Breaking News

ಕೊನೆಗೂ ಮಹಾರಾಷ್ಟ್ರದ ಧ್ವನಿ ಲೋಕಸಭೆಯಲ್ಲಿ ಪ್ರತಿಧ್ವನಿಸಿದೆ! ನಮ್ಮ 28 ಸದಸ್ಯರು ಬಾಯಲ್ಲಿ ಬಡೆದುಕೊಂಡ ಗೂಟ ಕಿತ್ತುಕೊಂಡು ಕರ್ನಾಟಕದ ಪರವಾಗಿ ಘರ್ಜಿಸುವದು ಯಾವಾಗ?

ಮುಖ್ಯಮಂತ್ರಿಗಳು ರಾಜ್ಯದ ಸಂಸದರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಲೋಕಸಭೆಯಲ್ಲಿ ಬಾಯ್ಬಿಡಲು ಹೇಳಬೇಕು.ಕಳೆದ ಕೆಲವು ತಿಂಗಳುಗಳಿಂದ ನೆರೆಯ ಮಹಾರಾಷ್ಟ್ರದ ಶಿವಸೇನೆ ಸರಕಾರ ಗಡಿವಿವಾದವನ್ನು ಕೆದಕುತ್ತಲೇ ಇದ್ದು ಈಗ ಮತ್ತೊಂದು ಹೆಜ್ಜೆಯನ್ನು ಮುಂದಿರಿಸಿದೆ.ತನ್ನ ಆಟಕ್ಕೆ ಈಗ ಲೋಕಸಭೆಯನ್ನು ಆಯ್ಕೆ ಮಾಡಿಕೊಂಡಿದೆ! ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮೊದಲು ಕರ್ನಾಟಕದ ವಿರುದ್ಧ ಟ್ವೀಟ್ ಮಾಡಿದರು.ಬೆಳಗಾವಿ ಹಾಗೂ ಇತರ ಗಡಿ ಪ್ರದೇಶಗಳನ್ನು ಕರ್ನಾಟಕದ ಆಕ್ರಮಿತ ಪ್ರದೇಶಗಳೆಂದು ಕರೆದದ್ದಲ್ಲದೇ ಅವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ತಮ್ಮ ಸರಕಾರ ಬದ್ಧವಾಗಿದೆ …

Read More »

ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಲೀಟರ್ ಪೆಟ್ರೋಲ್ ದರ 95.21 ರೂ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದ್ದು, ಇಂದು ಲೀಟರ್ ಪೆಟ್ರೋಲ್ ಬೆಲೆ 29 ಪೈಸೆ ಏರಿಕೆಯಾಗಿದ್ದರೆ ಡೀಸೆಲ್ ದರ 32 ಪೈಸೆ ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗುವುದು ಸಾಮಾನ್ಯ. ಆದರೆ ಅಂತಾರಾಷ್ತ್ರ‍ಿಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳವಾಗದಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ತೈಲ ದರ ಏರುತ್ತಲೇ ಇದೆ ಎನ್ನಲಾಗಿದೆ. ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್ …

Read More »

ರೈತರ ಅಳಲು ಆಲಿಸಿದ ಜಿಲ್ಲಾಧಿಕಾರಿ

ಬೆಳಗಾವಿ: ಹೊರವಲಯದ ಹಲಗಾ-ಮಚ್ಚೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಜಮೀನು ಕೊಡುವುದಕ್ಕೆ ವಿರೋಧ ವ್ಯಕ್ತ‍ಪಡಿಸಿ ರೈತರು ಪ್ರತಿಭಟನೆ ನಡೆಸೊದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ರೈತರ ಅಹವಾಲು ಆಲಿಸಿದರು. ‘ಯಾವುದೇ ಕಾರಣಕ್ಕೂ ನಮ್ಮ ಜಮೀನು ಬಿಟ್ಟು ಕೊಡುವುದಿಲ್ಲ. ಕಬಳಿಸಿಕೊಳ್ಳುತ್ತಿರುವುದನ್ನು ತಡೆಯಬೇಕು. ಇದು ಫಲವತ್ತಾದ ಕೃಷಿ ಭೂಮಿ. ಈ ತುಂಡು ಜಮೀನು ಬಿಟ್ಟರೆ ನಮಗೆ ಪರ್ಯಾಯವಿಲ್ಲ. ಪರಿಹಾರದ ವಿಷಯದಲ್ಲಿಯೂ ಕೆಲವರು ಮಧ್ಯವರ್ತಿಗಳಾಗಿ ಬಂದು ಸತಾಯಿಸುತ್ತಿದ್ದಾರೆ. …

Read More »

