ಬೆಂಗಳೂರು : ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದ ಹಿನ್ನೆಲೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದವು. ಚಾಮರಾಜನಗರ ದುರಂತಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಸಿಎಂ ಬಿ ಎಸ್ ಯಡಿಯೂರಪ್ಪ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್ ನೀಡಿದ್ದ ಎಲ್ಲಾ ಜವಾಬ್ದಾರಿಯನ್ನು ಸಿಎಂ ವಾಪಸ್ ತೆಗೆದುಕೊಂಡಿದ್ದಾರೆ. ಯೆಸ್, ಆರೋಗ್ಯ ಸಚಿವ ಡಾ, ಸುಧಾಕರ್ ಗೆ ಆರೋಗ್ಯ ಖಾತೆಯೊಂದೇ ಉಳಿದಿದ್ದು, ಕೊರೊನಾ …
Read More »ಜನತಾ ಕರ್ಫ್ಯೂ ಮುಂದುವರಿಕೆ; ಪತ್ರಕರ್ತರನ್ನು ‘ಕೋವಿಡ್ ವಾರಿಯರ್ಸ್’ ಆಗಿ ಘೋಷಣೆ: ಸಿಎಂ ಬಿಎಸ್ ವೈ
ಬೆಂಗಳೂರು: ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರಾಗಿ ಘೋಷಿಸಲಾಗುತ್ತದೆ ಎಂದು ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿ ಮತ್ತು ಆಕ್ಸಿಜನ್ ಸರಬರಾಜು ಕುರಿತಂತೆ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಮೇ 22ರವರೆಗೂ ರಾಜ್ಯದಲ್ಲಿ ಜನತಾ ಕರ್ಫ್ಯೂ ಮುಂದುವರೆಯಲಿದ್ದು, ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರಾಗಿ ಘೋಷಿಸಲಾಗುತ್ತದೆ ಎಂದು ಹೇಳಿದರು. ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ‘ಜಿಲ್ಲೆಗಳಲ್ಲಿ ಕೊವಿಡ್ …
Read More »ಸಂಸದ ತೇಜಸ್ವಿಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಡಿಕೆ ಶಿವಕುಮಾರ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಂಸದ ತೇಜಸ್ವಿಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕ್ ದಂಧೆಯನ್ನು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಡಿಕೆಶಿ ಈ ಅಭಿನಂದನೆಯನ್ನು ತಿಳಿಸಿದ್ದಾರೆ. I congratulate MP Tejasvi Surya, MLAs Satish Reddy, Ravi Subramanya & Uday Garudachar for EXPOSING CORRUPTION in bed allocation by their party govt …
Read More »ಕೋವಿಡ್ ಸೊಂಕಿತರಿಗೆ ಉಚಿತವಾಗಿ ಕೆಎಂಎಫ್‍ನಿಂದ 200 ಆಕ್ಸಿಜನ್ ಬೆಡ್‍ಗಳ ಪೂರೈಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು : ಕೋವಿಡ್ ಎರಡನೇ ಅಲೆಯನ್ನು ಕರಾಳಗೊಳಿಸಿರುವ ಆಕ್ಸಿಜನ್ ಕೊರತೆ ಜನರ ಉಸಿರುಗಟ್ಟಿಸುತ್ತಿರುವ ನಡುವೆಯೇ ರೈತರ ಜೀವನಾಡಿ ಆಗಿರುವ ಕರ್ನಾಟಕ ಹಾಲು ಮಹಾಮಂಡಳಿಯು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಮಂಗಳವಾರದಂದು ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಆಕ್ಸಿಜನ್ …
Read More »ಚಾಮರಾಜನಗರ ದುರಂತ: ಆರೋಗ್ಯ ಸಚಿವರ ತಪ್ಪಿದ್ದರೆ ಕ್ರಮ ಜರುಗಿಸಲಿ -ಸಿ.ಟಿ.ರವಿ
ಬೆಂಗಳೂರು: ‘ಚಾಮರಾಜನಗರ ದುರಂತಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲೇ ಬೇಕು. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದರೆ ಅದರ ಹೊಣೆಯನ್ನು ಸರ್ಕಾರ ಹೊರಬೇಕಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ‘ಈ ದುರಂತಕ್ಕೆ ಕಾರಣರಾದವರಿಗೆ ಕಠಿಣ ಕ್ರಮ ಜರುಗಿಸಿದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಬಹುದು. ಆರೋಗ್ಯ ಸಚಿವರು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಆಗಬೇಕು. ಕೂಡಲೇ ತನಿಖೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳಲು …
Read More »ಕೋವಿಡ್-19: ಬೆಂಗಳೂರು ಪೊಲೀಸರ ಜಾಗೃತಿ ವಿಡಿಯೊ
ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಗ್ಗೆ ಜನರು ಜಾಗೃತಿಯಿಂದ ಇರಬೇಕು ಎಂದು ಕೋರಿ ನಗರ ಕಮಿಷನರೇಟ್ ವತಿಯಿಂದ ವಿಡಿಯೊ ಬಿಡುಗಡೆ ಮಾಡಲಾಗಿದೆ. ‘ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು, ಸರ್ಕಾರ ರೂಪಿಸಿರುವ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಕಮಿಷನರ್ ಕಮಲ್ ಪಂತ್ ಕೋರಿದ್ದಾರೆ. ಕಾನ್‌ಸ್ಟೆಬಲ್‌ನಿಂದ ಹಿಡಿದು ಕಮಿಷನರ್‌ವರೆಗೂ ಎಲ್ಲರೂ ವಿಡಿಯೊದಲ್ಲಿ ಜಾಗೃತಿ ಮಾತುಗಳನ್ನಾಡಿದ್ದಾರೆ. ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳಾದ ಸೌಮೆಂದು ಮುಖರ್ಜಿ, ಮುರುಗನ್, ಜಂಟಿ …
Read More »ಬೆಂಗಳೂರು-ಧಾರವಾಡ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ
ಧಾರವಾಡ, ಮೇ 04; ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರೈಲಿನ ಮೂಲಕ ಸಂಚಾರ ನಡೆಸುವ ಜನರು ಟಿಕೆಟ್ ತೋರಿಸಿ ರೈಲು ನಿಲ್ದಾಣಕ್ಕೆ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ನೈಋತ್ಯ ರೈಲ್ವೆ ಪ್ರಯಾಣಿಕರ ಕೊರತೆಯ ಕಾರಣ ಮೇ 4ರಿಂದ ಮುಂದಿನ ಆದೇಶದ ತನಕ ಧಾರವಾಡ- ಬೆಂಗಳೂರು ನಡುವೆ ಸಂಚಾರ ನಡೆಸುತ್ತಿದ್ದ ರೈಲು ಸೇವೆಯನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ರಾಜಧಾನಿಯಿಂದ ಉತ್ತರ ಕರ್ನಾಟಕ ಭಾಗಕ್ಕೆ …
Read More »ಸಿ.ಎಂ. ಇಬ್ರಾಹಿಂಗೆ ಮಾತೃ ವಿಯೋಗ
ಬೆಂಗಳೂರು: ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಅವರಿಗೆ ಮಾತೃ ವಿಯೋಗವಾಗಿದೆ. ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ರಾಹಿಂ ಅವರ ತಾಯಿ ಬಿ.ಬಿ. ಸಾರಾ ಮಂಗಳವಾರ ನಿಧನರಾಗಿದ್ದಾರೆ. ಸಾರಾ ಅವರಿಗೆ 88 ವರ್ಷ ವಯಸ್ಸಾಗಿತ್ತು. ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತೈಜಿಸಿದ್ದಾರೆ.
Read More »ಜೀವ ಉಳಿಸುವುದು ಮುಖ್ಯವೇ ಹೊರತು ರಾಜಕೀಯವಲ್ಲ: ಡಿಕೆಶಿ
ಬೆಂಗಳೂರು: ಕೊರೋನಾ ಮಹಾಮಾರಿ ಹೆಚ್ಚುತ್ತಿರುವಂತಹ ಪ್ರಸಕ್ತ ಸಂದರ್ಭದಲ್ಲಿ ಜನರಿಗೆ ಜಾಗೃತಿ ಮೂಡಿಸುವುದು, ಜೀವ ಉಳಿಸುವುದು ಮುಖ್ಯವೇ ಹೊರತು ರಾಜಕೀಯವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಚಾಮರಾಜನಗರಕ್ಕೆ ತೆರಳುವ ಮುನ್ನ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸೋಮವಾರ ಆರೇಳು ದೇಹಗಳ ಶವಸಂಸ್ಕಾರ ಪೊಲೀಸರೇ ಮಾಡಿದ್ದಾರೆ, ಉಳಿದದ್ದನ್ನು ಊರಿಗೆ ಕಳಿಸಿದ್ದಾರೆ, ಜನರ ಆಕ್ರಂದನ ಮುಗಿಲು ಮುಟ್ಟಿದೆ. ಚಾಮರಾಜನಗರದಲ್ಲಿ ಇಪ್ಪತ್ತನಾಲ್ಕು ಜನರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ. ಸಾವಿನ …
Read More »ಜನತೆ ನನಗೆ ಸೋತು ಗೆದ್ದಿರುವವರು ಎಂದು ಸರ್ಟಿಫಿಕೇಟ್ ನೀಡಿದ್ದಾರೆ: ಸತೀಶ್ ಜಾರಕಿಹೊಳಿ
ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಚುನಾವಣೆ ಆಯೋಗ ಗೆದ್ದಿರುವ ಸರ್ಟಿಫಿಕೇಟ್ ನೀಡಿರಬಹುದು. ಆದರೆ, ರಾಜ್ಯದ ಜನತೆ ನಮಗೆ ಸೋತು ಗೆದ್ದವರು ಎಂಬ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಬೆಳಗಾವಿ ಲೋಕಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸೋತಿದ್ದರೂ ತೀವ್ರ ಪೈಪೋಟಿ ಕೊಟ್ಟಿದ್ದೇವೆ. ಸ್ವತಃ ಬಿಜೆ ಪಿ ನಾಯಕರೆ ಇದನ್ನು …
Read More »