Breaking News

2020ನೇ ಸಾಲಿನ  ‘ವೀರ ಕನ್ನಡಿಗ ಪ್ರಶಸ್ತಿ’ಗೆ  ಬೆಳಗಾವಿ  ಜ್ಯೂನಿಯರ್ ಶಿವರಾಜ್ ಕುಮಾರ್ ( ಇಸ್ಮಾಯಿಲ್ ಪೀರಜಾದೆ) ಆಯ್ಕೆಯಾಗಿದ್ದಾರೆ.

ಬೆಂಗಳೂರು :  ಹೂ ಅಲ್ ಶಿಫಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನಕಲ್ಯಾಣ ಟ್ರಸ್ಟ್, ಹಾಗೂ  ಕರ್ನಾಟಕದ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘರ್ಷ ಸಮಿತಿ ಸಹಯೋಗದಲ್ಲಿ 2020ನೇ ಸಾಲಿನ  ‘ವೀರ ಕನ್ನಡಿಗ ಪ್ರಶಸ್ತಿ’ಗೆ  ಬೆಳಗಾವಿ  ಜ್ಯೂನಿಯರ್ ಶಿವರಾಜ್ ಕುಮಾರ್ ( ಇಸ್ಮಾಯಿಲ್ ಪೀರಜಾದೆ) ಆಯ್ಕೆಯಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಗುರುಭವನ ಸಂಭಾಣಗದಲ್ಲಿ ಇದೇ 29ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.  2020 ನೇ ಸಾಲಿನ ಪ್ರಶಸ್ತಿಗೆ  ಹತ್ತು …

Read More »

ನಟಿ ಕಂಗನಾ ರಣಾವತ್ ಅವರುಕೆಜಿಎಫ್ ಅಧೀರ ಸಂಜಯ್ ದತ್ ಅವರನ್ನು ಭೇಟಿ

ಹೈದರಾಬಾದ್: ಸದ್ಯ ಸುದ್ದಿಯಲ್ಲಿರುವ  ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಕೆಜಿಎಫ್ ಅಧೀರ ಸಂಜಯ್ ದತ್ ಅವರನ್ನು ಭೇಟಿಯಾಗಿದ್ದಾರೆ.ಹೌದು. ಇಂದು ಬೆಳಗ್ಗೆ ಭೇಟಿಯಾಗಿರುವ ಕಂಗನಾ ಸಂಜಯ್ ದತ್ ಅವರನ್ನು ನೋಡಿ ಅಚ್ಚರಿಯೊಂದಿಗೆ ಖುಷಿಯಾಗಿದ್ದಾರೆ. ಅಲ್ಲದೆ ಅವರ ಆರೋಗ್ಯ ಇನ್ನಷ್ಟು ವೃದ್ಧಿಸಲು ಪ್ರಾರ್ಥೊಸೋಣ ಎಂದು ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕಂಗನಾ, ಹೈದರಾಬಾದ್‍ನ ಹೋಟೆಲಿನಲ್ಲಿ ತಂಗಿರುವ ಸುದ್ದಿ ತಿಳಿದು ನಾನು ಇಂದು ಬೆಳಗ್ಗೆ ಸಂಜು ಅವರನ್ನು ನೋಡಲು ತೆರಳಿದೆ. ಈ …

Read More »

ರಮೇಶ್ ಜಾರಕಿಹೊಳಿ ಮತ್ತು ನಾನು 20 ವರ್ಷದ ಸ್ನೇಹಿತರು ಅವರು ನನ್ನ ಪರವಾಗಿ ಹೈಕಮಾಂಡ್ ನಾಯಕರ ಬಳಿ ಮಾತನಾಡುತ್ತಿದ್ದಾರೆ ಸಿ.ಪಿ.ಯೋಗೇಶ್ವರ್

ಬೆಂಗಳೂರು, ನ.27- ಸರ್ಕಾರ ರಚನೆ ವೇಳೆ ನನ್ನ ಪಾತ್ರ ಏನು ಎಂಬುದು ಹೈಕಮಾಂಡ್ ನಾಯಕರಿಗೆ ಗೊತ್ತಿದೆ. ಹಾಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ನವದೆಹಲಿಯಲ್ಲಿಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿರುವವರನ್ನು ಗಮನಿಸಿದ್ದೇನೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು. ಇಂದು ಬಿ.ಎಲ್.ಸಂತೋಷ್ ಅವರನ್ನು …

Read More »

