Breaking News

ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದು ಎಂಜಾಯ್ ಮಾಡುತ್ತಿದ್ದಾರೆ. ನಟಿ ಪ್ರಣೀತಾ

ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಸಖತ್ ಬ್ಯುಸಿಯಾಗಿದ್ದು, ಬಹುಭಾಷಾ ನಟಿಯಾಗಿ ಬೆಳೆದಿದ್ದಾರೆ. ಸ್ಯಾಂಡಲ್‍ವುಡ್‍ನಿಂದ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ಮಿಂಚುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಬಿಡುವು ಮಾಡಿಕೊಂಡು ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದು ಎಂಜಾಯ್ ಮಾಡುತ್ತಿದ್ದಾರೆ.ಲಾಕ್‍ಡೌನ್ ಬಳಿಕ ಪ್ರಣಿತಾ ಶೂಟಿಂಗ್‍ನಲ್ಲಿ ಭಾಗವಹಿಸಿದ್ದರು. ಬಾಲಿವುಡ್ ಸಿನಿಮಾ ಹಂಗಾಮಾ-2 ಚಿತ್ರೀಕರಣದ ಬಳಿ ಬ್ರೇಕ್ ಪಡೆದಿರುವ ಅವರು ಮಾಲ್ಡಿವ್ಸ್ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ತಮ್ಮ ಮಾಲ್ಡಿವ್ಸ್ ಡೇಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದು, ಡೈವಿಂಗ್ …

Read More »

ನಿಗಮ ಸ್ಥಾಪನೆಗೆ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಸರ್ಕಾರ ಮಾಡಿದರೆ ಒಳ್ಳೆಯದು:ಶ್ರೀ ಸಿದ್ದಲಿಂಗ ಸ್ವಾಮೀಜಿ

ತುಮಕೂರು: ಎಲ್ಲ ಜಾತಿಯಲ್ಲೂ ಹಿಂದುಳಿದವರಿದ್ದಾರೆ. ಎಲ್ಲ ಸಮಾಜದಲ್ಲಿಯೂ ಕಡುಬವರು ಇದ್ದಾರೆ. ನಿಗಮ ಸ್ಥಾಪನೆಗೆ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಸರ್ಕಾರ ಮಾಡಿದರೆ ಒಳ್ಳೆಯದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ. ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ರಚನೆ ಮಾಡ್ತಿರೋ ವಿಚಾರ ಕೇಳಿ ನನಗೆ ಆಶ್ಚರ್ಯ ಎನಿಸುತ್ತದೆ. ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ ಸರ್ಕಾರ ಇರೋದು ಸಮಗ್ರ …

Read More »

ಹಾಡಹಗಲೇ ಮನೆ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಬೆಂಗಳೂರು: ಇಬ್ಬರು ಖದೀಮರು ಹಾಡಹಗಲೇ ಮನೆಯ ಗೇಟ್ ಒಡೆದು, ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ್ದನ್ನು ಮನಗಂಡ ಖದೀಮರು, ರಾಡ್ ಹಿಡಿದು ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ 30 ಗ್ರಾಂ. ಚಿನ್ನ ಮತ್ತು 5 ಲಕ್ಷ ರೂ.ಹಣವನ್ನು ಎಗರಿಸಿದ್ದಾರೆ.ಮಧ್ಯಾಹ್ನ ಘಟನೆ ನಡೆದಿದ್ದು, ಆರಂಭದಲ್ಲಿ ಮನೆಯಲ್ಲಿ ಯಾರಾದರೂ ಇದ್ದಾರಾ ಎಂಬುದನ್ನು ಕಳ್ಳರು ಪರಿಶೀಲಿಸಿದ್ದಾರೆ. ಬಳಿಕ …

Read More »

ಬಂಜಾರ ನಿಗಮ, ಅಂಬೇಡ್ಕರ್ ಇದೆ. ಅದರಂತೆ ಮರಾಠ ನಿಗಮ ಸ್ಥಾಪಿಸಲಾಗಿದೆ. ಇದಕ್ಕೆ ಭೆರೆ ಅರ್ಥ ಕಲ್ಪಿಸಬೇಕಿಲ್:ರೇಣುಕಾಚಾರ್ಯಲ

