Breaking News

ಯಡಿಯೂರಪ್ಪರನ್ನು ಬದಲಾಯಿಸಿದರೆ, ಭಾರೀ ಏಟು ಬೀಳಲಿದೆ ಎಂಬ ಭೀತಿ ಹೈ ಕಮಾಂಡ್‍ಗೆ ಎದುರಾಗಿದೆ.

ಬೆಂಗಳೂರು, ನ.29- ವೀರಶೈವ ಲಿಂಗಾಯಿತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಸ್ತ್ರ ಪ್ರಯೋಗ ಮಾಡಿದ ಯಡಿಯೂರಪ್ಪ ಅವರ ರಾಜತಾಂತ್ರಿಕತೆ ಕಂಡು ಬಿಜೆಪಿ ಹೈಕಮಾಂಡ್ ಬೆಚ್ಚಿ ಬಿದ್ದಿದೆ. ಬಿ.ಎಸ್.ವೈ ನಾಯಕತ್ವ ಬದಲಾವಣೆಯ ತಯಾರಿಯಲ್ಲಿದ್ದ ಬಿಜೆಪಿ ಹೈ ಕಮಾಂಡ್‍ಗೆ ಒಬಿಸಿ ವಿಚಾರ ಬಿಸಿ ತುಪ್ಪ ಎಂಬ ವಾಸ್ತವತೆ ಅರಿವಾಗಿದೆ. ಆ ಮೂಲಕ ಯಡಿಯೂರಪ್ಪ ಪ್ರಬಲ ಸಮುದಾಯದ ಸಂಪೂರ್ಣ ವಿಶ್ವಾಸ ಗಳಿಸಲಿದ್ದಾರೆ ಎಂಬ ಅಂಶ ಬಿಜೆಪಿ ವರಿಷ್ಠರಿ ಮನವರಿಕೆಯಾಗಿದೆ. ನಾಯಕತ್ವ ಬದಲಾವಣೆಯ ಪ್ರಕ್ರಿಯೆಯಲ್ಲಿರುವ ಹೈ …

Read More »

ಕನ್ನಡಪರ ಸಂಘಟನೆಗಳು ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಬೆಂಬಲ

ಬೆಂಗಳೂರು, ನ.29- ಕನ್ನಡಪರ ಸಂಘಟನೆಗಳು ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಬೆಂಬಲ ವ್ಯಕ್ತಪಡಿಸಿದೆ.ನಗರದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಯುವ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್‍ಗೌಡ ಅವರು ಡಿ.5ರಂದು ಬಂದ್‍ಗೆ ಪೂರ್ಣ ಬೆಂಬಲ ನೀಡುತ್ತೇವೆ. ನಗರದ ಜನತೆ ಕೂಡ ಬೆಂಬಲಿಸಬೇಕೆಂದು ಮನವಿ ಮಾಡಿದರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಉಳಿದವರು ಬಂಧುಗಳಂತಿರಬೇಕು. ಭಾಷೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ಎಂಇಎಸ್, ಶಿವಸೇನೆ, ಎನ್‍ಸಿಪಿ …

Read More »

ಸದ್ಯಕ್ಕೆ ಸಂಪುಟ ವಿಸ್ತರಣೆ ಡೌಟ್..! B.S.Y.

ಬೆಂಗಳೂರು, ನ.29- ಸಚಿವ ಸಂಪುಟ ವಿಸ್ತರಣೆಯಾಗಬೇಕಾದರೆ ಎಲ್ಲರೂ ಕಾಯಲೇಬೇಕು ಎನ್ನುವ ಮೂಲಕ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗುವುದು ಬಹುತೇಕ ಖಚಿತವಾಗಿದೆ.ಸಂಪುಟ ವಿಸ್ತರಣೆಯಾವಾಗ ಆಗುತ್ತೋ ನೋಡೋಣ ಅಲ್ಲಿಯವರೆಗೂ ನಾವು ನೀವು (ಮಾಧ್ಯಮದವರು) ಕಾಯಲೇಬೇಕು ಎಂದು ಹೇಳುವ ಮೂಲಕ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ಸಿಎಂ ಯಡಿಯೂರಪ್ಪ ತಣ್ಣೀರೆರಚಿದ್ದಾರೆ. ಚಿತ್ರದುರ್ಗಕ್ಕೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಾಗಬೇಕಾದರೆ ನಾವು ಕಾಯಲೇಬೇಕು ಅದು ಯಾವಾಗ …

Read More »

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಬೆಂಗಳೂರು, ನ.29-ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸನ್ನು ಸದೃಢಗೊಳಿಸುವುದೂ ಸೇರಿದಂತೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ನಾಳೆ ಪಕ್ಷದ ಹಿರಿಯ ನಾಯಕರುಗಳ ಮಹತ್ವದ ಸಭೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಮಾಜಿ ಸಂಸದರಾದ ಕೆ.ಎಚ್.ಮುನಿಯಪ್ಪ, ವೀರಪ್ಪಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್‍ಖಂಡ್ರೆ, ಸಲೀಂ ಅಹಮ್ಮದ್, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕ …

