Breaking News

ಇದೇ ಶನಿವಾರ (ಎ.17) ನಡೆಯುವ ಉಪಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ನನ್ನ ಗೆಲುವಿಗೆ ಸಹಕರಿಸಬೇಕು”.:

ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮಾರೀಹಾಳ, ಬಾಳೇಕುಂದ್ರಿ, ಮೋದಗಾ, ಬಾಳೇಕುಂದ್ರಿ ಕೆ.ಎಚ್., ಮುತಗಾ, ಸಾಂಬ್ರಾ, ತಾರೀಹಾಳ, ಕೆ.ಕೆ. ಕೊಪ್ಪ ಗ್ರಾಮಗಳಲ್ಲಿ ಇಂದು ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ನಡೆಸಿ, ಮತಯಾಚಿಸಲಾಯಿತು. ಪ್ರಚಾರದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿವಿಧ ಮುಖಂಡರು ಸಾಥ್ ನೀಡಿದರು. “ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತುಂಬಾ ಕಷ್ಟಪಡುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ನಿಯಂತ್ರಣ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ …

Read More »

ಇಂತಹ ಕೆಟ್ಟ ಸರ್ಕಾರವನ್ನ ಹಿಂದೆಯೂ ನೋಡಿರಲಿಲ್ಲ.. ಮುಂದೆಯೂ ಬರುವುದಿಲ್ಲ: ಹೆಚ್‌.ಡಿ ಕುಮಾರಸ್ವಾಮಿ

ಬೀದರ್: ಕರ್ನಾಟಕದಲ್ಲಿ ಇಂತಹ ಕೆಟ್ಟ ಸರಕಾರ ನೋಡಿರಲಿಲ್ಲ. ಹಿಂದೆಯೂ ಇಂತಹ ಸರ್ಕಾರ ಬಂದಿರಲಿಲ್ಲ.. ಮುಂದೆಯೂ ಬರುವುದಿಲ್ಲ.. ಕೊರೊನಾದಿಂದ ಜನರನ್ನ ದೇವರೇ ಕಾಪಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌. ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಸವ ಕಲ್ಯಾಣದಲ್ಲಿ ಮಾತನಾಡಿದ ಮಾಜಿ ಸಿಎಂ ‘ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಗಮನಿಸಿದೆ. 18ರ ನಂತ್ರ ಸರ್ವಪಕ್ಷ ಸಭೆ ಕರೆದು ಸಲಹೆ ಪಡೆಯುವುದಾಗಿ ಕೇಳ್ತಾರಂತೆ. ಯಾವ ಪುರುಷಾರ್ಥಕ್ಕಾಗಿ ಸಭೆ ಕರೆಯುತ್ತಾರೆ.. ಸಲಹೆ ಪಡೆಯುತ್ತಾರೆ? ಎಂದು ಪ್ರಶ್ನಿಸಿದರು. ಇನ್ನು ಈಗಾಗಲೇ …

Read More »

ನೌಕರರ ಮುಷ್ಕರದ ಎಫೆಕ್ಟ್:‌ ಸಾರಿಗೆ ನಿಗಮಗಳಿಗೆ ʼ₹152 ಕೋಟಿ ಲಾಸ್ʼ..!​

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದ ಸಾರಿಗೆ ನೌಕರರು ಕಳೆದ 8 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಆದ್ರೆ, ಈ ಮುಷ್ಕರದಿಂದ ನಾಲ್ಕೂ ನಿಗಮಗಳಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಹೌದು, ಈ ಮುಷ್ಕರದಿಂದ ಸಾರಿಗೆ ಇಲಾಖೆಯ 4 ವಿಭಾಗಗಳಿಗೂ ಕೋಟಿಗಟ್ಟಲೇ ನಷ್ಟವಾಗಿದೆ. ಅದ್ರಂತೆ, ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 70 ಕೋಟಿ ರೂಪಾಯಿ ನಷ್ಟವಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ- 20 ಕೋಟಿ ರೂಪಾಯಿ ನಷ್ಟವಾಗಿದೆ. ಇನ್ನು ವಾಯುವ್ಯ …

Read More »

ಮಂಗಳಾ ಅಂಗಡಿಯವರಿಗೆ ಆಶೀರ್ವಾದ ಮಾಡುವಂತೆ ಕೆಎಮ್‌ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಕೋರಿದರು.

