ಬೆಂಗಳೂರು : ಶಿಕ್ಷಕರ ವರ್ಗಾವಣೆ ಸಂಬಂಧ ಇತ್ತೀಚೆಗೆ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಕೂಡ ಹೊರಡಿಸಿತ್ತು. ಈಗ ಅಧಿಕಾರಿಗಳ ಸಭೆಯಲ್ಲಿ ಆಗಸ್ಟ್ ನಲ್ಲಿ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ ಸಿದ್ಧಗೊಳಿಸಿ, ಪ್ರಕಟಿಸುವಂತೆ ಅಧಿಕಾರಿಗಳಿಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ. ಶಿಕ್ಷಕರ ವರ್ಗಾವಣೆಯ ಸಂಬಂಧ ನಿಯಮಗಳನ್ನು ಶಿಕ್ಷಣ ಇಲಾಖೆ ಅಂತಿಮಗೊಳಿಸಿ. ಈ ಕಾಯ್ದೆಗೆ ಈಗಾಗಲೇ ಅಧಿವೇಶನದಲ್ಲೂ ಅನುಮೋದನೆ ದೊರೆತಿದೆ. ಹೀಗಾಗಿ ಕೂಡಲೇ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂಬುದಾಗಿ ಇಂದು …
Read More »ಲೈಂಗಿಕ ಕಾರ್ಯಕರ್ತೆಯರ ಮಕ್ಕಳನ್ನು ಆರ್ಥಿಕವಾಗಿ ಪೋಷಣೆ ಮಾಡಲು ಮುಂದಾಗಿದ್ದಾರೆಗೌತಮ್ ಗಂಭೀರ್.
ನವದೆಹಲಿ: ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಲೈಂಗಿಕ ಕಾರ್ಯಕರ್ತೆಯರ ಮಕ್ಕಳನ್ನು ಆರ್ಥಿಕವಾಗಿ ಪೋಷಣೆ ಮಾಡಲು ಮುಂದಾಗಿದ್ದಾರೆ. ಹೌದು..ರಾಷ್ಟ್ರ ರಾಜಧಾನಿಯ ಜಿಬಿ ರಸ್ತೆ ಪ್ರದೇಶಯಲ್ಲಿರುವ ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳ ಪೋಷಣೆಗೆ ಗೌತಮ್ ಗಂಭೀರ್ ಮುಂದಾಗಿದ್ದಾರೆ. ಅಂದರೆ 25 ಮಕ್ಕಳ ಶಾಲೆಯ ಶುಲ್ಕ, ಆರೋಗ್ಯ, ಆಹಾರ, ಔಷಧಿ ಮತ್ತು ಇತರ ವಿವಿಧ ವೆಚ್ಚಗಳನ್ನು ಭರಿಸುತ್ತಾರೆ. ಗೌತಮ್ ಗಂಭೀರ್ ತಮ್ಮ ಈ ಕಾರ್ಯಕ್ಕೆ “PANKH” (ರೆಕ್ಕೆಗಳು) ಎಂದು ಕರೆದಿದ್ದಾರೆ. ಸಂಸದರು …
Read More »ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನಿರಾಕರಿಸಿದೆ.ಮನೆಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಿಸಬಹುದು.
ಬೆಂಗಳೂರು : ನಗರದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನಿರಾಕರಿಸಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಸಾರ್ವಜನಿಕ ಪ್ರದೇಶದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವವರ ವಿರುದ್ಧವೂ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಮಂಜುನಾಥ್ ಪ್ರಸಾದ್ ಎಚ್ಚರಿಸಿದ್ದಾರೆ. ಸಾರ್ವಜನಿಕರು ಮನೆಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಿಸಬಹುದು. ಪರಿಸರ ಸ್ನೇಹಿ ಗಣಪನಿಗೆ ಮಾತ್ರ ಅವಕಾಶ. ಬಿಬಿಎಂಪಿ ಕೆರೆಗಳು, ಕಲ್ಯಾಣಿಗಳಲ್ಲಿ ಗಣೇಶ …
