Breaking News

ಕೊರೋನಾ ಭೀತಿ ನಡುವೆಯೂ ನಗರದಾದ್ಯಂತ ನಾಡಹಬ್ಬ ದಸರಾ ಭಾಗವಾಗಿರುವ ಆಯುಧಪೂಜೆ ಹಾಗೂ ವಿಜಯದಶಮಿ ಆಚರಣೆಗೆ ಭರ್ಜರಿ ಸಿದ್ಧತೆ ನಡೆದಿದೆ.

ಬೆಂಗಳೂರು:  ಕೊರೋನಾ ಭೀತಿ ನಡುವೆಯೂ ನಗರದಾದ್ಯಂತ ನಾಡಹಬ್ಬ ದಸರಾ ಭಾಗವಾಗಿರುವ ಆಯುಧಪೂಜೆ ಹಾಗೂ ವಿಜಯದಶಮಿ ಆಚರಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಹಬ್ಬದ ಮುನ್ನಾ ದಿನವಾದ ಶನಿವಾರ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು. ಜನರು ರೋಗವನ್ನು ಲೆಕ್ಕಿಸದೆ ಖರೀದಿಯಲ್ಲಿ ನಿರತರಾಗಿದ್ದರು. ಕೋವಿಡ್‌ನಿಂದಾಗಿ ಈ ಬಾರಿ ಕೆಲವರು ಸರಳ ಮತ್ತು ಸಾಂಪ್ರದಾಯಿಕವಾಗಿ ನಾಡಹಬ್ಬ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಭಾನುವಾರ ಆಯುಧಪೂಜೆ ಹಿನ್ನೆಲೆಯಲ್ಲಿ ವಾಹನ, ಮಳಿಗೆ, ಯಂತ್ರಗಳ ಪೂಜೆಗಾಗಿ ಸ್ವಚ್ಛಗೊಳಿಸಿ ತಯಾರಿ ನಡೆಸಿದರು. ಸೋಮವಾರ ವಿಜಯದಶಮಿ …

Read More »

ಆಯುಧ ಪೂಜೆ ದಿನವೇ ಆಂಜನೇಯ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.

ದಾವಣಗೆರೆ: ಆಯುಧ ಪೂಜೆ ದಿನವೇ ಆಂಜನೇಯ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ರಾತ್ರಿ ಒಂದು ಗಂಟೆ ಸುಮಾರಿಗೆ ನಿಟ್ಟುವಳ್ಳಿ ಚಾಮುಂಡೇಶ್ವರಿ ಚಿತ್ರಮಂದಿರದ ಬಳಿ ಇರುವ ದೇವಸ್ಥಾ‌ನದಲ್ಲಿ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಖದೀಮರು ದೇವಸ್ಥಾ‌ನದ ಹುಂಡಿ ಹೊಡೆದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಸುಮಾರು ಒಂದು ಲಕ್ಷ ಹಣ ಕಳ್ಳತನವಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಶ್ವಾನದಳ, ಬೆರಳಚ್ಚು ತಜ್ಞರಿಂದ ದೇವಸ್ಥಾನದ ಪರಿಶೀಲನೆ ನಡೆಯುತ್ತಿದೆ. …

Read More »

ದಾನಕ್ಕಿಂತ ಶ್ರೇಷ್ಠವಾದ ಕಾರ್ಯ ಮತ್ತೊಂದಿಲ್ಲ ಎನ್ನುತ್ತಾರೆ. ನಾವು ಬೇರೆಯವರಿಗೆ, ಕಷ್ಟದಲ್ಲಿರುವವರಿಗೆ ದಾನವನ್ನು ನೀಡಿದರೆ ಅದರಿಂದ

ದಾನಕ್ಕಿಂತ ಶ್ರೇಷ್ಠವಾದ ಕಾರ್ಯ ಮತ್ತೊಂದಿಲ್ಲ ಎನ್ನುತ್ತಾರೆ. ನಾವು ಬೇರೆಯವರಿಗೆ, ಕಷ್ಟದಲ್ಲಿರುವವರಿಗೆ ದಾನವನ್ನು ನೀಡಿದರೆ ಅದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅಪ್ಪಿತಪ್ಪಿಯೂ ಈ ವಸ್ತುವನ್ನು ದಾನ ಮಾಡಬೇಡಿ. ಕೆಲವರ ಮನೆಯಲ್ಲಿ ಲಕ್ಷ್ಮೀದೇವಿಯ ಪೂಜೆಗೆಂದು ಕಮಲದ ಹೂಗಳನ್ನು ತಂದಿರುತ್ತಾರೆ. ಆದರೆ ಕೆಲವೊಮ್ಮೆ ಈ ಹೂಗಳನ್ನು ಬೇರೆಯವರಿಗೆ ನೀಡುತ್ತೇವೆ. ಈ ರೀತಿ ಮಾಡಿದರೆ ನಿಮ್ಮ ಮನೆಯ ಲಕ್ಷ್ಮೀ ಹೊರಟುಹೋಗುತ್ತಾಳೆ. ಹಾಗೇ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡಬಾರದು. ಇದರಿಂದ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ. …

Read More »

ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿರ್ಲಕ್ಷ್ಯದಿಂದ ಸಿಲಿಕಾನ್ ಸಿಟಿಯಲ್ಲಿ ಕೃತಕ ನೆರೆ ನಿರ್ಮಾಣವಾಗುತ್ತೆ.

