Breaking News

ರಾಮ ಮಂದಿರ ಶಿಲಾನ್ಯಾಸ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಹೈ ಅಲರ್ಟ್..!

ಬೆಂಗಳೂರು:ಅಯೋಧ್ಯೆಯಲ್ಲಿ ನಾಳೆ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ರಾಜಧಾನಿ ಬೆಂಗಳೂರು,ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮೈಸೂರು, ಮಡಿಕೇರಿ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ಕಲಬುರಗಿ, ಸೇರಿದಂತೆ ರಾಜ್ಯಾದ್ಯಂತ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಈ ಸಂಬಂಧ …

Read More »

ಕೊರೊನಾ ಅನಾರೋಗ್ಯದ ನಡುವೆಯೂ ಕರ್ತವ್ಯ ನಿಷ್ಠೆ ಮೆರೆದ ಸಿಎಂ ಯಡಿಯೂರಪ್ಪ – ವರ್ಕ್ ಫ್ರಮ್ ಹಾಸ್ಪಿಟಲ್

ಬೆಂಗಳೂರು: ಕೊರೊನಾ ಸೋಂಕು ತಗುಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನಾರೋಗ್ಯದ ನಡುವೆಯೂ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಇವತ್ತು ಕೆಲವು ಮಹತ್ವದ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಆಸ್ಪತ್ರೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದು ಈ ಮೂಲಕ ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಕರ್ತವ್ಯನಿಷ್ಠೆ ಮೆರೆಯುವ ಮೂಲಕ ರಾಜ್ಯದ ಜನತೆಗೆ ಸಂದೇಶ ರವಾನಿಸಿದ್ದಾರೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸಿಎಂ ಸರ್ಕಾರಿ ಕಚೇರಿ ಕೆಲಸ ಕಾರ್ಯಗಳಿಗೆ ಯಾವುದೇ …

Read More »

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಗೂ ಕರೋನಾ ಸೊಂಕು ಧೃಡ, ಆತಂಕದಲ್ಲಿ ಕೇಂದ್ರ ಸಚಿವ ಸಂಪುಟ ಸದ್ಯಸರು

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ನಂತರ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕರೋನವೈರಸ್ ಸೊಂಕಿಗೆ ಈಡಾಗಿದ್ದಾರೆ ಎನ್ನಲಾಗಿದೆ. ಪ್ರಧಾನ್ ಅವರನ್ನು ಹರಿಯಾಣದ ಗುರುಗ್ರಾಮ್ (ಹಿಂದಿನ ಗುರ್ಗಾಂವ್) ದ ಮೇದಂತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ……. *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ …

Read More »

ಕೊರೊನಾಗೆ ರಾಮಬಾಣವಾದ ಈ ಮಾತ್ರೆ ಬೆಲೆ 35 ರೂ. ಮಾತ್ರ

ನವದೆಹಲಿ: ಕೋವಿಡ್ ಚಿಕಿತ್ಸೆಗೆ ಸನ್ ಫಾರ್ಮಾಸ್ಯುಟಿಕಲ್ಸ್ ಇಂಡಸ್ಟ್ರೀಸ್ ವತಿಯಿಂದ ಫೆವಿಪಿರಾವಿರ್ ಮಾತ್ರೆಯನ್ನು ಪ್ಲೂಗಾರ್ಡ್ ಹೆಸರಲ್ಲಿ ಬಿಡುಗಡೆ ಮಾಡಲಾಗಿದ್ದು 35 ರೂ. ದರ ನಿಗದಿ ಮಾಡಲಾಗಿದೆ. ಪ್ಲೂಗಾರ್ಡ್ ಹೆಸರಿನ ಫೆವಿಪಿರಾವಿರ್ 200 ಎಂಜಿ ಮಾತ್ರೆಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ತಿಳಿಸಿದೆ. ಕಡಿಮೆ ಮತ್ತು ಮಧ್ಯಮ ಪ್ರಮಾಣದ ಕೊರೋನಾ ಲಕ್ಷಣವಿರುವ ರೋಗಿಗಳಿಗೆ ಇದನ್ನು ಬಿಡುಗಡೆ ಮಾಡಲಾಗಿದೆ. ವೈರಾಣು ನಿರೋಧಕವಾಗಿರುವ ಒಂದು ಮಾತ್ರೆಗೆ 35 ರೂ. ದರ ನಿಗದಿ ಮಾಡಲಾಗಿದೆ. …