ಗೋಕಾಕ: ದೇಶದಾಧ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಸಾರಥ್ಯದಲ್ಲಿ ಬಿಜೆಪಿಯ ಕಮಲ ಅರಳಿದ್ದು, ರಾಷ್ಟ್ರದ ಪ್ರಗತಿಯ ಹಿತದೃಷ್ಟಿಯಿಂದ ಹಾಗೂ ಬೆಳಗಾವಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸಿ ಕೇಂದ್ರ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಧರ್ಮಪತ್ನಿ ಮಂಗಳಾ ಅಂಗಡಿಯವರಿಗೆ ಆಶೀರ್ವಾದ ಮಾಡುವಂತೆ ಕೆಎಮ್‌ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಕೋರಿದರು. ಮಂಗಳವಾರದಂದು ಸಂಜೆ ಇಲ್ಲಿಗೆ ಸಮೀಪದ ಮೆಳವಂಕಿ (ಗೌಡನ ಕ್ರಾಸ್) …

Read More »

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನ ಮುಂದೂಡಿದೆ.

ಧಾರವಾಡ: ಕಳೆದ ಒಂದು ವಾರದಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವ ಹಿನ್ನೆಲೆ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನ ಮುಂದೂಡಿದೆ. ನಾಳೆಯಿಂದ ಏಪ್ರಿಲ್ 17ರವರೆಗೆ ನಡೆಯಬೇಕಿದ್ದ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಈ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಕೆ ಬಿ ಗುಡಸಿ ಮಾಹಿತಿ ನೀಡಿದ್ದಾರೆ. ಸಾರಿಗೆ ಮುಷ್ಕರ ಹಿನ್ನೆಲೆ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದ ಕಾರಣ ಪರೀಕ್ಷೆ ಮುಂದೂಡಿದ್ದೇವೆ. ಮುಂದೂಡಲಾದ ಪರೀಕ್ಷೆಯ ದಿನಾಂಕವನ್ನ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಗುಡಸಿ …

Read More »

ಸತೀಶಣ್ಣನವರು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲುವುದರಲ್ಲಿ ಯಾವ ಸಂಶಯವಿಲ್ಲ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದಲ್ಲಿ ಲೋಕಸಭಾ ಉಪ ಚುಣಾವಣೆಯ ಅಂಗವಾಗಿ ಶ್ರೀ ಸತೀಶಣ್ಣನವರ ಜೊತೆ ಪ್ರಚಾರ ಕಾರ್ಯಕ್ರಮದಲ್ಲಿ‌ ಭಾಗಿಯಾಗಿ ಮತ ಯಾಚಿಸಿದೆ. ಅಭೂತಪೂರ್ವ ಜನ ಬೆಂಬಲ ದೊರೆಯುತ್ತಿರುವುದನ್ನು ನೋಡಿದರೆ ಸತೀಶಣ್ಣನವರು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲುವುದರಲ್ಲಿ ಯಾವ ಸಂಶಯವಿಲ್ಲ  

Read More »

ಗ್ರಾಮೀಣ ಪ್ರದೇಶದ ಸಾಂಬ್ರಾ ಗ್ರಾಮಕ್ಕೆ ಶ್ರೀ ಸತೀಶಣ್ಣನವರ ಜೊತೆ ಪ್ರಚಾರ

ಬೆಳಗಾವಿ ಗ್ರಾಮೀಣ ಪ್ರದೇಶದ ಸಾಂಬ್ರಾ ಗ್ರಾಮದಕ್ಕೆ ಇವತ್ತು ಲೋಕಸಭಾ ಚುನಾವಣೆಯ ಪ್ರಚಾರಾರ್ಥ ಸಲುವಾಗಿ ತೆರಳಿ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಹಾಗೂ ಮಹಾನ್ ನಾಯಕರಾದ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯ ನಿಮಿತ್ಯ ಅವರ ಪುತ್ಥಳಿಗೆ ಗೌರವಾರ್ಪಣೆಯನ್ನು ಸಲ್ಲಿಸಿ ಶ್ರೀ ಸತೀಶಣ್ಣನವರ ಜೊತೆ ಪ್ರಚಾರವನ್ನು ಕೈಗೊಂಡು ಮತ ಯಾಚಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಬೀರದೇವರ ಮಂದಿರಕ್ಕೆ ಸಹ ತೆರಳಿ ಆಶೀರ್ವಾದವನ್ನು ಪಡೆದು, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ …

