ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿ ತನಗೆ ಹಾಗೂ ತನ್ನ ತಂದೆ – ತಾಯಿಗಳಿಗೆ ರಕ್ಷಣೆ ನೀಡುವಂತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ಯುವತಿ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಹೇಳಿದೆ. ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ, ಒಂದು ಹೆಣ್ಣು ಮಗಳು ತಾನು ತೊಂದರೆಯಲ್ಲಿದ್ದೇನೆ ರಕ್ಷಣೆ ನೀಡಿ ಎಂದು ಕೇಳುವಾಗ ರಕ್ಷಣೆ ನೀಡುವುದು ಮಹಿಳಾ …
Read More »ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆ, ವರಿಷ್ಠರಿಂದ ಮಹತ್ವದ ಕ್ರಮ
ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿಯನ್ನು ಪುನಾರಚನೆ ಮಾಡಲಾಗಿದೆ. ಬಿಜೆಪಿ ಕೋರ್ ಕಮಿಟಿಗೆ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಸಚಿವ ಬಿ. ಶ್ರೀರಾಮುಲು, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ ಸೇರ್ಪಡೆಯಾಗಿದ್ದಾರೆ. ಕೋರ್ ಕಮಿಟಿಯ ಸದಸ್ಯರಾಗಿದ್ದ ಸಿ.ಟಿ. ರವಿ ವಿಶೇಷ ಆಹ್ವಾನಿತರಾಗಿದ್ದಾರೆ. 13 ಸದಸ್ಯರು, ಮೂವರು ವಿಶೇಷ ಆಹ್ವಾನಿತರ ಕಮಿಟಿಯನ್ನು ಪುನರ್ ರಚನೆ ಮಾಡಲಾಗಿದೆ. ಸಚಿವ ಅರವಿಂದ ಲಿಂಬಾವಳಿ ಮತ್ತು ಸಿ.ಎಂ. ಉದಾಸಿ ಅವರಿಗೆ ಕೊಕ್ ನೀಡಲಾಗಿದೆ. …
Read More »ಕಲ್ಲು ಕ್ವಾರಿಗಳ ಮೇಲೆ ಗಣಿ ಇಲಾಖೆ, ಪರಿಸರ ಇಲಾಖೆ ಸರ್ಜಿಕಲ್ ಸ್ಟ್ರೈಕ್
ಗೋಕಾಕ: ಬೆಳಗಾವಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಚಿಕ್ಕೋಡಿ ಪರಿಸರ ಇಲಾಖೆಯ ಅಧಿಕಾರಿಗಳು ಉಪ ನಿರ್ದೇಶಕಿ ಶ್ರೀ ಬಿಂದನ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಗೋಕಾಕ್ ನ ಬಿಲಕುಂದಿ ಗ್ರಾಮದಲ್ಲಿರುವ ಕಲ್ಲು ಕ್ರಷರ್ ಗಳಿಗೆ ಭೇಟಿಕೊಟ್ಟು ನಿಯಮಗಳನ್ನು ಉಲ್ಲಂಘನೆ ಮಾಡಿರುವ 5 ಕಲ್ಲು ಕ್ವಾರಿ ಗಳನ್ನು ಸೀಜ್ ಮಾಡಲಾಯಿತು. ಶಿವಮೊಗ್ಗದಲ್ಲಿ ಆದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬೆಳಗಾವಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಇಲಾಖೆ …
Read More »5 ಬಾರಿ ನೋಟಿಸ್ ಕೊಟ್ರೂ ಉತ್ತರಿಸಿಲ್ಲ.. ಆ ಲೇಡಿ ಯಾವ CD ನೂ ಕೊಟ್ಟಿಲ್ಲ -SIT ಸ್ಪಷ್ಟನೆ
