ಹಿಡಕಲ್ ಜಲಾಶಯ ನೀರಿನ ಮಟ್ಟ ಘಟಪ್ರಭಾ ನದಿ ಹಿಡಕಲ್ ಜಲಾಶಯ ಗರಿಷ್ಠ ಮಟ್ಟ- 2175.00 ಅಡಿ ಇಂದಿನ ಮಟ್ಟ- 2110.80 ಅಡಿ ಒಳ ಹರಿವು- 39,515 ಕ್ಯೂಸೆಕ್ ಹೊರ ಹರಿವು- 94 ಕ್ಯೂಸೆಕ್ ನೀರು ಸಂಗ್ರಹ- 13.474 ಡ್ಯಾಂ ಸಾಮರ್ಥ್ಯ- 51.00 tmc ನವಿಲುತಿರ್ಥ ಜಲಾಶಯ ನೀರಿನ ಮಟ್ಟ ಮಲಪ್ರಭಾ ನದಿ ನವೀಲು ತೀರ್ಥ ಜಲಾಶಯ ಗರಿಷ್ಠ ಮಟ್ಟ- 2079.50 ಅಡಿ ಇಂದಿನ ಮಟ್ಟ- 2054.10 ಒಳ ಹರಿವು- 17208 …
Read More »ಅಂಬರ್‌ಗ್ರೀಸ್ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?
ಬೆಂಗಳೂರು: ಎಂಟು ಕೋಟಿ ರೂ. ಮೌಲ್ಯದ ತಿಮಿಂಗಲದ ಅಂಬರ್‌ಗ್ರೀಸ್ ವೀರ್ಯ ಅನ್ನು ಮಾರಾಟಕ್ಕೆ ಯತ್ನಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಗೆ ಅಂಬರ್ ಗ್ರೀಸ್ ಅನ್ನು ಕೊಟ್ಟ ಕೋಲಾರ ಮೂಲದ ಆರೋಪಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಪ್ರಕರಕಣದಲ್ಲಿ ಈಗಾಗಲೇ ಮಾಗಡಿ ಮುಖ್ಯರಸ್ತೆಯ ಸೈಯದ್ ತಜ್ಮುಲ್ ಪಷಾ(54), ಪ್ಯಾಲೇಸ್ ಗುಟ್ಟಹಳ್ಳಿಯ ಸಲೀಂ ಪಾಷಾ (48), ನಾಸೀ ಪಾಷಾ(34) ಮತ್ತು ಜೆ.ಪಿ.ನಗರದ ರಫೀ ಉಲ್ಲಾ ಶರೀಫ್ (45) ಅವರನ್ನು ಬಂಧಿಸಲಾಗಿತ್ತು. ಆರೋಪಿಗಳ ವಿಚಾರಣೆಯಲ್ಲಿ ಕೋಲಾರದ ಸಲ್ಮಾನ್ ಎಂಬಾತ …
Read More »ಗೊಂದಲ ದಿಲ್ಲಿಗೆ ವರ್ಗ : ವರಿಷ್ಠರಿಗೆ ವಾಸ್ತವ ವರದಿ ಸಲ್ಲಿಸಲಿರುವ ಅರುಣ್ ಸಿಂಗ್
ಬೆಂಗಳೂರು: ರಾಜ್ಯ ಬಿಜೆಪಿಯ ನಾಯ ಕತ್ವ ಗೊಂದಲಗಳು ಮತ್ತೆ ದಿಲ್ಲಿಗೆ ವರ್ಗಾವಣೆಗೊಂಡಿವೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ತಮ್ಮ ಮೂರು ದಿನಗಳ ರಾಜ್ಯ ಪ್ರವಾಸ ಸಂದರ್ಭದಲ್ಲಿ ಸಚಿವ ರೊಂದಿಗಿನ ಸಂವಾದ, ಶಾಸಕರ ಅಭಿ ಪ್ರಾಯ, ಶಾಸಕರ ಭಿನ್ನಾಭಿ ಪ್ರಾಯದ ಹೇಳಿಕೆಗಳು, ನಾಯ ಕತ್ವದ ಬಗ್ಗೆ ಇರುವ ಆರೋಪ- ಪ್ರತ್ಯಾ ರೋಪಗಳ ಸಂಪೂರ್ಣ ವಿವರ ಸಂಗ್ರಹಿ ಸಿದ್ದು, ಪಕ್ಷದ ವರಿಷ್ಠರಿಗೆ ವಾಸ್ತವ ವರದಿ ನೀಡಲಿದ್ದಾರೆ. ಅರುಣ್ ಸಿಂಗ್ ಭೇಟಿ ಸಂದರ್ಭ ದಲ್ಲಿ ಪ್ರಮುಖವಾಗಿ ನಾಯಕತ್ವದ ಬದಲಾವಣೆಯ ಕುರಿತು ಅಧಿಕೃತ ಚರ್ಚೆ ಆಗದಿದ್ದರೂ …
Read More »ಸಂಕಷ್ಟ ಕಾಲದಲ್ಲಿ ಮೇದಾರ ಸಮಾಜದ ಬಡವರ ಸಹಾಯಕ್ಕೆ ನಿಂತ ನಾಗೇಶ ಕಡೋಲಿ ಮತ್ತು ಅರ್ಜುನ ಕಡೋಲಿ ಸಹೋದರರು
