Breaking News

ವರದಿಯಿಂದ ಎಚ್ಚೆತ್ತ ಸರ್ಕಾರ- ದುಪ್ಪಟ್ಟು ದರ ವಸೂಲಿ ಮಾಡದಂತೆ ಸಿಎಂ ಆದೇಶ

ಬೆಂಗಳೂರು: ತಮ್ಮ ಊರುಗಳಿಗೆ ಹೋಗಲು ಮುಂದಾಗಿದ್ದ ವಲಸೆ ಕಾರ್ಮಿಕರಿಂದ ದುಪ್ಪಟ್ಟು ಬಸ್ ಟಿಕೆಟ್ ದರವನ್ನು ಪಡೆಯಲಾಗುತ್ತಿರುವ ಕುರಿತು  ವರದಿ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ, ದುಪ್ಪಟ್ಟು ದರ ವಸೂಲಿ ಮಾಡದಂತೆ ಆದೇಶ ಹೊರಡಿಸಿದೆ. ವಲಸೆ ಕಾರ್ಮಿಕರಿಂದ ದುಪಟ್ಟು ಹಣ ಪಡೆಯಬೇಡಿ. ಒನ್ ಸೈಡ್ ಬಸ್ ಟಿಕೆಟ್ ದರವನ್ನು ಮಾತ್ರ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಕಾರ್ಮಿಕರು …

Read More »

ರಾಜ್ಯದಲ್ಲಿ ಇಂದು 9 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆ……..

ಬೆಂಗಳೂರು: ರಾಜ್ಯದಲ್ಲಿ ಇಂದು 9 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ. ಇಂದು ಬೆಳಗ್ಗೆ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ಬೀದರ್ 1, ತುಮಕೂರಿನಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 1, ವಿಜಯಪುರದಲ್ಲಿ 2, ಬೆಳಗಾವಿಯಲ್ಲಿ 1, ಬಾಗಲಕೋಟೆಯ ಜಮಖಂಡಿಯಲ್ಲಿ 1 ಹಾಗೂ ಬೆಂಗಳೂರು ನಗರದಲ್ಲಿ 1 ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಬೆಂಗಳೂರಿನಲ್ಲಿ ರೋಗಿ ನಂಬರ್ 557, 63ವರ್ಷದ ವೃದ್ಧ ಹಾಗೂ ಬೀದರ್ ನಲ್ಲಿ 83 …

Read More »

ಬೇಕಾಬಿಟ್ಟಿ ಹಣ ವಸೂಲಿಗೆ ಕಾರ್ಮಿಕರ ಆಕ್ರೋಶ – ಎಲ್ಲಿಗೆ ಎಷ್ಟು ದರ..?……..

ಬೆಂಗಳೂರು: ಲಾಕ್‍ಡೌನ್ ಘೋಷಣೆಯಿಂದ ಇಕ್ಕಟ್ಟಿಗೆ ಸಿಲುಕಿದ್ದ ವಲಸೆ ಕಾರ್ಮಿಕರು ಹಾಗೂ ಇತರರಿಗೆ ಗುಡ್‍ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ ಜೊತೆಗೆ ಶಾಕ್ ಕೂಡ ನೀಡಿದೆ. ಹೌದು. ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಪ್ರಯಾಣ ಆರಂಭಿಸಿದ ಬಸ್ಸುಗಳಿಗೆ ಡಬಲ್ ದರವನ್ನು ಪಡೆಯಲಾಗುತ್ತಿದೆ. ಒಂದೂವರೆ ತಿಂಗಳಿಂದ ಸಂಬಳವೂ ಇಲ್ಲದೆ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಕಾರ್ಮಿಕರಿಗೆ ಬಸ್ಸುಗಳ ಟಿಕೆಟ್ ದರ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಬಸ್ ಸಂಚಾರ ಆರಂಭದ ಸುದ್ದಿ ಕೇಳುತ್ತಿದ್ದಂತೆಯೇ ನೂರಾರು ವಲಸೆ …

Read More »

ಜಿಲ್ಲೆಯಲ್ಲಿ ಇಂದು ಮೊತ್ತೊಂದು ಪಾಸಿಟಿವ್ ಕೇಸ್…

ಬೆಳಗಾವಿ- ಶನಿವಾರ ಬೆಳಗಿನ ರಾಜ್ಯದ ಹೆಲ್ತ್ ಬುಲಿಟೀನ್ ಬಿಡುಗಡೆ ಆಗಿದೆ ,ಜಿಲ್ಲೆಯಲ್ಲಿ ಇಂದು ಮೊತ್ತೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 73 ಕ್ಕೇರಿದೆ ಹಿರೇಬಾಗೇವಾಡಿಯ ಶಂಕಿತನಿಗೆ ಸೊಂಕು ಇರುವದು ದೃಡವಾಗಿದ್ದು,ಹಿರೇಬಾಗೇವಾಡಿ ಗ್ರಾಮದಲ್ಲಿ ಸೊಂಕಿತರ ಸಂಖ್ಯೆ 37 ಕ್ಕೇರಿದಂತಾಗಿದೆ