ಬ್ಯಾಟಿಂಗ್ ಆಯ್ದುಕೊಂಡ ಫಿಂಚ್ ಪಡೆ ಕೊಹ್ಲಿ ಬಾಯ್ಸ್ ಗೆ 375 ರ ಬೃಹತ್ ಗುರಿ

ಸಿಡ್ನಿ : ಭಾರತ – ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಫಿಂಚ್ ಪಡೆ ಕೊಹ್ಲಿ ಬಾಯ್ಸ್ ಗೆ 375 ರ ಬೃಹತ್ ಗುರಿ ನೀಡಿದೆ. ಆಸ್ಟ್ರೇಲಿಯಾ ನಿಗದಿತ 50 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಪೇರಿಸಿ ಭಾರತಕ್ಕೆ 375 ರ ಸವಾಲನ್ನು ನೀಡಿದೆ. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರು ,ಬುಮ್ರ, ಯಜುವೇಂದ್ರ ಚಹಲ್, ನವದೀಪ್ ಸೈನಿ …

Read More »

ನೆರವೇರಿತು ಲಕ್ಷ್ಮಿ ಪುತ್ರನ ವಿವಾಹ

ಪಣಜಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ, ರಾಜ್ಯ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ್ ಮತ್ತು ಭದ್ರಾವತಿಯ ಬಿ.ಕೆ.ಶಿವಕುಮಾರ ಪುತ್ರಿ ಡಾ.ಹಿತಾ ವಿವಾಹ ಗೋವಾದ ಲೀಲಾ ಪ್ಯಾಲೇಸ್ ಹೊಟೆಲ್ ನಲ್ಲಿ ಇದೀಗ ನೆರವೇರಿದೆ. ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖಂಡರಾದ ಯು.ಟಿ.ಖಾದರ್, ಈಶ್ವರ ಖಂಡ್ರೆ ಸೇರಿದಂತೆ ನೂರಾರು ಗಣ್ಯರ ಸಮ್ಮುಖದಲ್ಲಿ ಮೃಣಾಲ್ ಅವರು ಹಿತಾ ಅವರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು. ಕಳೆದ 4 ದಿನಗಳಿಂದ …

Read More »

ಒಂದು ವಾರವಾಗುತ್ತ ಬಂದರೂ ಹೈಕಮಾಂಡ್ ಏನೂ ಹೇಳುತ್ತಿಲ್ಲ. ಹೀಗಾಗಿ ಬಿಜೆಪಿ ಗೊಂದಲದ ಗೂಡಾಗಿದೆ.

ಬೆಂಗಳೂರು,ನ.27- ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಒಂದು ಕಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಸದರ ಸಭೆ ಕರೆದಿರುವ ಬೆನ್ನಲ್ಲೇ, ದೆಹಲಿಯಲ್ಲಿ ಲಾಬಿ ಶುರುವಾಗಿದೆ. ಸಚಿವ ಸಂಪುಟ ವಿಸ್ತರಣೆ ಪಕ್ಕಾ ಆಗುತ್ತಿದ್ದಂತೆ, ಮೂಲ ಬಿಜೆಪಿಗರು ತಕರಾರು ಎತ್ತಿದಂತೆ ಕಾಣುತ್ತಿದೆ. ನಿನ್ನೆಯಷ್ಟೆ 17 ಮಂದಿಯಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. 105 ಶಾಸಕರಿಂದ ಈ ಸರ್ಕಾರ ಅಕಾರಕ್ಕೆ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಗುಂಪು ರಾಜಕೀಯ ಶುರುವಾಗಿದೆ. ಬಿಜೆಪಿ …

Read More »

ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ

ನವದೆಹಲಿ: ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅರ್ನಬ್ ಮತ್ತು ಇತರ ಇಬ್ಬರು ವ್ಯಕ್ತಿಗಳಿಗೆ ನೀಡಿರುವ ಮಧ್ಯಂತರ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ.11ರಂದು ವಿಚಾರಣೆ ನಡೆಸಿದ್ದ …

Read More »

