಲೆಯಾದ್ಯಂತ ಒಟ್ಟು 35 ಕೊರೊನಾ ಪಾಸಿಟಿವ್ ಪ್ರಕರಣಗಳು ಇಂದು ದೃಢಪಟ್ಟಿವೆ. ಸಂಸದರಿಗೆ ಹೇಗೆ ಕೊರೊನಾ ವಕ್ಕಿಸಿತು ಎಂಬುದೇ ಆಶ್ಚರ್ಯವಾಗಿದ್ದು, ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ. ಉಳಿದಂತೆ …
Read More »ವಾರದ ಹಿಂದೆ ಗಾಂಜಾ ಕೇಸಲ್ಲಿ ಅಂದರ್ ಆಗಿದ್ದ ಖೈದಿಗೂ ಕೊರೊನಾ ಪಾಸಿಟಿವ್
ಚಿಕ್ಕಮಗಳೂರು: ವಾರದ ಹಿಂದೆ ಗಾಂಜಾ ಕೇಸಲ್ಲಿ ಅಂದರ್ ಆಗಿದ್ದ ಖೈದಿಗೂ ಕೊರೊನಾ ಪಾಸಿಟಿವ್ ಬಂದು ಜೈಲಿನಿಂದ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಾರುತಿ 800 ಕಾರಿನಲ್ಲಿ 50 ಕೆ.ಜಿ. ಗಾಂಜಾವನ್ನ ಸಾಗಿಸುತ್ತಿದ್ದ ನಾಲ್ವರನ್ನ ಪೊಲೀಸರು ಬಂಧಿಸಿದ್ದರು. ಬಂಧಿತ ನಾಲ್ವರನ್ನು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಆ ನಾಲ್ವರಲ್ಲಿ ಓರ್ವನಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸೋಂಕಿತ ಖೈದಿಯನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. …
Read More »