Breaking News

ತುರ್ತು ಸೇವೆಗೆ ಆಂಬುಲೆನ್ಸ್‌ ವ್ಯವಸ್ಥೆ

ಕಾರಟಗಿ: ‘ಕ್ಷೇತ್ರದಲ್ಲಿ ಕೊರೊನಾ ಸೋಂಕಿತರು ಸೇರಿದಂತೆ ವಿವಿಧ ರೋಗಿಗಳಿಗೆ ತುರ್ತು ಆರೋಗ್ಯ ಸೇವೆ ಸಮರ್ಪಕವಾಗಿ ದೊರೆಯಲಿ ಎನ್ನುವ ಉದ್ದೇಶದಿಂದ ವೈಯಕ್ತಿಕ ವೆಚ್ಚದಲ್ಲಿ 2 ಆಮ್ಲಜನಕ ಸಹಿತ ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜನರು ಅಗತ್ಯ ಸಂದರ್ಭದಲ್ಲಿ ಪ್ರಯೋಜನಾ ಪಡೆಯಬಹುದು’ ಎಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು. ಭಾನುವಾರ ತಮ್ಮ ಕಚೇರಿ ಬಳಿ ಆಂಬುಲೆನ್ಸ್‌ ಹಸ್ತಾಂತರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕ್ಷೇತ್ರದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿ. ಗ್ರಾಮೀಣ ಪ್ರದೇಶದ ರೋಗಿಗಳು ಚಿಕಿತ್ಸೆಗಾಗಿ …

Read More »

“ಪ್ರತಿ ಮನೆಗೂ ಬರಲಿದೆ ಕೊರೊನಾ ಪರೀಕ್ಷಾ ವಿಶೇಷ ತಂಡ”

ಬೆಂಗಳೂರು, ಮೇ 24: ರಾಜ್ಯದ ಗ್ರಾಮೀಣ‌ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ‌ ಲಕ್ಷಣವಿರುವವರನ್ನು ಪ್ರತಿ ಮನೆ-ಮನೆಗೂ ಹೋಗಿ ಪರೀಕ್ಷಿಸಲು ವಿಶೇಷ ತಂಡ ರಚಿಸಲಾಗುವುದು ಎಂದು ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್.ಅಶೋಕ ತಿಳಿಸಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸುತ್ತೋಲೆ ಹೊರಡಿಸಲಿದ್ದಾರೆ ಎಂದು ತಿಳಿಸಿದ ಸಚಿವರು, ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಅನುಸರಿಸುತ್ತಿದ್ದರೂ, ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಸೋಂಕು …

Read More »

ಮೇ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ರೈತ ಸಂಘಗಳು ನಿರ್ಧಾರ : 12 ಪ್ರತಿಪಕ್ಷಗಳ ಬೆಂಬಲ

ನವದೆಹಲಿ : ಕೇಂದ್ರ ಜಾರಿಗೆ ತಂಡ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಆರು ತಿಂಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಮೇ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್‌ ಮೋರ್ಚಾ ನಿರ್ಧರಿಸಿದ್ದು, ಅದಕ್ಕೆ 12 ಪ್ರತಿಪಕ್ಷಗಳು ಬೆಂಬಲ ಸೂಚಿಸಿವೆ.   ಮೇ 26ಕ್ಕೆ ಪ್ರತಿಭಟನೆಗೆ ಆರು ತಿಂಗಳು ಪೂರ್ಣಗೊಳ್ಳಲಿದ್ದು, ಅಂದು ದೇಶವ್ಯಾಪಿ ಪ್ರತಿಭಟನೆಗೆ ಕಿಸಾನ್‌ ಮೋರ್ಚಾ ಕರೆ ನೀಡಿದೆ. ಇದಕ್ಕೆ ಕಾಂಗ್ರೆಸ್‌, ಟಿಎಂಸಿ, ಜೆಡಿಎಸ್‌ ಸೇರಿದಂತೆ 12 ಪ್ರತಿಪಕ್ಷಗಳು …

Read More »

