ಮಂಡ್ಯ: ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಾಲಕಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಅಪ್ರಾಪ್ತನನ್ನು ಬಂಧಿಸಿದ್ದಾರೆ.ಕೊಲೆಯಾದಬ ಅಪ್ರಾಪ್ತ ಅದೇ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿದ್ದನು. ಅನುಮಾನದ ಮೇರೆಗೆ ಅಪ್ರಾಪ್ತನನ್ನ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಮೊದಲಿಗೆ ಯಾರೋ ಇಬ್ಬರು ಬಾಲಕಿಯನ್ನ ಎಳೆದುಕೊಂಡು ಹೋಗುತ್ತಿದ್ದಾಗ ನಾನು ಆಕೆಯನ್ನ ಬಿಡಿಸಲು ಹೋಗಿದ್ದೆ. ನಂತರ ಭಯವಾಗಿ ಗದ್ದೆಯಲ್ಲಿ ಅವಿತು ಕುಳಿತಿದ್ದೆ ಎಂದು ಹೇಳಿದ್ದನು. ಅಪ್ರಾಪ್ತನ ನಡವಳಿಕೆ ಬಗ್ಗೆ ಮೃತ ಬಾಲಕಿಯ …
Read More »ಶೇವ್ ಮಾಡದೇ ಶೇವಿಂಗ್‍ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸುತ್ತಿದ್ದ ಬೆಂಗಳೂರಿನ ಒಂದು ರೈಡರ್ಸ್ ತಂಡ
ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ನವೆಂಬರ್ ತಿಂಗಳಲ್ಲಿ ಶೇವ್ ಮಾಡದೇ ಶೇವಿಂಗ್‍ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸುತ್ತಿದ್ದ ಬೆಂಗಳೂರಿನ ಒಂದು ರೈಡರ್ಸ್ ತಂಡ ಈ ಬಾರಿ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಟ್ಯಾಬ್ ಒದಗಿಸುವ ಕಾರ್ಯ ಕೈಗೊಂಡಿದೆ. ಬ್ರೋಸ್ ಅನ್ ವೀಲ್ಸ್ ಎನ್ನುವ ರೈಡರ್ಸ್ ತಂಡ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಟ್ಯಾಬ್ (ಬಡ್ಲಿ -ರೀಫರ್ಬಿಷ್ಡ ಎಲೆಕ್ಟ್ರಾನಿಕ ಸಂಸ್ಥೆ ಸಹಯೋಗದಿಂದ) 12 12 ಸ್ಮಾರ್ಟ್ ಫೋನ್ …
Read More »ಸರ್ಕಾರಿ ಬಸ್ಸಿಗೆ ಶಾಸಕ ವಿರೂಪಾಕ್ಷಪ್ಪ ಪುತ್ರನ ಕಾರು ಡಿಕ್ಕಿ
ಹಾವೇರಿ: ಜಿಲ್ಲೆ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪನವರ ಪುತ್ರ ಯುವರಾಜ ಬಳ್ಳಾರಿ ಚಲಾಯಿಸುತ್ತಿದ್ದ ಕಾರ್ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಸಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಆದರೆ ಕಾರಿನ ಮುಂಭಾಗ ಹಾಗೂ ಬಸ್ಸಿನ ಹಿಂಭಾಗ ಜಖಂ ಆಗಿದೆ.ವಿರೂಪಾಕ್ಷಪ್ಪನವರ ಪುತ್ರ ಯುವರಾಜ, ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ …
Read More »2023 ಕ್ಕೆ ಎಚ್. ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ..?
