ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆ ವಿರುದ್ಧ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಶನಿವಾರ(ಫೆಬ್ರುವರಿ 06) ದೇಶಾದ್ಯಂತ “ಚಕ್ಕಾ ಜಾಮ್” (ರಸ್ತೆ ಬಂದ್) ನಡೆಸುವುದಾಗಿ ಘೋಷಿಸಿವೆ. ಮಧ್ಯಾಹ್ನ 1ಗಂಟೆಯಿಂದ 3ಗಂಟೆವರೆಗೆ ಪ್ರತಿಭಟನೆ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದೆ. ಸೋಮವಾರ(ಫೆ.1) ಸಂಜೆ ಸಂಸತ್ ಚಲೋ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಸಿದ್ಧತೆ …
Read More »ಬಿಜೆಪಿ ಜತೆ ಕೈ ಜೋಡಿಸಿ ಖೆಡ್ಡಾ ತೋಡಿಕೊಂಡ ಜೆಡಿಎಸ್: ಜಮೀರ್
ಕೆರೂರ: ಗೋಹತ್ಯೆ ಜಾರಿಗೊಳಿಸಲು ಕೋಮುವಾದಿ ಬಿಜೆಪಿ ಜತೆ ಕೈಜೋಡಿಸಿದ ಜೆಡಿಎಸ್ ತಾನಾಗೇ ಖೆಡ್ಡಾ ತೋಡಿಕೊಂಡಿದ್ದು, ರಾಜ್ಯದಲ್ಲಿ ಆ ಪಕ್ಷಕ್ಕೆ ಸತ್ವವೇ ಇಲ್ಲದಂತಾಗಿ ಹೋಗಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ ಅಹ್ಮದ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ಯತೀತ ಜನತಾದಳ ಎಂದು ಹೇಳಿಕೊಳ್ಳುವ ಜೆಡಿಎಸ್‌ನವರು ಕೋಮುವಾದಿ ಬಿಜೆಪಿ ಜತೆ ಸೇರಿ ಗೋಹತ್ಯೆ ನಿಷೇಧಕ್ಕೆ ಬೆಂಬಲ ಸೂಚಿಸಿದ ಮೇಲೆ ಅದು ಹೇಗೆ ಜಾತ್ಯತೀತ ಪಕ್ಷವಾಗುತ್ತದೆ. ಬಿಜೆಪಿಗೆ ಬೆಂಬಲ ಸೂಚಿಸಿರುವ ಜೆಡಿಎಸ್ ಮೊದಲು ಸೆಕ್ಯುಲರ್ …
Read More »ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಕುರಿತ ಪರಿಶೀಲನೆಗೆ ಸಮಿತಿ : ಸಭಾಪತಿ ಆದೇಶ
ಬೆಂಗಳೂರು: ವಿಧಾನ ಪರಿಷತ್ತಿನ ಸದಸ್ಯರೊಬ್ಬರು ಸದನದ ಒಳಗೆ ಜ.29ರಂದು ಕಲಾಪ ನಡೆಯುತ್ತಿರುವಾಗ ಅಶ್ಲೀಲ ಚಿತ್ರ ವೀಕ್ಷಿಸಿದ್ದಾರೆಂಬ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿ ಬಗ್ಗೆ ತನಿಖೆ ನಡೆಸಲು ವಿಧಾನಪರಿಷತ್ ನೀತಿ ನಿರೂಪಣಾ ಸಮಿತಿಗೆ ಒಪ್ಪಿಸಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಆದೇಶಿಸಿದ್ದಾರೆ. ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಕಟಣೆ ಹೊರಡಿಸಿದ ಸಭಾಪತಿಗಳು, 2020- 21ನೇ ಸಾಲಿನ ವಿಧಾನಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ಬಿ.ಕೆ. ಹರಿಪ್ರಸಾದ್, ಡಾ.ತೇಜಸ್ವಿನಿಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್.ವಿ. ಸಂಕನೂರ, ಎನ್. ಅಪ್ಪಾಜಿಗೌಡ, ಪಿ.ಆರ್.ರಮೇಶ್ …
Read More »ಆತ್ಮನಿರ್ಭರ ಗೃಹಲಕ್ಷ್ಮೀ ಲೆಕ್ಕಾಚಾರ :ವಿತ್ತ ಸಚಿವೆ ನಿರ್ಮಲಾ ಬಜೆಟ್‌ನಲ್ಲಿ ಅನುದಾನದ ಮಹಾಪೂರ
