Breaking News

ಅಶೋಕ ಪೂಜಾರಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಅಂತೆ….!!!

  ಬೆಳಗಾವಿ- ಬೆಳಗಾವಿಯ ಮಾಸ್ಟರ್ ಮೈಂಡ್ ಈಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದಂತೆ ಕಾಣುತ್ತಿದೆ.ಲೋಕಸಭಾ ಉಪ ಚುನಾವಣೆಯಲ್ಲಿ ಬೆಳಗಾವಿಯಿಂದ ಅಶೋಕ ಪೂಜಾರಿಯನ್ನು ಕಣಕ್ಕಿಳಿಸುವ ತಯಾರಿ ನಡೆದಿದೆ ಎನ್ನುವ ಸುದ್ಧಿ ಈಗ ಸದ್ದಿಲ್ಲದೇ ಹರಿದಾಡುತ್ತಿದೆ. ಬಿಜೆಪಿಗೆ ಟಕ್ಕರ್ ಕೊಡಲು,ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಗೋಕಾಕಿನ ಅಶೋಕ ಪೂಜಾರಿ ಅವರನ್ನುಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಅಶೋಕ ಪೂಜಾರಿ ಇತ್ತೀಚಿಗೆ ಗೋಕಾಕಿನಲ್ಲಿ ನಡೆದ ಸತೀಶ್ …

Read More »

ರೈತ ವಿರುದ್ದ ಕಾಯ್ದೆಯಾಗಿದ್ದರೆ ಜೆಡಿಎಸ್ ವಿರೋಧಿಸುತ್ತಿತ್ತು : ನಮ್ಮ ಪಕ್ಷ ರೈತರ ಪರವಿದೆ

      ಹಾಸನ: ನಮ್ಮ ಜೆಡಿಎಸ್ ಪಕ್ಷವು ರೈತರ ವಿರುದ್ಧ ಇಲ್ಲ. ರೈತರ ಪರವಾಗಿದ್ದು, ಏನಾದರೂ ರೈತರ ವಿರುದ್ಧದ ಕಾಯಿದೆ ಇದ್ದರೇ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.​ ​ಹಾಸನದಲ್ಲಿ ​ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, “ಭೂಸುಧಾರಣಾ ಕಾಯ್ದೆಗೆ ಈಗಲೂ ನಮ್ಮದು ವಿರೋಧವಿದೆ. ರೈತರಿಗೆ ಕೆಲವು ವಿಷಯ ಮಾರ್ಪಾಡು ಮಾಡುತ್ತೇವೆ ಎಂದಾಗ ನಾವು ಬೆಂಬಲಿಸಿದ್ದೇವೆ. ಕೆಲ ವಿಷಯಗಳನ್ನ ಮಾರ್ಪಾಡು ಮಾಡಿದ ಬಳಿಕ ನಾವು …

Read More »

ಬಸ್ಸಿಗಾಗಿ ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಮುತ್ತು ಎಂಬ ಪ್ರಯಾಣಿಕ ಬೊಬ್ಬೆ ಹಾಕುವ ಮೂಲಕ ಆಕ್ರೋಶ

ವಿಜಯಪುರ( ಡಿಸೆಂಬರ್​. 11): ಬಸ್ಸಿಗಾಗಿ ಪ್ರಯಾಣಿಕರೊಬ್ಬರು ಬೊಬ್ಬೆ ಹಾಕಿ ಬಸ್ ಬಿಡುವಂತೆ ಅಳಲು ತೋಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ರಾಜ್ಯದ ಕೆಲವೆಡೆ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಬೆಳಿಗ್ಗೆಯಿಂದ ಎಂದಿನಂತೆ ಬಸ್ ಸಂಚಾರ ಆರಂಭವಾಗಿತ್ತು. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿರುವ ವಿಜಯಪುರ ಜಿಲ್ಲಾದ್ಯಂತ ಬಸ್​​ ಗಳು ರೋಡಿಗಿಳಿದಿದ್ದವು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದಾಗ ದಿಢೀರನೆ ಪ್ರತಿಭಟನೆಗೆ ಇಳಿದ ಕೆಲವು ಜನ …

