ಬೆಂಗಳೂರು: ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಕರೆ ಮಾಡಿ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಮಾಡುವ ಪ್ರಸ್ತಾಪ ಮಾಡಿದ್ದರು ಅನ್ನೋ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ವಿಲೀನ ಆಗುತ್ತಾ ಅನ್ನೋ ಮಾತುಗಳು ಬಿಸಿಬಿಸಿಯಾಗಿ ಚರ್ಚೆಯಾಗುತ್ತಿವೆ. ಈ ಬಗ್ಬಗ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ಆಳವಾಗಿ ಮಾತನಾಡಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವಂತಹ ಪ್ರಯತ್ನ ಮಾಡಿದ್ರು. ಈ ಸಂದರ್ಭದಲ್ಲಿ ಮೋದಿ …
Read More »ಬೆಳಗಾವಿಯ ಯಳ್ಳೂರ ಗ್ರಾಮದ ಹೊರವಲಯದಲ್ಲಿ ರಾಜಹಂಸಗಡ ಕೋಟೆ ಗುಡ್ಡಕ್ಕೆ ಆಕಸ್ಮಿಕ ಬೆಂಕಿ
ಬೆಳಗಾವಿ: ಐತಿಹಾಸಿಕ ರಾಜಹಂಸಗಡ ಕೋಟೆಯ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ. ಬೆಳಗಾವಿಯ ತಾಲೂಕಿನ ಯಳ್ಳೂರ ಗ್ರಾಮದ ಹೊರವಲಯದಲ್ಲಿ ರಾಜಹಂಸಗಡ ಕೋಟೆ ಗುಡ್ಡ ಇದೆ. ಕೋಟೆ ಗುಡ್ಡದ ಅಕ್ಕಪಕ್ಕದಲ್ಲಿರುವ ಒಣಹುಲ್ಲಿಗೆ ಆಕಸ್ಮಿಕ ಬೆಂಕಿ ಆವರಿಸಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಕಿ ನಂದಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣವಾಗಿರುವ ಐತಿಹಾಸಿಕ ರಾಜಹಂಸಗಡ ಕೋಟೆಗೆ ತನ್ನದೇ ಆದ ಹೆಸರಿದೆ.
Read More »ಡಿಸೆಂಬರ್ 27ರಂದು ಮನ್ ಕೀ ಬಾತ್ ಮುಗಿಯವ ತನಕ ಮನೆಯಲ್ಲಿ ತಟ್ಟೆ ಬಾರಿಸುವಂತೆ ರೈತರ ಕರೆ
ಡಿಸೆಂಬರ್ 27ರಂದು ಮನ್ ಕೀ ಬಾತ್ ಮುಗಿಯವ ತನಕ ಮನೆಯಲ್ಲಿ ತಟ್ಟೆ ಬಾರಿಸುವಂತೆ ರೈತರ ಕರೆ ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ಜಗಜಿತ್ ಸಿಂಗ್ ದಲೆವಾಲಾ, ಡಿಸೆಂಬರ್ 27 ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಊಟದ ತಟ್ಟೆಯನ್ನ ಹಿಡಿದು ಬಾರಿಸುವಂತೆ ಕರೆ ನೀಡುವಂತೆ ಕರೆ ಕೊಡುತ್ತಿದ್ದೇವೆ. ಅವರ ಭಾಷಣ ಮುಗಿಯುವವರೆಗೂ ರೈತರಿಗೆ ಬೆಂಬಲ ನೀಡುವ ಪ್ರತೀ ನಾಗರೀಕರೂ ತಟ್ಟೆಯನ್ನ …
Read More »ಬೇಕಾಬಿಟ್ಟಿ ವಸೂಲಿಗೆ ನಿಂತಿರುವ ಖಾಸಗಿ ಶಾಲೆಗಳ ಜೊತೆಗೆ ಸರ್ಕಾರ ಶಾಮೀಲಾಗಿದೆ; ಸಿದ್ದರಾಮಯ್ಯ
ಬೆಂಗಳೂರು (ಡಿಸೆಂಬರ್ 20); ಕೊರೋನಾ ಸೋಂಕಿನ ಕಾರಣದಿಂದಾಗಿ ಕಳೆದ 9 ತಿಂಗಳಿನಿಂದ ಶಾಲೆಗಳು ಬಂದ್ ಆಗಿವೆ. ಆದರೆ, ಕೆಲವು ಖಾಸಗಿ ಶಾಲೆಗಳಲ್ಲಿ ಮಾತ್ರ ಆನ್ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಈ ನಡುವೆ ಶಾಲೆಗಳ ಆಡಳಿತ ಮಂಡಲಿ ನಿತ್ಯ ತರಗತಿಗಳು ಇಲ್ಲದಿದ್ದರೂ ಬೇಕಾಬಿಟ್ಟಿ ಶುಲ್ಕ ವಸೂಲಾತಿ ನಡೆಸುತ್ತಿವೆ. ಈ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರೂ ಸರ್ಕಾರ ಮಾತ್ರ ಗಮನವಹಿಸುತ್ತಿಲ್ಲ. ಈ ಕುರಿತು ಸರಣಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ …
Read More »ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮೀತಿಯ ಅದ್ಯಕ್ಚ ಅಶೋಕ ಪೂಜಾರಿ ಅಸಮಾಧಾನ
ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ ಅಂತಾ ಜನ ನಂಬಿದ್ದರು,ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬಹುದೆಂಬ ಅತೀವ ಆತ್ಮವಿಶ್ವಾಸ ಜನರಿಗೆ ಇತ್ತು ಆದ್ರೆ ಸುವರ್ಣಸೌಧ ನಿರ್ಮಿಸಿದ ಉದ್ದೇಶ ಇನ್ನುವರೆಗೆ ಈಡೇರಿಲ್ಲ ಎಂದು ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮೀತಿಯ ಅದ್ಯಕ್ಚ ಅಶೋಕ ಪೂಜಾರಿ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಸರ್ಕಾರ ಬೆಳಗಾವಿಯ ಸುವರ್ಣಸೌಧದಲ್ಲಿ, ಅಧಿವೇಶನ ನಡೆಸುತ್ತಿಲ್ಲ,ಈ ಸುವರ್ಣಸೌಧದಲ್ಲಿ ಲೈಟ್ ಹಚ್ಚೋರು ಗತಿ ಇಲ್ಲ,ಸುವರ್ಣಸೌಧ ಉತ್ತರ ಕರ್ನಾಟಕ ಆಡಳಿತಾತ್ಮಕ …
Read More »ಗೊಂದಲಗಳನ್ನು ಸೃಷ್ಟಿಸುತ್ತಿದೆ ಕೊರೊನಾ ಲಸಿಕೆ..!
ಜಕಾರ್ತ, ಡಿ.20- ಮಹಾಮಾರಿ ಕೊರೊನಾಗೆ ಔಷ ಸಿಕ್ಕಿದೆ. ವಿಶ್ವಕ್ಕೆ ಎದುರಾಗಿರುವ ಕಂಟಕ ಮುಕ್ತಿ ದೊರೆಯಲಿದೆ ಎಂಬ ಆಶಾದಾಯಕ ಬೆಳವಣಿಗೆಯ ನಡುವೆಯೇ ಲಸಿಕೆ ತಯಾರಿಕೆಗೆ ಬಳಕೆ ಮಾಡಲಾಗಿರುವ ಅಂಶಗಳು ಧಾರ್ಮಿಕ ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. ಇಂಡೋನೇಷ್ಯಾದ ರಾಜ ತಾಂತ್ರಿಕರು ಮತ್ತು ಇಸ್ಲಾಂ ಧಾರ್ಮಿಕ ಗುರುಗಳು ಅಲ್ಲಿ ಔಷಧ ತಯಾರಿಕೆಯ ಪ್ರಕ್ರಿಯೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆನಂತರ ಇಂಡೋನೇಷ್ಯಾಗೆ ಲಕ್ಷ ಗಟ್ಟಲೆ ಔಷಯ ಡೋಸೇಜ್ಗಳನ್ನು ಕಳುಹಿಸಲಾಗಿದೆ. ಕೊರೊನಾ ಲಸಿಕೆ ಉತ್ಪಾದಕ ಕಂಪೆನಿಗಳು ಸುರಕ್ಷತೆ , …
Read More »ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ
ಬೆಂಗಳೂರು, ಡಿ.20- ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ರೈತರು ಮತ್ತು ಕಾರ್ಮಿಕರು ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಪ್ರತಿಭಟನಾ ನಿರತರನ್ನು ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಬಿಡದಿಯ ಟೊಯೋಟಾ ಕಂಪೆನಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಘಟಕಗಳನ್ನು ಹೊಂದಿದೆ. ಅದರ ಒಂದು ಘಟಕದಲ್ಲಿ ಸುಮಾರು ಎರಡು ಸಾವಿರ ಜನರು ಖಾಯಂ ನೌಕರರಾಗಿ ಕೆಲಸ ಮಾಡುತ್ತಿದ್ದರು. ಈ …
