ಮಡಿಕೇರಿ : ಕೋವಿಡ್ ಅವಧಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡ ನರ್ಸಿಂಗ್ ಸಿಬ್ಬಂದಿಗಳಿಗೆ ತಕ್ಷಣ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದ್ದಾರೆ. ಅನೇಕ ದಿನಗಳಿಂದ ಹೊರ ಗುತ್ತಿಗೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಈ ಸಿಬ್ಬಂದಿಗೆ ಇದುವರೆಗೂ ವೇತನ ನೀಡಿಲ್ಲ ಎಂಬುದನ್ನು ಕೊಡಗು ಜಿಲ್ಲಾ ಕೋವಿಡ್ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಂಗಳವಾರ ಈ ಭರವಸೆ ನೀಡಿದರು. …
Read More »ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿ ವಿಜಯಪುರಕ್ಕೆ ಸ್ಥಳಾಂತರವಾಗಲಿ : ಯತ್ನಾಳ್ ಆಗ್ರಹ
ವಿಜಯಪುರ : ಪಾರಂಪರಿಕ ಹಿನ್ನೆಲೆ ವಿಜಯಪುರ ನಗರ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಜಗತ್ತಪ್ರಸಿದ್ಧ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ನೂರಕ್ಕೂ ಹೆಚ್ಚು ಸ್ಮಾರಕಗಳು ವಿಜಯಪುರ ನಗರದಲ್ಲಿವೆ. ಹೀಗಾಗಿ ವಿಶ್ವದರ್ಜೆಯ ಸ್ಮಾಕರಗಳೇ ಇಲ್ಲದ ಧಾರವಾಡ ನಗರದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿಯನ್ನು ವಿಜಯಪುರ ಪಾರಂಪರಿಕ ನಗರಕ್ಕೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು. ಮಂಗಳವಾರ ನಗರದಲ್ಲಿ ಭೂತನಾಳ ಬಳಿ ಪ್ರವಾಸೋದ್ಯಮ ನಿಮಗದಿಂದ ನಿರ್ಮಿಸುತ್ತಿರುವ ತ್ರಿಸ್ಟಾರ್ …
Read More »ಬೆಳಗಾವಿ ದಕ್ಷಿಣ ಮತಕ್ಷೇತ್ರದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ಹಾಕಿಸುವ ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟೀಲ,
ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ಹಾಕಿಸುವ ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟೀಲ, ಕ್ಷೇತ್ರದಲ್ಲಿ ಲಸಿಕಾ ಕ್ರಾಂತಿಗೆ ಮುಂದಾಗಿದ್ದಾರೆ. ನೂರಕ್ಕೂ ಹೆಚ್ಚು ಕಾರ್ಯಕರ್ತರ ಪಡೆಯನ್ನು ಲಸಿಕಾ ಕಾರ್ಯದ ನೆರವಿಗೆ ನಿಯೋಜಿಸಿರುವ ಶಾಸಕ ಅಭಯ ಪಾಟೀಲ ಈಗಾಗಲೇ ಕ್ಷೇತ್ರದ ಸಾವಿರಾರು ಜನರಿಗೆ ವ್ಯಾಕ್ಸೀನ್ ದೊರಕಿಸಿಕೊಟ್ಟಿದ್ದು, ಶೀಘ್ರದಲ್ಲೇ ಕ್ಷೇತ್ರದಲ್ಲಿ ಬಹು ದೊಡ್ಡ ಲಸಿಕಾ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ. ಜನಸಂಘದ ಸಂಸ್ಥಾಪಕ ಡಾ. ಶಾಮಪ್ರಸಾದ ಮುಖರ್ಜಿ …
Read More »ರಮೇಶ ಜಾರಕಿಹೊಳಿ ಶೀಘ್ರವೇ ಮತ್ತೆ ಸಚಿವ: ಉಮೇಶ ಕತ್ತಿ