ಮೂರನೇ ಆಲೆ ಆತಂಕ: ಪರಿಷತ್‌ ಸಭಾಪತಿ ಹೊರಟ್ಟಿ ಸಲಹೆ

ಬೆಂಗಳೂರು: ಕರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸುವ ಸಾಧ್ಯತೆ ಬಗ್ಗೆ ಪರಿಣಿತರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಅಧ್ಯಯನ ನಡೆಸಿ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರಿಗೆ ಪತ್ರ ಬರೆದಿರುವ ಅವರು, ಮೂರನೇ ಆಲೆಯು ಭವಿಷ್ಯದ ವಾರಸುದಾರರಾದ ಮಕ್ಕಳ ಮೇಲೆ ಬೀರಬಹುದ ಪರಿಣಾಮಗಳ ಬಗ್ಗೆ ತಿಳಿದುಕೊಂಡು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ. …

Read More »

ದಲಿತ ಯುವಕನ ಮೇಲೆ ದೌರ್ಜನ್ಯ ಪ್ರಕರಣ : ಗೋಣಿಬೀಡು ಪಿಎಸ್ ಐ ಅರ್ಜುನ್ ಅಮಾನತು

ಚಿಕ್ಕಮಗಳೂರು; ಮೂಡಿಗೆರೆ ತಾಲ್ಲೂಕು ಗೋಣಿಬೀಡು ಪೋಲಿಸ್ ಠಾಣೆ ವ್ಯಾಪ್ತಿಯ ಕಿರುಗುಂದ ಪರಿಶಿಷ್ಟ ಜಾತಿ ಯುವಕನ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಬೀಡು ಪೋಲಿಸ್ ಠಾಣೆ ಪಿಎಸ್ ಐ ಅರ್ಜುನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ, ಸದ್ಯ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಕಿರಗುಂದ ಗ್ರಾಮದ ಪರಿಶಿಷ್ಟ ಜಾತಿ ಯುವಕ ಪುನೀತ್ ಎಂಬುವನನ್ನು ಮೇ 10 ರಂದು ಯಾವುದೇ ದೂರು ದಾಖಲಿಸಿಕೊಳ್ಳದೆ. ಪೋಲಿಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಪಿಎಸ್ …

Read More »

ಕೊರೋನ ಇಂದ ಪಾರಾಗಲು ಪಾರಿಜಾತ ಎಲೆಯ ಕಷಾಯ ಕುಡಿಯಿರಿ: ಅವಧುತ ವಿನಯ್ ಗುರೂಜಿ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಕೊರೋನಗೆ ಮದ್ದು ಒಂದನ್ನು ಹೇಳಿದ್ದು, ಪಾರಿಜಾತ ಎಲೆಯ ಕಷಾಯ ಮಾಡಿ ಕುಡಿಯಿರಿ ಎಂದಿದ್ದಾರೆ. ಎಲ್ಲರೂ ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ತಮ್ಮ ಭಕ್ತರಿಗೆ ಸಂದೇಶವನ್ನೂ ಅವರು ರವಾನಿಸಿರುವ ಇವರು, ಕಷಾಯ ತಯಾರಿಸುವ ವಿಧಾನವನ್ನೂ ತಿಳಿಸಿದ್ದಾರೆ . ಅವರು ತಿಳಿಸಿರುವ ಪ್ರಕಾರ ಐದು ಪಾರಿಜಾತದ ಎಲೆ , ಕಾಳುಮೆಣಸು , ಶುಂಠಿ , ಲಿಂಬೆಹಣ್ಣಿನ ರಸ ಹಾಕಿ ಕುದಿಸಿ ಕುಡಿದರೆ …

Read More »

ಜೂನ್ 7 ರ  ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ

ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ  ಜೂನ್ 7 ರ  ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೋರೊನಾ ವೈರಸ್‌ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ  ಮೇ.12ರ ರಾತ್ರಿ 9 ಗಂಟೆಯಿಂದ ಮೇ.24 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಹೊರಡಿಸಲಾಗಿತ್ತು. ಆದರೆ, ಕೊವಿಡ್ ಪ್ರಕರಣಗಳಲ್ಲಿ ಪ್ರತಿದಿನ ಹೆಚ್ಚಳ ಕಂಡುಬರುತ್ತಿರುವುದರಿಂದ ಮೇ.24 ರ …

Read More »

