ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಬಿಟ್ಟು ಯುವಕ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಆದರೆ ವಿಪರ್ಯಾಸ ಅಂದ್ರೆ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ಯುವತಿ ಮೃತಪಟ್ಟಿದ್ದಾಳೆ. ನಿನ್ನೆ 6:30ರ ಹೊತ್ತಿಗೆ ರಿಕ್ಷಾದಲ್ಲಿ ಯುವತಿಯನ್ನು ಆಸ್ಪತ್ರೆಗೆ ಕರೆದು ತಂದಿದ್ದ ಯುವಕ, ಆಕೆಯ ಮನೆಯವರಿಗೆ ಕರೆಮಾಡಿ ವಿಷಯ ತಿಳಿಸಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ರಕ್ಷಿತಾ ನಾಯಕ್ ನಿಗೂಢವಾಗಿ ಸಾವನ್ನಪ್ಪಿರುವ ಯುವತಿ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ನಿವಾಸಿಯಾಗಿರುವ …
Read More »ಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ ನಡೆಸಿರುವ ಪೋಟೋಗಳು ವೈರಲ್
ಬೆಂಗಳೂರು : ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ ನಡೆಸಿರುವ ಪೋಟೋಗಳು ವೈರಲ್ ಆಗಿವೆ. ರೋಲ್ಸ್ ರಾಯ್ಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದಾರೆ. ಭಾನುವಾರ ಮಹದೇವಪುರ ಬಳಿ ಇರುವ ಎಂಟಿಬಿ ನಾಗರಾಜ್‌ರ ‘ಆಚಂದ್ರಾರ್ಕ ನಿಲಯ’ದಲ್ಲಿ ಆಯುಧ ಪೂಜೆಯನ್ನು ಮಾಡಲಾಯಿತು. ರೋಲ್ಸ್ ರಾಯ್ಸ್, ಫೆರಾರಿ ಕಾರುಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು. ಈ ಫೋಟೋಗಳು ಈಗ ವೈರಲ್ ಆಗಿವೆ. ಎಂಟಿಬಿ ನಾಗರಾಜ್ ಕುಟುಂಬ ಸದಸ್ಯರ ಜೊತೆ ಆಯುಧ …
Read More »ಗ್ರಾಮದ ಕೋಡಿಬಸವೇಶ್ವರ ದೇಗುಲದಲ್ಲಿ ಕಳ್ಳತನ ನಡೆದಿದೆ. ತಡ ರಾತ್ರಿ ಖದೀಮರು ದೇವಸ್ಥಾನದ ಬೀಗ ಒಡೆದು ಕೃತ್ಯ ಎಸಗಿದ್ದಾರೆ.
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಗ್ರಾಮದ ಕೋಡಿಬಸವೇಶ್ವರ ದೇಗುಲದಲ್ಲಿ ಕಳ್ಳತನ ನಡೆದಿದೆ. ತಡ ರಾತ್ರಿ ಖದೀಮರು ದೇವಸ್ಥಾನದ ಬೀಗ ಒಡೆದು ಕೃತ್ಯ ಎಸಗಿದ್ದಾರೆ. ದೇವಸ್ಥಾನ ಹುಂಡಿಯಲ್ಲಿದ್ದ ಕಾಣಿಕೆ, ಬೆಳ್ಳಿ ಅಭರಣಗಳು ಮತ್ತು ಮೈಕನ್ನು ಎಗರಿಸಿ ಹಣವನ್ನು ತೆಗೆದುಕೊಂಡು ಹುಂಡಿಯನ್ನು ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹಣ ಇತ್ತು ಎಂದು ಅಂದಾಜಿಸಲಾಗಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ …
Read More »ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ
ವಿಜಯಪುರ: ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್ ಸೇತುವೆ ಬಳಿ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದದ ನಿವಾಸಿ ಐಶ್ವರ್ಯ ಶ್ರೀಪಾಲ್ ಕಬ್ಬಿನ(20) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ. ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇಗುಲಕ್ಕೆ ಹೋಗುವಾಗ ದಾರಿ ಮಧ್ಯೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Read More »ಮುಂದಿನ ಸಿಎಂ ಅನ್ನೋದು ಕಾಂಗ್ರೆಸ್‌ನ ಸಂಸ್ಕೃತಿಯಲ್ಲ. ಮೊದಲು ಪಕ್ಷಕ್ಕೆ ಬಹುಮತ ಬರುವಂತಹ ಕೆಲಸ ಮಾಡಿ.