Read More »

ಸಾರಿಗೆ ಕಚೇರಿಯಲ್ಲಿ ಹೆಚ್ಚುವರಿ ಹುದ್ದೆಗಳ ಸೃಷ್ಟಿ

ಬೆಂಗಳೂರು : ಸಾರಿಗೆ ಇಲಾಖೆಯ ಚೆಕ್‍ಫೋಸ್ಟ್ ಹಾಗೂ ಇತರ ಆಯಕಟ್ಟಿನ ಕಚೇರಿಗಳಿಗೆ ಲಿಪಿಕ ವರ್ಗದ ಸಹಾಯಕ ಕಾರ್ಯದರ್ಶಿ/ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕೇಂದ್ರ ಸ್ಥಾನೀಯ ಸಹಾಯಕರನ್ನು ಹಾಗೂ ತೆರಿಗೆ ಮತ್ತು ಖಜಾನೆ ಅಧಿಕಾರಿ ವೃಂದದವರನ್ನು ನೇಮಿಸಲು 10 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಸಾರಿಗೆ ಕಚೇರಿಗಳಲ್ಲಿ ಈಗಾಗಲೇ ಮಂಜೂರಾಗಿರುವ 29 ಹುದ್ದೆಗಳ ಜೊತೆಗೆ ಹೆಚ್ಚವರಿಯಾಗಿ 10 ಹುದ್ದೆಗಳನ್ನು ಸೃಷ್ಟಿಸ ಲಾಗಿದೆ. ಅವುಗಳಲ್ಲಿ ಸಾರಿಗೆ ಆಯುಕ್ತರ ಕಚೇರಿ, ಬೆಂಗಳೂರಿನ ಕೇಂದ್ರ, ಪಶ್ಚಿಮ, ಪೂರ್ವ, …

Read More »

ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ಆನಂದ ಸಿಂಗ್  ಮೇಲೆ ಮುತ್ತಿಗೆ ಹಾಕಲು ಯತ್ನ

ಬಳ್ಳಾರಿ :  ವಿಜಯನಗರ ಜಿಲ್ಲೆಯ ರಚನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಹೋರಾಟಗಾರರು  ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ಆನಂದ ಸಿಂಗ್  ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ. ವೈಯಕ್ತಿಕ ಹಿತಾಸಕ್ತಿಗಾಗಿ ಸಚಿವ ಆನಂದ ಸಿಂಗ್ ಜಿಲ್ಲೆಯನ್ನು ವಿಭಜಿಸುತ್ತಿದ್ದಾರೆ. ಅವರ ಬಳ್ಳಾರಿಗೆ ಬಂದರೆ ಮುತ್ತಿಗೆ ಹಾಕುತ್ತೇವೆಂದು ಪ್ರತಿಭಟನಾಕಾರರು ಹೇಳಿದ್ದರು. ಅದೇ ರೀತಿ ಇಂದು ಸ್ವರಾಜ್ಯ ಕಾರ್ಯಕ್ರಮಕ್ಕೆ ಜಿಲ್ಲೆಗೆ ಆಗಮಿಸಿದ ಸಚಿವ ಹಾಗೂ ಡಿಸಿಎಂ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ್ದರು. …

Read More »

ಬೆಳಗಾವಿ ವಿಭಜನೆ ಮಾಡಲು ತಾಂತ್ರಿಕ ತೊಂದರೆ ಇದೆ ಎಂದು ಹೇಳಿದ ಲಕ್ಷ್ಮಣ ಸವದಿ

ಬಳ್ಳಾರಿ : ಕಾಂಗ್ರೆಸ್, ಜೆಡಿಎಸ್ ಪಕ್ಷದ 17 ಜನರು ಬಿಜೆಪಿ ಪಕ್ಷಕ್ಕೆ ಬಂದ ಕಾರಣದಿಂದ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಿದೆ. ಅವರ ಬಗ್ಗೆ ಗೌರವವಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಲು 17 ಜನರು ಕಾರಣ. ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುವುದು ಪಕ್ಷ ತೀರ್ಮಾನ ಮಾಡುತ್ತದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಫೈನಲ್ …

Read More »