15 ದಿನಗಳಲ್ಲಿ 9 ಜನರಲ್ಲಿ ಬ್ಲ್ಯಾಕ್ ಫಂಗಸ್; ಇಬ್ಬರಲ್ಲಿ ವೈಟ್ ಫಂಗಸ್

ಬೆಳಗಾವಿ: ಬೆಳಗಾವಿಯಲ್ಲಿ ಕೊರೊನಾ ಆರ್ಭಟದ ನಡುವೆ ಇದೀಗ ಬ್ಲ್ಯಾಕ್ ಫಂಗಸ್ ಹಾಗೂ ವೈಟ್ ಫಂಗಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ 9 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದರೆ, ಇಬ್ಬರಲ್ಲಿ ವೈ ಫಂಗಸ್ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಶಶಿಕಾಂತ, ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ 9 ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ವೈಟ್ ಫಂಗಸ್ ಪತ್ತೆಯಾದ ಇಬ್ಬರೂ ಸಾವನ್ನಪ್ಪಿದ್ದಾರೆ. …

Read More »

ಬಳ್ಳಾರಿ: 31ರವರೆಗೂ ಸಂಪೂರ್ಣ ಲಾಕ್‌ಡೌನ್‌ ವಿಸ್ತರಣೆ: ಡಿ.ಸಿ.

ಬಳ್ಳಾರಿ: ‘ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಾದ್ಯಂತ ಮೇ 19ರಿಂದ ಜಾರಿಯಲ್ಲಿರುವ ಸಂಪೂರ್ಣ ಲಾಕ್‌ಡೌನ್‌ ಅನ್ನು 31ರವರೆಗೂ ವಿಸ್ತರಿಸಲಾಗಿದ್ದು, 24 ಮತ್ತು 25 ರಂದು ಮಾತ್ರ ಮಧ್ಯಾಹ್ನ 12ರವರೆಗೂ ಅವಶ್ಯಕ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ತಿಳಿಸಿದರು. ‘ರಾಜ್ಯ ಸರ್ಕಾರವು ಜೂನ್‌ 7ರವರೆಗೂ ಲಾಕ್‌ಡೌನ್‌ ವಿಸ್ತರಿಸಿದ್ದು, ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲು ಅಧಿಕಾರ ನೀಡಿದೆ. ಸಾರ್ವಜನಿಕರ ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ …

Read More »

ನಿತ್ಯವೂ 100 ಬಡವರಿಗೆ ಮುರುಘಾ ಮಠದಿಂದ ಆಹಾರದ ಕಿಟ್‌ ವಿತರಣೆ

ಚಿತ್ರದುರ್ಗ: ಕೋವಿಡ್ ಮೊದಲ ಅಲೆಯ ವೇಳೆ ಬಡತನ ರೇಖೆಗಿಂತ ಕಡಿಮೆ ಇರುವ ಜನರನ್ನು ಕಳೆದ ವರ್ಷ ಗುರುತಿಸಿ ಮುರುಘಾಮಠದಿಂದ ಆಹಾರ ಕಿಟ್‌ ವಿತರಿಸಲಾಗಿತ್ತು. ಎರಡನೇ ಅಲೆಯಲ್ಲೂ ಇದೇ ಮಾದರಿ ಅನುಸರಿಸಿದ್ದು, ಶನಿವಾರದಿಂದ ಈ ಕಾರ್ಯ ಆರಂಭವಾಗಿದೆ. ವಿವಿಧ ಸಮುದಾಯಗಳನ್ನು ಗುರುತಿಸಿರುವ ಶ್ರೀಮಠ ಸವಿತಾ ಸಮುದಾಯದ 100 ಬಡವರಿಗೆ ಅಕ್ಕಿ, ಬೇಳೆ ಹಾಗೂ ಗೋಧಿ ಹಿಟ್ಟು ಹೊಂದಿರುವ ‘ಆಹಾರ ಸಾಮಗ್ರಿ ಕಿಟ್‌’ಗಳನ್ನು ವಿತರಿಸಿತು. ಶಿವಮೂರ್ತಿ ಮುರುಘಾ ಶರಣರು ಇದಕ್ಕೆ ಚಾಲನೆ ನೀಡಿದರು. …

Read More »