Breaking News

ಯಕ್ಸಂಬಾ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ 4.50 ಕೋಟಿ ರೂಪಾಯಿ ಅನುದಾನ:ಶಾಸಕ ಗಣೇಶ ಹುಕ್ಕೇರಿ

ಯಕ್ಸಂಬಾ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ 4.50 ಕೋಟಿ ರೂಪಾಯಿ ಅನುದಾನ:ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ 4.50 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು,ಆ ಕಾಮಗಾರಿಗಳಿಗೆ ಇವತ್ತು ಚಾಲನೆ ನೀಡಲಾಗಿದೆ ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಅವರು ಯಕ್ಸಂಬಾ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು ನಾನು ಹಾಗೂ ತಂದೆಯವರಾದ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರ ಪ್ರಯತ್ನದಿಂದ 1.20 ಕೋಟಿ …

Read More »

ಕಾಗವಾಡ ತಾಲೂಕ ತಳವಾರ ಸಮಾಜದ ಜನರಿಗೆ (ST) ಪ್ರಮಾಣ ಪತ್ರ ಕೊಡಲು ಯಾವುದೇ ರೀತಿಯ ತೊಂದರೆ ಮಾಡಬಾರದೆಂದು ತಹಶೀಲ್ದಾರರಿಗೆ ಮನವಿ.

ಕಾಗವಾಡ ತಾಲೂಕ ತಳವಾರ ಸಮಾಜದ ಜನರಿಗೆ (ST) ಪ್ರಮಾಣ ಪತ್ರ ಕೊಡಲು ಯಾವುದೇ ರೀತಿಯ ತೊಂದರೆ ಮಾಡಬಾರದೆಂದು ತಹಶೀಲ್ದಾರರಿಗೆ ಮನವಿ. ಕಾಗವಾಡ ತಾಲೂಕಿನ ತಳವಾರ ಸಮಾಜಕ್ಕೆ ಕೇಂದ್ರ ಸರ್ಕಾರ ಆದೇಶಿಸಿದಂತೆ ನಿಯಮ ಬದ್ಧವಾಗಿ ಎಸ ಟಿ ಪ್ರಮಾಣ ಪತ್ರ ನೈಜ ತಳವಾರ ಸಮಾಜ ಬಾಂಧವರಿಗೆ ನೀಡಲೇಬೇಕು ಎಂದು ತಾಲೂಕ ಮಟ್ಟದ ತಳವಾರ್ ಸಮಾಜದ ವತಿಯಿಂದ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು. ಸೋಮವಾರ ರಂದು ಕಾಗವಾಡ ತಾಲೂಕಾ ತಳವಾರ ಸಮಾಜದ ಅಧ್ಯಕ್ಷ ಸುರೇಶ್ …

Read More »

ಏಪ್ರಿಲ್ 1 ರಿಂದ 19ಸ್ಥಳಗಳಲ್ಲಿ ಮದ್ಯ ಮಾರಾಟ(Liquor Sale)ದ ಮೇಲೆ ಸಂಪೂರ್ಣ ನಿಷೇಧ

ಮಧ್ಯಪ್ರದೇಶ, ಏಪ್ರಿಲ್​ 1: ಮಧ್ಯಪ್ರದೇಶ ಸರ್ಕಾರವು ಏಪ್ರಿಲ್ 1 ರಿಂದ ಧಾರ್ಮಿಕ ಮಹತ್ವ ಹೊಂದಿರುವ 19ಸ್ಥಳಗಳಲ್ಲಿ ಮದ್ಯ ಮಾರಾಟ(Liquor Sale)ದ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯ ನಗರ, ಅಮರಕಂಟಕ್, ಓಂಕಾರೇಶ್ವರ ಮತ್ತು ಇನ್ನೂ ಹೆಚ್ಚಿನ ಪ್ರಸಿದ್ಧ ತಾಣಗಳು ಸೇರಿವೆ. ಈ ಕ್ರಮವು ರಾಜ್ಯ ಸರ್ಕಾರ ಜಾರಿಗೆ ತಂದ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಬರುತ್ತದೆ. ಈ ಪ್ರದೇಶಗಳಲ್ಲಿ ಮದ್ಯದಂಗಡಿಗಳಿಗೆ ಯಾವುದೇ ಹೊಸ ಪರವಾನಗಿಗಳನ್ನು ನೀಡಲಾಗುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ …

Read More »

