Breaking News

ಪ್ರತಿಭಟನಾ ಸ್ಥಳದಲ್ಲಿ ಮತ್ತೆ ರೈತರ ಜಮಾವಣೆ.. ಗಾಜಿಪುರ್ ಬಾರ್ಡರ್ ಕ್ಲೋಸ್

ನವದೆಹಲಿ: ದೆಹಲಿ- ಉತ್ತರಪ್ರದೇಶ ನಡುವಿನ ಗಡಿ ಪ್ರದೇಶ ಗಾಜಿಪುರ್ ಬಾರ್ಡರ್​ನಲ್ಲಿ ರಾತ್ರೋರಾತ್ರಿ ಮತ್ತೆ ರೈತರು ಜಮಾವಣೆಗೊಂಡಿದ್ದಾರೆ. ಉತ್ತರಪ್ರದೇಶದ ಮುಜಾಫ್ಪರ್​ನಗರ್​ನಿಂದ ರೈತರ ದಂಡು ಹರಿದುಬಂದ ಹಿನ್ನೆಲೆ ಗಾಜಿಪುರ್ ಬಾರ್ಡರ್​ ಕ್ಲೋಸ್ ಆಗಿದೆ. ಗಾಜಿಪುರ್​ ಬಾರ್ಡರ್ ಕ್ಲೋಸ್ ಆದ ಹಿನ್ನೆಲೆ ರಸ್ತೆ ಮಾರ್ಗವನ್ನ NH-24, NH-9, ರಸ್ತೆ ನಂಬರ್ 56, 57A, ಕೊಂಡ್ಲಿ, ಪೇಪರ್ ಮಾರ್ಕೆಟ್, ಟೆಲ್ಕೋ ಟಿ ಪಾಯಿಂಟ್, EDM ಮಾಲ್, ಅಕ್ಷರಧಾಮ್, ನಿಜಾಮುದ್ದೀನ್ ಖಟ್ಟಾ ಕಡೆಗೆ ಬದಲಿಸಲಾಗಿದೆ. ವಿಕಾಸ್ ಮಾರ್ಗ …

Read More »

ಮುಂಬೈ ನಮ್ದು, ನಮಗೇ ಸೇರಬೇಕು: ಡಿಸಿಎಂ ಸವದಿ ಹೇಳಿಕೆಯಿಂದ ಮಹಾರಾಷ್ಟ್ರದಲ್ಲಿ ಭಾರೀ ಸಂಚಲನ

ನಾವು ಮುಂಬೈ ಕರ್ನಾಟಕದವರಾಗಿದ್ದು, ನಮಗೆ ಮುಂಬೈ ಮೇಲೆ ಹಕ್ಕು ಇದೆ. ಮುಂಬೈಯನ್ನು ರಾಜ್ಯಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡಲಿದ್ದು, ಅಲ್ಲಿವರೆಗೂ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದರು. ಅವರು ನೀಡಿದ ಈ ಹೇಳಿಕೆ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು, ಅದು ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಅವರು ಮರಾಠಿ …

Read More »

ಸಂಸತ್‌ ಅಧಿವೇಶನ ಇಂದು ಶುರು

ಹೊಸದಿಲ್ಲಿ: ಎರಡು ಹಂತಗಳ ಸಂಸತ್‌ನ ಬಜೆಟ್‌ ಅಧಿವೇಶನ ಶುಕ್ರವಾರ ಶುರುವಾಗಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆರ್ಥಿಕ ಸಮೀಕ್ಷೆಯೂ ಶುಕ್ರವಾರವೇ ಮಂಡನೆಯಾ ಗ ಲಿದೆ. ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮುಂಗಡಪತ್ರ ಮಂಡಿಸಲಿದ್ದಾರೆ. ಕೊರೊನಾ ನಿಯಮದ ಹಿನ್ನೆಲೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳು ತಲಾ ಐದು ಗಂಟೆಗಳಿಗೆ ನಿಗದಿಯಾಗಿವೆ. ರಾಜ್ಯಸಭೆಯ ಕಲಾಪಗಳು ಬೆಳಗ್ಗೆ, ಲೋಕಸಭೆ ಕಲಾಪಗಳು ಸಂಜೆ ವೇಳೆ ನಡೆಯಲಿವೆ. ಅಧಿವೇಶನದ ಮತ್ತೂಂದು ಪ್ರಮುಖ ಅಂಶವೆಂದರೆ ವಾರಾಂತ್ಯಗಳಲ್ಲಿ …