https://youtu.be/1PZZeFQNHLU ಹೊಸದಿಲ್ಲಿ: ಕೊರೊನೋತ್ತರ ಕಾಲದಲ್ಲಿ ಹೆಚ್ಚು ಜನಪ್ರಿಯ ಯೋಜನೆಗಳಿಗೆ ಜೋತು ಬೀಳದೆ ಜನಪರವಾದ, ಉದ್ಯೋಗ ಸೃಷ್ಟಿ ಮತ್ತು ಆರೋಗ್ಯ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಿದ ಬಜೆಟ್ ಮಂಡಿಸಿದ್ದಾರೆ ನಿರ್ಮಲಾ ಸೀತಾರಾಮನ್. ಅವರ ಆಯ-ವ್ಯಯದಲ್ಲಿ “ಗೃಹಲಕ್ಷ್ಮಿಯ ಲೆಕ್ಕಾಚಾರದ ಎಚ್ಚರ’ ಕಂಡುಬಂದಿದ್ದರೆ ಅಚ್ಚರಿಯೇನೂ ಇಲ್ಲ! 2020ರ ವರ್ಷಾರಂಭದಲ್ಲಿ ಚೀನ ಸಹಿತ ಜಗತ್ತಿನ ಎಲ್ಲ ದೇಶಗಳಲ್ಲಿ ಕೊರೊನಾ ಕಾಣಿಸಿಕೊಂಡ ಕೂಡಲೇ ಭಾರತವೂ ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಹರಿಸಿತ್ತು. ಇದನ್ನೇ ಪಾಠವಾಗಿ …
Read More »ಈ ವರ್ಷ ಒಲಿಂಪಿಕ್ಸ್ ಆಯೋಜಿಸುವ ದೃಢಸಂಕಲ್ಪ: ಜಪಾನ್ ಪ್ರಧಾನಿ
ಟೋಕಿಯೊ: ದೇಶದಲ್ಲಿ ಕೊರೊನಾ ವೈರಾಣು ಸೋಂಕಿನ ಪ್ರಕರಣಗಳ ನಡುವೆಯೂ ಈ ವರ್ಷ ಒಲಿಂಪಿಕ್ಸ್ ಆಯೋಜಿಸುವ ದೃಢಸಂಕಲ್ಪ ಹೊಂದಿರುವುದಾಗಿ ಜಪಾನ್ ಪ್ರಧಾನಿ ಯೋ ಶಿಹಿದೆ ಸುಗಾ ಹೇಳಿದ್ದಾರೆ. ಟೋಕಿಯೊದಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವರ್ಚುವಲ್ ಸಭೆಯೊಂದರಲ್ಲಿ ಮಾತನಾಡಿದ ಅವರು, ಜಾಗತಿಕ ಒಗ್ಗಟ್ಟು ಹಾಗೂ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಮಾನವನ ವಿಜಯದ ಸಂಕೇತವಾಗಿ ಈ ವರ್ಷದ ಬೇಸಿಗೆಯಲ್ಲಿ ಟೋಕಿಯೊ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಆಯೋಜಿಸುವ ದೃಢಸಂಕಲ್ಪವನ್ನು ನಾವು ಮಾಡಿದ್ದೇವೆ. ಈ ಕೂಟವು …
Read More »ಚಿನ್ನ ತೊಳೆದು ಕೊಡುವ ನೆಪದಲ್ಲಿ ಮಹಿಳೆಯೋರ್ವಳನ್ನ ವಂಚನೆ
ಹುಬ್ಬಳ್ಳಿ: ಚಿನ್ನ ತೊಳೆದು ಕೊಡುವ ನೆಪದಲ್ಲಿ ಮಹಿಳೆಯೋರ್ವಳನ್ನ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ-ಬಂಗಾರ ಲೂಟಿ ಮಾಡಿದ ಘಟನೆ ಹುಬ್ಬಳ್ಳಿಯ ಚೆನ್ನಪೇಟೆಯ ಸರಕಾರಿ ಶಾಲೆಯ ಹಿಂಭಾಗ ನಡೆದಿದೆ. ವಿಷ್ಣುಸಾ ಪವಾರ ಎಂಬುವವರ ಮನೆಯಲ್ಲಿ ಸರೋಜಾ ಹಾಗೂ ಸೊಸೆ ಅನಿತಾ ಎಂಬುವವರೇ ಮೋಸಕ್ಕೆ ಒಳಗಾಗಿದ್ದು, ಆರು ಬಳೆ ಮತ್ತು ಮಂಗಳಸೂತ್ರ ತೊಳೆಯುವುದಾಗಿ ಹೇಳಿದ್ದಾರೆ. ಕುಕ್ಕರಿನಲ್ಲಿ ಬಂಗಾರ ತೊಳೆಯುವ ನೆಪ ಮಾಡಿ, ಸೊಸೆಯನ್ನ ಒಳಗಡೆ ಅತ್ತೆಯನ್ನ ಕುಕ್ಕರ್ ಮುಚ್ಚಳ ತೆಗೆಯಲು ಹೇಳಿ …
Read More »ಕಾಮಗಾರಿ ಮುಗಿದರೂ ಎಲ್ಲ ವಾಹನಗಳಿಗೆ ಮುಕ್ತವಾಗಿಲ್ಲ ಚಾರ್ಮಾಡಿ ಘಾಟಿ ರಸ್ತೆ
ಮಂಗಳೂರು: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ಕೋರಿದ್ದಾರೆ. “ಚಾರ್ಮಾಡಿ ಘಾಟಿ ರಸ್ತೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಈ ಹಿಂದೆ ರಸ್ತೆಯು ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಮತ್ತು ರಸ್ತೆ ಕುಸಿತದಿಂದ ಹಾನಿಗೊಳಗಾಗಿದ್ದ ಕಾರಣ ಈ …
Read More »ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ACB ದಾಳಿ!