Read More »

ದೇಶದಲ್ಲಿ ಇಂದು 68 ಸಿಆರ್‌ಪಿಎಫ್ ಯೋಧರಿಗೆ ಕೊರೊನಾ ಸೋಂಕು ದೃಢ………

ನವದೆಹಲಿ: ದೇಶದಲ್ಲಿ ಇಂದು 68 ಸಿಆರ್‌ಪಿಎಫ್ ಯೋಧರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈವರೆಗೆ 127 ಸಿಆರ್‌ಪಿಎಫ್ ಯೋಧರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಸಿಆರ್‌ಪಿಎಫ್ ಯೋಧರನ್ನು ರಾಜಧಾನಿ ದೆಹಲಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಕೊರೊನಾ ಪತ್ತೆಯಾದ ಎಲ್ಲ 68 ಸೈನಿಕರು ಪೂರ್ವ ದೆಹಲಿಯಲ್ಲಿರುವ ಬೆಟಾಲಿಯನ್‍ಗೆ ಸೇರಿದವರಾಗಿದ್ದಾರೆ. ಈ ಬೆಟಾಲಿಯನ್‍ನ ಸೈನಿಕರಲ್ಲಿ ಒಬ್ಬರಿಗೆ ಮೊದಲೇ ಸೋಂಕು ತಗುಲಿರುವುದು ದೃಢಪಟ್ಟಿತ್ತು ಈವರೆಗೂ ಪೂರ್ವ ದೆಹಲಿಯಲ್ಲಿರುವ …

Read More »

ಬೆಳಗಾವಿ-109 ಜನ ಕ್ವಾರಂಟೈನ್ ನಲ್ಲಿರುವವರಿಗೂ ಬಿಡುಗಡೆಯ ಭಾಗ್ಯ

ಬೆಳಗಾವಿ- ಹುಬ್ಬಳ್ಳಿ,ಧಾರವಾಡ,ದಾವಣಗೇರೆ,ಹಾವೇರಿ ,ಸೇರಿದಂತೆ, ವಿವಿಧ ಭಾಗಗಳಿಂದ ಲಾರಿಗಳ ಮೂಲಕ ಕದ್ದು ಮುಚ್ಚಿ ರಾಜಸ್ಥಾನ ಕ್ಕೆ ತೆರಳುವ ಸಂಧರ್ಭದಲ್ಲಿ ಬೆಳಗಾವಿಯಲ್ಲಿ ಕ್ವಾರಂಟೈನ್ ಆಗಿದ್ದ 150 ಕ್ಕೂ ಹೆಚ್ಚು ರಾಜಸ್ಥಾನ ಮೂಲದ ಕಾರ್ಮಿಕರಿಗೆ ಇಂದು ಬಿಡುಗಡೆಯ ಭಾಗ್ಯ ಬಂದಿದೆ. ಬೆಳಗಾವಿಯ ರಾಮದೇವ ಹೊಟೇಲ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಆವರಣದಲ್ಲಿರುವ ಮೆಟ್ರಿಕ್ ಪೂರ್ವ ವಿಧ್ಯಾರ್ಥಿಗಳ ಹಾಸ್ಟೇಲ್ ನಲ್ಲಿ 169 ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿತ್ತು . ನಿನ್ನೆ ಕಾರ್ಮಿಕ ದಿನಾಚರಣೆಯ ದಿನದಂದು …

Read More »

ಮಧ್ಯರಾತ್ರಿ ರೈತರ ಸಮಸ್ಯೆ ಆಲಿಸಿದ ಡಿ.ಕೆ ಶಿವಕುಮಾರ್………

ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯಿಂದ ಇದೀಗ ಮತ್ತೆ ಮೇ 17ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದ್ದು, ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಪರದಾಡುತ್ತಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾತ್ರೋ ರಾತ್ರಿ ರೈತರ ಸಮಸ್ಯೆ ಆಲಿಸಿದ್ದಲ್ಲದೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಹೊರವಲಯದ ಹೊಸಕೋಟೆ, ಕೋಲಾರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ದೇವನಹಳ್ಳಿ ಮತ್ತಿತರ ಕಡೆಯ ರೈತರು ತಾವು …

Read More »

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಲ್ಲಿಮೇ 2020ನೇ ತಿಂಗಳಿನಲ್ಲಿಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ ವಿತರಿಸಲು ಆಹಾರ ಧಾನ್ಯವನ್ನು ಬಿಡುಗಡೆ ಮಾಡಿದೆ.