ರಾಜ್ಯದಲ್ಲಿ ಹಾಲು, ಮೊಸರು, ವಿದ್ಯುತ್ ದರ, ಟೋಲ್ ಶುಲ್ಕ ಮತ್ತಷ್ಟು ದುಬಾರಿ (

ಬೆಂಗಳೂರು: ಹಾಲು, ಮೊಸರು, ವಿದ್ಯುತ್ ದರ, ಟೋಲ್ ಶುಲ್ಕ, ಕಸ ಸಂಗ್ರಹ ಮೇಲಿನ ಸೆಸ್ ಸೇರಿದಂತೆ ಜನ ಬಳಕೆಯ ವಸ್ತುಗಳು ಮತ್ತು ಸೇವೆಗಳ ದರ ಇಂದಿನಿಂದ ಮತ್ತಷ್ಟು ತುಟ್ಟಿಯಾಗಲಿದೆ. ದರ ಏರಿಕೆ ಬಿಸಿ ಇಲ್ಲಿಗೇ ನಿಂತಿಲ್ಲ, ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾದಂತೆ ಇತರ ವಸ್ತುಗಳ ಬೆಲೆಯೂ ದುಬಾರಿಯಾಗಲಿದೆ. ಇಂದಿನಿಂದ ಜನ ಬಳಕೆಯ ಹಾಲು, ಮೊಸರು ದರ ಒಂದು ಲೀಟರ್​​ಗೆ 4 ರೂಪಾಯಿ ಏರಿಕೆಯಾಗಲಿದೆ. ಕೆಎಂಎಫ್ ಮನವಿಯಂತೆ ರಾಜ್ಯ ಸರ್ಕಾರ ಹಾಲಿನ ದರ …

Read More »

ಬೆಲೆ ಏರಿಕೆ ಖಂಡಿಸಿ ಏ.2ರಿಂದ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಅಹೋರಾತ್ರಿ ಧರಣಿ

ಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ರಾಜ್ಯ ಬಿಜೆಪಿ ಏಪ್ರಿಲ್​ 2ರಿಂದ ಫ್ರೀಡಂ ಪಾರ್ಕ್​​ನಲ್ಲಿ ಅಹೋರಾತ್ರಿ ಧರಣಿ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ದೇಶದಲ್ಲಿ ಅತ್ಯಂತ ದುಬಾರಿ ಜೀವನ ನಡೆಸುವ ದುಃಸ್ಥಿತಿ ನಾಡಿನ ಜನರಿಗೆ ಬಂದಿದೆ. ಉಸಿರಾಡುವ ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲವುಗಳ ಬೆಲೆ ಏರಿಕೆ ಮಾಡಲಾಗಿದೆ. …

Read More »

ಮಹದಾಯಿ ವಿಚಾರ ನ್ಯಾಯಾಲಯದಲ್ಲಿದೆ. ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದುಗೋವಾ C.M.

ಹುಬ್ಬಳ್ಳಿ: ಮಹದಾಯಿ ಯೋಜನೆಯ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ವರೂರಿನ ಜೈನ ತೀರ್ಥಂಕರ ಮಹಾಮಸ್ತಕಾಭಿಷೇಕದ ಕೊನೆಯ ದಿನದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಅವರು, ಕಳಸಾ ಬಂಡೂರಿ ಮಹದಾಯಿ ಕಾಮಗಾರಿ ವಿಳಂಬ ವಿಚಾರದ ಕುರಿತ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದೇನೆ. ಈ ಐತಿಹಾಸಿಕ‌ ಕಾರ್ಯಕ್ರಮದ‌ ಮೂಲಕ ಮುನಿಗಳ ಆಶೀರ್ವಾದ ಪಡೆದಿದ್ದೇನೆ ಎಂದರು.ಇದಕ್ಕೂ …

Read More »

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸ್ಪೀಕರ್​ ಸುಪ್ರೀಂ ಕೋರ್ಟ್​ ನ್ಯಾಯಾಧೀಶರಿದ್ದಂತೆ, ಅವರಿಗೆ ಗೌರವ ಕೊಡಬೇಕು ಎಂದು ಹೇಳಿದ್ದಾರೆ.