Read More »ಕೊರೊನಾ ಸೋಂಕಿತರಿಗಾಗಿ 110 ವೆಂಟಿಲೆಟರ್ :ಕಾಂಗ್ರೆಸ್ ನಗರ ಅಧ್ಯಕ್ಷ ರಾಜು ಸೇಠ
ಬೆಳಗಾವಿ: ಕೊರೊನಾ ಸೋಂಕಿತರ ಆಕ್ಸಿಜನ್ ಕೊರತೆಯಿಂದ ಸಾವೀಗಿಡಾಗುತ್ತಿರುವುದರಿಂದ ಕಾಂಗ್ರೆಸ್ ನಗರ ಅಧ್ಯಕ್ಷ ರಾಜು ಸೇಠ 110 ಆಕ್ಸಿಜನ್ ಸಿಲಿಂಡರ್ ಗಳ ವ್ಯವಸ್ಥೆ ಮಾಡಿದ್ದು, ಜನರ ಮೆಚ್ಚುಗೆ ವ್ಯಕ್ತ ವಾಗುತ್ತಿದೆ. ನಗರದಲ್ಲಿ ಕೊರೊನಾ ಸೋಂಕಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿ.ಪಿ., ಶುಗರ್ ಕಾಯಿಲೆಯಿಂದ ಬಳಲುತ್ತಿರುವ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಮೃತಪಡುತ್ತಿದ್ದು, ಇದರಿಂದ ಸಮಸ್ಯೆ ಅರಿತ ರಾಜು ಸೇಠ ವಿಶೇಷವಾದ ಸೌಲಭ್ಯವನ್ನು ಒದಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಅಂಜುಮನ್ ಹಾಲ್ ನಲ್ಲಿ 110 …
Read More »ಜಿಲ್ಲೆಯ ಸಚಿವರ ವಿರುದ್ಧ ‘ಮಂತ್ರಿಗಳು ಎಲ್ಲಿದೀರಿ ಹುಡುಕಿಕೊಡಿ’ ಎಂಬ ಅಭಿಯಾನ ಆರಂಭಿಸುವಂತೆ ಮಾಧ್ಯಮಗಳಿಗೆ ಸತೀಶ್ ಜಾರಕಿಹೊಳಿ ಸಲಹೆ
ಬೆಳಗಾವಿ: ಬೆಳಗಾವಿಯಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜಿಲ್ಲೆಯ ಸಚಿವರ ವಿರುದ್ಧ ‘ಮಂತ್ರಿಗಳು ಎಲ್ಲಿದೀರಿ ಹುಡುಕಿಕೊಡಿ’ ಎಂಬ ಅಭಿಯಾನ ಆರಂಭಿಸುವಂತೆ ಮಾಧ್ಯಮಗಳಿಗೆ ಸತೀಶ್ ಜಾರಕಿಹೊಳಿ ಸಲಹೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು ಮಂತ್ರಿಗಳು ಎಷ್ಟು ಸಭೆ ನಡೆಸಬೇಕಾಗಿತ್ತೋ ಅಷ್ಟು ಮಾಡಿಲ್ಲ, ಜನರಿಗೆ ಸ್ಪಂದಿಸಿಲ್ಲ. ಬಹಳಷ್ಟು ಮಂತ್ರಿಗಳು ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ. ತಮ್ಮ ಕ್ಷೇತ್ರಕ್ಕೂ ಬಂದಿಲ್ಲ, ತಮ್ಮ ಜಿಲ್ಲೆಗೂ ಬಂದಿಲ್ಲ ಇದೆಲ್ಲಾ ಜನರಿಗೂ ಗೊತ್ತು, ಜನ ತೀರ್ಮಾನ …
Read More »ಕೊರೊನಾ ನಿರ್ವಹಣೆ ಬಗ್ಗೆ ಲೆಕ್ಕ ಕೊಡುವ ವಿಚಾರದಲ್ಲಿ ಸರ್ಕಾರ ಮರೆ ಮಾಚುತ್ತಿದೆ:ಸತೀಶ್ ಜಾರಕಿಹೊಳಿ
ಬೆಳಗಾವಿ: ಕೊರೊನಾ ನಿರ್ವಹಣೆ ಬಗ್ಗೆ ಲೆಕ್ಕ ಕೊಡುವ ವಿಚಾರದಲ್ಲಿ ಸರ್ಕಾರ ಮರೆ ಮಾಚುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಕೋವಿಡ್ ನಿರ್ವಹಣೆಗೆ ಕಾಂಗ್ರೆಸ್ ಕೊಡುಗೆ ಶುನ್ಯ ಎಂಬ ಸಚಿವ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಕೊಡುಗೆ ಏನಿದೆ ಎಂಬುದಕ್ಕೆ ಉದಾಹರಣೆ ನಾನೂ ಸೇರಿ ನಮ್ಮ ಶಾಸಕರೇ ಇದ್ದಾರೆ. ಕೆಪಿಸಿಸಿ ಕೊವಿಡ ನಿರ್ವಹಣೆಯಲ್ಲಿ ತೊಡಗಿಕೊಂಡಿದೆ. ಇದೆಲ್ಲ ಅವರು ಹೇಳುವುದು ಅವಶ್ಯಕತೆಯಿಲ್ಲ. …
Read More »ಯುವಕನೊಬ್ಬ ಗೂಡ್ಸ್ ರೈಲಿಗೆ ಸಿಲುಕಿ ಆತ್ಮಹತ್ಯೆ…….