ದಾವಣಗೆರೆ: ರಾಜಕೀಯ, ಚುನಾವಣೆ ದೃಷ್ಟಿಯಿಂದ ಮರಾಠ ಅಭಿವೃದ್ದಿ ನಿಗಮ ಸ್ಥಾಪಿಸಿಲ್ಲ. ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ನಿಗಮ ಸ್ಥಾಪಿಸಲಾಗಿದೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮರಾಠ ಭಾಷೆಗೆ ಆದ್ಯತೆ ಕೊಟ್ಟಿಲ್ಲ. ಸಮಾಜದವರ ಏಳಿಗೆಗೆ, ಅಭಿವೃದ್ದಿಗೆ ನಿಗಮ ಮಾಡಿದೆ. ನನ್ನ ಕ್ಷೇತ್ರದಲ್ಲಿ ಸಹ ಸಾಕಷ್ಟು ಜನ ಮರಾಠರು ಇದ್ದಾರೆ. ಬಂಜಾರ ನಿಗಮ, ಅಂಬೇಡ್ಕರ್ ಇದೆ. ಅದರಂತೆ ಮರಾಠ ನಿಗಮ ಸ್ಥಾಪಿಸಲಾಗಿದೆ. ಇದಕ್ಕೆ ಭೆರೆ ಅರ್ಥ ಕಲ್ಪಿಸಬೇಕಿಲ್ಲ …

Read More »

ಸಗಣಿ ರಾಶಿ ಹಾಕಿ ಅದರಲ್ಲಿ ಗ್ರಾಮಸ್ಥರು ಹೊರಳಾಡಿ, ಹೊಡೆದಾಡುವುದೇ ಹಬ್ಬ

ಚಾಮರಾಜನಗರ: ಜಿಲ್ಲೆಯ ಗಡಿಯಂಚಿನಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಸಂಭ್ರಮದಿಂದ ಗೊರೆ ಹಬ್ಬ ಆಚರಿಸಲಾಯಿತು. ಸಗಣಿ ರಾಶಿ ಹಾಕಿ ಅದರಲ್ಲಿ ಗ್ರಾಮಸ್ಥರು ಹೊರಳಾಡಿ, ಹೊಡೆದಾಡುವುದೇ ಹಬ್ಬದ ವಿಶೇಷ. ಕೋವಿಡ್ ಗೆ ಡೋಂಟ್ ಕೇರ್ ಎಂದು ಗ್ರಾಮಸ್ಥರು ಗುಂಪು ಸೇರಿ ಕಣಿದು ಕುಪ್ಪಳಿಸಿದರು. ಬಲಿಪಾಢ್ಯಮಿಯ ಮಾರನೇ ದಿನ ಈ ಗೊರೆ ಹಬ್ಬವನ್ನು ಆಚರಿಸಲಾಗತ್ತದೆ. ಅಚ್ಚ ಕನ್ನಡಿಗರೆ ಇರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷ ಗೊರೆ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಈ ವರ್ಷವೂ ಸಹ …

Read More »

ನನ್ನಂಥವನನ್ನು ಹುಡುಕಿ ಸೀಟ್ ಕೊಟ್ಟಿದ್ದು ಬಿಜಿಪಿ ಪಕ್ಷದ ದೊಡ್ಡ ಗುಣ: ರಾಜ್ಯಸಭಾ ಅಭ್ಯರ್ಥಿ

ಬೆಂಗಳೂರು: ನನ್ನಂಥವನನ್ನು ಹುಡುಕಿ ಸೀಟ್ ಕೊಟ್ಟಿದ್ದು ಬಿಜಿಪಿ ಪಕ್ಷದ ದೊಡ್ಡ ಗುಣ ಎಂದು ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಡಾ.ಕೆ.ನಾರಾಯಣ್ ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ರಾಜ್ಯದ ಕಮಲ ನಾಯಕರಿಗೆ ಮತ್ತೆ ಶಾಕ್ ನೀಡಿದ್ದು, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಪಕ್ಷಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಮುದ್ರಿಸುತ್ತಿದ್ದ ಕೆ ನಾರಾಯಣ್ ಅವರನ್ನು ಆಯ್ಕೆ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಅವರು, ದೆಹಲಿಯವರು ಯಾವುದೋ ಮೂಲೇಲಿರೋರನ್ನೂ ಗುರುತಿಸಿದ್ದು ಖುಷಿ ವಿಚಾರ …

Read More »

ಬೆಂಗಳೂರು: ರಾಜ್ಯದಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಾಜ್ಯದಲ್ಲಿರುವ ಮರಾಠ ಜನಾಂಗದವರ ಅಭಿವೃದ್ಧಿಗಾಗಿ ರಚಿಸಲು ಉದ್ದೇಶಿಸಲಾಗಿದೆ. ಮರಾಠಿ ಭಾಷೆಗೂ ಈ ಪ್ರಾಧಿಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಮರಾಠ ಜನಾಂಗದವರು ತಲಾತಲಾಂತರಗಳಿಂದ ಕರ್ನಾಟಕದಲ್ಲಿಯೇ ವಾಸವಾಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಅವರ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎನ್ನುವ ಆಶಯದಿಂದ ಈ ಪ್ರಾಧಿಕಾರವನ್ನು ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ‘ಮರಾಠ ಜನಾಂಗದವರು ತಲಾತಲಾಂತರಗಳಿಂದ ಕರ್ನಾಟಕದಲ್ಲಿಯೇ …