ಸೀಮಿತ ಆದಾಯದ ನಡುವೆ ಹೊಸ ಬಜೆಟ್ ಮಂಡನೆಗಾಗಿ ಈಗಾಗಲೇ ಹಣಕಾಸು ಇಲಾಖೆ ಪೂರ್ವಸಿದ್ಧತೆ ಪ್ರಾರಂಭ

ಬೆಂಗಳೂರು: ಸೀಮಿತ ಆದಾಯದ ನಡುವೆ ಹೊಸ ಬಜೆಟ್ ಮಂಡನೆಗಾಗಿ ಈಗಾಗಲೇ ಹಣಕಾಸು ಇಲಾಖೆ ಪೂರ್ವಸಿದ್ಧತೆ ಪ್ರಾರಂಭಿಸಿದೆ.ಆರ್ಥಿಕ ಸಂಕಷ್ಟದ ನಡುವೆ ಸಿಎಂ ಯಡಿಯೂರಪ್ಪ, 2021-22ನೇ ಸಾಲಿನ ಆಯವ್ಯಯ ಮಂಡಿಸಬೇಕಾಗಿದೆ. ತೆರಿಗೆ ಸಂಗ್ರಹದಲ್ಲಿನ ಕೊರತೆ, ಸೀಮಿತ ಆದಾಯ ಮೂಲ ಸರ್ಕಾರದ ಕೈಯನ್ನು ಕಟ್ಟಿ ಹಾಕಿದೆ. ಹೀಗಾಗಿ 2021-22ನೇ ಸಾಲಿನ ಆಯವ್ಯಯ ಸಿಎಂಗೆ ಕಬ್ಬಿಣದ ಕಡಲೆಯಾಗಿದೆ. ಒಂದೆಡೆ ಜನಪ್ರಿಯ ಯೋಜನೆಗಳು ಕೊಡುವ ಅಗತ್ಯವೂ ಇದೆ, ಇನ್ನೊಂದೆಡೆ ಪ್ರಮುಖ ಇಲಾಖೆಗಳಿಗೆ ಅನುದಾನ ಕಡಿತಗೊಳಿಸು ಹಾಗಿಲ್ಲ. ಈ …

Read More »

B.S.Y. ಕೂಡಲೇ ರಾಜೀನಾಮೆ ಕೊಡಲೇಬೇಕು, ಮಾದ್ಯಮಗಳ ಪ್ರಶ್ನೆಗೆ ತಬ್ಬಿಬ್ಬಾದ ವಾಟಾಳ್ ನಾಗರಾಜ್ ಸಾರಾ ಗೋವೀಂದ್

ಬೆಳಗಾವಿ- ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸಲು ಬೆಳಗಾವಿಗೆ ಆಗಮಿಸಿದ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ಸಾರಾ ಗೋವೀಂದ್ ತಬ್ಬಿಬ್ಬಾದ ಘಟನೆ ನಡೆಯಿತು ಹೋರಾಟಗಾರ ವಾಟಾಳ್ ನಾಗರಾಜ್, ಸ ರಾ ಗೋವಿಂದ ಸೇರಿ ಹಲವಾರು ಜನ ಕಾರ್ಯಕರ್ತರನ್ನು ಪೋಲೀಸರು ಹಿರೇಬಾಗೇವಾಡಿ ಟೋಲ್ ಬಳಿ, ಬಂಧಿಸಿದರು. ಸುವರ್ಣ ಸೌಧ ಬಳಿ ಧರಣಿಗೆ ಮುಂದಾಗಿದ್ದ ಹೋರಾಟಗಾರರನ್ನು ಹಿರೇಬಾಗೇವಾಡಿ ಟೋಲ್ ಬಳಿ ತಡೆದರು. ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಹಿನ್ನೆಲೆ. ಡಿಸೆಂಬರ್ …

Read More »

ಯರನಾಳ ಗ್ರಾಮದ ಶ್ರೀ ಕಾಳಿಕಾ ದೇವಸ್ಥಾನದ ಬ್ರಹ್ಮಾನಂದ ಮಠದಲ್ಲಿ ಭಕ್ತಿಗೀತೆಗಳ ಸಿ ಡಿ ಯನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.

ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಶ್ರೀ ಕಾಳಿಕಾ ದೇವಸ್ಥಾನದ ಬ್ರಹ್ಮಾನಂದ ಮಠದಲ್ಲಿ ಕಾಳಿಕಾಂಬೆಂಯ ಕಂದ ಗುರು ಬ್ರಹ್ಮಾನಂದ ಎಂಬ ಭಕ್ತಿಗೀತೆಗಳ ಸಿ ಡಿ ಯನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಶ್ರೀಗಳು ಅರುಣ ಐಹೋಳೆ ಮತ್ತು ಮುಕುಂದ ಮಠದ ನೇತೃತ್ವದಲ್ಲಿ ರಚಿಸಿದ ಶ್ರೀ ಬ್ರಹ್ಮಾನಂದ ಗುರುಗಳ ಭಕ್ತಿ ಗೀತೆಗಳು ಚನ್ನಾಗಿ ಮೂಡಿಬಂದಿವೆ ಎಂದರು , ರಾಯಬಾಗ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅರುಣ ಐಹೋಳೆ ಕಲಾವಿದರಾದ …

Read More »