ಹಾಸನ: ಕೊರೊನಾದಿಂದಾಗಿ ಜಾಗತಿಕ ಮಟ್ಟದಲ್ಲಿ ರಾಜರಿಗೆ ರಾಜೀಕ ಭೀತಿ ಉಂಟಾಗಲಿದ್ದು, ರಾಜರಿಗೆ ತೊಂದರೆ, ನೋವು ಕಾಯಿಲೆ, ಅಪಮಾನ, ರಾಜಭೀತಿ ಉಂಟಾಗಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಕೋಡಿಮಠದಲ್ಲಿ ಮಾತನಾಡಿದ ಶಿವಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ರಾಜಭೀತಿ ಉಂಟಾಗಲಿದೆ. ಬರುವ ದಿನಗಳು ಹೆಚ್ಚು ಅಗೋಚರವಾಗಲಿದೆ ಭೂಮಿ ನಡುಗಲಿದೆ, ವಿಪರೀತ ಮಳೆಯಾಗಲಿದೆ ಎಂದು ಹೇಳಿದ್ದಾರೆ. ಈ ಕೊರೊನಾ ದೊಡ್ಡದೊಡ್ಡ ಜನರನ್ನು ಅಧಿಕಾರಸ್ತರನ್ನು ಮತ್ತು …
Read More »ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನ – ಬೆಳ್ಳಿ ದರವೂ ಭಾರೀ ಏರಿಕೆ
ನವದೆಹಲಿ: ಭಾರತದಲ್ಲಿ ಚಿನ್ನದ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಇದೆ ಮೊದಲ ಬಾರಿಗೆ ಚಿನ್ನದ ಬೆಲೆ 50 ಸಾವಿರ ರೂ. ಗಡಿ ದಾಟಿದೆ. 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬೆಂಗಳೂರಿನಲ್ಲಿ 50,720 ರೂ. ಆಗಿದ್ದರೆ ಚೆನ್ನೈನಲ್ಲಿ 51,380 ರೂ. ತಲುಪಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ 46,520 ರೂ.ಗೆ ಏರಿಕೆ ಆಗಿದ್ದರೆ ಚೆನ್ನೈನಲ್ಲಿ 47,100 ರೂ. ತಲುಪಿದೆ. ಚಿನ್ನದ ಜೊತೆ ಬೆಳ್ಳಿ …
Read More »ಭಗೀರಥ ಕಾಮೇಗೌಡರಿಗೆ ಕೊರೊನಾ ಪಾಸಿಟಿವ್……………
ಮಂಡ್ಯ: ಆಧುನಿಕ ಭಗೀರಥ ಎಂದೇ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಕಾಮೇಗೌಡರಿಗೆ ಕೊರೊನಾ ವೈರಸ್ ಬಂದಿದೆ. ಸ್ವತಃ ಖರ್ಚಿನಿಂದ ಕೆರೆಗಳನ್ನು ನಿರ್ಮಿಸಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಶಂಸೆ ಪಡೆದಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರಿಗೆ ಕೊರೊನಾ ಪಾಸಿಟಿವ್ ಇಂದು ಧೃಡವಾಗಿದೆ.ಕಾಮೇಗೌಡರು ಕಳೆದ 15 ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆರಂಭದಲ್ಲಿ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ …
Read More »ಕೊರೊನಾ ಗೆದ್ದು ಬಂದವರಿಂದ್ಲೇ ಜಾಗೃತಿ- ಜಿಲ್ಲಾಡಳಿತದಿಂದ ವಿನೂತನ ಪ್ರಯತ್ನ
ಹುಬ್ಬಳ್ಳಿ: ಕೊರೊನಾ ಭಯವನ್ನು ಹೋಗಲಾಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಲು ಜಿಲ್ಲಾಡಳಿತವು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ವಿನೂತನ ಪ್ರಯತ್ನವನ್ನು ಕೈಗೆತ್ತಿಕೊಂಡಿದೆ. ಈ ಮೂಲಕ ಜನರಲ್ಲಿರುವ ಆತಂಕ ದೂರ ಮಾಡುವ ಮಾರ್ಗವಾಗಿದೆ. ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದವರ ವಿಶೇಷ ತಂಡಗಳನ್ನು ರಚಿಸಿ, ಎನ್ಜಿಒ ಸಹಭಾಗಿತ್ವದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಆತ್ಮಸ್ಥೈರ್ಯ ಮೂಡಿಸುವ ಯೋಜನೆಯೊಂದನ್ನು ಜಿಲ್ಲಾಡಳಿತ ರೂಪಿಸಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಗೆ ಬಂದವರೇ ಇದಕ್ಕೆ …
Read More »ಬೆಳಗಾವಿ: ನಗರಕ್ಕೆ ಮತ್ತೊಂದು ಉಪ ನೋಂದಣಿ ಕಚೇರಿ ಮಂಜೂರಾಗಿದೆ.