ಮಂಡ್ಯ: 2023 ಕ್ಕೆ ಎಚ್. ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೆ.ಎಂ. ದೊಡ್ಡಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಮಂಡ್ಯ, ಮೈಸೂರು, ರಾಮನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿಯೂ ಪ್ರಬಲವಾಗಿ ಪಕ್ಷ ಬೆಳೆದಿದೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ. ಇದಕ್ಕಾಗಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ …
Read More »ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ತಾಂತ್ರಿಕ ಸಮಿತಿ ಶಿಫಾರಸು
ಬೆಂಗಳೂರು, ಡಿ.3- ರಾಜ್ಯದಲ್ಲಿ ಮುಂದಿನ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಆರಂಭವಾಗುವ ಸಾಧ್ಯತೆಗಳಿರುವುದಾಗಿ ಕೋವಿಡ್ ತಾಂತ್ರಿಕ ಸಮಿತಿ ಹೇಳಿದ್ದು, ಈ ಭೀತಿ ನಡುವೆಯೇ ಜನವರಿಯಿಂದಲೇ 10 ಮತ್ತು 12ನೆ ತರಗತಿ ಮಕ್ಕಳಿಗೆ ಶಾಲೆಗಳನ್ನು ಆರಂಭಿಸಬಹುದು. ಬಳಿಕ 9 ಮತ್ತು 11ನೆ ತರಗತಿ ಮಕ್ಕಳಿಕೆ ಶಾಲೆ ಆರಂಭಿಸಬಹುದು ಎಂದು ಶಿಫಾರಸು ಮಾಡಿದೆ. ಸಮಿತಿಯ ಈ ಶಿಫಾರಸು ಸರ್ಕಾರವನ್ನು ಗೊಂದಲಕ್ಕೊಳಗಾಗುವಂತೆ ಮಾಡಿದೆ. ಕೊರೊನಾ ತಾಂತ್ರಿಕ ಸಮಿತಿ ಈ ಹಿಂದೆ ನೀಡಿದ್ದ …
Read More »ರ್ಜೂನಿಯರ್ ಇಂಜಿನಿಯರ್ ಕೊಲೆ ಪ್ರಕರಣ: ನಿವೃತ್ತ ಪೊಲೀಸ್ ಮಹಾನಿರ್ದೆಶಕ ಸುಮೇಂದ್‍ಸಿಂಗ್ ಸುಪ್ರೀಂ ಜಾಮೀನು
ನವದೆಹಲಿ,ಡಿ.3- ರ್ಜೂನಿಯರ್ ಇಂಜಿನಿಯರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪಂಜಾಬ್‍ನ ನಿವೃತ್ತ ಪೊಲೀಸ್ ಮಹಾನಿರ್ದೆಶಕ ಸುಮೇಂದ್‍ಸಿಂಗ್ ಶೈನಿ ಅವರಿಗೆ ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್, ಆರ್.ಸುಭಾಷ್‍ರೆಡ್ಡಿ, ಎಂ.ಆರ್.ಶಾ ಅವರುಗಳನ್ನೊಗೊಂಡ ವಿಭಾಗೀಯ ಪೀಠ 29 ವರ್ಷದ ಹಳೆಯ ಪ್ರಕರಣದಲ್ಲಿ ಶೈನಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. 1991ರಲ್ಲಿ ಚಂಡೀಗಢದ ಕೈಗಾರಿಕಾ ಮತ್ತು ಪ್ರವಾಸೋದ್ಯಮ ನಿಗಮದ ಹಿರಿಯ ಇಂಜಿನಿಯರ್ ಮುಲ್ತಾನಿ ಅವರ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ …
Read More »ಪಿಎಫ್‍ಐ ಅಧ್ಯಕ್ಷನ ಮನೆ ಮೇಲೇ ಇಡಿ ದಾಳಿ……
ನವದೆಹಲಿ,ಡಿ.3- ಸಿಎಎ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆಗೆ ಹಣಕಾಸು ಸಹಾಯ ಮಾಡಿದ ಆರೋಪದ ವಿಚಾರಣೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ಪಿಎಫ್‍ಐ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಅವರ ಮನೆ ಮೇಲೆ ದಾಳಿ ನಡೆಸಿದೆ. ಉನ್ನತ ಮೂಲಗಳ ಪ್ರಕಾರ ಕೇರಳದ ಮಲ್ಲಪುರಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ನಡೆಸಿದೆ. ಪಿಎಫ್‍ಐನ ಅಧ್ಯಕ್ಷ ಒ.ಎಂ.ಅಬ್ದುಲಸಲಾಂ, ರಾಷ್ಟ್ರೀಯ ಕಾರ್ಯದರ್ಶಿ ನಾಸಿರುದ್ದೀನ್ ಯಲಮಾರನ್ ಅವರಿಗೆ ಸೇರಿದ …