ಪ್ರೇಮಿಗಳ ದಿನವೇ ಎಸ್.ಎಂ. ಕೃಷ್ಣ ಮೊಮ್ಮಗನೊಂದಿಗೆ ಡಿಕೆಶಿ ಪುತ್ರಿ ಅದ್ಧೂರಿ ಮದುವೆ, ಗಣ್ಯರು ಭಾಗಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ದಿ. ಉದ್ಯಮಿ ಸಿದ್ದಾರ್ಥ್ ಹೆಗಡೆ ಪುತ್ರ ಅಮಾರ್ಥ್ಯ ಹೆಗಡೆ ಅವರ ವಿವಾಹ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೊಮ್ಮಗ ಅಮಾರ್ಥ್ಯ ಹೆಗಡೆ ಮತ್ತು ಐಶ್ವರ್ಯಾ ಅವರ ಮದುವೆ ಪ್ರೇಮಿಗಳ ದಿನದಂದೇ ನೆರವೇರಲಿದೆ. ಡಿಕೆಶಿ ನಿವಾಸದಲ್ಲಿ ಮೆಹಂದಿ, ಸಂಗೀತ ಕಾರ್ಯಕ್ರಮ ನೆರವೇರಿದ್ದು ಸಂಭ್ರಮ ಸಡಗರ ಮನೆಮಾಡಿದೆ. ಇಂದು ಬೆಳಗ್ಗೆ 9.45 ಮುಹೂರ್ತದಲ್ಲಿ …

Read More »

ಇವರಿಗೆ ಕಾಮನ್ ಸೆನ್ಸ್ ಇದೆಯಾ? 10 ರೂ. ಪಾವತಿಸಿ ಅಂತ ತಿಳಿಸಲು ಈ ವಿ.ವಿ. ಖರ್ಚು ಮಾಡಿದ್ದು 22 ರೂ.!

ಧಾರವಾಡ: ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿಯಲ್ಲಿ ದೇಶದ ಯಾವುದೇ ಪ್ರಜೆ ಯಾವುದೇ ರೀತಿಯ ಮಾಹಿತಿಯನ್ನು ಪಡೆಯಬಹುದು. ಅದೇ ರೀತಿಯ ಮಾಹಿತಿಯನ್ನು ಕೇಳಿ ಒಬ್ಬರು ಸಲ್ಲಿಸಿದ್ದ ಅರ್ಜಿಗೆ ಕರ್ನಾಟಕ ವಿಶ್ವವಿದ್ಯಾಲಯದ ಆರ್​ಟಿಐ ಉತ್ತರಿಸಿದ ಅಧಿಕಾರಿಗಳು ಉತ್ತರಿಸಿದ ರೀತಿಯೇ ನಗು ತರಿಸುವಂತಿದೆ. ಧಾರವಾಡದ ಕೆ.ಎಸ್. ಜಯಂತ್​ ಕೆಲವು ಮಾಹಿತಿ ಕೋರಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 2021ರ ಜನವರಿ 1ರಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಫೆಬ್ರವರಿ 10ರಂದು ಉತ್ತರ ಬಂದಿದೆ. ‘ನೀವು ಕೇಳಿರುವ …

Read More »

ಸಹಪಾಠಿಗಳ ಮೇಲೆ ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಖಾಕಿಯಿಂದ ಕಪಾಳಮೋಕ್ಷ!

ಗದಗ: ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಪೊಲೀಸರು ಕಪಾಳಮೋಕ್ಷ ಮಾಡಿರುವ ಪ್ರಸಂಗ ನಗರದ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದಲ್ಲಿ ವರದಿಯಾಗಿದೆ. ನಿಲ್ದಾಣದಲ್ಲಿ ಇತರೆ ವಿದ್ಯಾರ್ಥಿಗಳ ಮೇಲೆ ಈತ ಪುಂಡಾಟಿಕೆ ಮಾಡ್ತಿದ್ದ. ಇದಲ್ಲದೆ, ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಪುಂಡ ಹಲ್ಲೆ ಸಹ ನಡೆಸಿದ್ದ. ಇದನ್ನು ಗಮನಿಸಿ ಪ್ರಶ್ನೆ ಮಾಡಿದ್ದ ಸಾರಿಗೆ ಸಂಸ್ಥೆ ನೌಕರರಿಗೆ ಆವಾಜ್ ಸಹ ಹಾಕಿದ್ದ. ಈ ವೇಳೆ, ಗದ್ದಲ ಗಮನಿಸಿ ಸ್ಥಳಕ್ಕೆ ಬಂದ ಪೊಲೀಸರು ಪುಂಡನಿಗೆ ಸರಿಯಾಗಿ ಕಪಾಳಮೋಕ್ಷ …

Read More »