ಬೆಳಗಾವಿ :ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ,ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ ಎಂಬ ಮಾತಿನಂತೆ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಮೇದಾರ ಗಲ್ಲಿ ನಿವಾಸಿ ನಾಗೇಶ ಕಡೋಲಿ ಹಾಗೂ ಅರ್ಜುನ ಕಡೋಲಿ ಸಹೋದರರು ನಡೆದುಕೊಳ್ಳುತ್ತಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ತಮ್ಮ ಸಮಾಜದ ಬಗ್ಗೆ ಅಪಾರ ಕಳಕಳಿ ಇಟ್ಟುಕೊಂಡು ಕೈಲಾದಷ್ಟು ಸೇವೆ ಸಲ್ಲಿಸುತ್ತ ಬಂದಿರುವ ಈ ಸಹೋದರರು ಕೋವಿಡ್ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತಮ್ಮ ಮೇದಾರ ಸಮಾಜದ ಬಡ ಕುಟುಂಬಗಳಿಗೆ …
Read More »2ನೇ ಹಂತದ ಲಾಕ್ಡೌನ್ ಸಡಿಲಿಕೆ ವಿಚಾರವಾಗಿ ಇಂದು ಸಿಎಂ ಸಭೆ
ಬೆಂಗಳೂರು: ಕಟ್ಟುನಿಟ್ಟಿನ ಕ್ರಮಗಳ ಜಾರಿಯಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಪಾಸಿಟಿವಿಟಿ ರೇಟ್ ಮತ್ತು ಡೆತ್ ರೇಟ್ ಎರಡೂ ಕೂಡ ಇಳಿಕೆ ಕಂಡಿದೆ. ಇದೇ ಕಾರಣಕ್ಕೆ ಈಗಾಗಲೇ ಹಲವು ಲಾಕ್ಡೌನ್ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದ್ದು, ಸೋಮವಾರದಿಂದ ಜನರಿಗೆ ಮತ್ತಷ್ಟು ರಿಲೀಫ್ ನೀಡೋಕೆ ಮುಂದಾಗಿದೆ. ಅನ್ಲಾಕ್- 2 ರ ವಿಚಾರವಾಗಿ ಇಂದು ಸಂಜೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವ ಸೇವೆಗಳಿಗೆಲ್ಲ ವಿನಾಯತಿ ನೀಡಬಹುದೆಂಬ ಬಗ್ಗೆ …
Read More »ರಾಜಕಾರಣಿಗಳಿಂದ ಕೊರೊನಾ ರೂಲ್ಸ್ ಬ್ರೇಕ್; ಬೆಳಗಾವಿ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ತರಾಟೆ
ಬೆಂಗಳೂರು: ರಾಜಕಾರಣಿಗಳಿಂದ ಕೋವಿಡ್ ರೂಲ್ಸ್ ಬ್ರೇಕ್ ಮಾಡುವ ವಿಚಾರ ಸಂಬಂಧ ರಾಘವೇಂದ್ರ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ನಡೆಸಿತು. ರೂಲ್ಸ್ ಬ್ರೇಕ್ ಮಾಡಿ ಬೆಳಗಾವಿಯಲ್ಲಿ ಬಿಜೆಪಿ ನಡೆಸಿದ್ದ ಸಮಾವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸ್ ಆಯುಕ್ತರ ಪ್ರಮಾಣಪತ್ರಕ್ಕೆ ಹೈಕೋರ್ಟ್ ಗರಂ ಆಯ್ತು. ಆಯುಕ್ತರ ಪ್ರಮಾಣಪತ್ರಗಳು ಹಾಸ್ಯಸ್ಪದವಾಗಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದವರ ವಿರುದ್ಧ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನೆ …
Read More »ಗೋವಾ : ವ್ಯಾಕ್ಸಿನ್ ಪಡೆಯದೇ ಇದ್ರೆ ಪ್ರವಾಸಿಗರಿಗೆ ನೋ ಎಂಟ್ರಿ..!