Read More »ಕೇವಲ ಎರಡು ಗಂಟೆಯಲ್ಲಿ 23,90,900 ರೂ. ದಂಡ ಸಂಗ್ರಹ: ಪೊಲೀಸ್ ಆಯುಕ್ತ ಡಾ|| ಬಿ.ಆರ್. ರವಿಕಾಂತೇಗೌಡ
ಬೆಂಗಳೂರು, ಡಿ.20- ರಸ್ತೆ ಬಳಕೆದಾರರ ಸುರಕ್ಷತೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಪ್ರವರ್ತನ ಚಟುವಟಿಕೆಗಳನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗ ಆಪರೇಷನ್ ಸರ್ಪ್ರೈಸ್ ಚೆಕ್ ಕಾರ್ಯಾಚರಣೆ ಪ್ರಾರಂಭಿಸಿದ್ದು ಕೇವಲ ಎರಡು ಗಂಟೆಯಲ್ಲಿ 23,90,900 ರೂ. ದಂಡ ಸಂಗ್ರಹಿಸಲಾಗಿದೆ. ನಗರದ 44 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿನ್ನೆ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಆಪರೇಷನ್ ಸರ್ಪ್ರೈಸ್ ಚೆಕ್ ಕಾರ್ಯಾಚರಣೆ ಹಮ್ಮಿಕೊಂಡು ಒಟ್ಟು 178 ಸ್ಥಳಗಳಲ್ಲಿ 5123 …
Read More »3.9 ಡಿಗ್ರಿ ಕೊರೆವ ಮಹಾಚಳಿಗೆ ತತ್ತರಿಸಿದ ದೆಹಲಿ,
ನವದೆಹಲಿ, ಡಿ.20- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಚಳಿಗಾಲದಲ್ಲೇ ಅತ್ಯಂತ ಕಡಿಮೆ ಶೀತ ವಾತವರಣ ದಾಖಲಾಗಿದ್ದು, ಜನ ಜೀವನ ಗಡಗಡ ನಡುಗಿ ಹೋಗಿದೆ. ಶನಿವಾರ ಸಫ್ಜಜಂಗ್ನ ಮಾಪಕ ಕೇಂದ್ರದಲ್ಲಿ 3.9 ಡಿಗ್ರಿ ಸೆಲ್ಸಿಯಸ್ ಶೀತ ವಾತವರಣ ದಾಖಲಾಗಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಶನಿವಾರ ಅತ್ಯಂತ ಕನಿಷ್ಠ ತಾಪಮಾನ 3.4 ಡಿಗ್ರಿ ದಾಖಲಾಗಿದೆ. ಲೋದಿ ರಸ್ತೆಯಲ್ಲಿ ಮಾಪನ ಕೇಂದ್ರದಲ್ಲಿ 3.3 ಡಿಗ್ರಿ ಸೆಲ್ಸಿಯಸ್ ತೇವಾಂಶ ವರದಿಯಾಗಿದೆ. …
Read More »ಕಳೆದ 14 ಗಂಟೆಗಳಿಂದ 270 ಕಿಲೋ ಮೀಟರ್ ಉದ್ಧಕ್ಕೂ ಸಾಲು ಗಟ್ಟಿನಿಂತಿದ್ದ ಸಂಚಾರ ದಟ್ಟಣೆ
ಜಮ್ಮು, ಡಿ.20- ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ಧಾರಿಯಲ್ಲಿ ಕಳೆದ 14 ಗಂಟೆಗಳಿಂದ 270 ಕಿಲೋ ಮೀಟರ್ ಉದ್ಧಕ್ಕೂ ಸಾಲು ಗಟ್ಟಿನಿಂತಿದ್ದ ಸಂಚಾರ ದಟ್ಟಣೆಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತೆರವುಗೊಳಿಸಲಾಗಿದೆ. ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ರಂಬಾನ್ ಜಿಲ್ಲೆಯ ಚಂದರ್ಕೋಟೆ ಬಳಿಯ ಭೂಂ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿತ್ತು. ಸುಮಾರು 2 ಸಾವಿರ ವಾಹನಗಳು ಭೂ ಕುಸಿತದಿಂದ ಮುಂದೆ ಸಾಗಲಾಗದೆ ರಸ್ತೆಯಲ್ಲಿ ನಿಲ್ಲಬೇಕಾಯಿತು. …
Read More »