Read More »ತುಮಕೂರಿನಲ್ಲಿ ಗಡ್ಡ ರವಿ ಶಿಷ್ಯ ಹಾಗೂ ಪೊಲೀಸ್ ಮಾಹಿತಿದಾರ ಹುಚ್ಚೆ ಮಂಜುನ ಬರ್ಬರ ಹತ್ಯೆ
ತುಮಕೂರು, ಡಿ.3- ಕಲ್ಪತರು ನಾಡಿನಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ಮಾಜಿ ಮೇಯರ್ ಗಡ್ಡ ರವಿ ಆಪ್ತ ಶಿಷ್ಯ ಹಾಗೂ ಪೊಲೀಸ್ ಮಾಹಿತಿದಾರನಾಗಿದ್ದ ಹುಚ್ಚೆ ಮಂಜು ಅಲಿಯಾಸ್ ಆರ್‍ಎಕ್ಸ್ ಮಂಜ (33) ಭೀಕರವಾಗಿ ಹತ್ಯೆಯಾದ ಹಳೇ ರೌಡಿ ಶೀಟರ್. ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‍ಪಿ ಕಚೇರಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಇರುವ ಬಿ.ಎಚ್.ರಸ್ತೆಯ ಮಂಜುಶ್ರೀ ಲಿಕ್ಕರ್ಸ್ ಎದುರು ನಿನ್ನೆ ರಾತ್ರಿ 10.30ರ ಸಮಯದಲ್ಲಿ …
Read More »ಉಗ್ರರ ಯಾವುದೇ ಚಟುವಟಿಕೆಗೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಗೋಡೆ ಬರಹ ಸಂಬಂಧ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಿದ್ದಾರೆ:ಬೊಮ್ಮಾಯಿ
ಉಡುಪಿ: ಕೊರೊನಾ ವೈರಸ್ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡುವ ಕುರಿತು ಸರಕಾರ ಚಿಂತನೆ ಮಾಡಿಲ್ಲ. ಈ ಬಗ್ಗೆ ಯಾವುದೇ ಮಾತುಕತೆಯೂ ಆಗಿಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನ ಸೊಂಕು ಹೆಚ್ಚುತ್ತಿರುವುದು ನಿಜ. ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಸರಕಾರ ಒತ್ತು ನೀಡುತ್ತಿದೆ. ನೈಟ್ ಕರ್ಪ್ಯೂ ಕುರಿತು ಯಾವ ಚರ್ಚೆಯು ಆಗಿಲ್ಲ …
Read More »ಸಚಿವ ರಮೇಶ್ ಜಾರಕಿಹೊಳಿಗೆ ಬುಧವಾರ ಭೇಟಿಯಾಗಿ, ಅಭಿನಂಧನೆ ಸಲ್ಲಿಸಿದ ಅಧ್ಯಕ್ಷೆ ಪವಿತ್ರ ರಾಮಯ್ಯ
ಗೋಕಾಕ : ಭದ್ರ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಬುಧವಾರ ಭೇಟಿಯಾಗಿ, ಅಭಿನಂಧನೆ ಸಲ್ಲಿಸಿದರು. ಸಚಿವರಿಗೆ ಸನ್ಮಾನಿಸಿದ ಅವರು, ಪ್ರಾಧಿಕಾರದ ವ್ಯಾಪ್ತಿಯ ಅಚ್ಚುಕಟ್ಟು ಭಾಗದ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ, ಅಧಿಕಾರಿಗಳು ರಚಿಸಿರುವ ಸುಮಾರು 400ಕೋಟಿ ರೂಗಳ ಕ್ರಿಯಾ ಯೋಜನೆಯ ಬಗ್ಗೆ ಹಾಗೂ ರೈತರಿಂದ ಬಂದಂತಹ ಅರ್ಜಿಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿ ಗಮನ ಸೆಳೆದರು. …
Read More »