ಬೆಂಗಳೂರು: ಮುಂದಿನ ಸಿಎಂ ಅನ್ನೋದು ಕಾಂಗ್ರೆಸ್‌ನ ಸಂಸ್ಕೃತಿಯಲ್ಲ. ಮೊದಲು ಪಕ್ಷಕ್ಕೆ ಬಹುಮತ ಬರುವಂತಹ ಕೆಲಸ ಮಾಡಿ. ಆನಂತರ ಮುಖ್ಯಮಂತ್ರಿ ವಿಚಾರ ಎಂದು ಬೆಂಗಳೂರಿನಲ್ಲಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಕೆಲ ಕಾಂಗ್ರೆಸ್ ನಾಯಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಪಕ್ಷಕ್ಕೆ ಬಹುಮತ ಬರುವಂತಹ ಕೆಲಸ ಮಾಡಿ. ಆನಂತರ ಮುಖ್ಯಮಂತ್ರಿ ವಿಚಾರ ಮಾಡಿ. ಒಂದು ಕಡೆ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಜಮೀರ್ ಹೇಳ್ತಾರೆ. ಮತ್ತೊಂದು ಕಡೆ ಡಿಕೆಶಿ ಮುಂದಿನ ಸಿಎಂ ಎಂದು ‘ಕೈ’ …
Read More »ಎಂದು ಡಿ.ಕೆ. ಸಹೋದರರಿಗೆ R.R.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ನಾನು 10 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದೆ. ಆಗ ಡಿ.ಕೆ. ಸಹೋದರರಿಗೆ ಈ ಮುನಿರತ್ನ ಒಳ್ಳೆಯವನಾಗಿದ್ದ. ಈಗ ಮುನಿರತ್ನ ಇವರಿಗೆ ಅಷ್ಟೊಂದು ಕಹಿಯಾಗಿ ಬಿಟ್ನಾ? ಎಂದು ಡಿ.ಕೆ. ಸಹೋದರರಿಗೆ R.R.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಧ್ಯಯನ ಪೀಠದ ಉದ್ಘಾಟನೆ ದಿನ ನನ್ನನ್ನೂ ಹೊಗಳಿದ್ರು. ಎಲ್ಲರನ್ನೂ ಒಟ್ಟಿಗೆ ಇಟ್ಕೊಂಡು ಹೋಗಿ. ನಾಡಪ್ರಭು ಕೆಂಪೇಗೌಡರ ಇತಿಹಾಸ ಓದಿ. ಕೆಂಪೇಗೌಡರ ಇತಿಹಾಸ ಓದದೆ ನೀವು …
Read More »ತಾಂತ್ರಿಕ ದೋಷದಿಂದ ಚಲಿಸುತ್ತಿದ್ದ ವಾಹನ ಧಗಧಗನೆ ಹೊತ್ತಿ ಉರಿದ ಘಟನೆ
ಹಾವೇರಿ: ತಾಂತ್ರಿಕ ದೋಷದಿಂದ ಚಲಿಸುತ್ತಿದ್ದ ವಾಹನ ಧಗಧಗನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಸಣ್ಣಗುಬ್ಬಿ ಕ್ರಾಸ್ನಲ್ಲಿ ನಡೆದಿದೆ. ರೇವಣಪ್ಪ ಹುಗ್ಗೇರ ಎಂಬುವರಿಗೆ ಸೇರಿದ ಓಮ್ನಿ ನೋಡ ನೋಡ್ತಿದ್ದಂತೆ ಧಗಧಗನೆ ಉರಿದು ಕರಕಲಾಗಿದೆ. ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನಿಂದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ವಾಹನದಲ್ಲಿ ನಾಲ್ಕು ಜನರು ಪ್ರಯಾಣಿಸುತ್ತಿದ್ದರು. ಹೊಗೆ ಕಾಣಿಸಿಕೊಳ್ತಿದ್ದಂತೆ ನಾಲ್ವರು ವ್ಯಾನ್ನಿಂದ ಕೆಳಗಿಳಿದಿದ್ದಾರೆ. ಅದೃಷ್ಟವಶಾತ್ ಪ್ರಾಣ …
Read More »ಮುನಿರತ್ನ ಆದಷ್ಟು ಬೇಗ ಕೆಂಪೇಗೌಡರ ಇತಿಹಾಸದ ಬಗ್ಗೆ ಇರುವ ಪುಸ್ತಕವನ್ನು ನನಗೆ ಗಿಫ್ಟ್ ನೀಡಲಿ.