ಹುಬ್ಬಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿಸಾರ್ವಜನಿಕರಿಗೆ ಆಹಾರ ಭದ್ರತೆ ಒದಗಿಸಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಲ್ಲಿಮೇ 2020ನೇ ತಿಂಗಳಿನಲ್ಲಿಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ ವಿತರಿಸಲು ಆಹಾರ ಧಾನ್ಯವನ್ನು ಬಿಡುಗಡೆ ಮಾಡಿದೆ. ಪಡಿತರ ಚೀಟಿದಾರರು ಓಟಿಪಿ ಅಥವಾ ಬಯೋ ಮೆಟ್ರಿಕ್‌ ಮೂಲಕ ಪಡಿತರವನ್ನು ಪಡೆಯಬಹುದು. ಜಿಲ್ಲೆಗೆ ಹೆಚ್ಚುವರಿ 12,857 ಮೆ. ಟನ್‌ ಅಕ್ಕಿ ಹಾಗೂ 3806 ಮೆ. ಟನ್‌ ತೊಗರಿಬೇಳೆ ಹಂಚಿಕೆಯಾಗಿದೆ. ಈ ಆಹಾರಧಾನ್ಯವನ್ನು ಭಾರತ ಆಹಾರ ನಿಗಮದಿಂದ ಎತ್ತುವಳಿ …

Read More »

ಸರಳವಾಗಿ ಗೃಹಪ್ರವೇಶ ಮಾಡಿ 500 ಬಡವರಿಗೆ ರೇಷನ್ ಕಿಟ್ ವಿತರಿಸಿದ ಉದ್ಯಮಿ..!

ಸರಳವಾಗಿ ಗೃಹಪ್ರವೇಶ ಮಾಡಿ 500 ಬಡವರಿಗೆ ರೇಷನ್ ಕಿಟ್ ವಿತರಿಸಿದ ಉದ್ಯಮಿ..! ರೋಹಿತ್ ರಾವಳ್ ಅವರು ಬೆಳಗಾವಿ ನಗರದ 500 ಬಡವರಿಗೆ ಉಚಿತ ಪಡಿತರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಬೆಳಗಾವಿ(ಮೇ.01): ಕೊರೋನಾ ಹರಡುವ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಬಡವರ ಕಷ್ಟ ಹೇಳತೀರದಾಗಿದೆ. ದಿನಗೂಲಿ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದ ಬಡಪಾಯಿಗಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ‌. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ 72 ಕೊರೋನಾ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಆತಂಕ …

Read More »

ಲಾಕ್‍ಡೌನ್ ಮುಗಿಯಲು ಇನ್ನೆರಡೇ ದಿನ ಬಾಕಿ ಇರುವಾಗಲೇಕಠಿಣ ರೂಲ್ಸ್……….

ಬೆಂಗಳೂರು: ಲಾಕ್‍ಡೌನ್ ಮುಗಿಯಲು ಇನ್ನೆರಡೇ ದಿನ ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಮೂರನೇ ಬಾರಿಗೆ ಲಾಕ್‍ಡೌನ್ ವಿಸ್ತರಿಸಿದೆ. ಆದರೆ ಲಾಕ್‍ಡೌನ್ ಮೂರರಲ್ಲಿ ಹೆಚ್ಚುವರಿ ನಿರ್ಬಂಧಗಳಿದ್ದು, ಈ ಬಾರಿ ಸಾರ್ವಜನಿಕ ಪ್ರದೇಶಗಳಲ್ಲೂ ರೂಲ್ಸ್ ಜಾರಿ ಮಾಡಲಾಗಿದೆ. ಕೊರೊನಾದ ಮೂರನೇ ಲಾಕ್‍ಡೌನ್‍ನಲ್ಲಿ ಸಾರ್ವಜನಿಕ ಸ್ಥಳಗಳಲ್ಲೂ ಕಠಿಣ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಓಡಾಡುವಂತಿಲ್ಲ. ಓಡಾಡಿದರೆ ಮಾಸ್ಕ್ ಧರಿಸಿರಲೇಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ …

Read More »