ಬಾಗಲಕೋಟೆ: ಮಾಜಿ ಸಚಿವ ರಮೇಶ ಜಾರಕಿಹೊಳಿ ಬಹಳ ಸರಳ ಮನುಷ್ಯ. ಅವರ ಕ್ಯಾಸೆಟ್ (ಸಿಡಿ) ಕ್ರಿಯೆಟ್ ಮಾಡಿ ಅವರಿಗೆ ದುಃಖ ತಂದಿದ್ದಾರೆ. ಅವರು ಎರಡು ವರ್ಷ ಶಾಸಕರಾಗಿ ಇರುತ್ತಾರೆ. ಪ್ರಸಂಗ ಬಂದರೆ ಶೀಘ್ರವೇ ಸಚಿವರೂ ಆಗುತ್ತಾರೆ ಎಂದು ಆಹಾರ ಖಾತೆ ಸಚಿವ ಉಮೇಶ ಕತ್ತಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡುವ ಪ್ರಯತ್ನ ನಮ್ಮ ಸಚಿವ ಸಂಪುಟದಿಂದ ನಡೆದಿದೆ. ನಾನು, ಜಾರಕಿಹೊಳಿ ಒಂದೇ …
Read More »ನಮ್ಮ ಪಕ್ಷದಲ್ಲಿ ಬಣ ರಾಜಕಾರಣ ಇಲ್ಲ -ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದರಾಮಯ್ಯ
ಬೆಂಗಳೂರು: ನಮ್ಮ ಪಕ್ಷದಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆಗೆ ಸರ್ಕಾರ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕು. ಬೆಡ್ ಇಲ್ಲದೆಯೇ ಬಹಳ ಜನ ಸತ್ತು ಹೋಗಿದ್ರು. ಆದರೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಅಂತ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‘ಕಾಂಗ್ರೆಸ್ ಬದುಕಿದೆ’ ಎಂಬ …
Read More »ಊಟ ಮಾಡಿಸೋ ವೇಳೆ ತೆಂಗಿನ ಕಾಯಿ ಬಿದ್ದು 11 ತಿಂಗಳ ಮಗು ಸಾವು
ಹಾವೇರಿ: ಮಗುವಿಗೆ ಊಟ ಮಾಡಿಸುತ್ತಿದ್ದ ವೇಳೆ ತೆಂಗಿನ ಕಾಯಿ ತಲೆ ಮೇಲೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ. ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ಎಂಬ ದಂಪತಿಗಳ ಮಗು ತನ್ವೀತ್ ವಾಲ್ಮೀಕಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ನಿನ್ನೆ ಬೆಳಗ್ಗೆ ಮನೆಯ ಎದುರು ಮಗುವನ್ನು ಆಟವಾಡಿಸುತ್ತಾ ಊಟ ಮಾಡುವ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ತಕ್ಷಣವೇ ಮಗುವನ್ನು ಕುಟುಂಬಸ್ಥರು ದಾವಣಗೆರೆ ಖಾಸಗಿ …
Read More »ಧಿಡೀರ್ ದೆಹಲಿಗೆ ಹಾರಿದ್ದಾರೆ ರಮೇಶ್ ಜಾರಕಿಹೊಳಿ ಅವ್ರಿಗೆ ರಾತ್ರಿ ಕರೆ ಮಾಡಿ ದ್ದಾದರು ಯಾರು…
ರಮೇಶ್ ಜಾರಕಿಹೊಳಿ ಒಂದು ಸರಕಾರವನ್ನು ಬೀಳಿಸಿ ಮತ್ತೊಂದು ಸರಕಾರ ರಚಿಸಲು ಪ್ರಮುಖ ಕಾರಣ ರಾದ ರಮೇಶ್ ಜಾರಕಿಹೊಳಿ ಪ್ರತಿದಿನ ಒಂದು ಹೊಸ ವಿಷಯ ದೊಂದಿಗೆ ಚರ್ಚೆ ಯಲ್ಲಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ಇಂದು ಮಧ್ಯಾಹ್ನ ಸಡನ್ ಆಗಿ ದೆಹಲಿಗೆ ಹಾರಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದಿದ್ದ ಸಾಹುಕಾರರು ಮಧ್ಯಾಹ್ನ ಮುಖ್ಯ ಮಂತ್ರಿಗಳನ್ನಾ ಭೇಟಿ ಮಾಡಿ ದೆಹಲಿಗೆ ಹಾರಿದ್ದಾರೆ. ಹೌದು ನಿನ್ನೆ …