Read More »

ಇಂದು 170 ಜನರಿಗೆ ಕೊರೊನಾ ಸೋಂಕು ಧೃಡ

ಉಡುಪಿ : ಜಿಲ್ಲೆಯಲ್ಲಿ ಇಂದು 170 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 4970 ಕ್ಕೆ ಏರಿಕೆಯಾಗಿದೆ. ಅಂತೆಯೇ ಜಿಲ್ಲೆಯಲ್ಲಿ ಇಂದು 1522 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 170 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಜಿಲ್ಲೆಯಲ್ಲಿ ಇಂದಿನ 170 ಹೊಸ ಸೋಂಕು ಪ್ರಕರಣಗಳಿಂದ ಒಟ್ಟು ಸೋಂಕಿತರ ಸಂಖ್ಯೆ 4970 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 2948 ಜನರು ಗುಣಮುಖರಾಗಿದ್ದಾರೆ. …

Read More »

32 ಸೆಕೆಂಡುಗಳ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ ರಾಮ ಮಂದಿರ ಭೂಮಿ ಪೂಜೆ

ಕೋಟ್ಯಂತರ ಭಕ್ತರು ಎದುರು ನೋಡ್ತಿದ್ದ ರಾಮ ಮಂದಿರದ ಭೂಮಿ ಪೂಜೆಯ ದಿನವು ಬಂದೇ ಬಿಟ್ಟಿದೆ. ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ಸಜ್ಜಾಗಿರೋ ಅಯೋಧ್ಯೆ ನಗರ ಈಗಾಗಲೇ ಝಗಮಗಿಸುತ್ತಿದೆ.. ಮನೆ ಮನೆಯಲ್ಲಿ ದೀಪ ಹಚ್ಚಿ ಸಂಭ್ರಮಿಸಲಾಗ್ತಿದೆ. ಬೀದಿ ಬೀದಿಯಲ್ಲಿ ಬಣ್ಣ ಹಚ್ಚಿ ಸಿಂಗಾರ ಮಾಡಲಾಗಿದೆ. ಗಲ್ಲಿ ಗಲ್ಲಿಯಲ್ಲಿ ಪ್ರಭು ಶ್ರೀ ರಾಮ ಪೋಸ್ಟರ್​ಗಳನ್ನ ಅಂಟಿಸಲಾಗಿದೆ. ದೀಪಾವಳಿ ಸಂಭ್ರಮದಂತೆ ಇಡೀ ಅಯೋಧ್ಯೆ ನಗರ ಕಂಗೊಳಿಸುತ್ತಿದೆ. ಭೂಮಿ ಪೂಜೆಗೆ 32 ಸೆಕೆಂಡ್​ಗಳ ಮೂಹೂರ್ತ ಭೂಮಿ …

Read More »

24ಗಂಟೆಯಲ್ಲಿ ಪತ್ತೆಯಾದ ಹೊಸ ಕರೊನಾ ಪ್ರಕರಣಗಳಿಗಿಂತ ಡಿಸ್​​ಚಾರ್ಜ್​ ಆದವರೇ ಹೆಚ್ಚು; 110 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಕರೊನಾದಿಂದ ಚೇತರಿಕೆ ಕಾಣುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಸಮಾಧಾನ ಮೂಡಿಸಿದೆ. ಕಳೆದ 24 ಗಂಟೆಯಲ್ಲಿ ಹೊಸ ಕರೊನಾ ಪ್ರಕರಣಗಳಿಗಿಂತ, ಸೋಂಕಿನಿಂದ ಮುಕ್ತರಾಗಿ ಡಿಸ್​ಚಾರ್ಜ್ ಆದವರ ಸಂಖ್ಯೆಯೇ ತುಸು ಜಾಸ್ತಿ ಇದೆ. 24 ಗಂಟೆಯಲ್ಲಿ 6,259 ಹೊಸ ಕರೊನಾ ಕೇಸ್​​ಗಳು ಪತ್ತೆಯಾಗಿದ್ದು, ಒಟ್ಟು 6,777 ಮಂದಿ ಗುಣಮುಖರಾಗಿ, ಡಿಸ್​​ಚಾರ್ಜ್​ ಆಗಿದ್ದಾರೆ. 110 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗಿನ ಕರೊನಾ ಸೋಂಕಿತರ ಸಂಖ್ಯೆ 1,45.830ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 2704. ಹಾಗೇ ಡಿಸ್​​ಚಾರ್ಜ್​ …