ಗೋವಾ : ಪ್ರವಾಸಿಗರ ಹಾಟ್ ಫೇವರೇಟ್ ತಾಣವಾಗಿರುವ ಗೋವಾಗೆ ಪ್ರವಾಸಿಗರು ವಿಸಿಟ್ ಮಾಡ್ಬೇಕಂದ್ರೆ ಇನ್ಮುಂದೆ ಕೋವಿಡ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು.. ಅಲ್ಲದೇ ರಾಜ್ಯದಲ್ಲಿರುವ ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡದೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ಜುಲೈ 30ರೊಳಗೆ ಶೇ.100ರಷ್ಟು ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ನನ್ನು ರಾಜ್ಯವ್ಯಾಪಿ ನೀಡುವ ಗುರಿಯನ್ನು ಗೋವಾ ಸರ್ಕಾರ ಹೊಂದಿದೆ. ಮೊದಲ ಡೋಸ್ ವ್ಯಾಕ್ಸಿನೇಷನ್‍ನನ್ನು ರಾಜ್ಯದಲ್ಲಿ ಪೂರ್ಣಗೊಳಿಸುವವರೆಗೆ ಪ್ರವಾಸೋದ್ಯಮವನ್ನು …
Read More »ಕಾರವಾರದಲ್ಲಿ ಸ್ಯಾಟಲೈಟ್ ಫೋನ್ ಆಯಕ್ಟೀವ್; ಹೆಚ್ಚಿದ ಆತಂಕ
ಬೆಂಗಳೂರು: ಕಾರವಾರದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಆಗಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಕಾರವಾರದ ಶಿರವಾಡ ಸಮೀಪದ ಜಾಂಬಾ ಗ್ರಾಮದ ಐದು ಕಿಲೋಮಿಟರ್ ವ್ಯಾಪ್ತಿಯಲ್ಲಿ ಈ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ)ದಿಂದ ತನಿಖೆ ಪ್ರಾರಂಭವಾಗಿದೆ. ಕಳೆದ ಸೋಮವಾರದಿಂದ ಸ್ಯಾಟಲೈಟ್ ಫೋನ್ ಸತತವಾಗಿ ಟ್ರಾಕ್ ಆಗುತ್ತಿದೆ ಅಂತಾ ಹೇಳಲಾಗಿದೆ. ತನಿಖಾಧಿಕಾರಿಗಳು ಅರಣ್ಯ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಕಾರ್ಯಾಚರಣೆ ಶುರುಮಾಡಿದ್ದಾರೆ. ಈವರೆಗೆ …
Read More »ಅಮಿತ್ ಶಾ ಬೆಳಗಾವಿ ಱಲಿ ಬಗ್ಗೆ ಕ್ರಮಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು: ಬೆಳಗಾವಿಯಲ್ಲಿ ಅಮಿತ್ ಷಾ ಪಾಲ್ಗೊಂಡಿದ್ದ ಱಲಿಯಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡಲಾಗಿದೆ ಅಂತ ರಾಘವೇಂದ್ರ ಎಂಬುವವರು ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದು, ಮಾಸ್ಕ್ ಧರಿಸದವರ ವಿರುದ್ಧ ಪೊಲೀಸರು ಕ್ರಮ ಯಾಕೆ ತೆಗೆದುಕೊಂಡಿಲ್ಲ ಅಂತ ಸಿಜೆ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಪ್ರಶ್ನಿಸಿದೆ. ಕೂಡಲೇ ಎಪಿಎಂಸಿ ಯಾರ್ಡ್ ಪೊಲೀಸರಿಗೆ ಕ್ರಮ ತೆಗೆದುಕೊಳ್ಳುವಂತೆ ಕೋರ್ಟ್ ಸೂಚನೆ …
Read More »ಜೂ. 21ರಿಂದ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಎಲ್ಲ ಸೇವೆ ಲಭ್ಯ
ಉಡುಪಿ, ಜೂನ್ 18; ಸೋಮವಾರದಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಹೊರರೋಗಿ, ಒಳರೋಗಿ ಸೇವೆಗಳು, ನಾನ್ ಓಪಿಡಿ ವಿಶೇಷ ಸೇವೆಗಳು ಮತ್ತು ಆರೋಗ್ಯ ತಪಾಸಣೆ ಪ್ಯಾಕೇಜ್ ಸೇರಿದಂತೆ ಎಲ್ಲ ವಿಭಾಗಗಳು ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ಹೊರರೋಗಿ ವಿಭಾಗ ಸೇವೆಗಳು ಇಡೀ ದಿನ ಅಂದರೆ ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ಲಭ್ಯವಾಗಲಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಲ್ಲ ರೀತಿಯ …
Read More »