ಬೆಂಗಳೂರು: ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿರ್ಲಕ್ಷ್ಯದಿಂದ ಸಿಲಿಕಾನ್ ಸಿಟಿಯಲ್ಲಿ ಕೃತಕ ನೆರೆ ನಿರ್ಮಾಣವಾಗುತ್ತೆ. ಜೋರು ಮಳೆ ಬಂದ್ರೆ ಸಿಲಿಕಾನ್ ಸಿಟಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತೆ. ಏಕೆಂದರೆ ರಾಜಕಾಲುವೆಯ ಬಹುತೇಕ ಬಫರ್ ಝೋನ್ ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಹಾಗೂ ಒತ್ತುವರಿ ಮಾಡಿರುವ ಜಾಗ ಕುಸಿಯದಂತೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಒತ್ತುವರಿಯಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದ ಪರಿಸ್ಥಿತಿ ಇದೆ. ಇದರಿಂದಾಗಿ ತಡೆಗೋಡೆ ಒಡೆದು ನುಗ್ಗುವ ನೀರಿನಿಂದ ಪ್ರವಾಹ …

Read More »

ಬೆಳಗಾವಿ ಜಿಲ್ಲೆಯಲ್ಲಿ ಆಕ್ಸೀಜನ್ ಬೇಡಿಕೆ ಕಡಿಮೆಯಾಗಿದೆ- ಡಿಸಿ

ಬೆಳಗಾವಿ, -: ಜಿಲ್ಲೆಯಲ್ಲಿ ಒಟ್ಟು ಕೋವಿಡ್-೧೯ ಸೋಂಕಿತರ ಪೈಕಿ ಶೇ.94 ರಷ್ಟು ಜನರು ಗುಣಮುಖರಾಗಿದ್ದು, ಕಳೆದ ಹದಿನೈದು ದಿನಗಳಲ್ಲಿ ಮರಣ ಪ್ರಮಾಣ ಶೇ.0.4 ಕ್ಕೆ ಇಳಿಮುಖಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಈ ಕುರಿತು ಶನಿವಾರ(ಅ.24) ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಇದುವರೆಗೆ 24,039 ಜನರಿಗೆ ಕೋವಿಡ್-೧೯ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ. ಒಟ್ಟು ಸೋಂಕಿತರ ಪೈಕಿ 23,020 ಜನರು ಗುಣಮುಖರಾಗಿದ್ದಾರೆ. ಸದ್ಯಕ್ಕೆ 961 ಸಕ್ರಿಯ ಪ್ರಕರಣಗಳಿವೆ.

Read More »

ಮಟಕಾ ವಿರುದ್ಧ,ಬೆಳಗಾವಿ ಪೋಲೀಸರಿಂದ ಮಹಾ ಯುದ್ಧ…!

ಸಮರ್ಥ ನಗರದಲ್ಲಿ ಮಟಕಾ ದಾಳಿ… ಬೆಳಗಾವಿ- ರಾತ್ರಿ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥನಗರದಲ್ಲಿ *ಮಟ್ಕಾ ದಾಳಿ* ಕೈಕಾಂಡಿದ್ದು, ಈ ಸಂದರ್ಭದಲ್ಲಿ *11 ಜನ* ಆರೋಪಿತರಾದ 1) ಸರ್ಫರಾಜ್ ಮಹಮ್ಮದಾಗೌಸ್ ಶಹಾಪಿರಿ ವಯಸ್ಸು 21, ಸಾ: ಕಾಕತಿ 2) ದಶರಥ ಭೀಮಶಿ ಕಾಂಬಳೆ ವಯಸ್ಸು 40, ಸಾ: ಉಪ್ಪಾರಗಲ್ಲಿ, ಖಾಸಬಾಗ 3)ಪ್ರಕಾಶ ಪಾಂಡುರಂಗ ಮಲಸೂರೆ ವಯಸ್ಸು 64, ಸಾ: ಮೀರಾಪೂರ ಗಲ್ಲಿ ಶಹಾಪೂರ 4) ಬಸವರಾಜ ಜ್ಯೋತಿಬಾ ಪಾಟೀಲ ವಯಸ್ಸು …

Read More »

ರಾಜ್ಯದೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಅದರಲ್ಲೂ ಅರಮನೆ ನಗರಿಯಲ್ಲಿ ಅಬ್ಬರ ಜೋರಾಗಿದೆ.