Read More »

ಡಿ.ಕೆ ಶಿವಕುಮಾರ್, ನನ್ನ ವೈಯುಕ್ತಿಕ ಅಭಿಪ್ರಾಯ ಲಾಕ್‍ಡೌನ್ ಬೇಡ. ಲಾಕ್‍ಡೌನ್ ಗಿಂತ ಜೀವ ಹಾಗೂ ಜೀವನ ಮುಖ್ಯ.:B.S.Y.

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಪ್ರಾರಂಭವಾಗಿರುವುದರಿಂದ ಲಾಕ್‍ಡೌನ್ ಮಾಡಿ ಏನು ಪ್ರಯೋಜನ ಇಲ್ಲ. ಇದರ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಮಾತಾನಾಡಿದ ಡಿ.ಕೆ ಶಿವಕುಮಾರ್, ನನ್ನ ವೈಯುಕ್ತಿಕ ಅಭಿಪ್ರಾಯ ಲಾಕ್‍ಡೌನ್ ಬೇಡ. ಲಾಕ್‍ಡೌನ್ ಗಿಂತ ಜೀವ ಹಾಗೂ ಜೀವನ ಮುಖ್ಯ. ಸರ್ಕಾರ ಅವರದೇನೋ ಮುಚ್ಚಿಕೊಳ್ಳೋಕೆ ಲಾಕ್‍ಡೌನ್ ಮತ್ತೊಂದು ಎಂಬ ಸುದ್ದಿ ಹಬ್ಬಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಮಗಿನ್ನು ಸರ್ವ ಪಕ್ಷಗಳ ಸಭೆಯ …

Read More »

ಅವ್ವ-ಅಜ್ಜಿ ಜತೆ ಮದುವೆ ಮಾತುಕತೆಗೆ ಬಂದವ ಅಕ್ಕ-ತಂಗಿ ಮೇಲೆ ಮಚ್ಚುಬೀಸಿದ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಹಾಸನ: ತಮ್ಮನನ್ನು ಮದುವೆಯಾಗಲು ಒಪ್ಪದ ಯುವತಿಯರಿಬ್ಬರ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚಾವು ಗ್ರಾಮದಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಹೋದರಿಯರಾದ ಯೋಗಿತಾ ಮತ್ತು ಪುಷ್ಪಿತಾ ಹಲ್ಲೆಗೊಳಗಾದವರು. ನಾಗರಾಜ್​ ಹಲ್ಲೆ ಮಾಡಿದವ. ಈತನ ಸೋದರ ಮಾವನ ಮಕ್ಕಳು ಯೋಗಿತಾ ಮತ್ತು ಪುಷ್ಪಿತಾ. ಏ.12ರಂದು ಯೋಗಿತಾಳ ಜತೆ ತನ್ನ ತಮ್ಮನ ಮದುವೆ ಮಾತುಕತೆಗೆಂದು ತಾಯಿ ಹಾಗೂ ಅಜ್ಜಿ ಜತೆ ಸೋದರ ಮಾವನ ಮನೆಗೆ ನಾಗರಾಜ್ …

Read More »

CBSE Board Exams 2021: ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ದಿನಾಂಕ ಮುಂದೂಡಿಕೆ

ದೆಹಲಿ: ದೇಶದೆಲ್ಲೆಡೆ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆಯಿಂದಾಗಿ ಶೈಕ್ಷಣಿಕ ವಲಯ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದಾಗಿ ಸಿಬಿಎಸ್​ಇ ಬೋರ್ಡ್​ನ 10 ಮತ್ತು 12ನೇ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ ಇಲಾಖೆಯೊಂದಿಗೆ ಸಭೆ ನಡೆಸಿದ್ದಾರೆ. ವಿವಿಧ ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿ, 12ನೇ ತರಗತಿ ಪರೀಕ್ಷೆಯ ದಿನಾಂಕ ಮುಂದೂಡಿ ಆದೇಶ ಹೊರಡಿಸಲಾಗಿದೆ. …

Read More »