ಹುಬ್ಬಳ್ಳಿ: ನಗರದ ಅಕ್ಷಯ ಪಾರ್ಕ ಬಳಿಯಿರುವ ರಾಜೀವಗಾಂಧಿನಗರದ ಮನೆಯೊಂದರ ಮೇಲೆ ಬೆಳಿಗಿನ ಜಾವವೇ ಎಸಿಬಿ ದಾಳಿ ನಡೆದಿದ್ದು, ಬೃಹತ್ ಭೇಟೆಯನ್ನ ಅಧಿಕಾರಿಗಳು ಆಡಿದ್ದಾರೆಂದು ಹೇಳಲಾಗುತ್ತಿದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಎನ್ನುವವರ ಮನೆ ಹುಬ್ಬಳ್ಳಿಯಲ್ಲಿದ್ದು ಕೆಲವು ವರ್ಷಗಳ ಹಿಂದೆ, ಇದೇ ದೇವರಾಜ ಶಿಗ್ಗಾಂವ ಧಾರವಾಡದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ನೀರಾವರಿ ಇಲಾಖೆಯಲ್ಲಿದ್ದ ದೇವರಾಜ ಅವರನ್ನ ಧಾರವಾಡದಿಂದ ವರ್ಗಾವಣೆ ಮಾಡಿದ ನಂತರ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷದ …
Read More »ದ್ವಿತೀಯ ಟೆಸ್ಟ್‌ನಿಂದ ಶೇ. 50 ವೀಕ್ಷಕರಿಗೆ ಪ್ರವೇಶ :
ಚೆನ್ನೈ: ಭಾರತದ ಕ್ರಿಕೆಟ್ ಪ್ರೇಮಿಗಳ ಹಾಗೂ ವೀಕ್ಷಕರ ಪಾಲಿಗೆ ಖುಷಿಯ ಸಮಾಚಾರವೊಂದು ಕೇಳಿಬಂದಿದೆ. ಭಾರತ-ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ವೀಕ್ಷಕರಿಗೆ ಮತ್ತು ಮಾಧ್ಯಮದವರಿಗೆ ಸ್ಟೇಡಿಯಂ ಬಾಗಿಲು ತೆರೆಯಲ್ಪಡಲಿದೆ. ಇದರೊಂದಿಗೆ ಕೊರೊನೋತ್ತರದ ಬಳಿಕ ಮೊದಲ ಬಾರಿಗೆ ಭಾರತದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕ್ರೀಡಾಂಗಣ ಪ್ರವೇಶಕ್ಕೆ ಪ್ರೇಕ್ಷಕರಿಗೆ ಅನುಮತಿ ಲಭಿಸಿದಂತಾಗುತ್ತದೆ. ಬಿಸಿಸಿಐ ಮತ್ತು ತಮಿಳುನಾಡು ರಾಜ್ಯ ಕ್ರಿಕೆಟ್ ಮಂಡಳಿ (ಟಿಎನ್‌ಸಿಎ) ನಡುವಿನ ಮಾತುಕತೆಯ ಫಲವಾಗಿ ಈ ಬೆಳವಣಿಗೆ ಸಂಭವಿಸಿದೆ ಎಂದು ಟಿಎನ್‌ಸಿಎ …
Read More »ಶಾಸಕರ ಅಸಮಾಧಾನ ಶಮನಕ್ಕೆ ಇಂದು ಮುಖ್ಯಮಂತ್ರಿಗಳಿಂದ “ಭೋಜನ’ ಕೂಟ
ಬೆಂಗಳೂರು: ಪಕ್ಷ ಹಾಗೂ ಸರ್ಕಾರದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಬಿಜೆಪಿಯ ಪಕ್ಷ ನಿಷ್ಠ ಶಾಸಕರು ಖಾಸಗಿ ಹೋಟೆಲ್ ಸಭೆ ನಡೆಸುವ ಬದಲು ಮಧ್ಯಾಹ್ನ ವಿಧಾನಸೌಧದಲ್ಲಿಯೇ ಭೋಜನದ ನೆಪದಲ್ಲಿ ಸಭೆ ನಡೆಸಿದ್ದಾರೆ. ಅಸಮಾಧಾನಿತರ ವಿಶ್ವಾಸಗಳಿಸಲು ಸಿಎಂ ಯಡಿಯೂರಪ್ಪ ಇಂದು ಭೋಜನ ಕೂಟ ಏರ್ಪಡಿಸಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್ ಅವರ ಕಚೇರಿಯಲ್ಲಿ ಭೋಜನದ ಜೊತೆ ಅನೌಪಚಾರಿಕ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಜಿ.ಎಚ್.ತಿಪ್ಪಾರೆಡ್ಡಿ, ಸಿದ್ದು ಸವದಿ, ಅಪ್ಪಚ್ಚು ರಂಜನ್ …
Read More »