ಮೈಸೂರು: ರಾಜ್ಯದೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಅದರಲ್ಲೂ ಅರಮನೆ ನಗರಿಯಲ್ಲಿ ಅಬ್ಬರ ಜೋರಾಗಿದೆ. ಇಂದು ಆಯುಧ ಪೂಜೆ ನಡೆದ್ರೆ, ನಾಳೆ ಜಂಬೂ ಸವಾರಿ ನಡೆಯಲಿದೆ. ಬೆಳಗ್ಗೆಯಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಶುರುವಾಗಿವೆ. ಮೈಸೂರು ಅರಮನೆಯಲ್ಲಿ ಸರಳ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆ 6.15ಕ್ಕೆ ಅರಮನೆಯಲ್ಲಿ ಚಂಡಿ ಹೋಮದಿಂದ ಇಂದಿನ ಕಾರ್ಯಗಳು ಆರಂಭವಾಗಿದೆ. ಬೆಳಗ್ಗೆ 6.28ಕ್ಕೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇಗುಲಕ್ಕೆ ಆಯುಧಗಳನ್ನು ರವಾನಿಸಲಾಗುತ್ತೆ. ಸುಮಾರು ಒಂದು …

Read More »

ಆ ಶಾಲಾ ಆವರಣಕ್ಕೆ ನಿತ್ಯ ಬಾಲಕರ ದಂಡು ಆಟ ಆಡೋಕೆ ಹೋಗ್ತಿತ್ತು. ಆದ್ರೆ ಅಲ್ಲಿ ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುಂಡಿಗಳನ್ನ ತೆಗೆಯಲಾಗಿತ್ತು.

ಹಾವೇರಿ: ಆ ಶಾಲಾ ಆವರಣಕ್ಕೆ ನಿತ್ಯ ಬಾಲಕರ ದಂಡು ಆಟ ಆಡೋಕೆ ಹೋಗ್ತಿತ್ತು. ಆದ್ರೆ ಅಲ್ಲಿ ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುಂಡಿಗಳನ್ನ ತೆಗೆಯಲಾಗಿತ್ತು. ಆ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಈಗ ಆ ಗುಂಡಿಗಳೇ ಆ ಬಾಲಕರ ಪಾಲಿಗೆ ಮೃತ್ಯುಕೂಪವಾಗಿದ್ದು, ಮೂರು ಜೀವವನ್ನ ಪಡೆದಿವೆ. ಶಾಲಾ ಆವರಣದಲ್ಲಿರುವ ಗುಂಡಿಗಳಲ್ಲಿ ತುಂಬಿರೋ ನೀರು. ನೀರಿನಿಂದ ಬಾಲಕರ‌ ಮೃತದೇಹ ಹೊರತೆಗಿತಿರೋ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು. ಗುಂಡಿಯಲ್ಲಿನ ನೀರು ಹೊರಹಾಕ್ತಿರೋ …

Read More »

2ನೇ ಭೂ ಕಂದಾಯ ತಿದ್ದುಪಡಿಗೆ ರಾಜ್ಯಪಾಲರ ಅಂಕಿತ

ಬೆಂಗಳೂರು, ಅ.24- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶದಲ್ಲಿನ ಬಿ ಖರಾಬು ಭೂಮಿಯನ್ನು ಸಕ್ರಮಗೊಳಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುವ ಕರ್ನಾಟಕ ಭೂ ಕಂದಾಯ (ಎರಡನೆ ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಳೆದ ತಿಂಗಳು ನಡೆದ ಅಧಿವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಲಾಗಿತ್ತು. ಅಂಗೀಕರಿಸಲ್ಪಟ್ಟ ವಿಧೇಯಕವನ್ನು ರಾಜ್ಯ ಸರ್ಕಾರ ರಾಜ್ಯಪಾಲರ ಸಹಿಗಾಗಿ ಕಳುಹಿಸಿತ್ತು. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದು, ಈ ವಿಧೇಯಕ ಕಾಯ್ದೆಯಾಗಿ ರೂಪುಗೊಂಡಂತಾಗಿದೆ. ಖಾಸಗಿ ನಿವೇಶನ ನಡುವೆ ಸಿಲುಕಿರುವ …

Read More »

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : 5 ಸಾವು

ಮದುರೈ,ಅ.24- ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ತಮಿಳುನಾಡಿನ ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಬೆಂಕಿ ಮತ್ತು ಸ್ಫೋಟ ದುರಂತಗಳು ಮರುಕಳಿಸುತ್ತಿವೆ. ಮಧುರೈ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಸ್ಫೋಟ ಸಂಭವಿಸಿ, ಐವರು ಮೃತಪಟ್ಟು, ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ. ಕಲ್ಲುಪಟ್ಟಿ ಪ್ರದೇಶದ ಪಟಾಕಿ ತಯಾರಿಕೆ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಭಾರೀ ಸ್ಫೋಟ ಸಂಭಸಿತು. ಈ ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವಿಗೀಡಾದರು.ಸುದ್ದಿ ತಿಳಿದ ಕೂಡಲೆ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ …

Read More »