Read More »

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ತಿಮಿಂಗಲಗಳನ್ನು ಹಿಡಿಯುವುದು ಬಾಕಿಯಿದೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ದೊಡ್ಡ ತಿಮಿಂಗಲಗಳನ್ನು ಹಿಡಿಯುವುದು ಬಾಕಿಯಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟೀಸ್ ಹಿನ್ನೆಲೆಯಲ್ಲಿ ಮತ್ತೆ ವಿಚಾರಣೆಗೆ ಹಾಜರಾದ ಇಂದ್ರಜಿತ್ ಲಂಕೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 6 ತಿಂಗಳಿಂದ ತನಿಖೆಗೆ ಸಹಕಾರ ನೀಡುತ್ತಾ ಬಂದಿದ್ದೇನೆ. ಸಿಸಿ ಅಧಿಕಾರಿಗಳು ಸಣ್ಣ ಸಣ್ಣ ಮೀನುಗಳನ್ನು ಹಿಡಿದಿದ್ದಾರೆ. ಇನ್ನು …

Read More »

ಪೊಲೀಸರಿಗೆ ವಾರದ ರಜೆ ಕಡ್ಡಾಯ:ಪ್ರವೀಣ್‌ ಸೂದ್‌

ಬೆಂಗಳೂರು –  ಪೊಲೀಸರಿಗೆ ವಾರದ ರಜೆ ನೀಡುತ್ತಿಲ್ಲವೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ಕಡ್ಡಾಯವಾಗಿ ಸಿಬ್ಬಂದಿಗೆ ವಾರದ ರಜೆ ನೀಡುವಂತೆ ಗುರುವಾರ ತುರ್ತು ಸುತ್ತೋಲೆ ಹೊರಡಿಸಿದ್ದಾರೆ. ”ರಾಜ್ಯ ಪೊಲೀಸ್‌ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ ನೀಡಲು ಸೂಚಿಸಿದ್ದು ತಪ್ಪಿದರೆ, ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ. ರಾಜ್ಯದ ಪೊಲೀಸ್‌ ಕಮಿಷನರ್‌ಗಳು, ಐಜಿಪಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಈ …

Read More »

ಸಚಿವ ಮಾಧುಸ್ವಾಮಿಗೆ ಹಿಂದಿನ ಸಾಲು!

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ವಿರೋಧ ಪಕ್ಷಗಳು ನಿರಂತರ ನಡೆಸುತ್ತಿದ್ದ ವಾಗ್ದಾಳಿಗೆ ಗುರಾಣಿಯಂತೆ ನಿಲ್ಲುತ್ತಿದ್ದ ಸಚಿವ ಜೆ.ಸಿ.ಮಾಧುಸ್ವಾಮಿಗೆ ಈಗ ‘ಹಿಂಬಡ್ತಿ’ ಆಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾಗಿದ್ದಾಗ ಅವರಿಗೆ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಇತ್ತು. ಸಂಪುಟ ವಿಸ್ತರಣೆ ಮತ್ತು ಖಾತೆ ಬದಲಾವಣೆ ಬಳಿಕ ಇದೀಗ ಎರಡನೇ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಾಧುಸ್ವಾಮಿ ಅವರು ಈ …

Read More »