ಬೆಂಗಳೂರು: ಮುನಿರತ್ನ ಆದಷ್ಟು ಬೇಗ ಕೆಂಪೇಗೌಡರ ಇತಿಹಾಸದ ಬಗ್ಗೆ ಇರುವ ಪುಸ್ತಕವನ್ನು ನನಗೆ ಗಿಫ್ಟ್ ನೀಡಲಿ. ನಾನು ಅವರ ಸಲಹೆ ಸ್ವೀಕರಿಸುತ್ತೇನೆ. ನನಗೆ ರಾಜಕೀಯದಲ್ಲಿ ಈ ವಿದ್ಯೆನೂ ಇದೆ ಅಂತಾ ಗೊತ್ತಿರಲಿಲ್ಲ. ಮುನಿರತ್ನಗೆ ಒಳ್ಳೆದಾಗಲಿ ಎಂದು ಮುನಿರತ್ನ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ‘ನಾನು ಕೂಡ ಸಿದ್ದರಾಮಯ್ಯರ ಜೊತೆಯೇ ಇದ್ದೇನೆ’ ‘ಕೈ’ ಶಾಸಕರು ಸಿದ್ದರಾಮಯ್ಯ ಜೊತೆ ಇದ್ದಾರೆಂಬ ಮುನಿರತ್ನ ಹೇಳಿಕೆಗೆ ಶಿವಕುಮಾರ್ ಹೌದು ನಾನು ಕೂಡ ಸಿದ್ದರಾಮಯ್ಯರ ಜೊತೆಯೇ …
Read More »ಘಟಫ್ರಭಾ ಪೊಲೀಸರಿಂದ ಅಪಘಾತ ತಡೆ ಜಾಗೃತಿ….ಕಬ್ಬು ತುಂಬುವ ಟ್ರ್ಯಾಕ್ಟರ್ ಚಾಲಕರಿಗೆ ಜಾಗೃತಿ…
ಹೆಡ್ ಲೈನ್ – ಘಟಫ್ರಭಾ ಪೊಲೀಸರಿಂದ ಅಪಘಾತ ತಡೆ ಜಾಗೃತಿ…ಕಬ್ಬು ತುಂಬುವ ಟ್ರ್ಯಾಕ್ಟರ್ ಚಾಲಕರಿಗೆ ಜಾಗೃತಿ ಮೂಡಿಸಿ ಖಡಕ್ ಸೂಚನೆ… ಆ್ಯಂಕರ್- ಇತ್ತೀಚೆಗೆ ಎರಡು ವಾರಗಳ ಹಿಂದಷ್ಟೇ ಮೂಡಲಗಿ ತಾಲೂಕಿನ ಸಂಗನಕೇರೆ ಗ್ರಾಮದ ಬಳಿ ನಡೆದ ಅಪಘಾತದಿಂದಾಗಿ ಕೊನೆಗೂ ಎಚ್ಚರಗೊಂಡಿರು ಘಟಪ್ರಭಾ ಪೊಲೀಸರು, ಕಬ್ಬು ತುಂಬುವ ಚಾಲಕರನ್ನು ಒಂದೇಡೇ ಸೇರಿಸಿ ಅಪಘಾತ ತಡೆ ಜಾಗೃತಿ ಮೂಡಿಸಿದರು. ಸತೀಶ ಶುಗರ್ಸ್ ಹುಣಶ್ಯಾಳ ಪಿಜಿ ಬಳಿ ಟ್ರ್ಯಾಕ್ಟರ್ ಚಾಲಕರನ್ನು ಉದೇಶಿಸಿ ಮಾತನಾಡಿದ. …
Read More »ಬಿಹಾರದಲ್ಲಿ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯು ಬಿಜೆಪಿ-ಜೆಡಿಯು ಕೂಟ ಜಯಿಸಲಿದೆ ಎಂದು ಭವಿಷ್ಯ ನುಡಿದಿದೆ.
ಪಟನಾ : ಬಿಹಾರದಲ್ಲಿ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯು ಬಿಜೆಪಿ-ಜೆಡಿಯು ಕೂಟ ಜಯಿಸಲಿದೆ ಎಂದು ಭವಿಷ್ಯ ನುಡಿದಿದೆ. ಜೆಡಿಯು+ಬಿಜೆಪಿ ಮಿತ್ರಕೂಟವಾಗಿರುವ ಎನ್‌ಡಿಎಗೆ 135ರಿಂದ 159 ಸ್ಥಾನ, ಆರ್‌ಜೆಡಿ+ಕಾಂಗ್ರೆಸ್ ಹಾಗೂ ಇತರರ ಮಹಾಮೈತ್ರಿಕೂಟಕ್ಕೆ 77ರಿಂದ 98 ಸ್ಥಾನ, ಎನ್‌ಡಿಎ ಕೂಟದಿಂದ ಹೊರಬಿದ್ದು ಪ್ರತ್ಯೇಕವಾಗಿ ಸ್ಪರ್ಧಿಸಿರುವ ಎಲ್‌ಜೆಪಿಗೆ ಕೇವಲ 1ರಿಂದ 5 ಸ್ಥಾನ ಹಾಗೂ ಇತರರಿಗೆ ಕೇವಲ 4ರಿಂದ 8 ಸ್ಥಾನ ದೊರಕಬಹುದು ಎಂದು ‘ಎಬಿಪಿ ನ್ಯೂಸ್’ ಹಿಂದಿ ಸುದ್ದಿವಾಹಿನಿಯು ಶನಿವಾರ ಸಂಜೆ ಸಮೀಕ್ಷಾ …
Read More »