Breaking News

ಬೆಳಗಾವಿ : ಪಾರ್ಟಿ ಮುಗಿಸಿ ಮನೆಗೆ ಹೊಗುತ್ತಿದ್ದ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.

ಬೆಳಗಾವಿ : ಪಾರ್ಟಿ ಮುಗಿಸಿ ಮನೆಗೆ ಹೊಗುತ್ತಿದ್ದ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ ಕೊಲೆ ಮಾಡಿರುವ  ಘಟನೆ  ತಡರಾತ್ರಿ ನಡೆದಿದೆ. ಮುಚ್ಚಂಡಿ ಗ್ರಾಮದ ಆನಂದ ಮಾರುತಿ ಕೋಲಕಾರ( 58) ಕೊಲೆಯಾದ ವ್ಯಕ್ತಿ. ಈತ ನಿನ್ನೆ ರಾತ್ರಿ ಡಾಬಾದಲ್ಲಿ ಪಾರ್ಟಿ ಮುಗಿಸಿಕೊಂಡು ಗ್ರಾಮಕ್ಕೆ ತೆರಳುವ ವೇಳೆಯಲ್ಲಿ ಖನಗಾಂವ ಗ್ರಾಮದ ಸಮೀಪ ಕಳ್ಳನೆಂದು ಭಾವಿಸಿ,  ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ …

Read More »

ಸಿದ್ದರಾಮಯ್ಯ ಅವರ ಹೇಳಿಕೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ: ಶಾಸಕ ಸತೀಶ್ ಜಾರಕಿಹೊಳಿ

ಯಮಕನಮರಡಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಒಳ ಒಪ್ಪಂದ ಕಾರಣ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಲ್ಲ. ಅದನ್ನು ಇಷ್ಟು ದೊಡ್ಡದು ಮಾಡುವ ಅವಶ್ಯಕತೆಯೂ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಕೇವಲ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ. ಸ್ಥಳೀಯ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಎಲ್ಲರೂ ಈ ಹೇಳಿಕೆಗೆ ಅಭಿಪ್ರಾಯ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.‌ ಕಳೆದ ಆರು …

Read More »

ಬೆಳಗಾವಿಯ ಕುಟುಂಬವೊಂದು ಮನೆಯಲ್ಲಿ ಸಾಕಿದ ಹುಂಜಗಳ ಹುಟ್ಟುಹಬ್ಬ ಆಚರಿಸಿದೆ.

                            ಬೆಳಗಾವಿ: ಸಾಕು ನಾಯಿ, ಬೆಕ್ಕುಗಳ ಹುಟ್ಟುಹಬ್ಬ ಆಚರಿಸೋದನ್ನ ನೋಡಿರುತ್ತೇವೆ. ಇತ್ತೀಚೆಗೆ ಹಾವೇರಿಯಲ್ಲಿ ರೈತನೋರ್ವ ತನ್ನ ಎತ್ತಿಗೆ 25 ಕೆಜಿ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿದ್ದ. ಬೆಳಗಾವಿಯ ಕುಟುಂಬವೊಂದು ಮನೆಯಲ್ಲಿ ಸಾಕಿದ ಹುಂಜಗಳ ಹುಟ್ಟುಹಬ್ಬ ಆಚರಿಸಿದೆ. ಮೇಘನಾ ಲಂಗರಖಂಡೆ ಹುಂಜಗಳ ಬರ್ತ್ ಡೇ ಆಚರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು …

Read More »

ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್  ನಿಂದನಾಪತ್ತೆ ಯಾಗಿದ್ದಾನೆ .

ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್  ನಿಂದನಾಪತ್ತೆ ಯಾಗಿದ್ದಾನೆ . ಬೆಳಗಾವಿ ಮಾಳ ಮಾರುತಿ ಬಡಾವಣೆ ನಿವಾಸಿ ಅಭಿಷೇಕ ಸಜ್ಜನ 24 ನಾಪತ್ತೆಯಾಗಿದ್ದು ಯುವಕ ಮೋಜು ಮಸ್ತಿ ಮಾಡಲು ಕುಟುಂಬಸ್ಥ ರೊಂದಿಗೆ ತೆರಳಿದ್ದು ಮದ್ಯಾಹ್ನ ಸುಮಾರು 2-30 ರ ಹೊತ್ತಿಗೆ ನಾಪತ್ತೆ ಯಾಗಿದ್ದಾನೆ .. ಜಲಪಾತದ ಕಡೆ ಹೋಗಿದ್ದ ಎಂದು ಹೇಳಲಾಗುತ್ತಿದೆ .ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ

Read More »

ಇಂದಿನಿಂದ ರುಪ್ಸಾ ಆನ್​ಲೈನ್​ ಕ್ಲಾಸ್ ಬಂದ್: ಡಿ.31ರವರೆಗೆ ಸರ್ಕಾರಕ್ಕೆ ಡೆಡ್​​ಲೈನ್​

ಬೆಂಗಳೂರು(ಡಿ.21): ಶಿಕ್ಷಣ ಇಲಾಖೆ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ, ಇಂದಿನಿಂದ ರುಪ್ಸಾ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಆನ್​ಲೈನ್ ಮತ್ತು ಆಫ್​ಲೈನ್​​ ತರಗತಿಗಳನ್ನು ಸ್ಥಗಿತಗೊಳಿಸಿದೆ. ಜೊತೆಗೆ ಸಂಪೂರ್ಣ ಶೈಕ್ಷಣಿಕ ವರ್ಷವನ್ನು ಸ್ಥಗಿತ ಮಾಡಲು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಸರ್ಕಾರ ಶಾಲೆಗಳನ್ನು ಪುನರಾರಂಭಿಸುವ ಸಮಯದಲ್ಲಿ ಶಾಲೆಗಳನ್ನು ಮುಚ್ಚಲು ಖಾಸಗಿ ಶಿಕ್ಷಣ ಮಂಡಳಿ ಮುಂದಾಗಿದೆ. ಇಂದಿನಿಂದ ರುಪ್ಸಾ ಅಡಿಯ ಖಾಸಗಿ ಶಾಲೆಗಳ ಆನ್ ಲೈನ್ ಕ್ಲಾಸ್ ಬಂದ್ …

Read More »

ಕೊರೊನಾದಿಂದ ಕಳಸ ಪಟ್ಟಣದ ಬ್ಯಾಂಕ್‍ವೊಂದು ಸೀಲ್‍ಡೌನ್

ಚಿಕ್ಕಮಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗ್ತಿದೆ. ಇನ್ನೇನು ನಾಳೆ-ನಾಡಿದ್ದು ಅನ್ನುವಷ್ಟರಲ್ಲಿ ಲಸಿಕೆಯೂ ಸಿಗುತ್ತೆ, ಅಬ್ಬಾ… ಈ ಹೆಮ್ಮಾರಿ ತೊಲಗಿತು ಎಂದು ಜನಸಾಮಾನ್ಯರು ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೆ ಕೊರೊನಾದಿಂದ ಕಳಸ ಪಟ್ಟಣದ ಬ್ಯಾಂಕ್‍ವೊಂದು ಸೀಲ್‍ಡೌನ್ ಶುಕ್ರವಾರ, ಶನಿವಾರ ಹಾಗೂ ಇಂದು ಭಾನುವಾರವಾದ್ದರಿಂದ ಜನರಿಗೆ ಬ್ಯಾಂಕ್ ಇಲ್ಲದೆ ತೀವ್ರ ಸಮಸ್ಯೆ ಎದುರಾಗಿತ್ತು. ಕಳಸ ಪಟ್ಟಣ ಸುತ್ತಮುತ್ತ ಅಡಿಕೆ, ಕಾಫಿ ತೋಟವೇ ಹೆಚ್ಚಿದ್ದು, ಈ ಭಾಗದಲ್ಲಿ ಕೂಲಿ …

Read More »

ಮನೆಯವರು ಮದುವೆಗೆ ತೆರಳಿ ವಾಪಸ ಬರೋದರೊಳಗೆ ಅಪಾರ ಪ್ರಮಾಣದ ಚಿನ್ನಾಭರಣ. ನಗದು ರೇಷ್ಮೆ ಸೀರೆಗಳು ಕಳ್ಳತನ