Read More »ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ- ವಯೋಮಿತಿ ಹೆಚ್ಚಿಸಲು ಆಗ್ರಹ
ಧಾರವಾಡ: ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ನಿರಂತರ ಲಾಕ್‍ಡೌನ್ ಜಾರಿಗೊಳಿಸಿ, ಪೊಲೀಸ್ ನೇಮಕಾತಿಗಳನ್ನು ವಿಳಂಬ ಮಾಡಿದ್ದರಿಂದ ಕೆಲವು ವಿದ್ಯಾರ್ಥಿಗಳಿಗೆ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕುವ ವಯೋಮಿತಿ ಮೀರಿ ಹೋಗಿದೆ. ಹೀಗಾಗಿ ಸರ್ಕಾರ ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ವಿದ್ಯಾಕಾಶಿ ಕರಿಯರ್ ಅಕಾಡೆಮಿ ಸಿಬ್ಬಂದಿ ಆಗ್ರಹಿಸಿದ್ದಾರೆ. ವಯೋಮಿತಿ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು. ವಯೋಮಿತಿ ಹೆಚ್ಚಿಸದಿದ್ದರೆ, ಪೊಲೀಸ್ ಹುದ್ದೆಯನ್ನು ನೆಚ್ಚಿಕೊಂಡು ಕುಳಿತ ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ಅಡ್ಡಿಯಾಗಲಿದೆ. ಕೆಲವು ರಾಜ್ಯಗಳಲ್ಲಿ ಪೊಲೀಸ್ …
Read More »ಗೋವಾ- ಕರ್ನಾಟಕ ಗಡಿಯಲ್ಲಿ ನಿರ್ಬಂಧ : ನಿತ್ಯ ಉದ್ಯೋಗಕ್ಕೆ ತೆರಳುವವರಿಗೆ ಸಂಕಷ್ಟ
ಕಾರವಾರ: ಕೊರೊನಾ ರೂಪಾಂತರ ವೈರಸ್ ಡೆಲ್ಟಾ ಪ್ಲಸ್ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆ ಕಾರವಾರದ ಮಾಜಾಳಿ -ಗೋವಾ ಗಡಿಯಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಆರ್.ಟಿ.ಪಿ.ಸಿ.ಆರ್ ಟೆಸ್ಟ್ ನೆಗಟಿವ್ ಇಲ್ಲದವರಿಗೆ ಗೋವಾ ಹಾಗೂ ಕರ್ನಾಟಕ ಪ್ರದೇಶಕ್ಕೆ ತೆರಳಲು ಕರ್ನಾಟಕ ಸರ್ಕಾರ ಹಾಗೂ ಗೋವಾ ಸರ್ಕಾರ ನಿರ್ಬಂಧ ವಿಧಿಸಿದೆ. ಗೋವಾ ಭಾಗದಿಂದ ಬರುವ ಮಹಾರಾಷ್ಟ್ರ, ಚಂಡೀಗಢ, ಕೇರಳ, ಹರಿಯಾಣ, ದೆಹಲಿ, ಉತ್ತರ ಪ್ರದೇಶದಿಂದ ಬರುವ ವಾಹನಗಳಿಗೆ …
Read More »ನಾಲ್ಕು ದಿನಗಳ ಕಾಲ ಅರಣ್ಯದಲ್ಲಿ ನಾಪತ್ತೆಯಾಗಿದ್ದ 110 ವರ್ಷದ ವೃದ್ಧ ಇಂದು ಪತ್ತೆ
ಧಾರವಾಡ: ನಾಲ್ಕು ದಿನಗಳ ಕಾಲ ಅರಣ್ಯದಲ್ಲಿ ನಾಪತ್ತೆಯಾಗಿದ್ದ 110 ವರ್ಷದ ವೃದ್ಧ ಇಂದು ಪತ್ತೆಯಾಗಿದ್ದಾರೆ. ಜಿಲ್ಲೆಯ ಬೈಚವಾಡ್ ಗ್ರಾಮದ ವೃದ್ಧ ಜನ್ನು ಪಾಂಡ್ರಾಮೀಸೆ 4 ದಿನಗಳ ಕಾಲ ಅರಣ್ಯದಲ್ಲಿದ್ದು, ಇಂದು ಸಿಕ್ಕಿದ್ದಾರೆ. ನಾಲ್ಕು ದಿನಗಳ ಹಿಂದೆ ತಮ್ಮ ಮಗಳ ಮನೆಗೆ ಹೋಗಿ ಬೈಚವಾಡ್ ಗ್ರಾಮಕ್ಕೆ ವಾಪಸ್ ಬರುವಾಗ ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದರು. ನಂತರ ಗ್ರಾಮಸ್ಥರು ಸಾಕಷ್ಟು ಹುಡುಕಾಟ ನಡೆಸಿ, ಅರಣ್ಯ ಇಲಾಖೆಗೆ ಸಹ ಮಾಹಿತಿ ನೀಡಿದ್ದರು. ಇಂದು ಬೆಳಗಿನ ಜಾವ …
Read More »
Laxmi News 24×7