ಬೆಂಗಳೂರು: ಮಾಜಿ ಸಚಿವರ ವಿಡಿಯೋ ವಿವಾದಕ್ಕೆ ಸಂಬಂಧಿಸಿದ ಯುವತಿಯಿಂದ ನಮಗೆ ಯಾವುದೇ ವಿಡಿಯೋ ಬಂದಿಲ್ಲ ಎಂದು ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಸ್ಪಷ್ಟನೆ ನೀಡಿದ್ದಾರೆ. ನ್ಯೂಸ್ಫಸ್ಟ್ಗೆ ಮಾಹಿತಿ ನೀಡಿದ ಅವರು ನಾವು ಯುವತಿಗೆ 5 ಬಾರಿ ನೋಟೀಸ್ ಕೊಟ್ಟಿದ್ದೇವೆ, ಆದರೆ ಆಕೆ ಯಾವುದೇ ಉತ್ತರ ನೀಡಿಲ್ಲ, ಯುವತಿ ವಿಡಿಯೋದಲ್ಲಿ ನೀಡಿರುವ ಹೇಳಿಕೆ ಶುದ್ಧ ಸುಳ್ಳು. ಆಕೆ ಹೇಳಿರುವ ಸಮಯದಲ್ಲಿ ಎಸ್ಐಟಿ ರಚನೆಯೇ ಆಗಿರಲಿಲ್ಲ. ನಮಗೆ ಆ ಯುವತಿಯಿಂದ ಯಾವುದೇ ವಿಡಿಯೋ …
Read More »ಸುಖಾ ಸುಮ್ಮನೆ ಬೈಕ್ಗಳನ್ನು ಎಳೆದೊಯ್ದು, ಯಾಕೆ ಎಂದು ಕೇಳಿದವರ ಮೇಲೆ ದರ್ಪ: ಚಾಟಿ ಬೀಸಿದ್ದಾರೆ ಕಮಲ್ ಪಂತ್
ಬೆಂಗಳೂರು: ಸುಖಾ ಸುಮ್ಮನೆ ಬೈಕ್ಗಳನ್ನು ಎಳೆದೊಯ್ದು, ಯಾಕೆ ಎಂದು ಕೇಳಿದವರ ಮೇಲೆ ದರ್ಪ ತೋರುತ್ತಿದ್ದ ಟೋಯಿಂಗ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಚಾಟಿ ಬೀಸಿದ್ದಾರೆ. ಈ ಹಿಂದಿನ ಕಮಿಷನರ್ ಭಾಸ್ಕರ್ ರಾವ್ ಟೋಯಿಂಗ್ ಸಮಸ್ಯೆಗೆ ಮುಕ್ತಿ ನೀಡುವ ಸಲವಾಗಿ ಟೋಯಿಂಗ್ ಮಾಡುವ ಸಿಬ್ಬಂದಿ ಗಾಡಿ ಎಳೆದೊಯ್ಯುವಾಗ ಅನೌನ್ಸ್ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿದ್ದರು. ಅದನ್ನ ಯಥಾಪ್ರಕಾರವಾಗಿ ಎರಡು ದಿನ ಫಾಲೋ ಮಾಡಿದ ಸಿಬ್ಬಂದಿ, ಮತ್ತೆ ತಮ್ಮ ಚಾಳಿ …
Read More »ಆ ಸಿಡಿಯನ್ನ ವಿಷ್ಣುಚಕ್ರ ಅಂದುಕೊಂಡು ತಿರುಗಿಸಿದ್ರಾ?;: ಎಚ್. ವಿಶ್ವನಾಥ್
ಮೈಸೂರು(ಮಾ.25): ಕೋಟ್ಯಾಂತರ ರೂಪಾಯಿ ಲೂಟ್ ಆಗಿರುವ ಇಡಿ ಬಗ್ಗೆ ಚರ್ಚೆ ಮಾಡೋಲ್ಲ ಬರಿ ಸಿಡಿ ಚರ್ಚೆ ಮಾಡುತ್ತೀರಲ್ಲಾ, ಬಜೆಟ್ ಚರ್ಚೆಗಿಂತ ಸಿಡಿಯೇ ಹೆಚ್ಚಾಯ್ತಾ ನಿಮಗೆ ಅಂತ, ಸದನದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲಿಲ್ಲ ಎಂದು ವಿರೋಧ ಪಕ್ಷಗಳಿಗೆ ಪರಿಷತ್ ಸದಸ್ಯ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಚಾಟಿ ಬೀಸಿದ್ದಾರೆ. ನಿನ್ನೆ ಮುಗಿದ ಸದನ ಮುಗಿತು ಅಷ್ಟೆ, ಇದರಲ್ಲಿ ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಆಗಲಿಲ್ಲ. ಬಜೆಟ್ ಅಧಿವೇಶ ಅಂದ್ರೆ ಆದಾಯ, ತೆರಿಗೆ, ಹಣಕಾಸಿನ ಬಗ್ಗೆ …
Read More »C.D. ಯುವತಿ ಪರ ಮಹಿಳಾ ಕಾಂಗ್ರೆಸ್ ನಿಂತಿದೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ‘ಸಂತ್ರಸ್ತ’ ಯುವತಿ ಪರ ಮಹಿಳಾ ಕಾಂಗ್ರೆಸ್ ನಿಂತಿದೆ. ಒಬ್ಬ ರಾಜಕಾರಣಿಯಿಂದ ಆಕೆಗೆ ಅನ್ಯಾಯ ಆಗಿದ್ದರೂ ಸಂತ್ರಸ್ತೆಗೆ ಸರ್ಕಾರದಿಂದ ರಕ್ಷಣೆ ಕೊಡಲು ಸಾಧ್ಯವಾಗಿಲ್ಲ. ಸರ್ಕಾರದ ಮೇಲೆ ಆಕೆಗೆ ನಂಬಿಕೆ ಇಲ್ಲ, ಹಾಗಾಗಿ ಕಾಂಗ್ರೆಸ್ ನಾಯಕರ ಬಳಿ ರಕ್ಷಣೆ ಕೋರಿದ್ದಾಳೆ. ಆ ಹೆಣ್ಣುಮಗಳ ರಕ್ಷಣೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ಶಾಸಕಿಯರು ಹೇಳಿದ್ದಾರೆ. ಸಚಿವ ಡಾ.ಕೆ. ಸುಧಾಕರ್ ನೀಡಿದ್ದ ಏಕಪತ್ನಿವ್ರತಸ್ಥ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ …
Read More »ಬಸವಕಲ್ಯಾಣ ಅಭ್ಯರ್ಥಿಯಾಗಲು ಬಿಜೆಪಿಗೆ ಟಿಕೆಟ್ ಆಕಾಂಕ್ಷಿಯಿಂದ ದೊಡ್ಡ ಮಟ್ಟದ ಹಣ ಸಂದಾಯ: HDK
ಕಲಬುರಗಿ: ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಿಜೆಪಿ ಟಿಕೆಟ್ ಆಕಾಂಕ್ಷಿಯೋರ್ವ ನಾಯಕರಿಗೆ ದೊಡ್ಡ ಮಟ್ಟದ ಹಣ ಸಂದಾಯ ಮಾಡಿದ್ದಾರೆ. ಗಾಬರಿಯಾಗುವ ಮೊತ್ತವನ್ನು ಆ ಆಕಾಂಕ್ಷಿ ನೀಡಿದ್ದಾರೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಸಂದಾಯವಾದ ಹಿನ್ನೆಲೆಯಲ್ಲಿ ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ರಾಜ್ಯದ ಹಣ ಲೂಟಿ ಮಾಡಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ ಎಂದು ದೂರಿದರು. ಬಿಜೆಪಿಯವರು ಯಾರನ್ನ ನೆಮ್ಮದಿಯಿಂದ ಬದುಕಲು …
Read More »ಸತೀಶ ಜಾರಕಿಹೊಳಿ ಸ್ಪರ್ಧೆಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಚರ್ಚೆ ಶುರುವಾಗಿದ್ದು, ಬಿಜೆಪಿ ಇದಕ್ಕೆ ಪ್ರತ್ಯಾಸ್ತ್ರವಾಗಿ ಯಾರನ್ನು ಕಣಕ್ಕೆ ಇಳಿಸಿದೆ ಎಂಬ ಕುತೂಹಲ ಹುಟ್ಟಿಸಿದೆ
ಬೆಳಗಾವಿ (ಮಾ. 25): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 17ರಂದು ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಈ ಬೆಳವಣಿಗೆ ಹಿಂದ ಹಲವು ರಾಜಕೀಯ ಲೆಕ್ಕಾಚಾರಗಳು ಜಿಲ್ಲೆಯಲ್ಲಿ ಆರಂಭವಾಗಿದೆ. ಸತೀಶ ಜಾರಕಿಹೊಳಿ ಸ್ಪರ್ಧೆಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಚರ್ಚೆ ಶುರುವಾಗಿದ್ದು, ಬಿಜೆಪಿ ಇದಕ್ಕೆ ಪ್ರತ್ಯಾಸ್ತ್ರವಾಗಿ ಯಾರನ್ನು ಕಣಕ್ಕೆ ಇಳಿಸಿದೆ …
Read More »ಉಪ ಚುನಾವಣಾ ಕಣವು ಜಾರಕಿಹೊಳಿ ಸಹೋದರರ ಸವಾಲು-ಜವಾಬುಗಳಿಗೆ ವೇದಿಕೆಯಾಗುವ ಸಾಧ್ಯತೆ
ಬೆಳಗಾವಿ: ಬಿಜೆಪಿಯ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಎದುರಾಗಿರುವ ಉಪ ಚುನಾವಣಾ ಕಣವು ಜಾರಕಿಹೊಳಿ ಸಹೋದರರ ಸವಾಲು-ಜವಾಬುಗಳಿಗೆ ವೇದಿಕೆಯಾಗುವ ಸಾಧ್ಯತೆಗಳಿವೆ. ನಾಲ್ವರಲ್ಲಿ ತಲಾ ಇಬ್ಬರು ಸಹೋದರರು ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಇದ್ದಾರೆ. ಅವರವರಿಗೆ ಬೇಕಾದವರ ಗೆಲುವಿಗೆ ಪೈಪೋಟಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ‘ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಅವರೇ ಕಾಂಗ್ರೆಸ್ ಅಭ್ಯರ್ಥಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು …
Read More »
Laxmi News 24×7