ಬೆಳಗಾವಿ: ನಗರಕ್ಕೆ ಮತ್ತೊಂದು ಉಪ ನೋಂದಣಿ ಕಚೇರಿ ಮಂಜೂರಾಗಿದೆ. ದಕ್ಷಿಣ ಮತಕ್ಷೇತ್ರ ಶಾಸಕ ಅಭಯ ಪಾಟೀಲ್ ಅವರು ಮತ್ತೊಂದು ಉಪ ನೋಂದಣಿ ಆರಂಭಿಸುವಂತೆ ಸಿಎಂ, ಕಂದಾಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಸರ್ಕಾರ ನೂತನ ಉಪ ನೋಂದಣಿ ಕಚೇರಿ ಪ್ರಾರಂಭಿಸಲು ಅನುಮತಿ ನೀಡಿದೆ. ಶೀಘ್ರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಕಚೇರಿ ಆರಂಭಿಸಲಾಗುವುದು ಎಂದು ಶಾಸಕ ಅಭಯ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಬೆಳಗಾವಿ ತಾಲೂಕು ದೊಡ್ಡದಾಗಿದೆ. ಪ್ರಸ್ತುತ ಡಿಸಿ ಕಚೇರಿ …
Read More »ಬೆಳಗಾವಿ: ಜಿಲ್ಲೆಯ ಪೊಲೀಸ್ ಪೇದೆಗಳಿಗೂ ಕೋವಿಡ್ ಕಾಟ ಆರಂಭ……….
ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಪೊಲೀಸ್ ಪೇದೆಗಳಿಗೂ ಕೋವಿಡ್ ಕಾಟ ಆರಂಭವಾಗಿದೆ. ಮಚ್ಛೆಯಲ್ಲಿರುವ ಕೆಎಸ್ಆರ್ಪಿ 2 ನೇ ಪಡೆಯ ಓರ್ವ ಮಹಿಳಾ ಪೇದೆ ಸೇರಿ 12 ಕೆಎಸ್ಆರ್ಪಿ ಸಿಬ್ಬಂದಿಗೆ ಸೋಂಕು ತಗುಲಿದೆ. ಸೋಂಕು ತಗುಲಿದ ಸಿಬ್ಬಂದಿ ಎಲ್ಲರೂ ಜಿಲ್ಲೆಯ ಗಡಿ ಭಾಗದ ಕಾಗವಾಡ ಮತ್ತು ಕಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿಭಾಯಿಸಿದ್ರು. ಕೆಎಸ್ಆರ್ ಪಿ ಎರಡನೇ ಬೆಟಾಲಿಯನ್ ನಲ್ಲಿ 70 ಮಹಿಳಾ ಸಿಬ್ಬಂದಿ ಸೇರಿ …
Read More »ಕೋವಿಡ್ 19: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 37,724 ಪ್ರಕರಣ ಪತ್ತೆ, 648 ಮಂದಿ ಸಾವು
ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ37,724 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ11,92,915ಕ್ಕೆ ಏರಿಕೆಯಾದ್ರೆ, 648 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ಸದ್ಯ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 28,732ಕ್ಕೆ ಬಂದು ನಿಂತಿದೆ. 11,18,043 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 7,53,050ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 411133 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ …
Read More »ನಾನು ಗಂಡು ಆದ್ರೆ ಅಷ್ಟೇನು ಕೆಟ್ಟದಾಗಿ ಕಾಣಲ್ಲ – ‘ರಣಧೀರ’ ನಟಿ
ಹೈದರಾಬಾದ್: ನಟಿ ಖುಷ್ಬೂ ನಟನೆ ಜೊತೆಗೆ ರಾಜಕೀಯದಲ್ಲಿಯೂ ಬ್ಯುಸಿಯಾಗಿದ್ದಾರೆ. ಅಲ್ಲದೇ ಕಿರುತೆರೆಯಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ಖುಷ್ಬೂ ರೂಪಾಂತರದ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿರುವ ಖುಷ್ಬೂ ಇತ್ತೀಚಿಗೆ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಯಾಕೆಂದರೆ ಆ ಫೋಟೋದಲ್ಲಿ ನಟಿ ಖುಷ್ಬೂ ಪುರುಷ ಅವತಾರತಾಳಿದ್ದಾರೆ. ಹೌದು..ಫೇಸ್ ಆಪ್ ಮೂಲಕ ನಟಿ ಖುಷ್ಬೂ ತಮ್ಮ ಫೋಟೋವನ್ನು ಎಡಿಟ್ ಮಾಡಿ ಟ್ವಿಟ್ಟರಿನಲ್ಲಿ …
Read More »ವಿದೇಶಗಳಿಂದ ದೆಹಲಿಗೆ ಬರುವವರಿಗೆ 7 ದಿನ ಸಾಂಸ್ಥಿಕ ಕ್ವಾರೆಂಟೈನ್ ಕಡ್ಡಾಯ ..
ನವದೆಹಲಿ,ಜು.22- ಕೊರೊನಾ ಸೋಂಕು ಹರಡುವಿಕೆ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರಿಗಾಗಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ಗೆ ಒಳಗಾಗಬೇಕು. ಈ ಸಾಂಸ್ಥಿಕ ಕ್ವಾರೆಂಟೈನ್ ವೆಚ್ಚವನ್ನು ಆ ವ್ಯಕ್ತಿಗಳೇ ಪಾವತಿಸಬೇಕಿದೆ. ಏಳು ದಿನಗಳ ಮಟ್ಟಿಗೆ ಸಾಂಸ್ಥಿಕ ಕ್ವಾರೆಂಟೈನ್ ಹಾಗೂ …
Read More »4 ತಿಂಗಳ ನಂತರ ರಾಜ್ಯಪಾಲರನ್ನು ಭೇಟಿಮಾಡಿದ ಸಿಎಂ, ಮಹತ್ವದ ಮಾತುಕತೆ
ಬೆಂಗಳೂರು,ಜು.22- ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ, ಸರ್ಕಾರ ತೆಗೆದುಕೊಂಡಿರುವ ಕ್ರಮಗಳು, ಭೂ ಸುಧಾರಣಾ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಮೇಲ್ನೋಟಕ್ಕೆ ಇದೊಂದು ಸೌಹಾರ್ದಯುತವಾದ ಭೇಟಿ ಎಂದು ಹೇಳಲಾಗಿದೆ. ಸುಮಾರು ನಾಲ್ಕು ತಿಂಗಳ ನಂತರ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿಯಾದ ಸಿಎಂ ಯಡಿಯೂರಪ್ಪನವರು, ರಾಜ್ಯದ ಸ್ಥಿತಿಗತಿ, ಕಾನೂನು ಸುವ್ಯವಸ್ಥೆ, ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ಬೆಳವಣಿಗೆಗಳ …
Read More »