ಹುಟ್ಟುಹಬ್ಬದ ನೆಪದಲ್ಲಿ ಹುಡುಗಿಯನ್ನು ಹೋಟೆಲಿಗೆ ಕರೆಸಿಕೊಂಡು ಅತ್ಯಾಚಾರ

ಮೀರತ್: ಹುಟ್ಟುಹಬ್ಬದ ನೆಪದಲ್ಲಿ ಹುಡುಗಿಯನ್ನು ಹೋಟೆಲಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದ ಯುವಕನ ವಿರುದ್ಧ ಬಾಲಕಿ ಕುಟುಂಬದವರು ದೂರು ನೀಡಿದ್ದಾರೆ. ಮೀರತ್ ನ ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಐದು ದಿನಗಳ ಹಿಂದೆ ಘಟನೆ ನಡೆದಿದ್ದು, ಆರೋಪಿಗಳನ್ನು ಈಗ ಬಂಧಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ. ಆದರೆ, ಬಂಧಿತ ಯುವಕನ ಪೋಷಕರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಠಾಣೆಯಲ್ಲೇ ಪ್ರತಿಭಟನೆ ನಡೆಸಿ ಆಧಾರ ರಹಿತ ಆರೋಪ ಇದಾಗಿದ್ದು, ಯುವಕನನ್ನು ಬಿಡುಗಡೆ …

Read More »

ರೇಪ್​ ಆರೋಪಿ ಆಟೋ ಚಾಲಕನಿಗೆ ಕ್ಷಮೆಯಾಚಿಸಿದ ಪೊಲೀಸ್​ ಆಯುಕ್ತ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

ಹೈದರಾಬಾದ್​: ತೆಲಂಗಾಣ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿದ್ದ ಬಿ. ಫಾರ್ಮಸಿ ವಿದ್ಯಾರ್ಥಿನಿಯ ಅಪಹರಣ ಮತ್ತು ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದ ಅಸಲಿಯತ್ತನ್ನು ತೆಲಂಗಾಣ ಪೊಲೀಸರು ಬಹಿರಂಗಪಡಿಸಿದ್ದಾರೆ. ಅಸಲಿಗೆ ಈ ಪ್ರಕರಣ ನಾಟಕೀಯ ಎಂದು ತಿಳಿದುಬಂದಿದ್ದು, ನಾಟಕದ ಸೂತ್ರಧಾರಿಯೇ ಮನೆಯಿಂದ ಓಡಿ ಹೋದ ಯುವತಿಯದ್ದಾಗಿದೆ. ಯುವತಿಯ ತಾಯಿ ದೂರು ನೀಡಿದ ಕೇವಲ ಎರಡೇ ಗಂಟೆಯಲ್ಲಿ ಪ್ರಕರಣವನ್ನು ರಾಚಕೊಂಡ ಪೊಲೀಸರು ಭೇದಿಸಿದ್ದಾರೆ. ಫೆ. 10ರಂದು ಆರ್​ಎಲ್​ ನಗರದಿಂದ ಪೊಲೀಸ್​ ಸಹಾಯವಾಣಿ 100ಗೆ ಕರೆ …

Read More »

15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಕೊಪ್ಪ: 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಅಸ್ಸಾಂನ ವ್ಯಕ್ತಿಯ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಶನಿವಾರ ಪ್ರಕರಣ ದಾಖಲಾಗಿದೆ. ‘ಸಂತ್ರಸ್ತೆಯೂ ಅಸ್ಸಾಂನವಳಾಗಿದ್ದು, ಆಕೆಯ ಕುಟುಂಬ ಎಸ್ಟೇಟ್‌ವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದೆ. ಹತ್ತಿರದಲ್ಲೇ ವಾಸವಿದ್ದ ಆರೋಪಿಯು ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ಆಕೆಯ ಪೋಷಕರು ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read More »

ರಾಮಮಂದಿರ ನಿರ್ಮಾಣಕ್ಕೆ ಇದುವರೆಗೂ ಸಂಗ್ರಹವಾಗಿರುವ ಒಟ್ಟು ಮತ್ತು 1,511 ಕೋಟಿ ರೂ

ಸೂರತ್: ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶಾದ್ಯಂತ ದೇಣಿಗೆ ಸಂಗ್ರಹಿಸುತ್ತಿದ್ದು, ಇದುವರೆಗೂ 1,511 ಕೋಟಿ ರೂಪಾಯಿ ಸಂಗ್ರಹವಾಗಿರುವುದಾಗಿ ತಿಳಿದುಬಂದಿದೆ. ದೇಗುಲ ನಿರ್ಮಾಣಕ್ಕೆ ಜನವರಿ 15ರಂದು ದೇಣಿಗೆ ಸಂಗ್ರಹ ಕಾರ್ಯ ಆರಂಭಗೊಂಡಿದ್ದು, ಫೆ.11ರ ಗುರುವಾರ ಸಂಜೆಯವರೆಗೂ 1,511ಕೋಟಿ ರೂಪಾಯಿ ಸಂಗ್ರಹವಾಗಿದೆ. ಫೆಬ್ರವರಿ 27ರವರೆಗೂ ಈ ಕಾರ್ಯ ಮುಂದುವರೆಯಲಿದೆ ಎಂದು ಟ್ರಸ್ಟ್‌ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿ‌‍‌‍‌ರಿ ‌‍‌ಮಾಹಿತಿ ನೀಡಿದ್ದಾರೆ. ‌ 492 ವರ್ಷಗಳ ನಂತರ ಜನರಿಗೆ …

Read More »