ಕುರ್ಣಿವಾಡಿ ಗ್ರಾಮಕ್ಕೆ ಬೆಳಕು ನೀಡಿದ ಶಾಸಕ ಸತೀಶ ಜಾರಕಿಹೊಳಿ, ಹಲವಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಯಮಕನಮರಡಿ: ಯಮಕನಮರಡಿ ವಿಧಾನ ಸಭಾ ಮತ ಕ್ಷೇತ್ರದ ಮೋದಗಾ ಗ್ರಾಮದಲ್ಲಿ ಬಿಜೆಪಿಯ ಹಲವಾರು ಮುಖಂಡರು ಇಂದು‌ ಅಧಿಕೃತವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ‌ ನೇತೃತ್ವದಲ್ಲಿ ಕಾಂಗ್ರಸ್ ಸೇರ್ಪಡೆಗೊಂಡರು. ದಡ್ಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮೋದಗಾ ಗ್ರಾಮದಲ್ಲಿ ಶನಿವಾರದಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ‌ ಅವರ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಅವರ ಸಾಮಾಜಿಕ‌ ಕಳಕಳಿ ಮತ್ತು ಕ್ಷೇತ್ರದ ವಿವಿಧ ರಂಗಗಳಲ್ಲಿ ಕಳೆದ ಒಂದು ದಶಕಗಳಿಂದ ಮಾಡಿದ ಸಾಧನೆಗಳನ್ನು ಮೆಚ್ಚಿ …

Read More »

ಕರ್ತವ್ಯ ಲೋಪ ಆರೋಪದಡಿ ಸಬ್‍ ಇನ್‍ಸ್ಪೆಕ್ಟರ್ ಹಾಗೂ ಏಳು ಜನ ಪೇದೆ ಅಮಾನತು{ಗಾಂಜಾ ಕೇಸ್‍ನಲ್ಲಿ ಫಿಟ್ ಮಾಡೋದಾಗಿ ಸ್ಥಳೀಯರಿಗೆ ಬೆದರಿಕೆ}

ಚಿಕ್ಕಮಗಳೂರು: ಕರ್ತವ್ಯ ಲೋಪ ಆರೋಪದಡಿ ಜಿಲ್ಲೆಯಲ್ಲಿ ಓರ್ವ ಪೊಲೀಸ್ ಸಬ್‍ ಇನ್‍ಸ್ಪೆಕ್ಟರ್ ಹಾಗೂ ಏಳು ಜನ ಪೇದೆಗಳನ್ನು ಅಮಾನತು ಮಾಡಲಾಗಿದೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಸುಖೇತ್ ಸೇರಿದಂತೆ ಯುವರಾಜ್, ಲಕ್ಷ್ಮಣ್, ಪ್ರದೀಪ್ ಎಂಬ ಮೂವರು ಪೇದೆಗಳನ್ನ ಅಮಾನತು ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲೂ ಕರ್ತವ್ಯ ಲೋಪ ಆರೋದಡಿಯೇ ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯ ಪೇದೆಗಳಾದ ಶಶಿಧರ್, ಸ್ವಾಮಿ, ಅರುಣ್ …

Read More »

ಟಿಕೆಟ್ ಹಿಂದೆ ಬರೆದಿದ್ದ 5 ರೂ. ಚಿಲ್ಲರೆಗಾಗಿ ಕೆಎಸ್‍ಆರ್ ಟಿಸಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಮಾರಾರಿ

ಕೋಲಾರ: ಟಿಕೆಟ್ ಹಿಂದೆ ಬರೆದಿದ್ದ 5 ರೂ. ಚಿಲ್ಲರೆಗಾಗಿ ಕೆಎಸ್‍ಆರ್ ಟಿಸಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಮಾರಾರಿ ನಡೆದಿದೆ. ಜಿಲ್ಲೆಯ ಮುಳುಬಾಗಿಲು ಪಟ್ಟಣದ ಹಳೇ ಕೋರ್ಟ್ ಸರ್ಕಲ್ ಬಳಿ ಘಟನೆ ನಡೆದಿದ್ದು, ಚಿಲ್ಲರೆ ಹಣಕ್ಕಾಗಿ ಕೆಎಸ್‍ಆರ್‍ಟಿಸಿ ಕಂಡಕ್ಟರ್ ಮತ್ತು ಪ್ರಯಾಣಿಕ ಹೊಡೆದಾಡಿಕೊಂಡಿದ್ದಾರೆ. ಕೆಎಸ್‍ಆರ್‍ಟಿಸಿ ಬಸ್ ಕಂಡಕ್ಟರ್ ಟಿಕೆಟ್ ಹಿಂದೆ ಐದು ರೂಪಾಯಿ ಚಿಲ್ಲರೆ ಬರೆದುಕೊಟ್ಟಿದ್ದರು. ನಿಲ್ದಾಣ ಬರುತ್ತಿದ್ದಂತೆ ಪ್ರಯಾಣಿಕ ಚಿಲ್ಲರೆ ಕೊಡುವಂತೆ ಕೇಳಿದ್ದಾರೆ. ಈ ವೇಳೆ ನಿರ್ವಾಹಕ …

Read More »