ಹುಬ್ಬಳ್ಳಿ: ಮನೆಯವರು ಮದುವೆಗೆ ತೆರಳಿ ವಾಪಸ ಬರೋದರೊಳಗೆ ಅಪಾರ ಪ್ರಮಾಣದ ಚಿನ್ನಾಭರಣ. ನಗದು ರೇಷ್ಮೆ ಸೀರೆಗಳು ಕಳ್ಳತನವಾದ ಘಟನೆ ಹುಬ್ಬಳ್ಳಿಯ ಆದರ್ಶನಗರದಲ್ಲಿ ನಡೆದಿದೆ. ನೀರಾವರಿ ಇಲಾಖೆಯ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹಾದೇವಪ್ಪ ಭೀಮಕ್ಕನವರ ಎಂಬವರ ಮನೆಯಲ್ಲೇ ಕಳ್ಳತನ ನಡೆದಿದೆ. 380 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ, 10ಬೆಲೆಬಾಳುವ ರೇಷ್ಮೆ ಸೀರೆ, ಸಾವಿರಾರೂ ರೂಪಾಯಿ ನಗದನ್ನ ದೋಚಿಕೊಂಡು ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಘಟನೆ ನಡೆದಿದ್ದು, ಮದುವೆಗಾಗಿ ಮನೆಯವರು …

Read More »

ಡಿ.22 ಹಾಗೂ ಡಿ.27ರಂದು ನಡೆಯುವ ಗ್ರಾ. ಪಂ. ಚುನಾವಣೆ ಮತದಾನ ಮಾಡಲು ಸಾರ್ವತ್ರಿಕ ರಜೆ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಲು ಸಾರ್ವತ್ರಿಕ ರಜೆ ನೀಡಲಾಗಿದೆ. ಗ್ರಾಪಂಗಳಿಗೆ ಡಿ.22 ಹಾಗೂ ಡಿ.27ರಂದು ನಡೆಯುವ ಸಾರ್ವತ್ರಿಕ ಚುನಾವಣೆ ಸಂಬಂಧ ನಡೆಯುವ ಗ್ರಾಪಂ ಮತಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ …

Read More »

ಸಲೂನ್ ಮಾಲೀಕರೊಬ್ಬರು ತಮ್ಮ ಕೆನಡಾ ಪ್ರವಾಸ ರದ್ದುಗೊಳಿಸಿ ರೈತರಿಗೆ ಉಚಿತ ಕಟಿಂಗ್ ಶೇವಿಂಗ್ ಮಾಡುತ್ತಿದ್ದಾರೆ

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಕೆಲ ವಾರಗಳಿಂದ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದಾರೆ. ನಗರದ ಸಿಂಘು ಬಾರ್ಡರ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹಲವರು ಹಲವು ರೀತಿಯ ಸಹಾಯ ಮಾಡಿದ್ದಾರೆ. ಅದೇ ರೀತಿ ಸಲೂನ್ ಮಾಲೀಕರೊಬ್ಬರು ತಮ್ಮ ಕೆನಡಾ ಪ್ರವಾಸ ರದ್ದುಗೊಳಿಸಿ ಉಚಿತ ಸೇವೆ ನೀಡಲು ಮುಂದಾಗಿದ್ದಾರೆ. ಸುಮಾರು 20 ದಿನಗಳಿಂದ ರೈತರು ಸಿಂಘು ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಕಟಿಂಗ್, ಶೇವಿಂಗ್‍ಗಾಗಿ ಸಾಲಾಗಿ …

Read More »

ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವ

ಹಾವೇರಿ: ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಿಲ್ಲೆಯ ಹಾನಗಲ್ ಪಟ್ಟಣದ ಗರಡಿಮನಿ ಕ್ರಾಸ್ ಬಳಿ ಘಟನೆ ನಡೆದಿದ್ದು, ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡಿದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಗಣಪತಿ ಲಮಾಣಿ 22 ವರ್ಷ ಮೃತ ಬೈಕ್ ಸವಾರ. ಮೃತ ಗಣಪತಿ, ಕಾರವಾರ ಜಿಲ್ಲೆ ಶಿರಸಿ ತಾಲೂಕಿನ …

Read More »