ಬೆಳಗಾವಿ: ಯುವಕನೊಬ್ಬ ಗೂಡ್ಸ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನಗೋಳ ರೈಲ್ವೆ ಗೇಟ್ ಬಳಿ ಗುರುವಾರ ಸಂಜೆ ನಡೆದಿದೆ. ಕಣಬರ್ಗಿ ಗ್ರಾಮದ ಶರತ್ ಕಾಟೇ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಿಎ ಆಗುವ ಕನಸು ಕಂಡಿದ್ದ ಈತ, ಕಳೆದ 1 ವರ್ಷದಿಂದ ಪ್ರೀತಿಯ ಬಲೆಗೆ ಬಿದ್ದಿದ್ದನು. ಹೀಗಾಗಿ ಅವರಿಬ್ಬರ ನಡುವಿನ ಪ್ರೇಮ ವೈಫಲ್ಯವೇ ಅವನ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ರೇಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ಭೇಟಿ …
Read More »ಸಚಿವ ಬಿ.ಸಿ.ಪಾಟೀಲ್ ಪತ್ನಿ, ಅಳಿಯ ಸೇರಿ ಐವರಿಗೆ ಕೊರೊನಾ ಸೋಂಕು
ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಪತ್ನಿ, ಅಳಿಯ ಹಾಗೂ ಅವರ ನಿವಾಸದ ಸಿಬ್ಬಂದಿ ಸೇರಿ ಒಟ್ಟು ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದು, ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗ ಸೇರಿದಂತೆ ಒಟ್ಟು ಐವರಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಅವರನ್ನು ನಿರ್ದಿಷ್ಟವಾದ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದೆ. ಅವರೆಲ್ಲ ಬೇಗ ಗುಣಮುಖರಾಗಿ ಬರಲಿ …
Read More »ಕೊರೊನಾ ವಾರಿಯರ್ಸ್‍ಗೆ ಕೊಲೆ ಬೆದರಿಕೆ- ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿ ಸೂಚನೆ
ಚಾಮರಾಜನಗರ: ಕಂಟೈನ್ಮೆಂಟ್ ಝೋನ್‍ಗೆ ಬಂದರೆ ಮಚ್ಚು, ಲಾಂಗ್ ತರುತ್ತೇವೆ ಎಂದು ಕೊರೊನಾ ವಾರಿಯರ್ಸ್ ಗೆ ಜೀವ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಕೊಲೆ ಬೆದರಿಕೆ ಹಾಕುಲಾಗುತ್ತಿದೆ ರಕ್ಷಣೆ ಬೇಕು ಎಂದು ನರ್ಸ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗುಂಡ್ಲುಪೇಟೆಯಲ್ಲಿ ನಡೆದ ಪುನಶ್ಚೇತನ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ದುಷ್ಕರ್ಮಿಗಳ …
Read More »ರಾಮಮಂದಿರಕ್ಕೆ ಅಂಜನಾದ್ರಿ ಶಿಲೆ – ಪೇಜಾವರಶ್ರೀ ಮೂಲಕ ಅಯೋಧ್ಯೆಗೆ ರವಾನೆ
ಉಡುಪಿ: ಭಗವಾನ್ ಶ್ರೀ ರಾಮಚಂದ್ರನ ಮಂದಿರಕ್ಕೆ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯಲಿದೆ. ರಾಮಮಂದಿರ ಶಿಲಾನ್ಯಾಸದ ಹಿನ್ನೆಲೆಯಲ್ಲಿ ದೇಶವ್ಯಾಪಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದೆ. ಇಡೀ ದೇಶದ ಪವಿತ್ರ ಕ್ಷೇತ್ರಗಳ ಮಣ್ಣು ಮತ್ತು ನೀರಿನ ಸಂಗ್ರಹ ಒಂದೆಡೆ ನಡೆಯುತ್ತಿದ್ದರೆ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆಯನ್ನು ಮೆರವಣಿಗೆ ಮೂಲಕ ತಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಒಪ್ಪಿಸಲಾಗಿದೆ. ಶ್ರೀರಾಮ ಸೇನೆಯ ರಾಜ್ಯ ಮುಖಂಡ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮೆರವಣಿಗೆಯ …
Read More »