Read More »

ಆಲದ ಮರವೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ

ಚಾಮರಾಜನಗರ: ರಸ್ತೆ ಬದಿಯಲ್ಲಿದ್ದ ಬೃಹತ್ ಆಲದ ಮರವೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಹನೂರು ಪಟ್ಟಣದ ಹೊರ ವಲಯದ ಮಲೆಮಹದೇಶ್ವರ ಕ್ರೀಡಾಂಗಣದ ಬಳಿ ಇಂದು ಬೆಳಿಗ್ಗೆ ನಡೆದಿದೆ. ಗಾಯಗೊಂಡವರನ್ನು ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕೀರೆಪಾತಿ ಗ್ರಾಮದ ಜೋಸೆಫ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಇಂದು ಬೆಳಗ್ಗೆ 6:30ರ ಸುಮಾರಿಗೆ ಮಾರ್ಟಳ್ಳಿಯಿಂದ ಹನೂರಿಗೆ ಬೈಕಿನಲ್ಲಿ ಹೊರಟಿದ್ದರು. ಬೈಕ್ ಅಜ್ಜೀಪುರ ರಸ್ತೆಯ ಕ್ರೀಡಾಂಗಣದ …

Read More »

ಗೋಕಾಕ್ , ಮೂಡಲಗಿ ತಾಲ್ಲೂಕಿನಲ್ಲಿ ಮಂಗಳವಾರ ಒಂದೇ ದಿನ 65 ಜನರಿಗೆ ಕೊರೊನಾ ಸೋಂಕು

ಗೋಕಾಕ್:  ಗೋಕಾಕ್ , ಮೂಡಲಗಿ ತಾಲ್ಲೂಕಿನಲ್ಲಿ  ಮಂಗಳವಾರ ಒಂದೇ ದಿನ 65 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ. ಇಂದು ಮಾಹಿತಿ ನೀಡಿರುವ ಅವರು , ಮೂಡಲಗಿ ಸಿಡಿಪಿಓ ಸೇರಿ ಎರಡು ತಾಲ್ಲೂಕಿನಲ್ಲಿ 65 ಜನರಿಗೆ ಕೊರೊನಾ ದೃಢಪಟ್ಟಿದೆ. ಗೋಕಾಕಿನ ಸಂಗಮ ನಗರದ 65 ವರ್ಷದ ವೃದ್ದೆ ಸೋಂಕಿಗೆ ಬಲಿಯಾಗಿದ್ದಾರೆ. ಗೋಕಾಕ ನಗರದಲ್ಲಿ-49 , ಕರಗುಪ್ಪಿ -1 , ಮೂಡಲಗಿ -2 , …

Read More »

ಚಿಕ್ಕೋಡಿ ಪೊಲೀಸ ಠಾಣೆ ಯನ್ನು ಸೀಲ್‍ಡೌನ್ ಮಾಡಲಾಗಿದೆ.

ಚಿಕ್ಕೋಡಿ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಇದೀಗ ಚಿಕ್ಕೋಡಿ ಪೊಲೀಸ ಠಾಣೆಗೂ ವಕ್ಕರಿಸಿಕೊಂಡಿದ್ದು, ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೊಂಕು ಧೃಢಪಟ್ಟಿದ್ದು,  ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.

Read More »