Read More »

ಅನುದಾನ ಬಳಸದೆ ವಾಪಸ್ : ಕ್ರಮಕ್ಕೆ ಶಿಫಾರಸ್ಸು

ಬೆಳಗಾವಿ: ‘2019-20ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಬಳಸದೆ ವಾಪಸ್ ಆಗಲು ಕಾರಣರಾದ ಅಧಿಕಾರಿಗಳ ಕುರಿತು ತನಿಖಾ ಸಮಿತಿಯು ವರದಿ ನೀಡಿದೆ. ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ. ತಿಳಿಸಿದರು. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರಮೇಶ ದೇಶಪಾಂಡೆ, ‘ನಿಗದಿತ ದಿನಕ್ಕಿಂತ ತಡವಾಗಿ ಬಿಲ್ ಸಲ್ಲಿಸಲಾಗಿದೆ. ಜೊತೆಗೆ ತಾಂತ್ರಿಕ ನೆಪವೊಡ್ಡಿ ಬಿಲ್ ಪಾಸ್ …

Read More »

ಮಹೀಂದ್ರ ಸ್ಕಾರ್ಪಿಯೋ ಕಾರನ್ನು ಮರಕ್ಕೆ ಕಬ್ಬಿಣದ ಚೈನ್ ಮೂಲಕ ಕಟ್ಟಿ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮುಂಬೈ: ಸೋಶಿಯಲ್ ಮೀಡಿಯಾದಲ್ಲಿ ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಇದೀಗ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ. ಮಾಲೀಕನೋರ್ವ ತನ್ನ ಮಹೀಂದ್ರ ಸ್ಕಾರ್ಪಿಯೋ ಕಾರನ್ನು ಮರಕ್ಕೆ ಕಬ್ಬಿಣದ ಚೈನ್ ಮೂಲಕ ಕಟ್ಟಿ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಗಮನಿಸಿದ ಆನಂದ್ ಮಹೀಂದ್ರ ವಿವರಣೆಯೊಂದಿಗೆ ಟ್ವೀಟ್ ಮಾಡಿದ್ದಾರೆ. ಇದು ಹೈಟೆಕ್ ಲಾಕಿಂಗ್ ಸಿಸ್ಟಮ್ ಅಲ್ಲ, ಇದರಲ್ಲಿ ಮಾಲೀಕರ ಪೊಸೆಸೀವ್‌ನೆಸ್ ಎದ್ದುಕಾಣುತ್ತಿದೆ. ನನಗೆ ಈ ಚಿತ್ರ ಕೆಲ ನೆನಪನ್ನು ಬಿಚ್ಚಿಡುತ್ತಿದೆ. …

Read More »

ಕೋವಿಡ್ 19 ಕುರಿತಂತೆ ಏಕಾಏಕಿ ವರದಿ ಮಾಡಿದ್ದಕ್ಕಾಗಿ ಚೀನಾದ ಪತ್ರಕರ್ತೆ ಐದು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಿದೆ

ಲಂಡನ್: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಚೀನಾದ ಮುಖ ಮತ್ತೊಮ್ಮೆ ಬಯಲಾಗಿದ್ದು ವುಹಾನ್‌ನಿಂದ ಕೋವಿಡ್ 19 ಕುರಿತಂತೆ ಏಕಾಏಕಿ ವರದಿ ಮಾಡಿದ್ದಕ್ಕಾಗಿ ಚೀನಾದ ಪತ್ರಕರ್ತೆ ಐದು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಿದೆ. ಸುಳ್ಳು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಮಾಜಿ ವಕೀಲೆ, ಪತ್ರಕರ್ತೆ ಜಾಂಗ್ ಝಾನ್ ಅವರನ್ನು ಕಳೆದ 6 ತಿಂಗಳಿನಿಂದ ಶಾಂಫೈ ಬಂಧಿಖಾನೆಯಲ್ಲಿ ಇರಿಸಲಾಗಿದ್ದು ಇದೀಗ ಆಕೆಗೆ 5 ವರ್ಷ ಜೈಲು ಶಿಕ್ಷೆಯನ್ನು ಎದುರಿಸಬೇಕಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. …

Read More »