Read More »

ಭಾರೀ ಸಂಖ್ಯೆಯಲ್ಲಿ ಜೆಡಿಎಸ್, ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ

ಚಿಕ್ಕಬಳ್ಳಾಪುರ : ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಗ್ರಾಮ ಪಂಚಾಯಿತಿ ಅಖಾಡದಲ್ಲಿ ಚುನಾವಣೆಗೂ ಮೊದಲೇ ಪಕ್ಷಾಂತರ ಪರ್ವಕ್ಕೆ ಚಾಲನೆ ನೀಡಿದ್ದಾರೆ. ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ನ ಹಲವಾರು ಮುಖಂಡರು ತಮ್ಮ  ಬೆಂಬಲಿಗರ ಜೊತೆ ಸಚಿವ ಡಾ.ಕೆ. ಸುಧಾಕರ್ ನಾಯಕತ್ವವನ್ನು ಬೆಂಬಲಿಸಿ ಬಿಜೆಪಿಯತ್ತ ವಲಸೆ ಹೊರಟಿದ್ದಾರೆ. ಸಚಿವ ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಯ ಹಾರೋಬಂಡೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮ …

Read More »

ಇಂದು ಕೂಡ KSRTC, BMTC ನೌಕರರ ಮುಷ್ಕರ;

ಬೆಂಗಳೂರು (ಡಿ. 12): ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಗುರುವಾರ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರದ 2ನೇ ದಿನವಾದ ಇಂದು ಕೂಡ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಬಸ್​ಗಳು ಸಂಚಾರ ನಡೆಸದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಸ್ಥಗಿತಗೊಂಡಿರುವುದರಿಂದ ಆಟೋ, ಕ್ಯಾಬ್​ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇದೇ ಸಮಯವನ್ನು ಬಳಸಿಕೊಂಡು ಆಟೋಗಳು ಪ್ರಯಾಣಿಕರಿಂದ ಹಗಲು …

Read More »

ದರ್ಶನ್ ರಾಮನ ಅವತಾರ ಎತ್ತಿದ್ದಾರೆ, ಕಿಚ್ಚ ಸುದೀಪ್‍ರನ್ನು ರಾಮನ ಭಂಟ ಹನುಮಂತನಾಗಿಯೂ ಸೃಷ್ಟಿಸಿದ್ದಾರೆ

ಟಾಲಿವುಡ್‍ನಲ್ಲಿ ಆದಿಪುರುಷ್‍ನಲ್ಲಿ ರೆಬೆಲ್‍ಸ್ಟಾರ್ ಪ್ರಭಾಸ್ ರಾಮನ ಅವತಾರದಲ್ಲಿ ಕಾಣಿಸಿಕೊಂಡಿರುವ ಬೆನ್ನಲ್ಲೇ ಸ್ಯಾಂಡಲ್‍ವುಡ್‍ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ರಾಮನ ಅವತಾರ ಎತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ದರ್ಶನ್ ಹನುಮಂತನಾಗಿ ಕಾಣಿಸಿಕೊಳ್ಳುವ ಅಚ್ಚರಿ ಮೂಡಿಸಿದ್ದರು, ಆದರೆ ಈಗ ಹನುಮಂತನ ಪಾತ್ರಧಾರಿಯಾಗಿ ಕಿಚ್ಚ ಸುದೀಪ್ ಅವತಾರ ಎತ್ತಿದ್ದಾರೆ. ಅರೆ… ಹಾವು, ಮುಂಗುಸಿಯಂತೆ ಆಡುತ್ತಿರುವ ದರ್ಶನ್ ಹಾಗೂ ಸುದೀಪ್ ಅವರು ಒಂದಾದರೆ ಎಂದು ಸಂತೋಷ ಪಡಬೇಡಿ, ಈ ರೀತಿ ದಚ್ಚು- ಕಿಚ್ಚ ಒಂದಾಗಿರುವುದು …

Read More »

ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರಿಗೆ ಸಮನ್ಸ್ ಜಾರಿ

ನವದೆಹಲಿ,:ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ಪಡೆ ವಾಹನದ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಬಂಗಾಳ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾದ್ಯಾಯ ಹಾಗೂ ಪೊಲೀಸ್ ಮಹಾ ನಿರ್ದೇಶಕ ವೀರೇಂದ್ರ ಅವರು ಡಿ.14 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್‍ನಲ್ಲಿ ಸೂಚಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ, ರಾಜಕೀಯ ಗಲಭೆಗಳಿಗೆ …

Read More »

ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ರಮೇಶ್ ಜಾರಕಿಹೊಳಿ ನೇಮಕ

ಬೆಂಗಳೂರು, ಡಿ.11- ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಮತ್ತು 9 ರಂದು ನಡೆಯಲಿರುವ ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ನೇಮಕ,ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಪಂಗಡದ ಜನಪ್ರತಿನಿಧಿಗಳ ಸಭೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸರ್ವಾನುಮತ ದಿಂದ ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಎಂದು ಅಧಿಕೃತ …

Read More »

(ಡಿ.೧೪) ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫.೩೦ ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಬೆಳಗಾವಿ- smart city ಯೋಜನೆಯಡಿ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಸೋಮವಾರ (ಡಿ.೧೪) ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫.೩೦ ಘಂಟೆಯವರೆಗೆ ೩೩ ಕೆ.ವ್ಹಿ. ಸದಾಶಿವ ನಗರ ಉಪಕೇಂದ್ರದಿಂದ ವಿತರಣೆಯಾಗುವ ಕಂಗ್ರಾಳಿ ಕೆ.ಎಚ್ ಹಾಗೂ ಅಲತಗಾ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಅದೇ ರೀತಿ ಹು.ವಿ.ಸ.ಕಂ.ನಿ. ವತಿಯಿಂದ ತುರ್ತು ನಿರ್ವಹಣೆಯಿಂದ ಬೆಳಿಗ್ಗ್ಗೆ ೧೦ ಘಂಟೆಯಿಂದ ಸಂಜೆ ೪ ಘಂಟೆಯವರೆಗೆ ೧೧೦ ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ …

Read More »

ಮುಷ್ಕರದಲ್ಲಿ ಪಾಲ್ಗೊಂಡ ನೌಕರರಿಗೆ ಅನ್ನ ಸಾಂಬಾರ್ ರೆಡಿ,ಬಸ್ ಗಳನ್ನು ನಿಲ್ಧಾಣದಲ್ಲೇ ಪಾರ್ಕ್ ಮಾಡಿ ಹೋರಾಟ

ಬೆಳಗಾವಿ ಬಸ್ ನಿಲ್ಧಾಣ ಇವತ್ತು ಅಕ್ಷರಶಃ ಹೋರಾಟದ ಕೇಂದ್ರವಾಗಿದೆ ಇವತ್ತು ಇಡೀ ದಿನ ಈ ನಿಲ್ಧಾಣದಲ್ಲಿ ಕ್ರಾಂತಿಯ ಕಿಡಿಯ ಜೊತೆಗೆ ಒಲೆಯೂ ಹೊತ್ತಿದೆ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನಡೆಯುತ್ತಿರುವ ಸಾರಿಗೆ ನೌಕರರ ಹೋರಾಟಕ್ಕೆ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯೆಕ್ತವಾಗಿದೆ. ಧರಣಿ ನಡೆಸುತ್ತಿರುವ ಸಾರಿಗೆ ನೌಕರರು ಮದ್ಯಾಹ್ನದ ಊಟವನ್ನು ನಿಲ್ಧಾಣದಲ್ಲೇ ಮಾಡಿದರು.ಈಗ ರಾತ್ರಿ ಊಟಕ್ಕೆ ಅಡುಗೆ ತಯಾರಿಸುವ ಕಾರ್ಯ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲೇ ನಡೆಯುತ್ತಿದೆ ಮುಷ್ಕರದಲ್ಲಿ ಪಾಲ್ಗೊಂಡ …

Read More »