C.M.ಕುರ್ಚಿ ಖಾಲಿಯಾಗುತ್ತದೆ ನಾನೇ ಸಿಎಂ ಆಗುತ್ತೇನೆ: ಯತ್ನಾಳ್

ದಾವಣಗೆರೆ : ಪಂಚಮಸಾಲಿ ಲಿಂಗಾಯತ ಸಮುದಾಯದ ಪಾದಯಾತ್ರೆ ಬೆಂಗಳೂರು ಸೇರುವ ಮುನ್ನ 2 ಎ ಘೋಷಿಸದಿದ್ದರೆ ನಿಮ್ಮ ಕುರ್ಚಿ ಖಾಲಿಯಾಗುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಹರಿಹರದಲ್ಲಿ ಮಾತನಾಡಿದ ಯತ್ನಾಳ್, ನಮ್ಮ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ, ನಾನೇ ನಿಮಗೆ ಕೋಟಿಗಟ್ಟಲೆ ಹಣ ಕೊಡುತ್ತೇನೆ. ಮೀಸಲಾತಿ ಕೊಡುತ್ತೇನೆ ಎಂದು ಸುಮ್ಮನೆ ಯಾಕೆ ಮಾಡುತ್ತೀರಿ? ನಾನು ಮಂತ್ರಿ ಆಗಬೇಕೆಂದು ಯಾರ ಕೈ …

Read More »

ವಿಕಲಚೇತನರಿಗೆ ತ್ರೀಚಕ್ರ ವಾಹನ(ಬೈಕ್)ಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ವಿಕಲಚೇತನರು ಮುಖ್ಯ ವಾಹಿನಿಗೆ ತರಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗುರುವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು. ವಿಕಲಚೇತನರನ್ನು ಸಮಾಜ ಗೌರವದಿಂದ ನಡೆಸಿಕೊಳ್ಳಬೇಕು. ಅವರ ಬಗ್ಗೆ ಕೀಳುರಿಮೆ ಮಾಡದೇ ಆದರದಿಂದ ನೋಡಿಕೊಳ್ಳಬೇಕು. ವಿಕಲಚೇತನರ ಪ್ರಗತಿಗಾಗಿ …

Read More »

ಎರಡನೇ ಮಗುವಿನ ಆಗಮನದ ದಿನಾಂಕ ತಿಳಿಸಿದ ಸೈಫ್-ಕರೀನಾ ದಂಪತಿ

ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗ ತೈಮೂರ್‌ಗೆ ಈಗ ನಾಲ್ಕು ವರ್ಷವಾಗಿದ್ದು, ಈಗ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ನಟಿ ಕರೀನಾ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಗುವಿನ ಡಿಲೆವರಿ ಡೇಟ್‌ ಅನ್ನು ಹೇಳಿದ್ದಾರೆ ಸೈಫ್ ಅಲಿ ಖಾನ್. ಫೆಬ್ರವರಿ ಮೊದಲ ವಾರದಲ್ಲಿ ಕರೀನಾ ಮಗುವಿಗೆ ಜನ್ಮ ನೀಡಲಿದ್ದಾರಂತೆ. ಈ ವಿಷಯವನ್ನು ಸೈಫ್ ಅಲಿ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. …

Read More »

ಮಂಗಳವಾರ ರಜಾದಿನ’ ಚಿತ್ರದ ನೀನೆ ಗುರು, ನೀನೆ ಗುರಿ, ನೀನೆ ಗುರುತು ಹಾಡು ಬಿಡುಗಡೆ

ಬೆಂಗಳೂರು: ಕೋವಿಡ್ ಅಬ್ಬರದಿಂದ ತತ್ತರಿಸಿದ್ದ ಚಂದನವನ ಮತ್ತೆ ನಿಧಾನವಾಗಿ ತಲೆ ಎತ್ತುತ್ತಿದ್ದು, ಹಲವು ಸಿನಿಮಾಗಳು ಬಿಡುಗಡೆಗೆ ತಯಾರಿ ನಡೆಸಿವೆ. ಈ ನಡುವೆ ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯದ ‘ಮಂಗಳವಾರ ರಜಾದಿನ’ ಸಿನಿಮಾದ ನೀನೆ ಗುರು, ನೀನೆ ಗುರಿ, ನೀನೆ ಗುರುತು ಎಂಬ ಹಾಡನ್ನು ನಟ ಅಭಿಷೇಕ್ ಅಂಬರೀಷ್ ಬಿಡುಗಡೆಗೊಳಿಸಿದ್ದು, ಇದೀಗ ಯುಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಗೌಸ್ ಫೀರ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡು …

Read More »