ಹಾಸನ : ಸಭಾಧ್ಯಕ್ಷರ (ಸ್ಪೀಕರ್​) ಪೀಠದ ಮೇಲೆ ಕುಳಿತುಕೊಳ್ಳುವುದು, ಮುಖದ ಮೇಲೆ ಪೇಪರ್ ಎಸೆಯುವುದು ಒಳ್ಳೆಯದಲ್ಲ. ಸಭಾಧ್ಯಕ್ಷರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿದ್ದಂತೆ, ಅವರಿಗೆ ಗೌರವ ಕೊಡಬೇಕು. ಈ ಪರಿಸ್ಥಿತಿ ಮುಂದುವರಿದರೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಹೇಳಿದರು. ಸಕಲೇಶಪುರಕ್ಕೆ ಭೇಟಿ ನೀಡಿದ್ದ ಅವರು ಇತ್ತೀಚೆಗೆ ಅನಾವರಣಗೊಂಡ ಕೆಂಪೇಗೌಡ ಪ್ರತಿಮೆ ಸ್ಥಳದಲ್ಲಿ ಕೆಲ ಸಮಯ ಕಳೆದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸದನ …

Read More »

ಬೆಳಗಾವಿ ಕಿತ್ತೂರು ಚೆನ್ನಮ್ಮ ಮೃಗಾಲಯಕ್ಕೆ ಸಿಂಹಿಣಿ

ಬೆಳಗಾವಿ: ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ಹೊಸದಾಗಿ ಸಿಂಹಿಣಿಯೊಂದು ಸೇರ್ಪಡೆಯಾಗಿದೆ. ಇನ್ಮುಂದೆ ಮೃಗಾಲಯಕ್ಕೆ ಬರುವ ಪ್ರವಾಸಿಗರು ಅದನ್ನು ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಈ ಸಿಂಹಿಣಿಯನ್ನು ಭಾನುವಾರ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯಕ್ಕೆ ಕರೆತರಲಾಗಿದೆ. 9 ವರ್ಷದ ಈ ಸಿಂಹಿಣಿ ಹೆಸರು ಭೃಂಗಾ. ಫೆಬ್ರವರಿ 6ರಂದು ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ‘ನಿರುಪಮಾ’ ಎಂಬ ಸಿಂಹಿಣಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಅದಾದ ಬಳಿಕ ಇಲ್ಲಿನ ಕೃಷ್ಣಾ ಎಂಬ …

Read More »

ಅಪ್ಪ ಮೃತಪಟ್ಟರೂ ಮುಖ ನೋಡಲೂ ಸಹ ಬಾರದ ಪುತ್ರ

ಬೆಳಗಾವಿ, ಮಾರ್ಚ್​ 31: ಬೆಳಗಾವಿಯಲ್ಲಿ (Belagavi) ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅಪ್ಪ ಮೃತಪಟ್ಟರೂ ಮುಖ ನೋಡಲೂ ಸಹ ಪುತ್ರ ಬಾರದ ಘಟನೆ ಬೆಳಗಾವಿಯ ಶಹಾಪುರ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋವಾ ಮೂಲದ ಸತೀಶ್ವರ ಸಿನ್ಹಾ (62) ಕೆಲ ದಿನಗಳಿಂದ ಸುಟ್ಟ ಗಾಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ತಂದೆ ಸತೀಶ್ವರ ಸಿನ್ಹಾರನ್ನು ಪುತ್ರ ಉತ್ತಮ್ ಸಿನ್ಹಾ ಮಾರ್ಚ್​ 22ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ …

Read More »

ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ

ಬೆಂಗಳೂರು, ಮಾರ್ಚ್ 31: ದಾನಗಳಲ್ಲಿ ಶ್ರೇಷ್ಠ ದಾನ ಅಂಗಾಂಗ ದಾನ (Organ donation). ವೈದ್ಯಕೀಯ ಶಿಕ್ಷಣ ಇಲಾಖೆಯು ಈ ಅಂಗಾಂಗ ದಾನ ಯೋಜನೆಗೆ ಹೊಸ ರೂಪ ನೀಡಲು ಕ್ರಮ ಕೈಗೊಂಡಿದೆ. ಮತ್ತೊಬ್ಬರ ಬಾಳಿಗೆ ಬೆಳಕಾಗುವ ಮಹತ್ವದ ಯೋಜನೆಗೆ ಇಲಾಖೆ ಮುಂದಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ತನ್ನ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ನವೀಕರಿಸಲು ಮತ್ತು ಅಂಗಾಂಗ ಮರು ಪಡೆಯುವ ಕೇಂದ್ರ ಸ್ಥಾಪಿಸಲು 1 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಸಂಬಂಧ ಆದೇಶ ಕೂಡ …

Read More »